ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಮನರಂಜಿಸಿದ “ಕಿವುಡನ ಕಿತಾಪತಿ”

ಮಸ್ಕತ್‌ನ  ಕರ್ನಾಟಕ  ಸಂಘದ ವತಿಯಿಂದ  ತಾರೀಕು ೨೪ ೦೨ ೨೦೧೨ ರಂದು ಭಾರತೀಯ ಸಾಂಸ್ಕೃತಿಕ ಸಂಘದ ಸಭಾಂಗಣದಲ್ಲಿ  “ಕಿವುಡನ ಕಿತಾಪತಿ” ಎಂಬ ಹಾಸ್ಯ ನಾಟಕವೊಂದನ್ನು ಪ್ರಸ್ತುತ ಪಡಿಸಿಲಾಯಿತು.  ಕರ್ನಾಟಕ ಸಂಘ ವಿದ್ಯುಕ್ತವಾಗಿ ಅಸ್ತಿತ್ವಕ್ಕೆ ಬಂದು ಸುಮಾರು ಹತ್ತು ವರ್ಷಗಳ ನಂತರವಷ್ಟೆ ಈ ತರದ ಹಾಸ್ಯ ನಾಟಕವೊಂದು  ಪ್ರದರ್ಶಿಸಲ್ಪಡುತ್ತಿರುವುದರಿಂದ ಒಂದೆಡೆ ಸಂಘದ ಸದಸ್ಯರಿಗೆ ಸಡಗರವಾಗಿದ್ದರೆ ಇನ್ನೊಂದೆಡೆ  ಸಂಘದ ಸದಸ್ಯರಿಂದಲೇ  ಆಯ್ದ ಕಲಾವಿದರು  ಈ ನಾಟಕವನ್ನು ಪ್ರಸ್ತುತ ಪಡಿಸುತ್ತಿರುವುದರಿಂದ ಹೇಗಿರುವುದೋ ಎಂಬ ಕುತೂಹಲವೂ ಮನೆ ಮಾಡಿತ್ತು.


ಬೀದಿಗೆ ಬಿದ್ದು ಬಾಡಿ ಹೋಗಬೇಕಾಗಿದ್ದ ಹೆಣ್ಣು ಕೂಸೊಂದರ ಜೀವನ-ಕಿವುಡನೊಬ್ಬನ ಪ್ರಸಂಗಾವಧಾನತೆಯಿಂದಾಗಿ ಸಾಕು ತಂದೆಯ ಮಮತೆಯ ಮಡಿಲಿನಲ್ಲಿ ಅರಳಿ ಕೊನೆಗೆ ತಾನು ಮೆಚ್ಚಿದ ಹುಡುಗನ ಮಡದಿಯಾಗುವುದು ಕತೆಯ ಸಾರಾಂಶ.ಕತೆಯ ಅಂತ್ಯ ಮಾರ್ಮಿಕವಾಗಿದ್ದರೂ   ಮಧ್ಯೆ ಮಧ್ಯೆ ನಡೆಯುವ ಘಟನೆಗಳನ್ನು  ನಾಟಕದ  ವಿವಿಧ ಪಾತ್ರಗಳು ಪ್ರಾರಂಭದಿಂದ ಕೊನೆವರೆಗೆ ಹಾಸ್ಯದ  ಬೆಳಕಿನಲ್ಲಿ ಬಿಚ್ಚಿಡುತ್ತಾ  ಹೋಗುವುದರಿಂದ  ಈ ನಾಟಕ  ಕುತೂಹಲಕಾರಿ ಹಾಗೂ ಸ್ವಾರಸ್ಯಕರವಾಗಿ  ಮೂಡಿಬಂದಿತು.ಕೆಲಸ ಕಳೆದುಕೊಂಡರೂ ಕೃಷಿಯಲ್ಲಿ ತೊಡಗಿ ಜೀವನ ನಡೆಸಲು iತ್ತು ಕಳೆದು ಕೊಂಡ ತನ್ನ ಜಮೀನನ್ನು ಮರಳಿ ಪಡೆಯಲು ಶತ ಪ್ರಯತ್ನ ನಡೆಸುವ ‘ಜಯ ಪ್ರಕಾಶನಾಗಿ’ ಶ್ರೀ ಶ್ರೀಧರ್ ಹೆಗ್ಡೆ, ಸಾಕುಮಗಳನ್ನು  ಸ್ವಂತ ಮಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುವ ಬಡ ‘ವಿದ್ಯಾಸಾಗರ’ ಮೇಷ್ಟ್ರಾಗಿ ಶ್ರೀ ರಾಜು ಸುಬ್ರಮಣ್ಯ, ದರ್ಪದ  ಪ್ರತಿರೂಪವೇ ಈ ಹೆಣ್ಣು  ಎನ್ನಿಸುವ ಸಾಹುಕಾರನ ‘ಡಾಕ್ಟರ್’ಹೆಂಡತಿ ಯಾಗಿ ಶ್ರೀಮತಿ ಅಶ್ವಿನಿ ಗುರುಪ್ರಸನ್ನ,  ಶ್ರೀಮಂತಿಕೆಯ ನೆರಳಲ್ಲಿ ಬೆಳೆದಿದ್ದರೂ ರೈತ ಜಯ ಪ್ರಕಾಶನನ್ನು ಮನಸಾ ಪ್ರೀತಿಸುವ ‘ಗೀತಾಳಾಗಿ’ ಶ್ರೀಮತಿ ಉಷಾ ಶಿವಶಂಕರ್,ಶ್ರೀಮಂತಿಕೆಯಿದ್ದರೂ ತುಂಬಿದ ಕೊಡದಂತಿರುವ ಸರಳಿಕೆಯ ಸಜ್ಜನ ಸಾಹುಕಾರನಾಗಿ  ಶ್ರೀ ಶ್ರೀಧರ್ ಅಯ್ಯಂಗಾರ್,ಸಾಹುಕಾರನ ಹೆಂಡತಿಯ ದರ್ಪಕ್ಕೆ ಹೆದರದೆ ಅವಳ ತಮ್ಮ  ‘ಉಗ್ಗಲು’  ಪಾರ್ಥ ಸಾರಥಿಯ ಸಂಗಾತಿಯಾಗಲು ನಿರ್ಧರಿಸಿ ಯಶಸ್ವಿಯಾಗುವ ‘ಕವಿತಾ’ಳಾಗಿ ಶ್ರೀಮತಿ ಜ್ಯೋತಿ ಹೆಗ್ಡೆ, ಪುರೋಹಿತ ರಾಗಿ ಶ್ರೀ ವೆಂಕಟೇಶ್ ಗುಡುಗುಡಿ ತಮ್ಮ ತಮ್ಮ ಪಾತ್ರಗಳಿಗೆ ಜೀವತುಂಬುವುದರಲ್ಲಿ ಯಶಸ್ವಿಯಾಗಿದ್ದಾರೆ.ಸಂಘದ ಅಧ್ಯಕ್ಷರಾದ ಶ್ರೀ ರಾಮಚಂದ್ರ ರಾವ್ ಅವರು ಕೂಡಾ ‘ಮಂತ್ರಿ’ಯ ಪಾತ್ರವಹಿಸಿ ತಮ್ಮ ಚಿಕ್ಕ ಚೊಕ್ಕ ಪಾತ್ರದಲ್ಲಿ ಪುಢಾರಿಗಳ ಉಡಾಫೆತನವನ್ನು ಪ್ರತಿಬಿಂಬಿಸಿದರು.


ಹೆಂಡತಿಗೆ ಹೆದರುವ ‘ಡ್ರೈವರ್ ಅಪ್ಪಣ್ಣನಾಗಿ’ಶ್ರೀ ರವಿ ಕುಮಾರ್ ರಾವ್ ತಮ್ಮ ಪ್ರತಿಭೆಯ ಪರಿಚಯ ಮಾಡಿಸಿಕೊಟ್ಟರು. ಡ್ರೈವರ್ ಅಪ್ಪಣನ ಗಯ್ಯಾಳಿ ಹೆಂಡತಿ ‘ತಾಯವ್ವ’ ನಾಗಿ ಶ್ರೀಮತಿ ಸಂಜನಾ ಕುಲಕರ್ಣಿ ಅವರ ಅಭಿನಯ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ ಅವರೇನು  ಹವ್ಯಾಸಿ   ಕಲಾವಿದರೇ ಅಥವಾ ವೃತ್ತಿಪರರೇ ಎಂಬತ್ತಿತ್ತು.‘ಉಗ್ಗಲು’  ಪಾರ್ಥಸಾರಥಿಯಾಗಿ ಶ್ರೀ ಅನಿಲ್ ಕುಮಾರ್ ಟಿ.ಡಿ.ಯವರು ಈ ಪಾತ್ರವನ್ನು ಹಾಸ್ಯಪೂರಿತವಾಗಿಯೂ ವರ್ಣರಂಜಿತ ವಾಗಿಯೂ   ನಿರ್ವಹಿಸಿ  ತಮ್ಮ ಅಭಿನಯ   ಸಾಮರ್ಥ್ಯದ ಹಲವು ಮುಖಗಳನ್ನು ಪರಿಚಯಿಸಿ ಆ ಪಾತ್ರಕ್ಕೆ ಪೂರ್ಣ ನ್ಯಾಯ ಒದಗಿಸಿದರು.


ಸ್ವತಃ ನಾಟಕವನ್ನು ನಿರ್ದೇಶಿಸಿ,ಕಿವುಡ ‘ಸುಮಿತ್ರ’ನ ಪಾತ್ರ ದಿಂದ ತಮ್ಮ ನಟನಾ ಕೌಶಲ್ಯವನ್ನೂ ಪ್ರದರ್ಶಿಸಿದ ಶ್ರೀ ಅನಿಲ್ ಭಾಸಗಿ ಉತ್ತರ ಕರ್ನಾಟಕದ ತಮ್ಮ  ಗ್ರಾಮ್ಯ ಶೈಲಿಯ ಹಾಸ್ಯದಿಂದ ಎಲ್ಲರನ್ನು ನಕ್ಕು ನಗಿಸಿದರು.ನಾಟಕದ ಜೀವಾಳ  ವಾದ ‘ಕಿವುಡ’ನ ಪಾತ್ರದ  ಇವರ ವಿಶಿಷ್ಟವಾದ ನಡೆಯುವ  ಶೈಲಿ ನಾಟಕದುದ್ದಕ್ಕೂ ಜನರನ್ನು ರಂಜಿಸಿತು. 

ಎಲ್ಲರ ನಿರೀಕ್ಷೆಯನ್ನು ಮೀರಿ ನಾಟಕ ಪ್ರೇಕ್ಷಕರಿಗೆ ಒಂದು ರೋಚಕ ಅನುಭವವಾಗಿ ಮೂಡಿಬಂತು.

ಪ್ರತೀ ದೃಶ್ಯದ ನಂತರವೂ ಪ್ರೇಕ್ಷಕರ ಚಪ್ಪಾಳೆಯ ಅನುಮೋದನೆ ದೊರೆಯುತ್ತಿದ್ದುದರಿಂದ ಪಾತ್ರ  ವಹಿಸಿದವರ ಹುಮ್ಮಸ್ಸು ಕೂಡಾ ಮತ್ತಷ್ಟು ಹೆಚ್ಚುತ್ತಿತ್ತು.ರಂಗದ ಒಳಗೆ ಮತ್ತು ಹೊರಗೆ  ಶ್ರಮಿಸಿದ ಎಲ್ಲರೂ ಈ ನಾಟಕದ  ಯಶಸ್ಸಿಗೆ ಹೆಮ್ಮೆ ಪಟ್ಟುಕೊಳ್ಳಲು ಸಂಪೂರ್ಣವಾಗಿ ಅರ್ಹರು ಎಂಬುದರಲ್ಲಿ ಎರಡು ಮಾತಿಲ್ಲ.ಇವರೆಲ್ಲಾ  ಹವ್ಯಾಸಿ ಕಲಾವಿದರಾಗಿದ್ದರೂ ಸಹ ತಮ್ಮ ಉತ್ಸಾಹ ಹಾಗೂ ಸತತ ತಾಲೀಮಿನಿಂದಾಗಿ ಈ ನಾಟಕವನ್ನು ಪ್ರೇಕ್ಷಕರಿಗೆ ಒಂದು ಸಂಪೂರ್ಣ ಮನರಂಜನೆಯ ದ್ಯೋತಕವಾಗಿ ಪ್ರಸ್ತುತ ಪಡಿಸಿದರು.

ಶ್ರೀ ಶಶಿ ಕುಮಾರ್  ಹೆಜಮಾಡಿ ಯವರನ್ನು  ಹಿನ್ನೆಲೆ ಸಂಗೀತಕ್ಕಾಗಿ ಮಂಗಳೂರಿನಿಂದ ಬರಮಾಡಿಕೊಳ್ಳಲಾಗಿತ್ತು.ಅವರ ಹಿನ್ನೆಲೆ ಸಂಗೀತ ಈ ಹಾಸ್ಯ ನಾಟಕದ ಆಧಾರ ಸ್ಥಂಭವಾಗಿತ್ತು.ಶ್ರೀ ಗೋಪಿನಾಥ್ ಪಿ.ವಿ. ಪ್ರಸಾಧನದ ನಿರ್ವಹಣೆ ಮಾಡಿದ್ದರು.

ತಾಂತ್ರಿಕ ನಿರ್ವಹಣೆ ಶ್ರೀ ಮಹೇಶ್ ಪುರೋಹಿತರ ಹೊಣೆಯಾಗಿತ್ತು. ತೆರೆಮರೆಯಲ್ಲಿ ಶ್ರೀ  ರಾಜು ಕಾಗಿ, ಶ್ರೀ ಶ್ರೀಕಾಂತ್,ಶ್ರೀ ವೆಂಕಟೇಶ್ ಗುಡುಗುಡಿ,ಶ್ರೀಮತಿ ಪ್ರಮೀಳಾ ನವೀನ್,ಶ್ರೀಮತಿ ವಾಣಿ ವೆಂಕಟೇಶ್ ಮತ್ತು ಶ್ರೀಮತಿ ಸುಪ್ರೀತಾ ರಾವ್ ನಾಟಕದ ಯಶಸ್ಸಿಗೆ ಶ್ರಮಿಸಿದರು.ರಂಗ ಸಜ್ಜಿಕೆಯ ಹೊಣೆ ಶ್ರೀ ಶಿವಶಂಕರ್ ಅವರದ್ದಾಗಿತ್ತು

ಕಾರ್ಯಕ್ರಮದ ಪ್ರಾರಂಭದಲ್ಲಿ ಮಸ್ಕತ್ ಕರ್ನಾಟಕ ಸಂಘದ  ಸಂಚಾಲಕರಾದ ಶ್ರೀ ರಾಮಚಂದ್ರ ರಾವ್ ರವರು ಕಾರ್ಯಕ್ರಮದ ಪ್ರಾಯೋಜಕರನ್ನು, ಸಂಘದ  ಸದಸ್ಯರನ್ನು ಹಾಗೂ ಸಭಿಕರನ್ನು ಹಾರ್ದಿಕವಾಗಿ ಸ್ವಾಗತಿಸಿದರು.

ಶ್ರೀಮತಿ ಸುಧಾ ಶಶಿಕಾಂತ್ ಕೊಡಂಚರವರು ಕಲಾಪ ನಿರ್ವಹಣೆ ಮಾಡಿದರು.ಪ್ರಾಯೋಜಕರುಗಳಾದ ಸರ್ವಿಸಸ್ ಮತ್ತು ಟ್ರೇಡ್ ಕಂಪನಿಯ  ಕಾರ್ಯನಿರ್ವಾಹಕ ನಿರ್ದೇಶಕ, ಶ್ರೀ ಬಾಲಕೃಷ್ಣ ಹಾಗೂ ಬ್ಯಾಂಕ್ ಮಸ್ಕತ್‌ನ ಅನಿವಾಸಿ ವಿಭಾಗದ ಮುಖ್ಯಸ್ಥ,  ಶ್ರೀ ಜಿ.ವಿ.ರಾಮಕೃಷ್ಣರವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಲಾವಿದರೆಲ್ಲರಿಗೂ ಮುಖ್ಯ ಅತಿಥಿಗಳಿಂದ ಸ್ಮರಣಿಕೆಗಳನ್ನು ವಿತರಿಸಲಾಯಿತು.

ಕೊನೆಯಲ್ಲಿ ಸಂಘದ  ಮುಖ್ಯ ಸಲಹೆಗಾರರಾದ ಶ್ರೀ ಅಹಿರಾಜ್ ಗುರುರಾಜ್ ರವರು ಕಾರ್ಯಕ್ರಮದ  ಯಶಸ್ಸಿಗೆ ಕಾರಣ ಕರ್ತರಾದ  ಪ್ರತಿಯೊರನ್ನು ಹೆಸರಿಸಿ ತಮ್ಮ ಕೃತಜ್ನ್ಯತೆ  ಹಾಗೂ  ವಂದನೆಗಳನ್ನು ಅರ್ಪಿಸಿದರು.

ಕನ್ನಡಿಗರಿಗಾಗಿಯೇ ಕನ್ನಡಿಗರಿಂದಲೇ ಪ್ರಸ್ತುತವಾದ ‘ಕಿವುಡನ ಕಿತಾಪತಿ’ಹಾಸ್ಯ ನಾಟಕ ನೋಡುಗರ ಮನದಂಗಳದಲ್ಲಿ ಬಹಳ ಕಾಲ ಹಸುರಾಗಿರುವುದಂತೂ ನಿಶ್ಚಿತ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವರದಿ-ಶ್ರೀ ಕರುಣಾಕರ ರಾವ್ ಕದ್ರಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-03-10

Tell a Friend

ಪ್ರತಿಸ್ಪಂದನ
Rajesh, Udipi
2012-05-19
Good Work Anil, Keep it up... best wishes to Muscat Kannada Sangha.... Rajesh Shetty GS- Bahrain Kannada Sangha
R.Sridhara, Mysore
2012-03-26
ಪ್ರೀತಿಯ ಕನ್ನಡಿಗರೇ. ದೇಶ ಹಾಗು ರಾಜ್ಯವನ್ನು ಬಿಟ್ಟು ಇಲ್ಲಿ ಕನ್ನಡ ಕಾರ್ಯಕ್ರಮ ನಡಿಸಿ ಕೊಟ್ಟ ಎಲ್ಲರಿಗು ನಾನು ನಮಸ್ಕರಿಸುತ್ತೇನೆ. ಇದು ನಿಜಕ್ಕೂ ಹೆಮ್ಮೆ ಪಡುವ ವಿಷಯ ಅಂದರೆ ತಪ್ಪಾಗಲಾರದು. ಇದೆ ರೀತಿ ಮುಂದೆ ಸಹ ಪುರಾಣಿಕ, ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸಲಿ ಎಂಬುದೇ ನನ್ನ ಅಭಿಲಾಷೆ.

ರ. ಶ್ರೀಧರ ಅಯಂಗರ್ .

Prakash Naik, Kundapur, Muscat
2012-03-14
ಶ್ರೀ ಕರುಣಾಕರ್ ರಾವ್ ರವರ ವರದಿ ತುಂಬಾ ಚೆನ್ನಾಗಿ ಬಂದಿದೆ. ಆದರೆ ನಾಟಕ ಅಪೇಕ್ಷೆ ಮಾಡಿದಷ್ಟು ಮೂಡಿ ಬಂದಿಲ್ಲ. ಹೆಚ್ಚಿನ ಜನರಿಗೆ ಕಥೆಯೇ ಅರ್ಥವಾಗಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ಏನಿದ್ದರೂ ಶ್ರೀ ಅನಿಲ್ ಭಾಸಗಿಯವರ ಪ್ರಾಮಾಣಿಕ ಪ್ರಯತ್ನಕ್ಕೆ ನನ್ನ ತುಂಬು ಹ್ರದಯದ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಅವರು ಇನ್ನೂ ಉತ್ತಮ ನಾಟಕಗಳನ್ನು ಪ್ರದರ್ಶಿಸಬಹುದು ಎನ್ನುವ ನಂಬಿಕೆ ಹಾಗೂ ಆಶೆಯೊಂದಿಗೆ ನಾಟಕದ ಎಲ್ಲಾ ಪಾತ್ರಧಾರಿಗಳಿಗೂ ಈ ಮೂಲಕ ನನ್ನ ಶುಭ ಕಾಮನೆಗಳು.
Prakash Naik, Kundapur, Muscat
2012-03-14
Arvind Patil, Qatar
2012-03-14
ಅನಿಲ್ ಭಾಸಗಿ ಅವರಿಗೆ ಹಾಗೂ ಮುಸ್ಕುತ್ ಕರ್ನಾಟಕ ಸಂಘಕ್ಕೆ ಕೂಡ ಅಭಿನಂದನೆಗಳು ನಾಟಕ ಕಲೆಯನ್ನು ಪ್ರೋತ್ಸಾಹಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಅನಿಲ್ ಒಬ್ಬ ಉತ್ತಮ ನಟ ಮಾತ್ರ ಅಲ್ಲ್ಲಅವರೊಬ್ಬ ಸಂಘಟಕ, ಸುಶ್ರಾವ್ಯ ಕಂಠದ ಹಾಡುಗಾರ ಅವರಿಂದ ಇದೆ ತರಹದ ಪ್ರಯತ್ನ ನಿರಂತರ ಸಾಗಲಿ ಎಂದು ಹಾರೈಕೆ
Kiran Upadhyaya, Bahrain
2012-03-11
ಮಸ್ಕತ್ನಲ್ಲಿ ಕನ್ನಡ ನಾಟಕ ಪ್ರದರ್ಶನಗೊಂಡಿದ್ದನ್ನು ತಿಳಿದು ಸಂತೋಷವಾಯಿತು. ಸುಮಾರು ನಾಲ್ಕು ವರ್ಷಗಳ ಹಿಂದೆ ಇದೇ ನಾಟಕ ಬಹ್ರೈನ್ ನಲ್ಲಿಯೂ ಪ್ರದರ್ಶನಗೊಂಡಿದ್ದು, ಅದಲ್ಲಿಯೂ ಅನಿಲ್ ಭಾಸಗಿಯವರು ಇದೇ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ನೆನಪಾಯಿತು. ಇನ್ನು ಮುಂದೆಯೂ ಇದೇ ರೀತಿ ಬಹಳಷ್ಟು ನಾಟಕಗಳು ಪ್ರದರ್ಶನಗೊಳ್ಳಲೆಂದು ಹಾರೈಕೆ.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

»ಮಸ್ಕತ್: 28ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ
»ಒಮಾನಿನಲ್ಲಿ ಅಮೇರಿಕಾ ಮಿಲಿಟೆರಿ 'ಹೆಲಿಕಾಪ್ಟರ್' ಅಪಘಾತ; 5 ಸಿಬ್ಬಂದಿ ಪೈಕಿ ಮೂವರು ಪತ್ತೆ - ಚಿಕಿತ್ಸೆ
»ಬಿಲ್ಲವರು ಪ್ರತಿಭಾ ಕಲಿಗಳು:ಸಾಧಿಸಿ ತೋರಿಸಿದ ಒಮಾನ್ ಪುಟಾಣಿಗಳು
»ಯಕೃತ್ತು ಕಸಿಯ ಹೊಸ ವಿಧಾನ: 2 ವರ್ಷದ ಒಮಾನಿ ಮಗುವನ್ನು ಬದುಕಿಸಿದ ಭಾರತೀಯ ವೈದ್ಯರು
»ಶ್ರೀ ಪ್ರಕಾಶ್ ನಾಯ್ಕ್ ರವರಿಗೆ ಓಮಾನಿನ ಆರೋಗ್ಯ ಮ೦ತ್ರಾಲಯದ ವತಿಯಿ೦ದ ಪುರಸ್ಕಾರ
»ಒಮಾನ್ ಸಮುದ್ರ ತೀರದಲ್ಲಿ ಅನಿವಾಸಿ ಭಾರತೀಯ ಮೀನುಗಾರರ ಹಡಗು ಕಣ್ಮರೆ
»ಒಮಾನ್ ಬಿಲ್ಲವರ "ವನಸ್ಸುದ ಪರ್ಬ-2012"
»ಮಸ್ಕತ್ ಸೇವಾ ಸಂಸ್ಥೆಯಿಂದ ಮುಸ್ಲಿಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
»ಮಸ್ಕತ್ 'ಸ್ಪಂದನ' ಗಾಯನ ದೋಣಿಯ ರಸಸಂಜೆ ಪಯಣ...
»ವಾಹನ ಮುಖಾಮುಖಿ ಡಿಕ್ಕಿ-ಬೆಂಕಿ:ನಾಲ್ವರು ದುರ್ಮರಣ
»ಜನವರಿ-2012 ಒಮಾನ್ ರಸ್ತೆ ಅವಘಡಕ್ಕೆ 70 ಸಾವು
»ಬೆಂಕಿಗೆ ಅನಿವಾಸಿ ಭಾರತೀಯನ ಅಂಗಡಿ-ಕಾರು ಭಸ್ಮ:ಒಮಾನ್ ರಾಯಭಾರಿ ಕಚೇರಿಯಲ್ಲಿ ಸಹಾಯಕ್ಕೆ ಅಳಲು
»ನಿರಂತರ 'ಡ್ರಗ್ಸ್' ವ್ಯಾಪಾರ : ಜಾಲ ಬೇದಿಸಿದ ಒಮಾನ್ ಪೋಲಿಸರು
»17 ಮೇ: ಒಮಾನ್ ತುಳುವರಿಗೆ ಅಪರೂಪದ ಅವಕಾಶ: ’ದಾದ ಮಲ್ಪೆರಾಪುಂಡು’ ತುಳು ನಾಟಕಕ್ಕೆ ಕ್ಷಣಗಣನೆ
»ಉರಿ ಬಿಸಿಲಿನಲ್ಲಿ ಕಾರ್ಮಿಕರ ಕೆಲಸವನ್ನು ನಿಷೇಧಿಸಿದ ಒಮಾನ್ ಸರಕಾರ !
»ಮಸ್ಕತ್‌ಗೆ ’ಯುಗಾದಿ ನಗೆ ಹಬ್ಬ’ ದೊಂದಿಗೆ ಬಂದ ‘ನಂದನ’
»ಸ್ಪಂದನ ಆರ್ಟ್ ಲೌವರ್ಸ್ ರಿಂದ ಹೆಸರಾಂತ ಗಾಯಕಿ ಅನಿತಾ ಸಾಮ್ಸನ್ ಅವರಿಗೆ ಸನ್ಮಾನ
»Indian businessman’s body found in mysterious circumstances
»ಮನರಂಜಿಸಿದ “ಕಿವುಡನ ಕಿತಾಪತಿ”
»ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
»ಸ್ಪಂದನ ತಂಡದ ಕಾರ್ಯಕ್ರಮಕ್ಕೆ ಆಗಮಿಸಿದ ಕಲಾವಿದರು
»ಒಮಾನ್ ಹರ್ಷ ಕುಮಾರ್‌ ರೈಗೆ ಭಾರತ ಸಮ್ಮಾನ್‌ ಪ್ರಶಸ್ತಿ
»ಜನವರಿ 19ರಂದು ಸ್ಪಂದನಾ ವಿರಚಿತ 'ಯಾದೊಂಕಿ ಭಾರತ್' ಸಂಗೀತ ಬಿಡುಗಡೆ
»ಒಮಾನ್ ನಲ್ಲಿ ಬಂಟರ 24ನೇ ಸಮ್ಮಿಲನ : ಗಮನಸೆಳೆದ ಮನೋರಂಜನಾ ಕಾರ್ಯಕ್ರಮ , ತುಳುನಾಡಿನ ವೈಶಿಷ್ಟ್ಯ
»ಮಸ್ಕಟ್‌ನಲ್ಲಿ ಕಾರು ಅಪಘಾತ: ನಗರದ ಸಹೋದರಿಯರ ಸಾವು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri