ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಬಹರೈನ್ ಹೆಮ್ಮೆಯ ಕನ್ನಡಿಗ ಕಮಲಾಕ್ಷ ಅಮೀನ್ ರವರಿಗೆ ಪ್ರತಿಷ್ಟಿತ ಆರ್ಯಭಟ ಪ್ರಶಸ್ತಿ

೨೦೧೨ನೇ ಸಾಲಿನ ಪ್ರತಿಷ್ಟಿತ "ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಬಹರೈನ್ ಕನ್ನಡಿಗ ಶ್ರೀ ಕಮಲಾಕ್ಷ ಅಮೀನ್ ರವರು ಆಯ್ಕೆಯಾಗಿದ್ದಾರೆ.ವಿದೇಶಿ ನೆಲದಲ್ಲಿ ಕನ್ನಡ ಭಾಷೆ ಹಾಗೂ ಸಾಂಸ್ಕೃತಿಗೆ ಸಲ್ಲಿಸಿದ ಅನುಪಮ ಸೇವೆಗಾಗಿ ಶ್ರೀ ಕಮಲಾಕ್ಷ ಅಮೀನ್ ರವರನ್ನು ಆರ್ಯಭಟ ಸಂಸ್ಥೆಯು ಗುರುತಿಸಿದೆ.ಇದೇ ಎಪ್ರಿಲ್ ೨೮ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರಗುವ ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದೆಂದು ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಎಚ್.ಎಲ್.ಎನ್ ರಾವ್ ರವರು ತಿಳಿಸಿರುತ್ತಾರೆ.

ಕನ್ನಡ ಸಂಸ್ಕೃತಿ ಚಟುವಟಿಕೆಗಳಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಅತ್ಯಂತ ಸಕ್ರೀಯವಾಗಿರುವ ಬಹರೈನ್ ನಿಂದ ಈ ತನಕ ಪ್ರತಿಷ್ಟಿತ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಶ್ರೀಯುತರು ದ್ವಿತೀಯರಾಗಿದ್ದು, ಕಳೆದ ಎರಡು ದಶಕಗಳಿಂದ ತನ್ನನ್ನು ಇಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.ಬಹರೈನ್ ನಲ್ಲಿ ಪ್ರಪ್ರಥಮವಾಗಿ ಎಫ್.ಎಂ ರೇಡಿಯೋ ಬಾನುಲಿಯಲ್ಲಿ ಕಸ್ತೂರಿ ಕನ್ನಡವೆಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತನ್ನ ಪರಿಕಲ್ಪನೆ ಹಾಗೂ ನಿರೂಪನೆಯ ಮೂಲಕ ಕಾರ್ಯಕ್ರಮವನ್ನು ಕನ್ನಡದಲ್ಲಿ ಪ್ರಸಾರಗೊಳಿಸಲು ಪ್ರಾರಂಭಿಸಿದ ಕೀರ್ತಿ ಶ್ರೀಯುತರಿಗೆ ಸಲ್ಲಬೇಕು.ಈ ಮೂಲಕ ಕನ್ನಡದ ಕಸ್ತೂರಿಯ ಕಮ್ಪನ್ನು ದ್ವೀಪದಾದ್ಯಂತ ಪಸರಿಸಿದರಲ್ಲದೇ, ಕರ್ನಾಟಕದ ದಿಗ್ಗಜರಲ್ಲಿ ಅನೇಕರ ಸಂದರ್ಶನವನ್ನು ನಡೆಸಿಕೊಟ್ತರು. ಸ್ವತಃ ಕಲಾವಿದನಾಗಿರುವ ಇವರು ಅನೇಕ ಕಲಾವಿದರನ್ನು ದ್ವೀಪಕ್ಕೆ ಪರಿಚಯಿಸಿದರಲ್ಲದೇ, ಕನ್ನಡ ಚಲನಚಿತ್ರದಲ್ಲೂ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿರುವರು.ಕನ್ನಡ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಹಲವು ವರುಷ ಸೇವೆ ಸಲ್ಲಿದ ಇವರು ೨೦೦೬ರಲ್ಲಿ ಜರಗಿದ ವಿಶ್ವ ಕನ್ನಡ-ಸಂಸ್ಕೃತಿ ಸಮ್ಮೇಳನದ ಸಾಂಸ್ಕ್ರಿತಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕೊಟ್ಟಿದ್ದರು.ಅತ್ಯುತ್ತಮ ನಿರೂಪಕರೂ ಆಗಿರುವ ಇವರು ಬಹರೈನ್ ನ ಬಹುತೇಕ ಪ್ರತಿಷ್ಟಿತ ಕನ್ನಡ ಕಾರ್ಯಕ್ರಮಗಳ ನಿರೂಪಣೆಯನ್ನು ನಡೆಸಿಕೊಟ್ಟಿರುತ್ತಾರೆ.


ಶ್ರೀಯುತರು ಕನ್ನಡ ಕಲೆ-ಭಾಷೆ-ಸಂಸ್ಕೃತಿಗೆ ಕೊಲ್ಲಿ ದೇಶದಲ್ಲಿ ನೀಡಿದ ಕೊಡುಗೆಯನ್ನು ಪರಿಗಣಿಸಿ ೨೦೦೮ರಲ್ಲಿ ಗುಜರಾತಿನ ವಾಪಿಯಲ್ಲಿ ಜರಗಿದ ೮ನೇ "ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ"ದಲ್ಲಿ"ಹೃದಯವಂತರು"ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇದರೊಂದಿಗೆ ಹುಬ್ಬಳ್ಳಿಯ ಗಂಗೂಬಾಯಿ ಹನಗಲ್ ಸಂಗೀತ ಪ್ರತಿಷ್ಟಾನವು ಕಲೆದ ವರುಷ ಇವರನ್ನು ಪ್ರಶಸ್ತಿಯೊಂದಿಗೆ ಗೌರವಿಸಿದೆ.ರೋಟರಿ ಕ್ಲಬ್ ಕುಂದಾಪುರ,ಕುಂದಪ್ರಭ ಸಂಸ್ಥೆ, ಬಿಲ್ಲವರ ಸಂಘ ಕುಂದಾಪುರ ಮುಂತಾದ ಸಂಸ್ಥೆಗಳೂ ಇವರ ಸೇವೆಯನ್ನೂ ಗುರುತಿಸಿ ಗೌರವಿಸಿದೆ.೨೦೧೦ರಲ್ಲಿ ಕುಂದಾಪುರದ ಬೈಂದೂರಿನಲ್ಲಿ ಜರುಗಿದ ಬೃಹತ್"ಬಿಂದು ಪುರೋತ್ಸವ"ದಲ್ಲಿ ಸನ್ಮಾನಿಸಲ್ಟಟ್ಟಿರುವರಲ್ಲದೇ, ಶಿರಸಿ "ನಾಟ್ಯ ಕಲಾಂಜಲಿ"ಸಂಸ್ಥೆಯು ಇವರಿಗೆ ನಾಡಿನ ಕಲೆ ಹಾಗೂ ಕಲಾವಿದರ ಬಗ್ಗೆ ಇರುವ ಕಾಳಜಿಯನ್ನು ಗುರುತಿಸಿ ಸನ್ಮಾನಿಸಿದೆ. ಬಹರೈನ್ ನಲ್ಲೂ ಹತ್ತು ಹಲವು ಗೌರವಗಳನ್ನು ಸ್ವೀಕರಿಸಿರುವ ಇವರು ಬಹರೈನ್ ನ" ನಮ್ಮ ಕನ್ನದ" ವೇದಿಕೆಯ ಸಂಘಟಕರಲ್ಲೊಬ್ಬರು."ನಮ್ಮ ಕನ್ನಡ" ವೇದಿಕೆಯು ಇತ್ತೀಚೆಗೆಷ್ಟೇ "ರಾಮಿ ರಸ ಸಂಜೆ"ಸಾಂಸ್ಖೃತಿಕ ಕಾರ್ಯಕ್ರಮವನ್ನು ನಾಡಿನ ಹೆಸರಾಂತ ಕಲಾವಿದರೊಂದಿಗೆ ಯಶಸ್ವಿಯಾಗಿ ಸಂಘಟಿಸಿತ್ತು.ಇತ್ತೀಚಿನ ವರುಷಗಳಲ್ಲಿ ಬಹರೈನ್ ನಲ್ಲಿ ಜರಗಿದ ಅತ್ಯುತ್ತಮ ಹಾಗೂ ಅತ್ಯಂತ ಯಶಸ್ವೀ ಕಾರ್ಯಕ್ರಮವೆಂದು ಈ ಕಾರ್ಯಕ್ರಮವನ್ನು ಬಣ್ಣಿಸಲಾಗಿತ್ತು.

ಶ್ರೀಯುತರು ಮುಂಚೂಣಿಯಲ್ಲಿರುವ "ಗೆಳೆಯರ ಬಳಗಬಹರೈನ್" ಸಂಘಟನೆ ತಾಯ್ನೆಲದ ಕಡು ಬಡವರ ಸಂಕಷ್ಟಕ್ಕೆ ಸ್ವಂದಿಸುತ್ತಾ ಬರುತ್ತಿದ್ದು,ವಿದ್ಯಾರ್ಥಿವೇತನ,ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ, ಮುಂತಾದ ಸೇವೆಗಳನ್ನು ಸದ್ದಿಲ್ಲದೇ ನಡೆಸುತ್ತಿದೆ.


ಬಹುಮುಖ ಪ್ರತಿಭೆಯ ಇವರು "ಉದಯವಾಣಿ ಪತ್ರಿಕೆ"ಹಾಗೂ"ಗಲ್ಪ್ ಕನ್ನಡಿಗ"ದ ಬಹರೈನ್ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಶ್ರೀಯುತರು ನಡೆಸಿಕೊಟ್ಟ ಅನೇಕ ಸಂದರ್ಶನಗಳು ಕನ್ನಡ ನಾಡಿನ ಪ್ರಸಿದ್ದ ಪತ್ರಿಕೆಗಳಲ್ಲಿ ಪ್ರಾಕ್ಷಿಕಗಳಲ್ಲಿ ಪ್ರಕಟವಾಗಿದೆ.

ಬಹರೈನ್ ನ ಕನ್ನಡ ಕಾರ್ಯಕ್ರಮಗಳಿಗೆ ಅತ್ಯಂತ ಹೆಚ್ಚು ಪ್ರಾಯೋಜಕತ್ವಗಳನ್ನು ಒದಗಿಸಿ ಕೊಟ್ಟ ಹಿರಿಮೆಯೂ ಶ್ರೀ ಕಮಲಾಕ್ಷ ಅಮೀನ್ ರವರದ್ದು.ಈ ಕೊಡುಗೆಗಾಗಿ ಕನ್ನಡ ಸಂಘ ಹಾಗೂ ಇತರ ಸಂಸ್ಥೆಗಳು ಶ್ರೀಯುತರನ್ನು ಅನೇಕ ಬಾರಿ ಗೌರವಿಸಿದೆ.೨೦೦೮ರಲ್ಲಿ ಜರಗಿದ ಬಹೃತ್ ಕನ್ನಡ ವೈಭವ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದ ಶ್ರೀಯುತರನ್ನು ಅಂದು ಆಗಮಿಸಿದ್ದ ಕರ್ನಾಟಕಕದ ಮುಖ್ಯಮಂತ್ರಿ ಬಿ.ಎಸ್ ಯೆಡಿಯೂರಪ್ಪರು ಸ್ಮರಣಿಕೆ ನೀಡಿ ಗೌರವಿಸಿದ್ದರು. ಬಹರೈನ್ ಬಿಲ್ಲವಾಸ್ ಸಂಸ್ಥೆಯ ಸಾಂಸ್ಕೃತಿಕ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿರುವರು. ಬಹರೈನ್ ನಲ್ಲಿ ಜರಗಿದ ಬಹುತೇಕ ಎಲ್ಲಾ ಕನ್ನಡ ಕಾರ್ಯಕ್ರಮಗಳ ಹಿಂದೆ ಶ್ರೀಯುತರ ಶ್ರಮವಿದೆ.

 ಪತ್ನಿ ಸೊನಲ್ ಹಾಗೂ ಒರ್ವ ಮಗನೊಂದಿಗಿನ ಸುಖೀ ಸಂಸಾರ ಶ್ರೀಯುತರದ್ದು. ಶ್ರೀ ಕಮಲಾಕ್ಷ ಅಮೀನ್ ರವರ ಎರಡು ದಶಕಗಳ ಕನ್ನಡ ಭಾಷೆ ಹಾಗೂ ಸಂಸ್ಕ್ರತಿಯ ಸೇವೆಗೆ " ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ"ಯಿಂದಾಗಿ ಸೂಕ್ತ ಗೌರವ ಸಂದಿದೆ.

Bahrain: Kasturi Kamal Chosen for Aryabhata Award

Bahrain's popular Kannada commmunity leader and a leading cultural enthusiast Kamalaksha Amin has been selected for the prestigious "2012 International Aryabhata Award".

The Bangalore-based Aryabhata Cultural Organisation has selected Mr Amin for the award for his contribution to Kannada language and culture in a foreign land, said  Organisation president  Mr HLN Rao.

Mr Amin will receive the award at a colourful ceremony to be organised at Ravindra Kalakshetra in Bangalore on April 28.

Mr Amin is the second person to receive the award from Bahrain.
He has been active in the cultural scene on the island for the past two decades - having set his imprint in music, theatre, community leadership and social service.

Every Kannada lover on the island fondly remembers his as "Kasturi Kamal" for his unique effort in starting the "Kasturi Kannada" programme on local FM station in Bahrain, perhaps the first such programme in the Gulf. Through the programme, he intorduced many Kannada celebritries and political leaders to Bahrain listeners.

He has worked as the Entertainment Secretary of Kannada Sangha Bahrain for several years and introduced innovative programmes for the benefit of its members. His contribution to the success of the World Kannada Cultural COnvention held in Bahrain in 2006 is noteworthy.
He is a noted Kannada and Tulu programames compere on the island and gives his whole-hearted support to programmes of every community.

He has backed many events in Kannda Sangha Bahrain by arranging sponsorships for them and he was honoured for this support by the then Chief Minister Honourable B S Yeddyurappa during his visit to Kannada Sangha Bahrain.

Mr Amin was awarded the "Hrudayavantaru" award at the 8th All-India Kannada Cultural Convention held in Vaapi in Gujarat for his contribution for Kannada art, culture and language. He was also honoured by the Gangubai Hangal Foundation last year, the Rotary Club of Kundapur, Kundaprabha organisation, Billava Sangha Kundapur, the Naatya Kalaanjali Sirsi and the "Bindu Purotsava" held in Baindoor in 2010.

Apart from organising many cultural events, including the hugely successful "Ramee Rasa Sanje", he is also a key adminstrator of "Namma Kannada", a popular FaceBook group of Bahrain Kannadigas.
Mr Amin is also a keen organiser of help for the needy, whether it is in Bahrain or in India. The "Friends' Circle Bahrain" set up by him has helped several students and others in need.

He is also active in the field of writing, being the correspondent for Udayavani and Gulf Kannadiga from Bahrain. He has interviewed many celebrities for newspapers and magazines.

Mr Amin lives in Bahrain with wife Sonal and their young son.

It is worth  mentioning  here that The Aryabhata foundation recognised the right person in the Island who has served for two decades for kannada language and culture.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಶ್ರೀಕಾಂತ್ ಭಟ್
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-03-29

Tell a Friend

ಪ್ರತಿಸ್ಪಂದನ
K.B.Jagdish, Kinnigoli/Bahrain
2012-04-01
೨೦೧೨ರ ಆರ್ಯಭಟ ಪ್ರಶಸ್ತಿಗೆ ಭಾಜನರಾದ ಆತ್ಮೀಯ ಶ್ರೀ ಕಮಲ್......ನಿಮಗಿದೋ ಹಾರ್ದಿಕ ಅಭಿನಂದನೆಗಳು ಹಾಗೂ ಅಭಿವಂದನೆಗಳು. ಕನ್ನಡಾಂಬೆಯ ಕಲಾಸೇವೆಯನ್ನು ನಿರಂತರವಾಗಿ ಮುನ್ನಡೆಸಲು ಈ ಪ್ರಶಸ್ತಿ ನಿಮಗೆ ಸ್ಪೂರ್ತಿದಾಯಕವಾಗಲಿ ಹಾಗೂ ಮಾತೆಯು ಸದಾ ನಿಮ್ಮನ್ನು ಅನುಗ್ರಹಿಸಲಿ." ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ "
..ಕಂದಾವರ ಮೋಹನ್‌ ಸಾಲ್ಯಾನ್, ಬಹ್ರೈನ್
2012-04-01
"ಕರ್ಮಣ್ಯೇವಾಧಿಕಾರಸ್ತೆ ಮಾಹಾಫಲೇಸು ಕಧಾಚನ" ಯಾವಾತನು ಫಲಾಪೇಕ್ಷೆ ಇಲ್ಲದೆ ಯಾವರೀತಿ ಸಮಾಜಕ್ಕೆ ತನ್ನನ್ನು ತಾನು ಸಮರ್ಪಿಸಿಕೊಳ್ಳುತ್ತಾನೋ ಅಂತಹವರನ್ನು ಇಂತಹ ಪುರಸ್ಕಾರಗಳು ಖಂಡಿತವಾಗಿ ಹುಡುಕಿಕೊಂಡು ಬಂದೇ ಬರುತ್ತದೆ ಎನ್ನುವುದಕ್ಕೆ ಕಮಲಾಕ್ಷ ಅಮಿನಾ ಸಾಕ್ಷಿಯಾಗಿದ್ದಾರೆ. ಆ ಭಗವಂತನು ತಮ್ಮಿಂದ ಒಳ್ಳೆಯ ಕಾರ್ಯಗಳನ್ನು ಮಾಡಿಸಿ ಇನ್ನಷ್ಟು ಪ್ರಶಸ್ತಿಗಳನ್ನು ಅನುಗ್ರಹಿಸಲಿ......ಜೈ ಹೋ..
Kamalaksha Amin, Bahrain
2012-04-01
ನನ್ನ ಮೇಲೆ ಅತೀವ ಪ್ರೀತಿ, ವಿಶ್ವಾಸ, ಅಭಿಮಾನವಿಟ್ಟು ದೇಶ, ವಿದೇಶಗಳಿಂದ ಫೋನಾಯಿಸಿ, ಸಾಮಾಜಿಕ ತಾಣಗಳಲ್ಲಿ, ಅಂತರ್ಜಾಲ ತಾಣಗಳಲ್ಲಿ ನಿಮ್ಮ ಒಳ್ಳೊಳ್ಳೆಯ ಮಾತುಗಳಿಂದ ಅಭಿನಂದನೆಗಳ ಧಾರೆಯನ್ನೇ ಹರಿಸಿದ ಎಲ್ಲಾ ಸ್ನೇಹಿತರಿಗೂ ಈ ನಿಮ್ಮ ಕಮಲ್ ನ ಹ್ರದಯದಿಂದ ನೇರವಾಗಿ ಕ್ರತಜ್ನತೆಗಳು.

ನಿಮ್ಮೆಲ್ಲರ ಪ್ರೀತಿ,ವಿಶ್ವಾಸ,ಅಭಿಮಾನಕ್ಕೆ ನಾನು ಮೂಕನಾಗಿದ್ದೇನೆ. ಇದು ನೀಡಿರುವ ಖುಷಿ ಆರ್ಯಭಟ ಪ್ರಶಸ್ತಿ ಬಂದಂದಕ್ಕಿಂತಲೂ ಹೆಚ್ಚಾಗಿದೆ. ನಾನು ಏನು ಸಾಧಿಸಿದ್ದರೂ ಅದು ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹದಿಂದ. ನಿಮ್ಮಿಂದಾಗಿ ನಾನು ಈ ಪ್ರಶಸ್ತಿಯ ನಿಜವಾದ ಹಕ್ಕುದಾರರು ನನ್ನನ್ನು ಪ್ರತಿ ಹೆಜ್ಜೆ, ಹೆಜ್ಜೆಗೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ನೀವುಗಳು. ಈ ಪ್ರಶಸ್ತಿಯನ್ನು ನಾನು ಸಮಸ್ತ ಕನ್ನಡಿಗರಿಗೂ ಅರ್ಪಿಸುತಿದ್ದೇನೆ. ಇದೆ ಮಾತನ್ನು ನಾನು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲೂ ಹೇಳಲಿದ್ದೇನೆ.

ಕನ್ನಡ ಭಾಷೆ, ಪ್ರೀತಿ,ಅಭಿಮಾನ ಕನ್ನಡ ಭಾಷೆ, ಸಂಸ್ಕ್ರತಿಯ ಮೇಲೆ ನಿರಂತರವಾಗಿರಲಿ. ನಾವು ನಮ್ಮ ಜನ್ಮ ಕೊಟ್ಟ ತಾಯಿಯನ್ನು ಹೇಗೆ ಮರೆಯಲು ಸಾಧ್ಯವಿಲ್ಲವೋ ಹಾಗೆಯೇ ಆ ತಾಯಿಯ ಮಡಿಲಿನಲ್ಲಿ ಕಲಿತ ಭಾಷೆ, ಸಂಸ್ಕ್ರತಿಯನ್ನು ಮರೆಯದೆ ಅದನ್ನು ಉಳಿಸಿ, ಬೆಳೆಸಲು ಶ್ರಮಿಸೋಣ.

ಇಂತೀ ನಿಮ್ಮ ಪ್ರೀತಿಯ.... ಕಮಲ್.

Rajesh B Shetty, Brahmavar
2012-03-31
Dear Kamal, You truly deserve this award. I'm proud to have you as a friend. God Bless you to achieve more & more mile stones like this in the future. Jai Kannadaambe Regards Rajesh Shetty & Fly Bahrain
bharath kanchan hosabettu, mangalore/abudhabi
2012-03-30
congratulations mr amin, your dedication for socail life get these awards..keep it up and all the best..
P.P.ABDUL KAREEM THOKUR, RIYADH K.S,A.
2012-03-30
ಶ್ರೀ ಕಮಾಲಕ್ಷರವರೇ ನೀವು ಆರ್ಯ ಬಟ ಪ್ರಶಸ್ತಿ ಗೆ ಆಯ್ಕೆ ಯಾದ ವಿಷಯ ತಿಳಿದು ಸಂತೋಷ ವಾಯ್ತು. ಮುಂದೆಯೂ ನಿಮ್ಮ ಸಾದನೆಗಳನ್ನು ಗುರುತಿಸಿ ಇನ್ನಸ್ಟು ಹೆಚ್ಹು ಪ್ರಸಸ್ತಿ ಸಿಗಲಿ ಎಂಬುದೇ ನನ್ನ ಹಾರೈಕೆ . ಆಲ್ ದಿ ಬೆಸ್ಟ್ ...!
ಗಣೇಶ್ ರೈ , ಯು.ಎ.ಇ.
2012-03-30
"ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ಕನ್ನಡವಾಗಿರು" ಕವಿವಾಣಿಯನ್ನು ಕೊಲ್ಲಿನಾಡಿನಲ್ಲಿ ಸಾಕ್ಷಿಕರಿಸಿ, ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಯನ್ನು ಪಡೆದ ಆತ್ಮೀಯರಾದ ಕಮಲಾಕ್ಷ ಅಮೀನ್ ರವರಿಗೆ ಅನಿವಾಸಿ ಕನ್ನಡಿಗರ ಪರವಾಗಿ ಅಭಿನಂದನೆಗಳು. ತಮ್ಮ ಮಾತೃಭಾಷೆಯ ಮೇಲಿರುವ ಪ್ರೀತಿ ಇಮ್ಮಡಿಯಾಗಲಿ, ಕನ್ನಡ ಭಾಷೆ ಕಲೆ ಸಂಸ್ಕೃತಿಗೆ ತಮ್ಮ ಸೇವೆ ನಿರಂತರವಾಗಿ ಸಮರ್ಪಣೆಯಾಗಿ, ಕೊಲ್ಲಿನಾಡಿನಲ್ಲಿ ಕನ್ನಡ ಸದಾ ಹಸಿರಾಗಿರಲಿ.
walter, manipal
2012-03-30
ಡಿಯರ್ ಕಮಲ್ ವೆಅರೆವೆರಿ ಪ್ರೌಡ ಆಫ್ ಉ. ಕೀಪ್ ಅಪ್ ದಿ ಗುಡ್ ವರ್ಕ್ ಫಾರ್ ಕನ್ನಡಿ ಗಾಸ್ .
B Shubhakar, Brhmavar/Dubai
2012-03-29
Congratulation Mr Amin. Hope we expect more social work with Kannada cultural activities in future. Jai Karnataka, Jai Bharath.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಬಹ್ರೈನ್]

»ಬಹರೈನ್ ಕನ್ನಡ ಸಂಘ : 'ಸ್ವಾತಂತ್ರ್ಯೋತ್ಸವ' ಹಾಗೂ 'ಈದ್' ಹಬ್ಬದ ಸಂಭ್ರಮದ ಆಚರಣೆ
»ಕಾ೦ಚನ್ ಪ್ರತಿಷ್ಠಾನದಿ೦ದ ಭಾರತ ಮತ್ತು ಭ್ರಷ್ಠಾಚಾರ ವಿಷಯದಲ್ಲಿ ವಿಶ್ವ ಮಟ್ಟದಲ್ಲಿ ಪ್ರಬ೦ಧ ಸ್ಪರ್ಧೆ
»ಬಹರೈನ್ ಕನ್ನಡ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ.
»ಬಹರೈನ್ ಕನ್ನಡ ಸಂಘ : ಸಂಭ್ರಮದ ಇಫ್ತಾರ್ ಕೂಟದ ಆಚರಣೆ.
»ಕುಂಜೂರು ಸೌದಾ ಕುಟುಂಬಕ್ಕೆ ಅನಿವಾಸಿ ಭಾರತೀಯರಿಂದ ಧನಸಹಾಯ
»ದ್ವೀಪದ ಹಿರಿಯ ಕನ್ನಡಿಗನಿಗೆ ರಾಮೀ ಸಮೂಹ ಸಂಸ್ಥೆಯಿಂದ ಹ್ರದಯಸ್ಪರ್ಶಿ ಬೀಳ್ಕೊಡುಗೆ:ಮೂರೂವರೆ ದಶಕಗಳ ಸುಧೀರ್ಘ ದ್ವೀಪ ವಾಸದ ನಂತರ ತಾಯ್ನಾಡಿನತ್ತ ವಿಟ್ಟಲ್ ಶೆಟ್ಟಿ ದಂಪತಿಗಳು.
»ಕನ್ನಡ ಸಂಘ ಬಹ್ರೈನ್ ನ್ನಲ್ಲಿ 'ಹಾಡಿಗೊಂದು ಹಾಡು 2012'
»ಬಹ್ರೈನ್ : ಶ್ರೀಯುತ ವಿಟ್ಟಲ್ ಶೆಟ್ಟಿ ಯವರಿಗೆ ಕನ್ನಡ ಸಂಘದಲ್ಲಿ ಬೀಳ್ಕೊಡುಗೆ.
»ಬಹರೈನ್:ಬಂಟ್ಸ್ ಆಸೋಸಿಯೇಶನ್ ನ ಅಧ್ಯಕ್ಷರಾಗಿ ಕರ್ಮಾರ್ ನಾಗೇಶ್ ಶೆಟ್ಟಿ ಆಯ್ಕೆ
»ಬಹರೈನ್ ನಲ್ಲಿ 'ರಾಮೀ ಬೇಸಿಗಾ ಶಿಬಿರ'-ಮಕ್ಕಳ ವ್ಯಕ್ತಿತ್ವದ ವಿಕಸನಕ್ಕೊಂದು ಸುವರ್ಣಾವಕಾಶ.
»ಸಿ.ಬಿ.ಎಸ್.ಇ ಪರೀಕ್ಷೆಯಲ್ಲಿ ಬಹರೈನ್ನಲ್ಲಿನ ಕರ್ನಾಟಕದ ಮಕ್ಕಳ ಸಾಧನೆ.
»ಫಹ್ದ್ ಕ್ಯಾಸ್ವೆಯಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆಗೆ ಚಿಂತನೆ
»ಬಹ್ರೈನ್ ಇಂಡಿಯನ್ ಕ್ಲಬ್ಬ್ 'ಪ್ರಿನ್ಸ್ & ಪ್ರಿನ್ಸೆಸ್ 2012'
»ಬಹ್ರೈನ್ ಕನ್ನಡದ ವಿದ್ಯಾರ್ಥಿಗಳಿಂದ ನಾಡಿನ ಮೂಡುಬೆಳ್ಳೆಗೆ ಗೌರವ
»ಬಹರೈನ್ ಕನ್ನಡ ಸಂಘದಲ್ಲಿ 'ಭಕ್ತ ಸುಧನ್ವ' ಯಕ್ಷಗಾನ ತಾಳ ಮದ್ದಳೆ
»ಆರ್ಯಭಟ ಪ್ರಶಸ್ತಿ ವಿಜೇತ ಕಮಲಾಕ್ಷ ಅಮೀನ್ ರವರಿಗೆ ರಾಮೀ ಸಮೂಹ ಸಂಸ್ಥೆಯಿಂದ ಹ್ರದಯಸ್ಪರ್ಶಿ ಸಮ್ಮಾನ.
»ಬಹರೈನ್ ಕನ್ನಡ ಸಂಘದಲ್ಲಿ ಕ್ವಿಜ್ ನೈಟ್...
»ಬಹ್ರೈನ್-ಮಂಗಳೂರು ಏರ್ ಏಂಡಿಯಾ ಹೆಚ್ಚುವರಿ ವಿಮಾನ ಹಾರಾಟಕ್ಕೆ ಕರೆ:ತುಳುನಾಡ ರಕ್ಷಣಾ ವೇದಿಕೆ ಮನವಿ
»ಅದ್ದೂರಿಯಾಗಿ ಜರುಗಿದ 'ಬಂಟ್ಸ್ ಬಹರೈನ್ ' ನ ಒಂಭತ್ತನೆಯ ವಾರ್ಷಿಕೋತ್ಸವ: ಜನಮನ ರಂಜಿಸಿದ ಸಾಂಸ್ಕ್ರತಿಕ ಲೋಕ: ಕಾರ್ಯಕ್ರಮಕ್ಕೆ ವಿಶೇಷ ಮೆರಗುಕೊಟ್ಟ ಗಣ್ಯರ ಉಪಸ್ಥಿತಿ.
»12ನೇ ತರಗತಿ: ಬಹರೈನ್ ಗೆ ಉಡುಪಿ ಯುವಕ ದ್ವಿತೀಯ
»ದ್ವೀಪದ ಬಂಟ ಸಮುದಾಯದ ಸಾಂಸ್ಕ್ರತಿಕ ವೈಭವಕ್ಕೆ ಕ್ಷಣ ಗಣನೆ ಆರಂಭ: ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಡಾIಬಿ.ಆರ್.ಶೆಟ್ಟಿ.
»ದ್ವೀಪದಲ್ಲಿ ವರ್ಣರಂಜಿತ ಮುಕ್ತಾಯ ಕಂಡ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ:' ಬಹರೈನ್ ಬಿಲ್ಲವಾಸ್' ನ ಮಡಿಲಿಗೆ ಪ್ರತಿಷ್ಠಿತ 'ಇಂಡಿಯನ್ ಕ್ಲಬ್-ಆಫ್ರಿಕನ್ ಈಸ್ಟರ್ನ್ ಟ್ರೋಫಿ'
»ಬಹರೈನ್ ಕನ್ನಡ ಸಂಘ : ಹರ್ಷೋಲ್ಲಾಸದ 'ವಸಂತೋತ್ಸವ -2012 ' ಆಚರಣೆ ಹಾಗೂ 'ಪದಗ್ರಹಣ' ಸಮಾರಂಭ ...
»ಬಸವ ಸಮಿತಿ ಬಹ್ರೈನ್ ಆಚರಿಸಿದ ವಿಜ್ರಂಭಣೆಯ ಬಸವ ಜಯಂತಿ
»ಬಹ್ರೈನ್‍ಗೆ ನುಸುಳಿದ 20 ಮಂದಿ ಬಾಂಬ್‍ ತಯಾರಕರ ಪತ್ತೆಗೆ ಪೋಲಿಸ್ ಚುರುಕು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri