ಆದಿತ್ಯವಾರ, 20-10-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಅದ್ದೂರಿಯಿಂದ ಜರುಗಿದ ಕುವೈಟ್ ಇಂಡಿಯಾ ಫೆಟರ್ನಿಟಿ ಫೋರಂನ ಆರೋಗ್ಯ ಜಾಗ್ರತಿ ವಿಚಾರಗೋಷ್ಠಿ.

 ಕುವೈಟ್ :ಅನಿವಾಸಿ ಭಾರತೀಯರ ಸಾಮಾಜಿಕ ಸಂಘಟನೆ ಕುವೈಟ್ ಇಂಡಿಯಾ ಫೆಟರ್ನಿಟಿ ಫೋರಂವತಿಯಿಂದ  ಚಾಲನೆಯಲ್ಲಿರುವ “ಅರೋಗ್ಯಕರ  ಜೀವನವೇ ಆನಂದಮಯ ಜೀವನ”  ಆರೋಗ್ಯ ಜಾಗ್ರತಿ ಅಭಿಯಾನದ ಅಂಗವಾಗಿ ದಿನಾಂಕ 13 ಏಪ್ರಿಲ್ 2012 ರಂದು ಸಂಜೆ 6.45ಕ್ಕೆ ಜಂಯಿಯತ್ತುಲ್ಇಸ್ಲಾಹ್ ಸಭಾಭವನ ರೌಧ ಕುವೈಟ್ ನಲ್ಲಿ ಆರೋಗ್ಯ ಜಾಗ್ರತಿ ವಿಚಾರಗೋಷ್ಠಿ  ವಿಜೃಂಭಣೆಯಿಂದ ಜರುಗಿತು.

ಸುಮಾರು 3 ಘಂಟೆಗಳ ಕಾಲ ನಡೆದ ಈ ಕಾರ್ಯಕ್ರಮವನ್ನು ಡಾ. ಸುಲೈಮಾನ್ ಶತ್ತಿ  (ಅಧ್ಯಕ್ಷರು ಸಾಮಾಜಿಕ ಸುಧಾರಣಾ ಸಂಸ್ಥೆ ಕುವೈಟ್) ಉಧ್ಘಾಟಿಸಿದರು.

ಆರೋಗ್ಯ ಮತ್ತು ಇಸ್ಲಾಂ ಎಂಬ ವಿಷಯ ಮಂಡಿಸಿದ ಡಾಕ್ಟರ್ ಅಬ್ದುಲ್ ರಹ್ಮಾನ್ (ಮಕ್ಕಳ ತಜ್ಞ ಆರೋಗ್ಯ ಸಚಿವಾಲಯ ಜಹರ ಕುವೈಟ್ ) ಅತೀ ಸುಂದರವಾಗಿ ಪವಿತ್ರ ಕುರಾನಿನ ವಚನಗಳು  ಮತ್ತು ಆಧುನಿಕ ವಿಜ್ಞಾನ ಸಂಭಂದದ ಸಾರವನ್ನು ಕೇಳುಗರ ಮನತಟ್ಟುವಂತೆ ಪ್ರಸ್ತಾವಿಸಿದರು.
ಕುರಾನಿನ ಶ್ಲೋಕದೊಂದಿಗೆ  ಅವರು ಪ್ರವಾದಿ ಮುಹಮ್ಮದ್ (ಸ .ಅ )ರವರ ಮತ್ತು ಅವರ ಅನುಯಾಯಿಗಳ ಆರೋಗ್ಯ ಜೀವನ ಶೈಲಿಯನ್ನು ವಿವರಿಸಿದರು. ಅಲ್ಲದೆ ದಿನದಲ್ಲಿ 5 ಬಾರಿ ನಮಾಜಿಗೆ ಮೊದಲು  ಮಾಡುವ ವೂಲೂ ವೈಜ್ಞಾನಿಕವಾಗಿ ನಿರೂಪಿಸಲ್ಪಟ್ಟ ಒಂದು ಉತ್ತಮ ದೈಹಿಕ ಶುದ್ಧಿಯ ಕಾರ್ಯವಾಗಿದೆ . ನಮಾಜ್ ಗಿಂತ ಉತ್ತಮ ವ್ಯಾಯಾಮ ಬೇರೊಂದಿಲ್ಲ ಮತ್ತು ಮಾನವ ಸಂಕುಲಕ್ಕೆ ಬೇಕಾಗುವ ಆಹಾರಪದ್ದತಿಯಲ್ಲಿ ಇಸ್ಲಾಮೀನ ನಿಲುವಿನ ಕುರಿತು ವೈಜ್ಞಾನಿಕವಾಗಿ ವಿಷ್ಲೇಸಿಸಿದರು.

ಇಸ್ಲಾಮಿನಲ್ಲಿ ಮಹಿಳೆಯರು ಮನೆಯಲ್ಲಿಯೇ ಇರುವಂತೆ ಸೂಚಿಸಿದೆ ಇದಕ್ಕೆ ಕಾರಣ ವಿವರಿಸಿದ ಅವರು ಸ್ತನಪಾನ ಮಕ್ಕಳಿಗೆ ಹೆಚ್ಚಿನ ಸಮಯ ನೀಡಬೇಕೆಂದು ಹೇಳಿದರಲ್ಲದೆ. ಮಹಿಳೆಯರು ಉಧ್ಯೋಗಕ್ಕಾಗಿ ಹೊರ ಹೋಗುದರಿಂದ ಮಕ್ಕಳಿಗೆ ನಿಯಮಿತವಾಗಿ ಸ್ತನಪಾನ ನೀಡಲು ಆಗದೆ ಮಹಿಳೆಯರಲ್ಲಿ ಸ್ತನ ಸಂಬಂದಿ ರೋಗಗಳು ಹೆಚ್ಚಾಗಿ ಬರಲು ಕಾರಣವಾಗಿದೆ ಎಂಬ ಸಾಂದರ್ಬಿಕ ವಿವರಣೆಯನ್ನು ನೀಡಿದರು.

ಪ್ರಾಣಿಗಳನ್ನು ಹಲಾಲ್ ಮಾಡುವ ರೀತಿಯ ಸಾದಕ ಬಾದಕಗಳನ್ನು  ವೈಜ್ಞಾನಿಕ ಅಂಶವನ್ನು ಕೂಡ ಅವರು ಒತ್ತಿ  ಹೇಳಿದರು.

“ಹೃದ್ರೋಗ”  ಎಂಬ ವಿಷಯದಲ್ಲಿ ಮಾತನಾಡಿದ ಡಾಕ್ಟರ್ ತೋಮಸ್ ಐಸಾಕ್ ನೆಯ್ಯಾರಪಲ್ಲಿ (ನೋಂದಣಿ ವೈಧ್ಯರು  ಆಂತರಿಕ ಔಷದಾಲಯ ಇಲಾಖೆ ಅಲ್ ಸಬಾ ಆಸ್ಪತ್ರೆ ಕುವೈಟ್) ರವರು ಹೃದಯ ರೋಗ ಮತ್ತು ಹೃದಯಾಘಾತದಂತ  ಖಾಹಿಲೆಗಳು ಬರುವ ವಿಧಾನ ಮತ್ತು ಅದನ್ನು ತಡೆಗಟ್ಟಲು ಬೇಕಾದ ಜೀವನ ಶೈಲಿಯ ಬದಲಾವಣೆ  ಮತ್ತು ವ್ಯಾಯಾಮ ದ ಕುರಿತು ವಿವರಿಸಿದರು.

“ಹೃದ್ರೋಗ”  ಬರಲು ಪ್ರಮುಖ ವಾಗಿ ಅಧಿಕ ರಕ್ತದೊತ್ತಡ,ಗಂಟಲೂತ, ಎದೆ ಅಸ್ವಸ್ಥತೆ, ಅನಿಯಮಿತ ಹೃದಯದ ಬಡಿತ ಕಾರಣ ಎಂದ ಅವರು ಅದಕ್ಕೆ ಬೇಕಾಗುವ ಪರಿಹಾರಗಳನ್ನು ಕೂಡ ತಿಳಿ ಹೇಳಿದರು.

ತಂಬಾಕು ಮತ್ತು ಮಧ್ಯಪಾನ ಜೀವನಕ್ಕೆ ಮಾತ್ರವಲ್ಲ ಕುಟುಂಬ ಮತ್ತು  ಸಮಾಜಕ್ಕೆ ಕೂಡ ಹಾನಿಕರ ಎಂದು ನುಡಿದರು. ಎತ್ತರಕ್ಕೆ ಅನುಗುಣವಾಗಿಯೇ ತೂಕವನ್ನು ಕೂಡ ಸರಿದೂಗಿಸಿ ಕೊಂಡು ಹೋಗಬೇಕು. ಅತಿಯಾದ ತೂಕ ಮತ್ತು ಬೊಜ್ಜು  ಆರೋಗ್ಯಕ್ಕೆ ಹೇಗೆ ಹಾನಿಕರ ಎಂಬುದನ್ನು ಮನದಟ್ಟು ಮಾಡಿದರು.

ಜನಾಬ್ ಹಸನ್ ಯೂಸುಫ್ (ಅಧ್ಯಕ್ಷರು  ಕುವೈಟ್ ಕರ್ನಾಟಕ ಮುಸ್ಲಿಂ ಕಲ್ಯಾಣ ಅಸೋಸಿಯೇಷನ್) ಮತ್ತು ಜನಾಬ್ S.M ಬಶೀರ್ (ಅಧ್ಯಕ್ಷರು ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ದಕ್ಷಿಣ ಕನ್ನಡ ವಿಭಾಗ)  ಸಾಂಧರ್ಭಿಕವಾಗಿ ಮಾತುಗಳನ್ನಾಡಿದ ಇವರು ಕುವೈಟ್ ಇಂಡಿಯಾ ಫೆಟರ್ನಿಟಿ ಫೋರಂನ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.

ಕುವೈಟ್ ಇಂಡಿಯಾ ಫೆಟರ್ನಿಟಿ ಫೋರಂ ತಂಡವು ಆಯೋಜಿಸಿದ ವ್ಯಾಯಾಮ ಮತ್ತು ಮಾರ್ಷಲ್ ಆರ್ಟ್ಸ್ ನ    ಅಣಕು ಪ್ರದರ್ಶನವು ಕುವೈಟ್ ನ ವಿವಿದ ಭಾಗಗಳಿಂದ ಬಂದ ನೂರಾರು ಅನಿವಾಸಿ ಭಾರತೀಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು .

ಜನಾಬ್ ಅಬ್ದುಲ್ ಸಲಾಮ್ (ಅಧ್ಯಕ್ಷರು ಕುವೈಟ್ ಇಂಡಿಯಾ ಫೆಟರ್ನಿಟಿ ಫೋರಂ) ವಿಚಾರಗೋಷ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಜನಾಬ್ ಸೈಫುದ್ದೀನ್ ಕುಟ್ಟಿಕ್ಕತ್ತೂರ್ ನಿರೂಪಿಸಿದ ಈ ವಿಚಾರಗೋಷ್ಟಿಯನ್ನು ಜನಾಬ್ ಸಿಕಂದರ್ ಬಾಷಾ ರವರು ಸ್ವಾಗತಿಸಿದರು ಮತ್ತು ಜನಾಬ್ ಸಿರಾಜ್ ಕಲ್ಲಡ್ಕ ರವರು ಧನ್ಯವಾದ ಸಮರ್ಪಿಸಿದರು.

ಸಭಾಭವನದ ಹೊರಭಾಗದಲ್ಲಿ ಏರ್ಪಡಿಸಿದ್ದ ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಅನಿವಾಸಿ ಭಾರತೀಯರು ಸದುಪಯೋಗ ಪಡಿಸಿಕೊಂಡರು. 

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಮಂಜೇಶ್ವರ ಮೋಹನ್ ದಾಸ್ ಕಾಮತ್
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-04-17

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

»ತುಳುಕೂಟ ಕುವೈಟ್ ಶ್ರೀ ಎಸ್. ಎಮ್. ಫರೂಕ್‌ರಿಗೆ ಪ್ರೀತಿಪೂರ್ವಕ ಬೀಳ್ಕೊಡುಗೆ
»ತುಳುಕೂಟ ಕುವೈಟ್ ಉಚಿತ ವೈದ್ಯಕೀಯ ತಪಾಸಣಾ ಮತ್ತು ಸಲಹಾ ಶಿಬಿರ
»ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ದಕ್ಷಿಣ ಕನ್ನಡ ಘಟಕ ವತಿಯಿಂದ ಎಸ್ ಎಂ ಫಾರೂಕ್ ರವರಿಗೆ ವಿದಾಯ ಕೂಟ.
»ಜಿ.ಎಸ್.ಬಿ.ಸಭಾ ಕುವೈತ್ ವತಿಯಿಂದ ಶ್ರೀ ಕೃಷ್ಣ ಜನ್ಮಾಸ್ತಮಿ ಆಚರಣೆ .
»ಕುವೈತ್ನಲ್ಲಿ ಮೊದಲ ಬಾರಿಗೆ-" ವಿ’ಬೆಳ್ಮಣ್ ಕ್ರಿಯೇಷನ್ಸ್ ನ-ವಿ’ಶೇಷ್ "
»ಕುವೈತ್: ಮಂಗಳೂರಿನ ಇಬ್ಬರು ತರುಣರ ದಾರುಣ ಮೃತ್ಯು
»ತುಳುಕೂಟ ಕುವೈಟ್: ಶ್ರೀ ವಿವೇಕ್ ರಾವ್‌ರಿಗೆ ಮನ್ನಣೆಯ ಬೀಳ್ಕೊಡುಗೆ
»ರಾಹುಲ್ ಗಾಂಧಿ ಕುವೈತ್ ದೊರೆ ಭೇಟಿ
»ಇನ್ನು ಮುಂದೆ ಆನ್ ಲೈನ್ ವಿಸಾ-ಐಡೆಂಟಿಟಿ ಕಾರ್ಡ್- ಡ್ರೈವಿಂಗ್ ಲೈಸೆನ್ಸ್
»ತುಳುಕೂಟ ಕುವೈಟ್ - ಮನೋರಂಜನೀಯ ರಸಮಂಜರಿ 2012
»ಕುವೈತ್ ವಿಮಾನ ನಿಲ್ದಾಣ ಅಭಿವೃದ್ದಿಗೆ $6 ಬಿಲಿಯನ್
»ಕುವೈತ್ ಕನ್ನಡ ಕೂಟದಿಂದ ಮರಳ ಮಲ್ಲಿಗೆ ದಿನಾಚರಣೆ
»ಇಸ್ಲಾಮಿಕ್ ಕಾನೂನು ತಿದ್ದುಪಡಿ ಪ್ರಸ್ತಾವನೆ ತಡೆಹಿಡಿದ ಕುವೈತ್ ಸರಕಾರ
»ಮತ್ತೆ ಏರ‍್ ಇಂಡಿಯಾ ಪೈಲೆಟ್ ಮುಷ್ಕರ : ಕುವೈತ್ ವಿಮಾನ ಸಂಚಾರ ಮೊಟಕು !
»ಕುವೈಟ್‌ನಲ್ಲಿ ಅಪಘಾತ: ಉಡುಪಿಯ ಪೌಲ್‌ ಸಂತೋಷ್‌ ಸಾವು
»ಅದ್ದೂರಿಯಿಂದ ಜರುಗಿದ ಕುವೈಟ್ ಇಂಡಿಯಾ ಫೆಟರ್ನಿಟಿ ಫೋರಂನ ಆರೋಗ್ಯ ಜಾಗ್ರತಿ ವಿಚಾರಗೋಷ್ಠಿ.
»Islamists plot against Gulf: Dubai police chief
»ತುಳುಕೂಟ ಕುವೈತ್-’ ಕುಟುಂಬ ಹೊರಾಂಗಣ ವಿಹಾರ’
»ಕೆ ಕೆ ಎಂ ಎ ವತಿಯಿಂದ ಮಂಗಳೂರಿಗೆ ಹತ್ತನೇ ಕಿಡ್ನಿ ಡಯಾಲಿಸಿಸ್ ಕೇಂದ್ರ (KDC) ಘೋಷನೆ
»ಕುವೈಟ್ ಕನ್ನಡ ಕೂಟದಿಂದ ದಾಸ ಜಯಂತಿ ಆಚರಣೆ
»ಪರಿಚಾರಿಕೆಯನ್ನು ರಸ್ತೆಗೆ ಬಿಸಾಡಿ..ಕಾರು ಓಡಿಸಿ ಕೊಂದ ದಂಪತಿಗೆ ಮರಣ ಶಿಕ್ಷೆ
»ಫೆ.17ರಂದು ಕುವೈತ್‌ನಲ್ಲಿ ದಾಸೋತ್ಸವ 2012
»ತುಳುಕೂಟದ ‘ತುಳುಸಿರಿ’ : ಕುವೈಟ್‌ನಲ್ಲಿ ತುಳು ಶಾಲೆ ಆರಂಭ
»ದಾಸ ಜಯಂತಿಯಂದು ಕುವೈತ್ ಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಶಂಕರ್ ಶ್ಯಾನುಭಾಗ್ ರಿಂದ ಸಂಕೀರ್ತನ ಕಾರ್ಯಕ್ರಮ
»ತುಳುಕೂಟ ಕುವೈತ್ ವತಿಯಿಂದ ಎ.ಕೆ ರವೀಂದ್ರರಿಗೆ ಸನ್ಮಾನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri