ಸೋಮವಾರ, 17-06-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಸಾವಿರದ ಸರದಾರ ‘ಗಮಕಿ’ವಿದ್ವಾನ್ ಕೈಂತಜೆ ನರಸಿಂಹ ಭಟ್

1959 ನೆ ಇಸವಿಯಿಂದ  ಏತಡ್ಕದಲ್ಲಿ ನಡೆದು ಬರುತ್ತಿದ್ದ ಪುರಾಣ ವಾಚನ ಸಪ್ತಾಹ ಗಳಲ್ಲಿ ಭಾಗವಹಿಸುತ್ತಾ ಬಂದಿರುವ ಕೈಂತಜೆ ನರಸಿಂಹ ಭಟ್ಟರು ಬರೋಬ್ಬರಿ 52  ವರ್ಷಗಳಲ್ಲಿ ಅನೇಕ  ಬಾರಿ  ಏತಡ್ಕದಲ್ಲಿ  ’ವಾಚನ ’ನಡೆಸಿದ ಗಮಕಿ .ಸಾವಿರಕ್ಕಿಂತಲೂ ಮಿಕ್ಕಿ ಕಾರ್ಯ ಕ್ರಮಗಳ ಮೂಲಕ  ಈ ಕಲಾವಿದ, ಸಾಹಿತಿ  ಕಾಸರಗೋಡು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಮ್ಮ  ಶ್ರೀಮಂತ ಕಂಠದಲ್ಲಿ ಕಾವ್ಯಧಾರೆಯು ಹರಿಸಿ ಕೇಳುಗರನ್ನು ಖುಷಿಯ ಶಿಖರಕ್ಕೆ ಒಯಿದು ಸಾಹಿತ್ಯ ಪ್ರೀತಿಯ ಕೃಷಿ ಮಾಡಿದ್ದಾರೆ.

 ದಿನಾಂಕ 23/03/12 ರಂದು  ಕರ್ನಾಟಕ ಗಮಕ ಕಲಾ ಪರಿಷತ್ತು,ಬೆಂಗಳೂರು , ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಆಶ್ರಯದಲ್ಲಿ ಗಮಕ ಪ್ರಚಾರ ಅಭಿಯಾನದಂತೆ ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಉತ್ಸವದಂದು ’ಪಾಶು ಪತ ಪ್ರದಾನ ’ಕಥಾ ಪ್ರಸಂಗವನ್ನು  ವಾಚಿಸಲಿರುವರು .ಈ ಸಂದರ್ಭದಲ್ಲಿ ನಡೆಸಿದ ಕಿರು ಸಂಧರ್ಶನ ;

ಗಮಕ ಕಲೆಯ ವೈಶಿಷ್ಟ್ಯ ಏನು ?

ಕನ್ನಡ ಭಾಷೆಯಲ್ಲಿ ಮಾತ್ರ ಈ ಕಲೆ ಇದೆ .ಇತರ ದ್ರಾವಿಡ ಭಾಷೆಗಳಲ್ಲಿ ಗಮಕ ಪ್ರಾಕಾರ ಇಲ್ಲ .ಸಂಸ್ಕೃತದಲ್ಲೂ ಇಲ್ಲ ಕನ್ನಡ ಸಾಹಿತ್ಯವನ್ನು ಉಳಿಸಿ ತಲೆಮಾರುಗಳಿಗೆ ತಲಪಿಸಿದ್ದು ಈ ಕಲೆ .ಹಿಂದೆ ಕಾವ್ಯಗಳು ಕಂಠಸ್ಥವಾಗಿ ಪ್ರಸಾರವಾಗುತ್ತಿತ್ತು .ಆ ಮೇಲೆ ಓಲೆ ಗ್ರಂಥ ,ಬಟ್ಟೆಗಳಲ್ಲಿ ಬರಹ ,ಮುದ್ರಣ ಕಾಗದದ ಮೂಲಕ  ಪ್ರಸಾರವಾದವು .ಇಂದು ಸಾಹಿತ್ಯ ಹೃದ್ಯವಾಗುವುದು ಕೇಳುವಿಕೆಯ ಮೂಲಕವೇ !

ಗಮಕ ಕಲೆ ಶಾಸ್ತ್ರಿಯವೇ ?ಇದರ ನಿರೂಪಣೆ ಹೇಗೆ ?

ಸಂಗೀತ ಮತ್ತು ಸಾಹಿತ್ಯದ ಸಂಬಂಧವಿರುವ ಅಗೋಚರ  ದಿವ್ಯತೆ ಇರುವೆ ದಿವ್ಯ ಕಲೆ .ಪಾರ್ವತಿ ಪರಮೇಶ್ವರರ ನಡುವೆ ಗಣಪತಿ ಇದ್ದ ಹಾಗೆ .ಸಾಹಿತ್ಯವನ್ನು ಅನುಭವಿಸಿ ಅಲ್ಲಿಯ ಅಕ್ಷರದಲ್ಲಿರುವ ಧ್ವನಿಗೆ ಸ್ಫುಟ ನೀಡಿ ರಸೋತ್ಪಾದನೆಯಾಗುವಂತೆ ಬಿಂಬಿಸುವುದೇ ಇದರ ವೈಶಿಷ್ಟ್ಯ .ನಾನು ಸಂಗೀತ ಕಲಿತವನಲ್ಲ !ಅದರ ಗಾಳಿ ತಾಗಿದವನು .ಸಂಗೀತ ಹೆಣ್ಣು .ಅಲ್ಲಿ ಕಟ್ಟು ನಿಟ್ಟು ಇದೆ .ಸಾಹಿತ್ಯ ಹಾಗಲ್ಲ ಅದು ಗಂಡು .ಇವರ ಮಿಲನದಲ್ಲಿ ಉದಯಿಸಿದ್ದೆ ಗಮಕ .

1935 ನೆ ಇಸವಿಯಲ್ಲಿ ಕೈಂತಜೆ ಸದಾಶಿವ ಭಟ್ -ಸಾವಿತ್ರಮ್ಮ ದಂಪತಿಗಳಿಗೆ ಜನಿಸಿದ ಇವರು 1961 ರಲ್ಲಿ ಮಹಾಜನ ಸಂಸ್ಕೃತ ಕಾಲೇಜು ನೀರ್ಚಾಲಿನಿಂದ ವಿದ್ವಾನ್ ಪದವಿ ಗಳಿಸಿದರು .ಶ್ರೀ ದೇವಿ ಮಾಹಾತ್ಮೆ ,ಹನುಮದ್ವಿಲಾಸ  ಮುಂತಾದ ಏಳು ಕೃತಿ ಪ್ರಕಟವಾಗಿವೆ .ತುಳು ಕಥಾನಕವಾದ ’ಗರತಿ ಮಂಜನೆ ’,’ತುಳುನಾಡ ಕಲಿಗಳು ’ಗಳನ್ನೂ ಕನ್ನಡಕ್ಕೆ ತಂದು ಗಮಕಿಯಾಗಿ ಪ್ರಚುರ ಪಡಿಸಿದ್ದಾರೆ .

“ಏತಡ್ಕದಲ್ಲಿ ಮೊದಲಿಗೆ ದಿ.|ಅಳಕ್ಕೆ ಕೃಷ್ಣ ಶಾಸ್ತ್ರಿಗಳು ,ದಿ. | ಡಾ ವೈ ಕೆ ಕೆ ಭಟ್ ,ವಿಚಿತ್ರ ಏತಡ್ಕ ಮುಂತಾದವರು ಈ ಕಲೆಗೆ ಪ್ರೋತ್ಸಾಹ ಕೊಟ್ಟವರು .ಸಪ್ತಾಹಗಳು ನಡೆಯುತ್ತಲಿದ್ದವು ” ಎಂದು ಕೈಂತಜೆಯವರು ಸ್ಮರಿಸುತ್ತಾರೆ .

ದೇರಾಜೆ ಸೀತಾರಾಮಯ್ಯ ,ಪೆರ್ಲ ಕೃಷ್ಣ ಭಟ್ , ಸೊಡಂಕೂರು ತಿರುಮಲೇಶ್ವರ ಭಟ್ ,ವಿದ್ವಾನ್ ಸಣ್ಣಯ್ಯ ಮಾನ್ಯ , ಮೂಡಂಬೈಲು ಶಾಸ್ತ್ರಿಗಳು ,ಪತ್ತಡ್ಕ ಕೇಶವ ಭಟ್ ,ಬಾರೆ ಕೇಶವ ಭಟ್ ಮುಂತಾದ ದಿಗ್ಗಜರೊಂದಿಗೆ ವಾಚಾನ ಕಾರರಾಗಿ ಕೈಂತಜೆ ಯವರು .ಅವರು ಮತ್ತು ದಿ.| ಶ್ರೀ ಎನ್ ವಿ ಕೃಷ್ಣ ರಾವ್ ಜೋಡಿ ಹೆಸರುವಾಸಿಯಾಗಿತ್ತು .

ಕಾಸರಗೋಡು ಸಹಿತ ದ .ಕ .ಜಿಲ್ಲಾ ಪ್ರಥಮ ಗಮಕ ಸಮ್ಮೇಳನದ [ಪುನರೂರಿನಲ್ಲಿ ]ಅಧ್ಯಕ್ಷತೆ ಅವರ ಕಲಾ ಸೇವೆಗೆ ಸಂದ ಗೌರವ .ಮುಂಬಯಿಯ ಅಖಿಲ ಭಾರತ ಗಮಕ ಸಮ್ಮೇಳನದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು .


- ಚಂದ್ರಶೇಖರ್ ಏತಡ್ಕ

ಸ್ವತಂತ್ರ ಪತ್ರಕರ್ತ ಪ್ರವೃತ್ತಿಯ ಶ್ರೀ. ಚಂದ್ರಶೇಖರ್ ಏತಡ್ಕ ಅವರು ವೃತ್ತಿಯಲ್ಲಿ ಕೃಷಿಕರು. ಪರ್ಯಾಯ ಕೃಷಿ ಮಾಧ್ಯಮ ಕೇಂದ್ರ ,ಧಾರವಾಡ 2001 ರ  ರಾಜ್ಯ ಮಟ್ಟದ ಉತ್ತಮ ಕೃಷಿ ಬರಹಗಾರ ಪ್ರಶಸ್ತಿ ಇವರಿಗೆ  ಲಭಿಸಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಚಂದ್ರಶೇಖರ್ ಏತಡ್ಕ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-03-19

Tell a Friend

ಪ್ರತಿಸ್ಪಂದನ
Subhashini , Kasaragod
2012-03-19
ಸಾಹಿತ್ಯ ಹೃದ್ಯವಾಗುವುದು ಕೇಳುವಿಕೆಯ ಮೂಲಕವೇ !  ಗಮಕ ಕಲೆಗೆ ಅತಿ ಪ್ರಾಚೀನ ಇತಿಹಾಸವಿದೆ.   ಸಾಹಿತ್ಯ ಮುಂದೆ ಸಾಿ ಬಂದಿರುವುದೇ ಗಮಕ ಕಲೆಯಿಂದ.   ಕುಶಲವರೇ ಮೊದಲ ಗಮಕಿಗಳು...
Prashanth P Khatavakar, Davangere
2012-03-19
ಉತ್ತಮ ಮಾಹಿತಿಯ ಒಂದು ಸಂಕ್ಷೀಪ್ತ ವಿವರಣೆ ಸಿಕ್ಕಿದ್ದು , ಈ ಲೇಖನ ಮುಂದೆ ಕೆಲವು ಸಂದರ್ಭಗಳಲ್ಲಿ ಉಪಯುಕ್ತ ಎನ್ನುವುದು ನಮ್ಮ ಅಭಿಪ್ರಾಯ.. & ಮಾಹಿತಿ ವಿಚಾರ ವಿವರಣೆ ಕೊಟ್ಟ ಲೇಖಕರಿಗೆ ವಂದನೆಗಳು.. :)
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಕನ್ನಡಕ್ಕೆ ಎಂದೂ ಸಾವಿಲ್ಲ: ಡಾ.ಹನುಮಂತಯ್ಯ ಅಭಿಮತ
» ಸಮಸ್ಯೆಯ ಗಂಟುಗಳು...
»ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
»ಪಳಕಳ ಸೀತಾರಾಮ ಭಟ್ಟರಿಗೆ ಬಾಲ ಸಾಹಿತ್ಯ ಪುರಸ್ಕಾರ
»ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಅಪಾರ: ಸಿದ್ದಣ್ಣ ಲಂಗೋಟಿ
»ಜಗದ, ಯುಗದ ಮಹಾಕವಿ ಕುವೆಂಪು: ದೇಜಗೌ
»ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ ಕೂಗಿದರೂ”ದ್ವನಿ ಕೇಳಲಿಲ್ಲವೇ’ ನೃತ್ಯ ರೂಪಕ ಪ್ರದರ್ಶನ
»ನಿಘಂಟು ಬ್ರಹ್ಮ ಪ್ರೊ. ಜೀವಿಗೆ ಶತಕದ ಸಂಭ್ರಮ | ಸಂತನಂತೆ ಬದುಕು ಎಂಬ ತಂದೆ ಮಾತಿನಂತೆ ಸರಳ ಮಾರ್ಗದಲ್ಲೇ ಬದುಕಿದ್ದೇನೆ: ಪ್ರೊ. ಜಿ. ವೆಂಕಟಸುಬ್ಬಯ್ಯ
»ಕಾವ್ಯದಲ್ಲಿ ಬದುಕಿನ ಸಂವೇದನೆಯಿರಲಿ: ಸಿಪಿಕೆ
»ಬಾಬು ಕುಡ್ತಡ್ಕರಿಗೆ ಶೇಣಿ ಪ್ರಶಸ್ತಿ ಪ್ರದಾನ: ಯಕ್ಷಗಾನ ಶೈಕ್ಷಣಿಕ ಅಧ್ಯಯನ ಪಠ್ಯವಾಗಲಿ: ಡಾ| ಆಳ್ವ
»ಓರೆನೋಟ...
»ಮಾಲಿನಿ ಭಟ್ ಅವರ ಕವನ : ಅಪ್ಪಾ ನಿನ್ನ ಬರುವಿಕೆಯಲ್ಲಿ ಮತ್ತು ಅಮ್ಮ
»ಅಮೀನಗಡದ ’ರಾಗ ಕಲಾ ವೈಭವ ಸಾಂಸ್ಕೃತಿಕ ಪ್ರತಿಷ್ಠಾನ’ ದಿಂದ ಕವನಗಳಿಗೆ ಆಹ್ವಾನ
»ಸಂಸ್ಕೃತಿ, ಸಾಹಿತ್ಯ ಬೆಳಗಿಸಿದ ಮಹಾನುಭಾವರ ಸ್ಮರಣೆ ಆದ್ಯ ಕರ್ತವ್ಯ: ಹಾಲಂಬಿ
»ನೀ ಜೊತೆಯಿರಲು-ಅನಿತಾ ನರೇಶ್ ಮಂಚಿಯವರ ಕವನ
»ವಿದೇಶದಲ್ಲಿ ಸಂಸ್ಕೃತಿ ಬಿತ್ತನೆ
»ಮಣಿಪಾಲದ ವಿದ್ಯಾರ್ಥಿಗೆ ರಾ.ಚಿತ್ರಕಲಾ ಪ್ರಶಸ್ತಿ
»ಡಾ.ಪುಣಿಂಚಿತ್ತಾಯರಿಗೆ ಮರಣೋತ್ತರ ‘ತುಳು ಸಾಹಿತ್ಯ ರತ್ನ ಪ್ರಶಸ್ತಿ’
»ಒಂದಿಷ್ಟು ಹನಿಗಳು... - ಗುರುನಾಥ ಬೋರಗಿ, ಬೆಂಗಳೂರು
»ನನ ಕಂದಾ ನೀ ನನ್ನ ಉಸಿರು... -ಸವಿತಾ ಇನಾಮದಾರ
»ಅಮ್ಮನ ಕೆನ್ನೆಯಲ್ಲಿ ರಮಝಾನ್ ದಿನಗಳು : ಬಿ.ಎಂ.ಬಶೀರ್,ಮಂಗಳೂರು
»ಕೇಳ ಬಾರದಿತ್ತೆ ಈ ಪ್ರಶ್ನೆ…-ಸುನೀತ ಮಂಜುನಾಥ್, ಮೈಸೂರು
»ದಿನೇಶ್ ಕುಕ್ಕುಜಡ್ಕ "ಪಂಚ್"
»ಮುಕ್ಕಾಲು ಪಟ್ಟಣದೊಳಗೆ ಕಾಲು ಗದ್ದೆಗೆ ಬೇಕು : -ಈಶ್ವರ ಕಿರಣ ಭಟ್,ಕಾಸರಗೋಡು
»ಬ್ರಹ್ಮಾಂಡವೆಲ್ಲಾ ಅಲೆದ ಮನಕ್ಕೆ ಒಂದು ಹನಿ ಅಮೃತ: ಪ್ರವೀಣ್ ಕುಲಕರ್ಣಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri