ಶುಕ್ರವಾರ, 18-10-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
'ಬಹರೈನ್ ಬಿಲ್ಲವಾಸ್' ನ ನೂತನ್ ಆಡಳಿತ ಮಂಡಳಿಯ ವಿದ್ಯುಕ್ತ ಪದಗ್ರಹಣ; ಆರ್ಯಭಟ ಪ್ರಶಸ್ತಿ ವಿಜೇತ ಕಮಲಾಕ್ಷ ಅಮೀನ್ ರವರಿಗೆ ಸಮುದಾಯದ ಹ್ರದಯಸ್ಪರ್ಶಿ ಸಮ್ಮಾನ.

ಹೆಚ್ಚಿನ ಚಿತ್ರಗಳಿಗಾಗಿ  View album ಮೇಲೆ Clickಮಾಡಿ

'ಬಹರೈನ್ ಬಿಲ್ಲವಾಸ್' ನ ನೂತನ ಆಡಳಿತ ಮಂಡಳಿಯ ವಿದ್ಯುಕ್ತ ಪದಗ್ರಹಣ;ಜನಮನ ರಂಜಿಸಿದ ವರ್ಣರಂಜಿತ  ಸಾಂಸ್ಕ್ರತಿಕ ಕಾರ್ಯಕ್ರಮಗಳು:ಬ್ರಹತ್ ಆಹಾರೋತ್ಸವ ಹಾಗು ಸ್ಪರ್ಧೆ.

ಬಹರೈನ್;ಇಲ್ಲಿನ ಅನಿವಾಸಿ ಬಿಲ್ಲವರ ಸಂಘಟನೆಯಾದ "ಬಹರೈನ್ ಬಿಲ್ಲವಾಸ್"ನ ನೂತನ ಆಡಳಿತ ಮಂಡಳಿಯು ಅಸ್ತಿತ್ವಕ್ಕೆ ಬಂದ ನಿಟ್ಟಿನಲ್ಲಿ ಸ್ಥಳೀಯ ಪ್ಯಾಪಿಲಾನ್ ರೆಸ್ಟೊರೆಂಟಿನ ಸಭಾಂಗಣದಲ್ಲಿ ಜರುಗಿದ ವರ್ಣ ರಂಜಿತ ಕಾರ್ಯಕ್ರಮವು ನೆರೆದ ನೂರಾರು ಜನರ ಕಣ್ಮನ ಸೂರೆಗೊಂಡಿತು.

ಸಮುದಾಯದ ಮಹಿಳೆಯರು ಮನೆಯಲ್ಲಿಯೇ ತಯಾರಿಸಿದ ೬೦ ಕ್ಕೂ ಹೆಚ್ಚಿನ ಮಾಂಸಹಾರಿ,ಸಸ್ಯಾಹಾರಿ,ಹಾಗು ಸಿಹಿತಿನಿಡಿ,ತಿನಿಸುಗಳು ಕಾರ್ಯಕ್ರಮದ ಪ್ರಧಾನ ಆಕರ್ಷಣೆಯಾಗಿದ್ದರೆ,ಸಮುದಾಯದ ಪ್ರತಿಭಾವಂತ ಕಲಾವಿದರುಗಳ ನ್ರತ್ಯ,ಹಾಸ್ಯ ಪ್ರಹಸನಗಳು,ಹಾಡುಗಳು ಕಾರ್ಯಕ್ರಮಕ್ಕೆ ಇನ್ನಷ್ಟು ಬಣ್ಣ ತುಂಬಿತು.

ಶ್ರೀಮತಿ ಉಷಾ ಮಹೇಶ್ ರವರ ಗಣೇಶ್ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿದರೆ.ಇತ್ತೆಚೆಗಷ್ಟೇ ನಿಧನರಾದ ಬಹರೈನ್ ಬಿಲ್ಲವಾಸ್ ನ ಕ್ರಿಯಾಶೀಲ ಸದಸ್ಯರಾದ ಕೆ.ಡಿ.ಸನಿಲ್ ರವರ ಆತ್ಮಕ್ಕೆ ಶಾಂತಿಕೊರುವ ಸಲುವಾಗಿ ಎಲ್ಲರೂ ಎದ್ದು ನಿಂತು ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಿದರು.




ತದನಂತರ ನೂತನವಾಗಿ ಆಯ್ಕೆಗೊಂಡ ಬಹರೈನ್ ಬಿಲ್ಲವಾಸ್ ನ ಆಡಳಿತ ಮಂಡಳಿಯ ಪಧಾದಿಕಾರಿಗಳ ಕಿರು ಪರಿಚಯ ನೀಡಿ ಅವರನ್ನು ವೇದಿಕೆಗೆ ಬರಮಾಡಿಕೊಳ್ಳ ಲಾಯಿತು.ವೇದಿಕೆಯಲ್ಲಿದ್ದ ನಿಕಟಪೂರ್ವ ಅಧ್ಯಕ್ಷರಾದ ಕ್ರಷ್ಣ ನೈಮ್ಪಲ್ಲಿ ಯವರು ನೂತನ ಅಧ್ಯಕ್ಷರಾದ ಕಟಪಾಡಿ ರಾಘು ಪೂಜಾರಿ ಹಾಗು ಇತರ ಎಲ್ಲಾ ಪಧಾದಿಕಾರಿಗಳಿಗೂ ಹೂ ನೀಡಿ ಆಡಳಿತ ಮಂಡಳಿಗೆ ಶುಭ ಹಾರೈಸುತಿದ್ದಂತೆಯೇ ಎಲ್ಲರೂ ಒಂದಾಗಿ ಜ್ಯೋತಿ ಬೆಳಗಿಸಿ ವಿದ್ಯುಕ್ತ ಪದಗ್ರಹಣ ಮಾಡಿದರು.ಉಪಾಧ್ಯಕ್ಷರಾದ ಸುರೇಂದ್ರ ಉದ್ಯಾವರ ರವರು ನೆರೆದವರನ್ನು ಉದ್ದೇಶಿಸಿ ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು.ನೂತನ ಅಧ್ಯಕ್ಷರಾದ ರಾಘು ಪೂಜಾರಿಯವರು ಮಾತನಾಡಿ ಎಲ್ಲರೂ ಸಮುದಾಯದ ಒಳಿತಿಗಾಗಿ,ಹಿತಕಾಗಿ ಒಗ್ಗಟ್ಟಿನಿಂದ ದುಡಿಯಬೇಕು ಎಂದು ಕರೆ ನೀಡಿದರು.ಇದೇ ಸಂಧರ್ಭದಲ್ಲಿ ೨೦೧೧ ರ ಪ್ರತಿಷ್ಠಿತ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಶ್ರೀ ಕಮಲಾಕ್ಷ ಅಮೀನ್ರವರನ್ನು ಸಮುದಾಯದ ಪ್ರೇತಿ,ವಿಶ್ವಾಸ ಹಾಗು ಅಭಿಮಾನದ ಧ್ಯೋತಕವಾಗಿ ಶಾಲು ಹೊದಿಸಿ,ಫಲಪುಷ್ಪಗಳೊಂದಿಗೆ ಸ್ಮರಣಿಕೆಯನ್ನು ನೀಡಿ ಸಮ್ಮಾನಿಸಲಾಯಿತು.ಸನ್ಮಾನಕ್ಕೆ ಕ್ರತಜ್ನತೆಯನ್ನು ಸಲ್ಲಿಸುತ್ತಾ ಮಾತನಾಡಿದ ಕಮಲಾಕ್ಷ ಅಮೀನ್ ರವರು "ನನ್ನ ಸಮುದಾಯದ ಜನರಿಂದ ,ಸಮುದಾಯದ ಜನರ ಸಮ್ಮುಖದಲ್ಲೇ ಸನ್ಮಾನವನ್ನು ಸ್ವೀಕರಿಸುತ್ತಿರುವುದು ಆರ್ಯಭಟ ಪ್ರಶಸ್ತಿ ಬಂದಾಗ ಆದ ಸಂತೋಷಕಿಂತಲೂ ಬಹಳ ದೊಡ್ಡದು.ನಾನು ಏನು ಸಾಧಿಸಿದ್ದರೂ ಅದು ನಿಮ್ಮ ಪ್ರೀತಿ,ವಿಶ್ವಾಸ ಹಾಗು ಅಭಿಮಾನದಿಂದ"ಎಂದರು.ಪ್ರಧಾನ ಕಾರ್ಯದರ್ಶಿ ಶ್ರೀ ಹರೀಶ್ ಪೂಜಾರಿ ಯವರು ಧನ್ಯವಾದ ಸಮರ್ಪಿಸುವುದರೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯ ಗೊಂಡಿತು.



ಮನೋರಂಜನಾ ಕಾರ್ಯದರ್ಶಿ ಶ್ರೀಮತಿ ಚಂದ್ರಕಲಾ ಮೋಹನ್ ರವರು ಮಾತನಾಡಿ ಮನೋರಂಜನಾ ಕಾರ್ಯಕ್ರಮದ ಸಂಕ್ಷಿಪ್ತ ವಿವರಣೆ ನೀಡಿ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ನಾಂದಿ ಹಾಕಿದರು.ಚಂದ್ರಕಲಾ ಮೋಹನ್ರವರ್ ನ್ರತ್ಯ ನಿರ್ದೇಶನದಲ್ಲಿ ಮೂಡಿಬಂದ ಗಣೇಶ ವಂದನೆ ನ್ರತ್ಯ ಕಾರ್ಯಕ್ರಮದೊಂದಿಗೆ ತೆರೆದುಕೊಂಡ ಸಾಂಸ್ಕ್ರತಿಕ ಲೋಕ ಸುಮಾರು ಒಂದು ಘಂಟೆಗಳ ಕಾಲ ಪ್ರೇಕ್ಷಕರ ಗಮನವನ್ನು ತನ್ನತ ಕೇಂದ್ರೀಕ್ರತಗೊಳಿಸುವಲ್ಲಿ ಯಶಸ್ವಿ ಯಾಯಿತು.ಉಷಾ ಕಿರಣ್ ರವರ ನ್ರತ್ಯ ನಿರ್ದೇಶನದಲ್ಲಿ ಬಾಲಕ,ಬಾಲಕಿಯರು ಹಾಗು ಪುಟಾಣಿಗಳು ಪ್ರದರ್ಶಿಸಿದ "ಕಾಳಿಂಗ ಮರ್ದನ" ಒಂದು ವಿಶಿಷ್ಟ ಪ್ರಯೋಗವಾಗಿ ರಂಗದ ಮೇಲೆ ಮೂಡಿಬಂದರೆ,ಅನೇಕ ದಂಪತಿಗಳು ಅಭಿನಯಿಸಿ ನರ್ತಿಸಿದ ಶ್ರೀಮತಿ ಚಂದ್ರಕಲಾ ಮೋಹ ನಿರ್ದೇಶನದ"ಮೊಕೆದ ಸಿಂಗಾರಿ"ನ್ರತ್ಯಎಲ್ಲರನ್ನೂ ರಂಜಿಸುವುದರಲ್ಲಿ ಯಶಸ್ವಿಯಾಯಿತು.ಯೋಗೀಶ್ ,ಜಗದೀಶ್,ಕಿಶನ್ ಅಭಿನಯದ "ಅಕ್ಬರ್ ಸಲೀಂ"ಹಾಸ್ಯ ಪ್ರಹಸನ ಎಲ್ಲರನ್ನೂ ನಗೆಕದಳಲ್ಲಿ ತೇಲಾಡಿಸಿತು.ಸಚಿನ್,ಸದಾನಂದ ಸುವರ್ಣ  ಕೊಡವೂರು, ಪ್ರಕಾಶ್ ಅಂಚನ್,ಉಷಾ ಮಹೇಶ್,ಮಾಸ್ಟರ್ ಯಶ್,ಕಿಶನ್,ಮುಂತಾದವರು ತಮ್ಮ ಹಾಡುಗಳಿಂದ ನೆರೆದವರನ್ನು ರಂಜಿಸಿದರು.ಇದೇ ಸಂಧರ್ಭದಲ್ಲಿ ಬಹರೈನ್ ಬಿಲ್ಲವಾಸ್ ಗೆ ನೂತನವಾಗಿ ಸೇರ್ಪಡೆಗೊಂಡ ಸದಸ್ಯರುಗಳನ್ನು ಅಧ್ಯಕ್ಷರಾದ ಶ್ರೀ ರಾಘು ಪೂಜಾರಿಯವರು ಹೂಗಳನ್ನು ನೀಡಿ ಸ್ವಾಗತಿಸಿದರು.





ಆಹಾರೋತ್ಸವ ಹಾಗು ಸ್ಪರ್ಧೆಯ ಅಂಗವಾಗಿ ಮಹಿಳೆಯರು ಮನೆಯಲ್ಲೇ ತಯಾರಿಸಿದ ೬೦ಕ್ಕೂ ಹೆಚ್ಚಿನ ಮಾಂಸಹಾರಿ,ಸಸ್ಯಾಹಾರಿ,ಹಾಗು ಸಿಹಿ ತಿಂಡಿಗಳನ್ನು ಸಾಲಾಗಿ,ಸುಂದರವಾಗಿ ಪ್ರದರ್ಶನಕ್ಕೆ ಇಡಲಾಗಿತ್ತು.ಪ್ರದರ್ಶನದೊಂದಿಗೆ ಆಹಾರ ಸ್ಪರ್ಧೆಯನ್ನೂ ಏರ್ಪಡಿಸಲಾಗಿದ್ದು ಸ್ಪರ್ಧೆಯನ್ನ್ನು ಮಾಂಸಹಾರಿ ವಿಭಾಗ,ಕಡಲ ತಿನಿಸ ವಿಭಾಗ,ಸಸ್ಯಾಹಾರಿ ವಿಭಾಗ,ಹಾಗು ಸಿಹಿ ತಿಂಡಿ ವಿಭಾಗದಲ್ಲಿ ನಡೆಸಲಾಗಿತ್ತು.ದ್ವೀಪದಲ್ಲಿ ಅಪರೂಪವೆನಿಸಿರಿವ ಮರುವಯಿ ಗಸಿ,ಎಟ್ಟಿ ಸುಕ್ಕ,ಜೆಂಜಿ ಗಸಿ,ನೀರು ದೋಸ ಮುಂತಾದ ಮಹಿಳೆಯರು ಮನೆಯಾಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಸವಿದ ನೆರೆದ ಜನರು ಬಾಯಿ ಚಪ್ಪರಿಸುತಿದ್ದರು.ಕಾರ್ಯಕ್ರಮದ ಕೊನೆಗೆ ಪಾಕ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.




ಕಾರ್ಯಕ್ರಮದ ಪ್ರಯೋಜಕರುಗಳಾಗಿ ಶ್ರೀಗಳಾದ ಸತೀಶ್ ಅಂಚನ್,ಮೋಹನ್ ಪೂಜಾರಿ ನೆಜಾರ್,ನಾಗರಾಜ್ ರಾವ್ ಮಂಗಳೂರು,ಹರೀಶ್ ಪೂಜಾರಿ,ರಾಘು ಪೂಜಾರಿ ಮುಂತಾದವರು ಸಹಕರಿಸಿದ್ದರು.




ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಕಮಲಾಕ್ಷ ಅಮೀನ್ ರವರು ನಿರೂಪಿಸಿದರು.ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿಯವರು ಧನ್ಯವಾದ ಅರ್ಪಿಸಿದರು.

ಪಾಕ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ವಿಜೇತರ ವಿವರ ಈ ಕೆಳಗಿನಂತಿದೆ.

ಮಾಂಸಹಾರಿ ವಿಭಾಗ;

ಪ್ರಥಮ; ಯಶೋದ ಪೂಜಾರಿ.
ದ್ವಿತೀಯ;ಸುಮಂಗಲಾ ವಿಶ್ವನಾಥ್.
ತ್ರತಿಯ; ಚಂದ್ರಕಲಾ ದಯಾನಂದ್.

ಕಡಲತಿನಿಸ ವಿಭಾಗ;

ಪ್ರಥಮ; ಬಬಿತಾ ಕೋಟ್ಯಾನ್.
ದ್ವಿತೀಯ; ಗೀತ ಶಿವರಾಂ
ತ್ರತೀಯ; ಪ್ರಮಿಳಾ ಸತೀಶ್.

ಸಸ್ಯಹಾರಿ ವಿಭಾಗ;

ಪ್ರಥಮ; ಕಿರಣ್ ಸುನಿಲ್.
ದ್ವಿತೀಯ; ನಳಿನಿ
ತ್ರತೀಯ; ಉಷಾ ಮಹೇಶ್.

ಸಿಹಿತಿನಿಸು ವಿಭಾಗ;

ಪ್ರಥಮ; ಚೇತನಾ ರಾಜಕುಮಾರ್.
ದ್ವಿತೀಯ; ಸ್ಮಿತಾ ಶ್ರೀದರ್.
ತ್ರತೀಯ; ಸುರೇಖ ಸಂತೋಷ್
.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಚಿತ್ರ ವರದಿ-ಆಸ್ಟಿನ್ ಸಂತೋಷ್ ಕುಮಾರ್ ಹಳೆಯಂಗಡಿ.
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-04-14

Tell a Friend
ಇತರ ಸಂಭಂದಪಟ್ಟ ವರದಿಗಳು
»ಬಹರೈನ್ ಹೆಮ್ಮೆಯ ಕನ್ನಡಿಗ ಕಮಲಾಕ್ಷ ಅಮೀನ್ ರವರಿಗೆ ಪ್ರತಿಷ್ಟಿತ ಆರ್ಯಭಟ ಪ್ರಶಸ್ತಿ

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಬಹ್ರೈನ್]

»ಬಹರೈನ್ ಕನ್ನಡ ಸಂಘ : 'ಸ್ವಾತಂತ್ರ್ಯೋತ್ಸವ' ಹಾಗೂ 'ಈದ್' ಹಬ್ಬದ ಸಂಭ್ರಮದ ಆಚರಣೆ
»ಕಾ೦ಚನ್ ಪ್ರತಿಷ್ಠಾನದಿ೦ದ ಭಾರತ ಮತ್ತು ಭ್ರಷ್ಠಾಚಾರ ವಿಷಯದಲ್ಲಿ ವಿಶ್ವ ಮಟ್ಟದಲ್ಲಿ ಪ್ರಬ೦ಧ ಸ್ಪರ್ಧೆ
»ಬಹರೈನ್ ಕನ್ನಡ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ.
»ಬಹರೈನ್ ಕನ್ನಡ ಸಂಘ : ಸಂಭ್ರಮದ ಇಫ್ತಾರ್ ಕೂಟದ ಆಚರಣೆ.
»ಕುಂಜೂರು ಸೌದಾ ಕುಟುಂಬಕ್ಕೆ ಅನಿವಾಸಿ ಭಾರತೀಯರಿಂದ ಧನಸಹಾಯ
»ದ್ವೀಪದ ಹಿರಿಯ ಕನ್ನಡಿಗನಿಗೆ ರಾಮೀ ಸಮೂಹ ಸಂಸ್ಥೆಯಿಂದ ಹ್ರದಯಸ್ಪರ್ಶಿ ಬೀಳ್ಕೊಡುಗೆ:ಮೂರೂವರೆ ದಶಕಗಳ ಸುಧೀರ್ಘ ದ್ವೀಪ ವಾಸದ ನಂತರ ತಾಯ್ನಾಡಿನತ್ತ ವಿಟ್ಟಲ್ ಶೆಟ್ಟಿ ದಂಪತಿಗಳು.
»ಕನ್ನಡ ಸಂಘ ಬಹ್ರೈನ್ ನ್ನಲ್ಲಿ 'ಹಾಡಿಗೊಂದು ಹಾಡು 2012'
»ಬಹ್ರೈನ್ : ಶ್ರೀಯುತ ವಿಟ್ಟಲ್ ಶೆಟ್ಟಿ ಯವರಿಗೆ ಕನ್ನಡ ಸಂಘದಲ್ಲಿ ಬೀಳ್ಕೊಡುಗೆ.
»ಬಹರೈನ್:ಬಂಟ್ಸ್ ಆಸೋಸಿಯೇಶನ್ ನ ಅಧ್ಯಕ್ಷರಾಗಿ ಕರ್ಮಾರ್ ನಾಗೇಶ್ ಶೆಟ್ಟಿ ಆಯ್ಕೆ
»ಬಹರೈನ್ ನಲ್ಲಿ 'ರಾಮೀ ಬೇಸಿಗಾ ಶಿಬಿರ'-ಮಕ್ಕಳ ವ್ಯಕ್ತಿತ್ವದ ವಿಕಸನಕ್ಕೊಂದು ಸುವರ್ಣಾವಕಾಶ.
»ಸಿ.ಬಿ.ಎಸ್.ಇ ಪರೀಕ್ಷೆಯಲ್ಲಿ ಬಹರೈನ್ನಲ್ಲಿನ ಕರ್ನಾಟಕದ ಮಕ್ಕಳ ಸಾಧನೆ.
»ಫಹ್ದ್ ಕ್ಯಾಸ್ವೆಯಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆಗೆ ಚಿಂತನೆ
»ಬಹ್ರೈನ್ ಇಂಡಿಯನ್ ಕ್ಲಬ್ಬ್ 'ಪ್ರಿನ್ಸ್ & ಪ್ರಿನ್ಸೆಸ್ 2012'
»ಬಹ್ರೈನ್ ಕನ್ನಡದ ವಿದ್ಯಾರ್ಥಿಗಳಿಂದ ನಾಡಿನ ಮೂಡುಬೆಳ್ಳೆಗೆ ಗೌರವ
»ಬಹರೈನ್ ಕನ್ನಡ ಸಂಘದಲ್ಲಿ 'ಭಕ್ತ ಸುಧನ್ವ' ಯಕ್ಷಗಾನ ತಾಳ ಮದ್ದಳೆ
»ಆರ್ಯಭಟ ಪ್ರಶಸ್ತಿ ವಿಜೇತ ಕಮಲಾಕ್ಷ ಅಮೀನ್ ರವರಿಗೆ ರಾಮೀ ಸಮೂಹ ಸಂಸ್ಥೆಯಿಂದ ಹ್ರದಯಸ್ಪರ್ಶಿ ಸಮ್ಮಾನ.
»ಬಹರೈನ್ ಕನ್ನಡ ಸಂಘದಲ್ಲಿ ಕ್ವಿಜ್ ನೈಟ್...
»ಬಹ್ರೈನ್-ಮಂಗಳೂರು ಏರ್ ಏಂಡಿಯಾ ಹೆಚ್ಚುವರಿ ವಿಮಾನ ಹಾರಾಟಕ್ಕೆ ಕರೆ:ತುಳುನಾಡ ರಕ್ಷಣಾ ವೇದಿಕೆ ಮನವಿ
»ಅದ್ದೂರಿಯಾಗಿ ಜರುಗಿದ 'ಬಂಟ್ಸ್ ಬಹರೈನ್ ' ನ ಒಂಭತ್ತನೆಯ ವಾರ್ಷಿಕೋತ್ಸವ: ಜನಮನ ರಂಜಿಸಿದ ಸಾಂಸ್ಕ್ರತಿಕ ಲೋಕ: ಕಾರ್ಯಕ್ರಮಕ್ಕೆ ವಿಶೇಷ ಮೆರಗುಕೊಟ್ಟ ಗಣ್ಯರ ಉಪಸ್ಥಿತಿ.
»12ನೇ ತರಗತಿ: ಬಹರೈನ್ ಗೆ ಉಡುಪಿ ಯುವಕ ದ್ವಿತೀಯ
»ದ್ವೀಪದ ಬಂಟ ಸಮುದಾಯದ ಸಾಂಸ್ಕ್ರತಿಕ ವೈಭವಕ್ಕೆ ಕ್ಷಣ ಗಣನೆ ಆರಂಭ: ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಡಾIಬಿ.ಆರ್.ಶೆಟ್ಟಿ.
»ದ್ವೀಪದಲ್ಲಿ ವರ್ಣರಂಜಿತ ಮುಕ್ತಾಯ ಕಂಡ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ:' ಬಹರೈನ್ ಬಿಲ್ಲವಾಸ್' ನ ಮಡಿಲಿಗೆ ಪ್ರತಿಷ್ಠಿತ 'ಇಂಡಿಯನ್ ಕ್ಲಬ್-ಆಫ್ರಿಕನ್ ಈಸ್ಟರ್ನ್ ಟ್ರೋಫಿ'
»ಬಹರೈನ್ ಕನ್ನಡ ಸಂಘ : ಹರ್ಷೋಲ್ಲಾಸದ 'ವಸಂತೋತ್ಸವ -2012 ' ಆಚರಣೆ ಹಾಗೂ 'ಪದಗ್ರಹಣ' ಸಮಾರಂಭ ...
»ಬಸವ ಸಮಿತಿ ಬಹ್ರೈನ್ ಆಚರಿಸಿದ ವಿಜ್ರಂಭಣೆಯ ಬಸವ ಜಯಂತಿ
»ಬಹ್ರೈನ್‍ಗೆ ನುಸುಳಿದ 20 ಮಂದಿ ಬಾಂಬ್‍ ತಯಾರಕರ ಪತ್ತೆಗೆ ಪೋಲಿಸ್ ಚುರುಕು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri