ಸೋಮವಾರ, 17-06-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಅಮೃತ ಮಹೋತ್ಸವ ಸಮಾರೋಪ ನೆರವೇರಿಸಿದ ಮುಂಬಯಿ ಕನ್ನಡ ಸಂಘ: ಭಾಷೆ ಜನಾಂಗದ ಮುನ್ನಡೆಗೆ ದಾರಿ ತೋರುವ ಅಸ್ತ್ರ : ಡಾ| ದಯಾನಂದ ಪೈ

ಮುಂಬಯಿ: ಸಂಸ್ಥೆಗಳು ಸಮಯ ಪ್ರಜ್ಞೆಯನ್ನು ಮೊದಲಾಗಿ ಮೈಗೂಡಿಸಬೇಕು. ಸುಮಾರು ಎರಡು ತಾಸು ವಿಳಂಬವಾಗಿ ಕಾರ್ಯಕ್ರಮ ಆರಂಭಿಸಿದರೆ ಆಗುವ ತೊಂದರೆ ಎಲ್ಲರಿಗೂ ಪರಿಣಾಮಕಾರಿ ಆಗಬಲ್ಲದು. ಅಮೃತಮಹೋತ್ಸವದ ಇಷ್ಟೋಂದು ದೊಡ್ಡ ಸಂಭ್ರಮದಲ್ಲಿ ಜನರ ವಿರಳತೆ ಕಂಡು ಬೇಸರವಾಗುತ್ತಿದೆ. ಕಾರಣ ಟಿವಿ ಪ್ರಭಾವವೋ ಅಥವಾ ಭಾಷಾಭಿಮಾನದ ಕೊರತೆಯೋ ನಾ ಅರಿಯೆ. ಆದರೂ ೭೫ರ ಅಸ್ತಿತ್ವದಲ್ಲಿ ಸೇವಾ ನಿರತ ಸಂಘದ ಕಾರ್ಯ ವೈಖರ್ಯತೆ ಅಭಿನಂದ ನಾರ್ಹ. ಇಂತಹ ಶುಭಾವಸರದಲ್ಲಿ ಸಂಸ್ಥೆಯ ಸಂಸ್ಥಾಪಕರನ್ನು ಸ್ಮರಿಸುವುದೂ ಅಷ್ಟೇ ಸಮಂಜಸ. ಕನ್ನಡ ನಾಡಿನ ದೂರದಲ್ಲೂ ತಮ್ಮ ಮಾತೃಭಾಷಾ ಪ್ರೇರಣಾ ಪ್ರದರ್ಶನ ಪ್ರಶಂಸನೀಯವಾಗಿದೆ. ನಿಮ್ಮ ಕನ್ನಡ ಮಾತೆಯ ತ್ಯಾಗ ಅನುಪಮವಾಗಿದೆ ಎಂದು ಸೆಂಚೂರಿ ಸಮೂಹ ಸಂಸ್ಥೆ ಬೆಂಗಳೂರು ಇದರ ಕಾರ್ಯಾಧ್ಯಕ್ಷ ಡಾ| ಪಿ. ದಯಾನಂದ ಪೈ ಅವರು ನುಡಿದರು.


ಮುಂಬಯಿ ಕನ್ನಡ ಸಂಘ (ರಿ.) ಇದರ ಅಮೃತ ಮಹೋತ್ಸವ ಸಮಾರೋಪ ಸಮಾರಂಭವು ಇಂದಿಲ್ಲಿ ರವಿವಾರ ಮಾಟುಂಗ ಪಶ್ಚಿಮದ ಮೊಗಲ್‌ಲೇನ್ ಇಲ್ಲಿನ  ಕರ್ನಾಟಕ ಸಂಘ ಮುಂಬಯಿ ಇದರ  ಡಾ| ಎಂ.ವಿಶ್ವೇಶರಯ್ಯ ಸ್ಮಾರಕ ಸಭಾಗೃಹದಲ್ಲಿ ನೇರವೇರಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ಭಾಗವಹಿಸಿ ಮಾತನಾಡಿದ ದಯಾನಂದ ಪೈ ಅವರು ಭಾಷೆ ಎನ್ನುವುದು ಜನಾಂಗದ ಮುನ್ನಡೆಗೆ ದಾರಿ ತೋರುವ ಅಸ್ತ್ರವಾಗಿದ್ದು, ಇಂತಹ ಭಾಷೆಯ ಪೋಷಣೆಗೆ ಮಾತೆಯಂದಿರ ಪಾತ್ರ ಹಿರಿದಾಗಿದೆ. ಭಾಷೆಯಿಂದ ಮಾನವ ಕುಲದ ಭವಿಷ್ಯ ಸಾಧ್ಯ. ಮಕ್ಕಳಿಗೆ ಮೌಲ್ಯಯುತ ಬದುಕನ್ನು ನೀಡಿದರೆ ಎಲ್ಲವೂ ಕೂಡಿ ಬರುವುದು. ಇದು ಮಾತೆಯರ ಬಹುದೊಡ್ಡ ಜವಾಬ್ದಾರಿ ಆಗಬೇಕು. ಆದರೆ ಪ್ರಸ್ತುತ ಸ್ತ್ರೀಯರ ಆದರ್ಶ ರೂಪಕ್ಕಿಂತ ಪ್ರದರ್ಶನ ರೂಪವೇ ಪ್ರಧಾನವಾಗಿ ರೂಪ ತಲೆದಿರುವುದು ಶೋಚನೀಯ. ನಾರಿಯರನ್ನು ದೇವತೆಯನ್ನಾಗಿ ಕಾಣುವ ಭಾರತ ದೇಶದಲ್ಲಿ  ಮಹಿಳೆಯರಲ್ಲಿನ ಪಾವಿತ್ರ್ಯತೆಗೆ ಇನ್ನೂ ಮಹತ್ತವಾದ  ಸ್ಥಾನಮಾನಗಳು ಸಿಗಬೇಕು. ಈ ಮೂಲಕ ಸಂಸ್ಕಾರಯುತ ಬದುಕು ನಿರ್ಮಾಣವಾದಗಲೇ ಮಾನವ ಜೀವನ ಪಾವನವಾಗುವುದು. ಇಂತಹ ಸಾರ್ಥಕ ಜೀವನವೇ ದೊಡ್ಡದು ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಗುರುರಾಜ ಎಸ್.ನಾಯಕ್ ಅವರು ವಹಿಸಿದ್ದು, ಮತ್ತು ಗೌರವ ಅತಿಥಿಗಳಾಗಿ ಸಿಂಘಾನಿಯಾ ವಿಶ್ವವಿದ್ಯಾನಿಲಯ ರಾಜಸ್ಥಾನ ಇದರ ಸ್ಥಳೀಯ ನಿರ್ದೇಶಕ ಡಾ| ಕೆ.ಎಸ್.ರಾಜು, ಶ್ರೀಮತಿ ಶಾರದಾ ಭಾಸ್ಕರ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ಕಲ್ಯಾಣ್ ಇದರ ನಿರ್ದೇಶಕ  ಭಾಸ್ಕರ ಎಸ್.ಶೆಟ್ಟಿ, ವಿರಾರ್ ನಾಲಾಸೋಪಾರ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಶಂಕರ್ ಕೆ.ಟಿ ಮತ್ತು ಶ್ರೀ ವಿದ್ಯಾಸಿಂಹಾ ಚಾರ್ಯ ಮೊದಲಾದವರು ಉಪಸ್ಥಿತರಿದ್ದರು.




ಅತಿಥಿವರ್ಯರು ಅಮೃತ ಮಹೋತ್ಸವದ ಸ್ಮರಣಾರ್ಥದ ‘ಅಮೃತಧಾರೆ-೨೦೧೨’ಸ್ಮರಣ ಸಂಚಿಕೆಯನ್ನು ಬಿಡುಗಡೆ ಗೊಳಿಸಿ ಬಳಿಕ ಮುಂಬಯಿ ಮಹಾನಗರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಆರ್.ಬಿ.ಹೆಬ್ಬಳ್ಳಿ (ಶಿಕ್ಷಣ), ಎನ್.ಬಿ.ಎಚ್.ಕುಲಕರ್ಣಿ (ಔದ್ಯೋಗಿಕ), ವಿದುಷಿ ಉಮಾ ನಾಗಭೂಷಣ್ (ಸಂಗೀತ), ಗುರು ಮಹಾಬಲ ಎನ್.ಸುವರ್ಣ (ನೃತ್ಯ) ಗಣ್ಯ ವ್ಯಕ್ತಿಗಳಿಗೆ ಹಾಗೂ ಮೋಗವೀರ ವ್ಯವಸ್ಥಾಪಕ ಮಂಡಳಿ (ಸಾಮಾಜಿಕ) ಸಂಸ್ಥೆ (ಪರವಾಗಿ ಸಮ್ಸ್ಥೆಯ ಮುಖವಾಣಿ ಸಂಪಾದಕ ಅಶೋಕ್ ಎಸ್.ಸುವರ್ಣ) ಅವರನ್ನು ಸ್ಮರಣಿಕೆಗಳನ್ನೀಡಿ ಸನ್ಮಾನಿಸಿ ದರು. ಮತ್ತು  ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಒಂದು ದಶಕಕ್ಕೂ ಅಧಿಕವಾಗಿ ಸೇವೆ ಸಲ್ಲಿಸಿದ ಸದಸ್ಯರುಗಳನ್ನು ಗೌರವಿಸಿದರು.  

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗುರು ಶ್ರೀಮತಿ ಮೀನಾಕ್ಷಿ ರಾಜು ಶ್ರೀಯಾನ್ ಅವರ ನಿರ್ದೇಶನದಲ್ಲಿ ಅರುಣೋದಯ ಕಲಾನಿಕೇತನ ಚೆಂಬೂರು ಇದರ ಕಲಾವಿದರು ‘ನೃತ್ಯ ವೈಭವ’ ಪ್ರದರ್ಶಿಸಿದರು.





ಸಮಾರಂಭದಲ್ಲಿ ಕನ್ನಡ ಸಂಘದ ಉಪಾಧ್ಯಕ್ಷರುಗಳಾದ  ಡಾ| ಬಿ.ಆರ್.ಮಂಜುನಾಥ್, ಕೆ.ಮಂಜುನಾಥಯ್ಯ, ಯು. ವೆಂಕಟರಾಜ ರಾವ್,  ಹೆಚ್. ಎಸ್ ಅಡೂರು, ಗೌ| ಕೋಶಾಧಿಕಾರಿ ರಾಜೇಂದ್ರ ಗಡಿಯಾರ್, ಅಮೃತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಎನ್. ಸತೀಶ್ ನಾಯಕ್ ಮತ್ತಿತರರು ಹಾಜರಿದ್ದು ಸಂಘದ ಉಪಾಧ್ಯಕ್ಷರುಗಳಾದ ಎನ್.ಆರ್.ರಾವ್ ವೇದಿಕೆಯಲ್ಲಿ ಆಸೀನರಾಗಿದ್ದು,  ಕನ್ನಡ ಸಂಘದ ಗುರುರಾಜ ಎಸ್.ನಾಯಕ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷ ಕಮಲಾಕ್ಷ ಜಿ.ಸರಾಫ್ ಹಾಗೂ ವಿಶ್ವನಾಥ್ ಸಿದ್ಧಕಟ್ಟೆ ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಸುಗುಣಾ ವಿ.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಬಿ. ನಾಗಭೂಷಣ್ ಮತ್ತು ಪತ್ರಕರ್ತ ದಯಾಸಾಗರ್ ಚೌಟ ಕಾರ್ಯಕ್ರಮ ನಿರೂಪಿಸಿದರು. ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.









SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಚಿತ್ರ / ವರದಿ: ರೋನ್ಸ್ ಬಂಟ್ವಾಳ್
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-03-19

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
»ರಜಕ ಸಂಘ ಮೀರಾರೋಡ್ - ವಿರಾರ್ ಸ್ಥಳೀಯ ಸಮಿತಿಯ ವಾರ್ಷಿಕ ಕಾರ್ಯಕ್ರಮ
»ಮಳೆ ನೀರು ತಡೆಗೆ ರೂ. 70 ಕೋಟಿ ವೆಚ್ಚವಾದರೂ ಮಳೆ ಬಂದಾಗ ತಪ್ಪದ ಮುಂಬೈವಾಸಿಗಳ ಬವಣೆ
»ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ರಂಗ ತರಬೇತಿ ಶಿಭಿರ
»ಮುಂಬೈಯಲ್ಲಿ ಮುಸಲಧಾರೆ; ವಾಹನ ಸಂಚಾರ ಅಸ್ತವ್ಯಸ್ತ
»ನೂತನ ಕಲಾ ಸಂಸ್ಥೆ, ಚಿನ್ಮಯ ಆರ್ಟ್ಸ್ ಮುಂಬೈ ಉದ್ಘಾಟನೆ
»ಪಂಜ ನಲ್ಯಗುತ್ತು ಗುತ್ತಿನಾರು ಮಹಾಬಲ ಶೆಟ್ಟಿ ನಿಧನ
»ದಶಮಾನೋತ್ಸವದ ಸಡಗರದಲ್ಲಿ ಮುಂಬಯಿಯ 'ರಂಗ ಚಾವಡಿ'
»ತೀಯಾ ಸಮಾಜ ಮುಂಬಯಿ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ
»ಠಾಕ್ರೆ ಕುಟುಂಬದ ಮೂಲ ಬಿಹಾರ!: ದಿಗ್ವಿಜಯ್
»ಬಹುಮುಖ ಪ್ರತಿಭೆಯ ಕ್ರೀಡಾ ಪಟು - ಅಶ್ವಿತಾ ಲಿಂಗಪ್ಪ
»ಮುಂಬಯಿ: ಗಣೇಶ ಹಬ್ಬದ ಆಚರಣೆಯ ಸಂಭ್ರಮಕ್ಕೆ ಭರದ ಸಿದ್ದತೆ
»158ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವ ಸಂಭ್ರಮಿಸಿದ ಬಿಲ್ಲವರ ಎಸೋಸಿಯೇಶನ್: ಬ್ರಹ್ಮಶ್ರೀ ನಾರಾಯಣ ಗುರುಗಳು ಸರ್ವ ಧರ್ಮದ ಪ್ರತೀಕರು: ಕೃಪಾಶಂಕರ್
»ಶಿವಸೇನಾ ಕಾರ್ಪೊರೇಟರ್ ಕೊಲೆ ಪ್ರಕರಣ:ಅರುಣ್ ಗಾವ್ಲಿಗೆ ಜೀವಾವಧಿ
»ಕಸಬ್ ಭದ್ರತೆಗೆ ರೂ. 50 ಕೋಟಿ, ಗಲ್ಲಿಗೇರಿಸಲು ಕೇವಲ 50 ರೂಪಾಯಿ
»ನೇತ್ರಾವತಿ ಎಸ್.ಕೋಟ್ಯಾನ್ ನಿಧನ
»ಶಿವಸೇನಾ ಪಾಲಿಕೆ ಸದಸ್ಯನ ಹತ್ಯೆ :ಮಾಜಿ ಭೂಗತ ಪಾತಕಿ ಅರುಣ್ ಗಾವ್ಳಿಗೆ ಜೀವಾವಧಿ
»ಮುಂಬಯಿ: ಬಿಲ್ಲವರ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 158ನೇ ಜಯಂತಿ ಉತ್ಸವಕ್ಕೆ ಚಾಲನೆ
»ದಹಿಸರ್ ಕಾಶಿಮಠದಲ್ಲಿ ಹೃದಯ ಹವನ ಆಚರಣೆ
»ಸಾಯನ್ ಗೋಕುಲದಲ್ಲಿ ಮಹಾಗಣಪತಿ ಯಾಗ
» ಮಹಾರಾಷ್ಟ್ರ ರಾಜ್ಯ ಆಂಗ್ಲಿಂಗ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ವಿಲಿಯಂ ಮಸ್ಕರೇನ್ಹಸ್ ಶಿರ್ತಾಡಿ ಆಯ್ಕೆ
» ಯುದ್ದ ಸ್ಮಾರಕ ಧ್ವಂಸ: ಒಬ್ಬನ ಬಂಧನ
»ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ(ರಿ) 2012 -15ರ ಸಾಲಿನ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ಚಂದ್ರಶೇಖರ ಪಾಲೆತ್ತಾಡಿ ಗೌ.ಪ್ರ.ಕಾರ್ಯದರ್ಶಿಯಾಗಿ ರೋನ್ಸ್ ಬಂಟ್ಟಾಳ್ ಆಯ್ಕೆ
»ಈ ಮಲಯಾಳಿ ಮಳ್ಳಿಗೆ 10 ಜನ ಗಂಡಂದಿರು ....
»ಹಣ ಗಳಿಕೆಯಲ್ಲೂ ಏಕ್ ಹೇ‘ಟೈಗರ್’!...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri