ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!

ಮಸ್ಕತ್‌ನ “ಸ್ಪಂದನ”ತಂಡದವರು ತಾರೀಕು ೧೯ ೦೧ ೨೦೧೨ ರಂದು ಪ್ರಸ್ತುತ ಪಡಿಸಿದ “ಯಾದೋಂಕಿ ಬಾರಾತ್-ನೆನಪಿನಂಗಳ”  ಸಂಗೀತ ರಸ ಸಂಜೆ-ದಾಖಲೆ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಆಕರ್ಷಿಸಿ  ಒಂದು ಅದ್ಭುತ ಕಾರ್ಯಕ್ರಮವಾಗಿ ಮೂಡಿ ಬಂದಿತು. ಮಸ್ಕತ್‌ನ ಅಲ್ ಫಲಾಜ್ ಹೋಟೆಲ್‌ನ “ಗ್ರಾಂಡ್”ಸಭಾಭವನದ  ರಂಗ ಮಂಚದಲ್ಲಿ ಈ ಕಾರ್ಯಕ್ರಮ ನೆರವೇರಿತು. ಕರಾವಳಿ ಕರ್ನಾಟಕದ ಪ್ರಸಿಧ್ಧ ಹೆಸರುಗಳಾದ  ಶ್ರೀ ಟಾಗೊರ್ ದಾಸ್,ಶ್ರೀಮತಿ ಸಂಗೀತಾ ಬಾಲಚಂದ್ರ ಮತ್ತು ಶ್ರೀ ನವೀನ್ ಕುಮಾರ್ ಈ ರಸ ಸಂಜೆಯ ಮುಖ್ಯ ಗಾಯಕ/ಗಾಯಕಿಯರಾಗಿದ್ದರು.ಇದು “ಸ್ಪಂದನ”ತಂಡದವರು ಸಂಗೀತ ರಸಿಕರಿಗೆ  ಉಣಬಡಿಸಿದ ಎರಡನೇ ಕಾರ್ಯಕ್ರಮವಾಗಿದೆ.


ಹಿನ್ನೆಲೆ ಗಾಯನ ಕ್ಷೇತ್ರದ ದಿಗ್ಗಜಗಳಾಗಿದ್ದ ಪದ್ಮಭೂಷಣ ದಿವಂಗತ ಶ್ರೀ ರಾಜ್ ಕುಮಾರ್ ಮತ್ತು ಪದ್ಮಶ್ರೀ  ದಿವಂಗತ ಶ್ರೀ ಮೊಹಮ್ಮದ್ ರಫಿಯವರ ನೆನಪಿನ ಸ್ಮರಣಿಕೆಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಶ್ರೀ ಟಾಗೊರ್ ದಾಸ್ ರವರು ಶ್ರೀ ಮೊಹಮ್ಮದ್ ರಫಿ ಯವರ ಪಡಿಯಚ್ಚಿನಂತೆ ಹಾಡಿ ಪ್ರೇಕ್ಷಕರಲ್ಲಿ ಅಚ್ಚರಿಯ ಹುಚ್ಚೆಬ್ಬಿಸಿದರು.ಈ ಗಾಯಕ ಯಾಕೆ ಇದುವರೆಗೆ ಮಸ್ಕತ್ ಕಲಾ   ಪೇಮಿಗಳಿಗೆ ಪರಿಚಯಿಸ್ಪಡಲಿಲ್ಲ ಎಂಬುದೇ ಎಲ್ಲರ ಉದ್ಗಾರ ವಾಗಿತ್ತು.ಪ್ರತಿ ಬಾರಿ ಹಾಡಿ ಮುಗಿಸಿದಾಗಲೂ ಕಲಾಪ್ರೇಮಿಗಳಿಂದ “ಮತ್ತೊಮ್ಮೆ ಹಾಡಿ”ಎಂಬ ಕೂಗು ಕೇಳಿಬರುತ್ತಿತ್ತು.

“ಬಡಿ ದೂರ್ ಸೆ ಆಯೇ ಹೇಂ”ಇಂದ ತೊಡಗಿ “ಚಾಹೂಂಗ ಮೈ ತುಝೆ”,“ಏ ಫೂಲೊಂಕಿ ರಾನಿ”,“ಮಧುಬನ್ ಮೆ ರಾಧಿಕಾ”,“ಯೇ ರೇಶ್ಮಿಝುಲ್ಫೇ”, “ಪರದಾ ಹೆ ಪರ್‌ದಾ”, “ಪುಕಾರ್ ತಾ ಚಲಾ ಹೂಂ ಮೈ”ಮುಂತಾದ ಚಿರ ನೂತನ ಗೀತೆಗಳ ಜತೆಗೆ “ಆಜಾ ಆಜಾ ಮೈ ಹೂಂ ಪ್ಯಾರ್ ತೆರಾ”“ದಿಲ್ ತೇರಾ ದೀವಾನಾ”ಮುಂತಾದ ಯುಗಳ ಗೀತೆಗಳನ್ನು ಸಂಗೀತಾ ಬಾಲಚಂದ್ರ  ಜತೆಗೆ ಹಾಡಿ ರಂಜಿಸಿದರು.


ಶ್ರೀ ಕಾರ್ತಿಕ್ ಕುಂದರ್(ಸುಧನ್ವ)ಮತ್ತು ಒಂಭತ್ತನೇ ತರಗತಿಯ ಬಾಲಕ ವಿಶ್ಭವ್ ವಿಠಲ್‌ಪೂಜಾರಿ (ಅರ್ಜುನ) ಇದರಲ್ಲಿ ಪಾತ್ರವಹಿಸಿದ್ದರು.ಯಕ್ಷಗಾನದಲ್ಲಿ  ಸಾಂಪ್ರದಾಯಿಕವಾಗಿ ಶಿಕ್ಷಣ ಪಡೆಯದಿದ್ದರೂ ಈ ಇಬ್ಬರೂ ಕಲಾವಿದರು ವೃತ್ತಿ ಪರ ಕಲಾವಿದರಿಗೆ ಯಾವುದೇ ರೀತಿಯಿಂದ ಕಡಿಮೆ ಇಲ್ಲದ ರೀತಿಯಲ್ಲಿ ತಮ್ಮ ತಮ್ಮ ಪಾತ್ರಗಳನ್ನು ಜನ ನಿಬ್ಬೆರಗಾಗುವಂತೆ ನಿರ್ವಹಿಸಿದರು.


ಶ್ರೀಮತಿ ಸಂಗೀತಾ ಬಾಲಚಂದ್ರ ತಮ್ಮ ಸುಶ್ರಾವ್ಯ ಕಂಠಮಾಧುರ್ಯದಿಂದ ಹಾಗೂ ತಮಗೆ ಕರಗತವಾಗಿರುವ ಸ್ವರಗಳ ನಿರರ್ಗಳ ಏರಿಳತದಿಂದ  ಪ್ರೇಕ್ಷಕರನ್ನು ಬಂಧಿಸಿಟ್ಟರು.“ಶರಣು ಸಿಧ್ಧಿವಿನಾಯಕಾ”ದಿಂದ ಆರಂಭಿಸಿ“ದಿಲ್ ಚೀಜ್ ಕ್ಯಾ ಹೈ”,“ಮೇರಾ ನಾಮ್ ಚಿಂಗ್ ಚಿಂಗ್ ಚುನ್”,“ನಾ ನಿನ್ನಾ ಮರೆಯಲಾರೆ”,“ದೂರದಿಂದ ಬಂದಂತಾ ಸುಂದರಾಂಗ”,“ಪರ್ ದೆ ಮೆ ರಹನೆ ದೋ”,“ಒಲವೆ ಜೀವನ ಸಾಕ್ಷಾತ್ಕಾರಾ”,ಮುಂತಾದ ಜನಪ್ರಿಯ ಗೀತೆಗಳನ್ನು ಹಾಡಿ ಯಾವುದೇ ವಿಧದ ಹಾಡಿಗೂ  ಸೈ ಎನಿಸಿಕೊಂಡರು

ಶ್ರೀ ನವೀನ್ ಕುಮಾರ್  ತಮ್ಮ ಸುಶ್ರಾವ್ಯ ಕಂಠಮಾಧುರ್ಯದ ಜತೆಗೆ ತಮ್ಮಹಾಸ್ಯವಿಡಂಬನೆ  ಹಾಗೂ ಕಲಾಪ ನಿರ್ವಹಣೆಯಿಂದ ತಮ್ಮ ಪ್ರತಿಭೆಯನ್ನು  ಮೆರೆದರು. ಆವರ ಕಲಾಪ ನಿರ್ವಹಣಾ ಶೈಲಿ ,ಕನ್ನಡ ಭಾಷೆಯ ಮೇಲಿನ ಅವರ ಅಭಿಮಾನ ಮತ್ತು ಪ್ರಭುತ್ವ ಅವರನ್ನು ಪ್ರೇಕ್ಷಕರ ಕಣ್ಮಣಿಯಾಗಿ ಮಾಡಿತ್ತು.“ನಾವಾಡುವ ನುಡಿಯೆ ಕನ್ನಡ ನುಡಿ”,“ನಗು ನಗುತಾ ನಲಿ”, “ಅಶ್ವಮೇಧಾ”,“ಆರಾಧಿಸುವೆ ಮದನಾರಿ”,“ಹುಟ್ಟಿದರೇ ಕನ್ನಡ ನಾಡಲಿ ಹುಟ್ಟಬೇಕು” ಮೊದಲಾದ ಕನ್ನಡ ಚಿತ್ರಗೀತೆಗಳನ್ನು ಲೀಲಾಜಾಲವಾಗಿ ಹಾಡಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು.ಒಟ್ಟಾರೆ ಈ  ಮೂರೂ ಜನ ಗಾಯಕರ ಕಂಠದಿಂದ ಒಂದರ ಮೇಲೊಂದರಂತೆ ಸುಶ್ರಾವ್ಯ ಹಾಡುಗಳ ಮಹಾಪೂರವೇ ಹರಿದು ಬಂತು.ಮಧ್ಯೆ ಮಧ್ಯೆ ಶ್ರೀ ನವೀನ್ ಕುಮಾರ್ ರವರಿಂದ ಮಿಮಿಕ್ರಿ ಮತ್ತು ಹಾಸ್ಯ ವಿಡಂಬನೆ ಗಳು“ಊಟಕ್ಕೆ ಉಪ್ಪಿನ ಕಾಯಿ”ಯಂತೆ ರಸ ಸಂಜೆಯ ರುಚಿಯನ್ನು ಇನ್ನಷ್ಟು ಹೆಚ್ಚಿಸಿದವು.ಹಿನ್ನೆಲೆ ಸಂಗೀತ ಒದಗಿಸಲು ಶ್ರೀ ಪದ್ಮನಾಭನ್(ಪಪ್ಪನ್-ಕೀ ಬೊರ್ಡ್),ಶ್ರೀ ರಾಜೇಶ್ ಭಾಗವತ್(ತಬ್ಲಾ),ಶ್ರೀದೀಪಕ್ ಜಯಶೀಲ(ಸಿಂಥೆಸೈಸರ್),ಶ್ರೀಪ್ರಕಾಶ್ ಅಂಟನಿ(ರಿದಮ್‌ಪ್ಯಾಡ್) ಭಾರತದಿಂದ ಆಗಮಿಸಿದ್ದರು.ಮಂಗಳೂರಿಗರಾದ ಮಸ್ಕತ್ ನ ಪ್ರತಿಭೆ ಶ್ರೀ ಶರತ್ ಕುಮಾರ್ ಅವರು ಮುಖ್ಯ ಗಿಟಾರ್ ವಾದಕರಾಗಿ ಕಾರ್ಯ ನಿರ್ವಹಿಸಿದರು.ಈ ಹಿನ್ನೆಲೆ ಸಂಗೀತ ನಿರ್ವಹಣೆಗಾರರಲ್ಲಿ ಒಬ್ಬರಿಗೊಬ್ಬರು ಎಷ್ಟೊಂದು ಹೊಂದಾಣಿಕೆಯಿಂದ  ಹಿನ್ನೆಲೆ ಸಂಗೀತ ನೀಡಿದರೆಂದರೆ ಕೆಲವೊಮ್ಮೆ ಸಭಿಕರಿಗೆ ಇದು ನೇರ ನಿರ್ವಹಣೆಯೋ ಅಥವಾ ಇತ್ತೀಚಿನ ಕೆಲ ಸಂಗೀತ ನಿರ್ವಾಹಕರ   ಕೆಟ್ಟ ಪ್ರವೃತ್ತಿಯಂತೆ   ಪೂರ್ವ ದಾಖಲಿತ ಸಂಗೀತವೋ ಎಂಬ ನುಮಾನ ಹುಟ್ಟುವಂತೆ ಮಾಡಿದರು.ಇವರೆಲ್ಲಾ ಯುವಪೀಳಿಗೆಯ ಸಂಗೀತಗಾರರಾದರೂ ಅಷ್ಟೊಂದು ಪರಿಪಕ್ವ ತಾಳಮೇಳಗಳ ಸಮ್ಮಿಲನ ಇಲ್ಲಿ ಕಂಡು ಬಂದಿತ್ತು.ಶ್ರೀ ವಿಜಯ್ ಕುಮಾರ್ ಬಸ್ರೂರ್ ಅವರು ಕಲಾವಿದರ ತಂಡದ ನಿರ್ವಾಹಕರಾಗಿ ಆಗಮಿಸಿದ್ದರು.ಮನರಂಜನೆಯ ಮುಖ್ಯ ಆಕರ್ಷಣೆಯಾಗಿ   ಕರ್ನಾಟಕದ  ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ಜನಪ್ರಿಯ ಜಾನಪದ ನೃತ್ಯ ಕಲೆಯಾದ “ಯಕ್ಷಗಾನ”ದ ಒಂದು ಚಿಕ್ಕ ಪ್ರಹಸನವಾದ “ಸುಧನ್ವ ಮೋಕ್ಷ” ವನ್ನು ಕೂಡಾ ಪ್ರದರ್ಶಿಸಲಾಯಿತು. ಈ ಪ್ರಹಸನವನ್ನು ಶ್ರೀಪ್ರಕಾಶ್ ನಾಯಕ್ ಕೋಣಿಯವರು ನಿರ್ದೇಶಿಸಿದ್ದರು.


ಕಾರ್ಯಕ್ರಮದ ಅಂಗವಾಗಿ ಮಸ್ಕತ್‌ನ ಪುಟಾಣಿ ನೃತ್ಯ ಪಟುಗಳು ಶಾಸ್ತ್ರೀಯ ನೃತ್ಯವಾದ ಭರತ ನಾಟ್ಯದಿಂದ ತೊಡಗಿ ಚಲನಚಿತ್ರಗಳ ಜನಪ್ರಿಯ ನೃತ್ಯ ಪ್ರಾಕಾರಗಳನ್ನು ಅಳವಡಿಸಿಕೊಂಡಂತೆ,ತಮ್ಮ ನೃತ್ಯ ಕೌಶಲವನ್ನು ಪ್ರದರ್ಶಿಸಿ ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು. ಕುಮಾರ ಭರತ್  ಹೆಗ್ಡೆ, ಕುಮಾರ ವರುಣ್ ಸುನಿಲ್,ಕುಮಾರಿ ಅನನ್ಯಾ ರವಿ, ಕುಮಾರಿ ಅಮೂಲ್ಯ ರವಿ,ಕುಮಾರಿ ಸಾನಿಕಾ ವೆಂಕಟೇಶ್ ಮತ್ತು  ಕುಮಾರಿ  ರಾಧಿಕಾ ವೆಂಕಟೇಶ್ ಇವರುಗಳು ತಮ್ಮ ಹಾವಭಾವ,ಮಿಂಚಿನ ಹೆಜ್ಜೆಗಳ ಚಲನೆಗಳಿಂದ ಕನ್ನಡ,ಹಿಂದಿ ಮತ್ತು ಇಂಗ್ಲಿಷ್ ಹಾಡುಗಳಿಗೆ ಜೀವ ತುಂಬಿದರು.

ಪ್ರಾರಂಭದಲ್ಲಿ “ಸ್ಪಂದನ”ದ ಸಂಯೋಜಕರಾದ ಶ್ರೀ ಪ್ರಕಾಶ್ ನಾಯಕ್ ಕೋಣಿ ಯವರು ಆಗಮಿಸಿದ ಮುಖ್ಯ ಅತಿಥಿಗಳನ್ನು,ಪ್ರ್ರಾಯೋಜಕರನ್ನು,ಹಾಗು ಪ್ರೇಕ್ಷಕ ವೃಂದವನ್ನು ಬಿಚ್ಚು ಮನಸ್ಸಿನಿಂದ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತದ ರಾಯಭಾರಿಯವರನ್ನು ಪುಷ್ಪ ಗುಚ್ಚಗಳೊಂದಿಗೆ ಸ್ವಾಗತಿಸಲಾಯಿತು.ಭಾರತದ ರಾಯಭಾರಿ ಶ್ರೀ ಜೆಎಸ್ ಮುಕುಲ್ ಅವರು“ಯಕ್ಷಗಾನ”ವನ್ನು ನೋಡಲೆಂದೇ ಪ್ರತ್ಯೇಕವಾಗಿ ಆಗಮಿಸಿದ್ದರು.ಕಾರ್ಯಕ್ರಮ ಆಯೋಜಿಸಿದ “ಸ್ಪಂದನ” ತಂಡದ ಮನೋಬಲಕ್ಕೆ ಅವರ ಶುಭ ಹಾರೈಕೆಗಳಿಂದ  ದೀಪಕ್ಕೆ ತುಪ್ಪ ಹಾಕಿದಂತಾಗಿತ್ತು.

ಮುಖ್ಯ ಪ್ರ್ರಾಯೋಜಕರುಗಳಾದ ಬ್ಯಾಂಕ್ ಮಸ್ಕತ್ ನ ಶ್ರೀ ರಾಮಕೃಷ್ಣ ,ಎಸ್ ಎ ಎಚ್ ಪ್ರೊರ್ಟೀಸ್ ನ ಶ್ರೀ ಸಯ್ಯದ್ ಅಬ್‌ದುಲ್ಲಾ ಅಲ್ ಹೊಸ್ನಿ,ಎನ್ ಪಿ ಟಿ ಸಿ ಯ ಶ್ರೀ ಜ಼ನಲ್ ಅಬ್ದೀನ್ ಮುಂತಾದರಿಗೆ ಪುಷ್ಪ ಗುಚ್ಚಗಳ ಸ್ವಾಗತ ದೊರೆಯಿತು.

 ಶ್ರೀಮತಿ ಜಯ ಶೆಟ್ಟಿಗಾರ್ ಮಸ್ಕತ್ ನ  ಸಭಿಕರಿಗೆ“ಯಕ್ಷಗಾನ”ದ ಬಗ್ಗೆ ಒಂದು ಕಿರು ಮಾಹಿತಿಯನ್ನು ಮುಂದಿಟ್ಟು ಪಾತ್ರಧಾರಿಗಳನ್ನು ಪರಿಚಯಿಸಿದರು..

“ಯಕ್ಷಗಾನ” ದ ನಂತರ ಕಾರ್ಯಕ್ರಮ ಸಂಯೋಜಕರಾದ  ಶ್ರೀ ರಿಯಾಜ್ ಅಹ್ಮದ್ ರವರು ಶ್ರೀ ಟಾಗೊರ್ ದಾಸ್,ಶ್ರೀಮತಿ ಸಂಗೀತಾ ಬಾಲಚಂದ್ರ ಮತ್ತು ಶ್ರೀ ನವೀನ್ ಕುಮಾರ್  ರವರನ್ನು ಸಭಿಕರಿಗೆ ಪರಿಚಯಿಸಿದರು.ಈ ಸಂಗೀತ ರಸ ಸಂಜೆಯನ್ನು ಆಸ್ವಾದಿಸುವಲ್ಲಿ ಸಂಗೀತ  ಪ್ರೇಮಿಗಳ ಉತ್ಸಾಹ ಮತ್ತು ತನ್ಮಯತೆ ಎಷ್ಟಿತ್ತೆಂದರೆ  ಸುಮಾರು ಐದು ಗಂಟೆಗಳ  ಕಾಲ ಈ ವಿವಿಧ ಕಾರ್ಯಕ್ರಮಗಳು ಹೊತ್ತಿನ ಪರಿವೆಯಿಲ್ಲದೆ ಮುಂದುವರಿದವು.ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಾಯಕ, ವಾದಕ ಹಾಗು  ಮತ್ತು ಇತರೆ ಕಲಾವಿದರಿಗೆ ನೆನಪಿನ ಕಾಣಿಕೆಗಳನ್ನು ಅರ್ಪಿಸಲಾಯಿತು. 

 ಶ್ರೀ ರಿಯಾಜ್ ಅಹ್ಮದ್ ರವರು ಕಾರ್ಯಕ್ರಮದ ಪರವಾನಗಿ ನೀಡಿದ ಒಮಾನ್ ನ ಸುಲ್ತಾನ್- ಕಾಬೂಸ್ ಬಿನ್ ಸೈದ್ ರವರಿಗೆ ನಾವು ಎಂದೆಂದಿಗೂ ಆಭಾರಿಗಳೆಂದು ತಿಳಿಸಿದರು.  ಅದಲ್ಲದೆ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ  ಎಲ್ಲಾ   ಪ್ರಾಯೋಜಕರು, ಸ್ವಯಂ ಸೇವಕರು ಹಾಗೂ ಪ್ರೇಕ್ಷಕ ವರ್ಗಕ್ಕೆ ತಮ್ಮ ವಂದನೆಗಳನ್ನು ಅರ್ಪಿಸಿದರು.

“ಸ್ಪಂದನ”-ಶ್ರೀ ಪ್ರಕಾಶ್ ನಾಯಕ್ ಕೋಣಿ ಮತ್ತು ಶ್ರೀ ರಿಯಾಜ್ ಅಹ್ಮದ್ ರವರ ಕನಸಿನ ಕೂಸು.ಪ್ರತಿ ವರ್ಷ ಕರಾವಳಿ ಕಲ್ಲಾವಿದರನ್ನು ಕರೆಸಿ ಒಂದಾದರೂ ಉತ್ತಮ ಕಾರ್ಯಕ್ರಮ ನೀಡಿ, ಕಲಾವಿದರಿಗೆ,ಕಲಾಪ್ರೇಮಿಗಳಿಗೆ ಮತ್ತು ಸಮಾಜಕ್ಕೆ ಉಪಯೋಗವಾಗುವಂತೆ ಶ್ರಮಿಸುವುದು “ಸ್ಪಂದನ”ದ ಮುಖ್ಯ ಧ್ಯೇಯವಾಗಿದೆ.ಅದರೊಂದಿಗೆ ಶ್ರೀ ರಮೇಶ್ ಶೆಟ್ಟಿಗಾರ್, ಶ್ರೀಮತಿ ಜಯ ಶೆಟ್ಟಿಗಾರ್,ಶ್ರೀ ನಾಗೇಶ್ ಶೆಟ್ಟಿ,ಶ್ರೀ ಕರುಣಾಕರ ರಾವ್ ಕದ್ರಿ, ಶ್ರೀ ರಮಾನಂದ ಕುಂದರ್, ಶ್ರೀ ಜ಼ುಬೇರ್ ಮತ್ತು ಶ್ರೀ ಯೋಗಾನಂದ ಹೊಳಲ್ಕೆರೆ-ಹೆಗಲಿಗೆ ಹೆಗಲು ಸೇರಿಸಿ ತಂಡದ ಬಲ ವರ್ಧನೆಗೆ ಶ್ರಮಿಸಿದ್ದಾರೆ. ಅದಲ್ಲದೆ ಶ್ರೀ ವಾಲ್ಟರ್ ಮೆಂಡೊನ್ಸಾ ಅವರು ಸ್ವಯಂಸೇವಕ ತಂಡದ ಮೇಲ್ವಿಚಾರಣೆಯ ಹೊರೆ ಹೊತ್ತಿದ್ದರು.ಶ್ರೀ ಉಮೆಶ್ ಬಂಟ್ವಾಳ್ ಎಲ್ಲಾ ವಿಧದ ಮುದ್ರಣ ಕಾರ್ಯವನ್ನು ನಿರ್ವಹಿಸಿದರು.

ಶ್ರೀಯುತ ಜುಬೇರ್ ರವರು ಕಾರ್ಯಕ್ರಮದ ಜಾಹೀರಾತು ಭಿತ್ತಿ ಪತ್ರ ರಚನೆಯಲ್ಲಿ ಅದ್ಭುತ ಪ್ರತಿಭೆಯನ್ನು ಮೆರೆದಿದ್ದಾರೆ.ಈ ಭಿತ್ತಿಪತ್ರಗಳು ಎಲ್ಲರ ಗಮನಸೆಳೆದಿದ್ದವು ಎಂಬುದು ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.

"ನೆನಪಿನಂಗಳ"  ಕಾರ್ಯಕ್ರಮಕ್ಕೆ ಗುಣಾತ್ಮಕವಾಗಿ ಸ್ಪಂದಿಸಿದ ಪ್ರೇಕ್ಷಕರ ವೃಂದ ಬಹುಕಾಲ ಈ ಒಂದು ಉತ್ತಮ ಪ್ರಯತ್ನವನ್ನು ನೆನಪಿನಲ್ಲಿgಸಿಕೊಳ್ಳಲಿದೆ ಎಂಬುದು ಖಚಿತ.ಎರಡನೆ ಬಾರಿಯೂ ಒಂದು ಅವಿಸ್ಮರಣೀಂii ಸಂಜೆಯನ್ನು ಸಾದರಪಡಿಸಿದುದರ ಯಶಸ್ಸು“ಸ್ಪಂದನ” ದ ಯಶಸ್ಸಿನ ಕಿರೀಟದಲ್ಲಿ ಮತ್ತೊಂದು ಗರಿಯಾಗಿ ರಾರಾಜಿಸಲಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಶ್ರೀ ಕರುಣಾಕರ ರಾವ್ ಕದ್ರಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-01-24

Tell a Friend
ಇತರ ಸಂಭಂದಪಟ್ಟ ವರದಿಗಳು
»ಸ್ಪಂದನ ತಂಡದ ಕಾರ್ಯಕ್ರಮಕ್ಕೆ ಆಗಮಿಸಿದ ಕಲಾವಿದರು

ಪ್ರತಿಸ್ಪಂದನ
Prakash Naik, Kundapur, Muscat
2012-01-28
ಸ್ಪಂದನದ ಕಾರ್ಯಕ್ರಮ "ನೆನಪಿನಂಗಳ" ಮಸ್ಕತ್ ನ ಸಂಗೀತ ಪ್ರೇಮಿಗಳನ್ನು ವಿಸ್ಮಯ ಲೋಕಕ್ಕೆ ಕೊಂಡೊಯ್ದು ಸುಮಾರು ಐದು ಗಂಟೆಗಳ ಕಾಲ ೧೨೦೦ ಜನ ಪ್ರೇಕ್ಷಕರು ಸಂಗೀತ ನ್ರತ್ಯಗಳ ಸಂಗಮದ ಹೊನಲಲ್ಲಿ ಮಗ್ನರಾಗಿದ್ದರು ಎ೦ದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ.

ಆ ರಸ ಸಂಜೆ ಎಷ್ಟು ಮನಮೊಹಕವಗಿತ್ತೋ ಅಷ್ಟೇ ಸುಂದರವಾಗಿ ಶ್ರೀ ಕರುಣಾಕರ ರಾವ್ ಕದ್ರಿಯವರು ಈ ವರದಿಯನ್ನು ನಿರೂಪಣೆ ಮಾಡಿದ್ದಕ್ಕೆ ಅನಂತಾನಂತ ಕ್ರತಜ್ನತೆಗಳು

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

»ಮಸ್ಕತ್: 28ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ
»ಒಮಾನಿನಲ್ಲಿ ಅಮೇರಿಕಾ ಮಿಲಿಟೆರಿ 'ಹೆಲಿಕಾಪ್ಟರ್' ಅಪಘಾತ; 5 ಸಿಬ್ಬಂದಿ ಪೈಕಿ ಮೂವರು ಪತ್ತೆ - ಚಿಕಿತ್ಸೆ
»ಬಿಲ್ಲವರು ಪ್ರತಿಭಾ ಕಲಿಗಳು:ಸಾಧಿಸಿ ತೋರಿಸಿದ ಒಮಾನ್ ಪುಟಾಣಿಗಳು
»ಯಕೃತ್ತು ಕಸಿಯ ಹೊಸ ವಿಧಾನ: 2 ವರ್ಷದ ಒಮಾನಿ ಮಗುವನ್ನು ಬದುಕಿಸಿದ ಭಾರತೀಯ ವೈದ್ಯರು
»ಶ್ರೀ ಪ್ರಕಾಶ್ ನಾಯ್ಕ್ ರವರಿಗೆ ಓಮಾನಿನ ಆರೋಗ್ಯ ಮ೦ತ್ರಾಲಯದ ವತಿಯಿ೦ದ ಪುರಸ್ಕಾರ
»ಒಮಾನ್ ಸಮುದ್ರ ತೀರದಲ್ಲಿ ಅನಿವಾಸಿ ಭಾರತೀಯ ಮೀನುಗಾರರ ಹಡಗು ಕಣ್ಮರೆ
»ಒಮಾನ್ ಬಿಲ್ಲವರ "ವನಸ್ಸುದ ಪರ್ಬ-2012"
»ಮಸ್ಕತ್ ಸೇವಾ ಸಂಸ್ಥೆಯಿಂದ ಮುಸ್ಲಿಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
»ಮಸ್ಕತ್ 'ಸ್ಪಂದನ' ಗಾಯನ ದೋಣಿಯ ರಸಸಂಜೆ ಪಯಣ...
»ವಾಹನ ಮುಖಾಮುಖಿ ಡಿಕ್ಕಿ-ಬೆಂಕಿ:ನಾಲ್ವರು ದುರ್ಮರಣ
»ಜನವರಿ-2012 ಒಮಾನ್ ರಸ್ತೆ ಅವಘಡಕ್ಕೆ 70 ಸಾವು
»ಬೆಂಕಿಗೆ ಅನಿವಾಸಿ ಭಾರತೀಯನ ಅಂಗಡಿ-ಕಾರು ಭಸ್ಮ:ಒಮಾನ್ ರಾಯಭಾರಿ ಕಚೇರಿಯಲ್ಲಿ ಸಹಾಯಕ್ಕೆ ಅಳಲು
»ನಿರಂತರ 'ಡ್ರಗ್ಸ್' ವ್ಯಾಪಾರ : ಜಾಲ ಬೇದಿಸಿದ ಒಮಾನ್ ಪೋಲಿಸರು
»17 ಮೇ: ಒಮಾನ್ ತುಳುವರಿಗೆ ಅಪರೂಪದ ಅವಕಾಶ: ’ದಾದ ಮಲ್ಪೆರಾಪುಂಡು’ ತುಳು ನಾಟಕಕ್ಕೆ ಕ್ಷಣಗಣನೆ
»ಉರಿ ಬಿಸಿಲಿನಲ್ಲಿ ಕಾರ್ಮಿಕರ ಕೆಲಸವನ್ನು ನಿಷೇಧಿಸಿದ ಒಮಾನ್ ಸರಕಾರ !
»ಮಸ್ಕತ್‌ಗೆ ’ಯುಗಾದಿ ನಗೆ ಹಬ್ಬ’ ದೊಂದಿಗೆ ಬಂದ ‘ನಂದನ’
»ಸ್ಪಂದನ ಆರ್ಟ್ ಲೌವರ್ಸ್ ರಿಂದ ಹೆಸರಾಂತ ಗಾಯಕಿ ಅನಿತಾ ಸಾಮ್ಸನ್ ಅವರಿಗೆ ಸನ್ಮಾನ
»Indian businessman’s body found in mysterious circumstances
»ಮನರಂಜಿಸಿದ “ಕಿವುಡನ ಕಿತಾಪತಿ”
»ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
»ಸ್ಪಂದನ ತಂಡದ ಕಾರ್ಯಕ್ರಮಕ್ಕೆ ಆಗಮಿಸಿದ ಕಲಾವಿದರು
»ಒಮಾನ್ ಹರ್ಷ ಕುಮಾರ್‌ ರೈಗೆ ಭಾರತ ಸಮ್ಮಾನ್‌ ಪ್ರಶಸ್ತಿ
»ಜನವರಿ 19ರಂದು ಸ್ಪಂದನಾ ವಿರಚಿತ 'ಯಾದೊಂಕಿ ಭಾರತ್' ಸಂಗೀತ ಬಿಡುಗಡೆ
»ಒಮಾನ್ ನಲ್ಲಿ ಬಂಟರ 24ನೇ ಸಮ್ಮಿಲನ : ಗಮನಸೆಳೆದ ಮನೋರಂಜನಾ ಕಾರ್ಯಕ್ರಮ , ತುಳುನಾಡಿನ ವೈಶಿಷ್ಟ್ಯ
»ಮಸ್ಕಟ್‌ನಲ್ಲಿ ಕಾರು ಅಪಘಾತ: ನಗರದ ಸಹೋದರಿಯರ ಸಾವು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri