ಶುಕ್ರವಾರ, 18-10-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಸೌದಿ ಅರೇಬಿಯಾ : ಆಸ್ಪತ್ರೆಯಲ್ಲಿ ಮೂರು ತಿಂಗಳಿನಿಂದ ಅನಾಥವಾಗಿ ಬಿದ್ದಿತ್ತು ಭಾರತೀಯನ ಮೃತದೇಹ !

ತಬೂಕ್(ಸೌದಿ ಅರೇಬಿಯಾ):ಅಪಘಾತದಲ್ಲಿ ಮೃತಪಟ್ಟ ಉತ್ತರ ಪ್ರದೇಶದ ಗೋರಖಪುರದ ಉಮೇಶ್ ಯಾದವ್ ಎಂಬುವವರ ಮೃತದೇಹ ಇಲ್ಲಿನ ಕಿಂಗ್ ಖಾಲಿದ್ ಆಸ್ಪತ್ರೆಯ ಶವಾಗಾರದ ಲ್ಲಿ ಕಳೆದ ಮೂರು ತಿಂಗಳಿನಿಂದ ವಾರೀಸುದಾರರಿಲ್ಲದೇ ಅನಾಥವಾಗಿ ಬಿದ್ದಿದ್ದು ಇದನ್ನು ಅರಿತ ಇಂಡಿಯಾ ಇಂಡಿಯಾ ಫ್ರಟೆರ್ನಿಟಿ ಫೋರಂ ತಬೂಕ್ ಘಟಕದ ಕಾರ್ಯಕರ್ತರು ನಿರಂತರ ಪರಿಶ್ರಮ ಪಟ್ಟು ಮೃತಪಟ್ಟವರ ವಿವರ ಹಾಗೂ ಅವರ ಕಂಪೆನಿಯ ಅಧಿಕಾರಿಗಳನ್ನು ಪತ್ತೆ ಹಚ್ಚಿ ಅವರ ವಿವರ ಸಂಗ್ರಹಿಸಿ ಮೃತದೇಹವನ್ನು ಊರಿಗೆ ಕಳುಹಿಸಲು ಬೇಕಾದ ವ್ಯವಸ್ಥೆಯನ್ನು ಮಾಡಿ ಒಂದೇ ವಾರದಲ್ಲಿ ಉಮೇಶ್ ಯಾದವ್ ಅವರ ಪ್ರಾರ್ಥೀವ ಶರೀರವನ್ನು ಅವರ ತಾಯ್ನಾಡಿಗೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ .

ಉತ್ತರ ಪ್ರದೇಶದ ಗೊರಖಪುರದ ನಿವಾಸಿ ಉಮೇಶ್ ಯಾದವ್ ಕಳೆದ ಹಲವು ವರ್ಷಗಳಿಂದ ಸೌದಿ ಅರೇಬಿಯಾದ ಅಲ್ ಹರ್ಬಿ ಮುಖಾವಲತ್ ಎಂಬ ಕಂಪೆನಿಯಲ್ಲಿ ಟ್ರೈಲರ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು.ಮೂರು ತಿಂಗಳ ಹಿಂದೆ ತಬೂಕಿನಿಂದ ಸುಮಾರು ಇಪ್ಪತ್ತೈದು ಕಿ.ಮೀ ದೂರ ಇರುವ ಶರ್ಮಾ ಎಂಬಲ್ಲಿ ಇವರ ಟ್ರೈಲರ್ ಕೆಟ್ಟು ನಿಂತಿತು .ಅಲ್ಲಿಂದ ಬಂದ ಇವರು ಮೆಕ್ಯಾನಿಕ್ ಒಬ್ಬರನ್ನು ಕರೆದುಕೊಂಡು ಹೋಗಿ ತನ್ನ ಟ್ರೈಲರ್ ರಿಪೇರಿ ಮಾಡಿಸಿದ್ದರು. ರಸ್ತೆಯ ಆ ಬದಿಯಲ್ಲಿ ಮೆಕ್ಯಾನಿಕ್ ಬಂದಿದ್ದ ಕಾರನ್ನು ನಿಲ್ಲಿಸಿದ್ದ ಕಾರಣ ರಿಪೇರಿಗೆ ಬಳಸಿದ ಟೂಲ್ಸ್ ಅನ್ನು ಅವನ ಕಾರಿನಲ್ಲಿಡಲು ರಸ್ತೆಯ ಆ ಬದಿಗೆ ತೆರಳಿದ್ದರು. ಹಾಗೆ ಇಟ್ಟು ಬರುವಾಗ ವೇಗವಾಗಿ ಬಂದ ಕಾರೊಂದು ಇವರಿಗೆ ಡಿಕ್ಕಿ ಹೊಡೆದಿದೆ.ಅಪಘಾತದ ತೀವ್ರತೆಗೆ ಉಮೇಶ್ ಯಾದವ್ ಅಲ್ಲೇ ಮೃತಪಟ್ಟಿದ್ದಾರೆ.

ಆನಂತರ ಇವರ ಮೃತದೇಹವನ್ನು ಇಲ್ಲಿನ ಕಿಂಗ್ ಖಾಲಿದ್ ಆಸ್ಪತ್ರೆಗೆ ತರಲಾಗಿದೆ.ವಾರಿಸು ದಾರರಿಲ್ಲದ ಕಾರಣ ಮೂರು ದಿನ ಶವವನ್ನು ಶೈತ್ಯಾಗಾರದಲ್ಲಿ ಇಡದೇ ಹೊರಗೆ ಇಡಲಾಗಿದೆ. ಕೊನೆಗೆ ಕಂಪೆನಿಯ ಸೌದಿ ಮ್ಯಾನೇಜರ್ ಬಂದ ನಂತರ ಮೃತದೇಹವನ್ನು ಶವಾಗಾರದಲ್ಲಿ ಸಂರಕ್ಷಿಸಿ ಇಡಲಾಗಿದೆ.ಆಗ ಅಲ್ಲಿಂದ  ತೆರಳಿದ ಕಂಪೆನಿಯ ಮ್ಯಾನೇಜರ್ ಆನಂತರ ಆಸ್ಪತ್ರೆ ಕಡೆ ಸುಳಿಯಲೇ ಇಲ್ಲ.ಅದೂ ಅಲ್ಲದೆ ಎರಡು ತಿಂಗಳ ರಜೆ ಹಾಕಿ ಪತ್ನಿ ಮಕ್ಕಳ ಜೊತೆ ರಜೆ ಕಳೆಯಲು ಜಿದ್ದಾಕ್ಕೆ ತೆರಳಿದ್ದ.  ಯಾವುದೋ  ಕಾರ್ಯದ  ನಿಮಿತ್ತ ಆಸ್ಪತ್ರೆಗೆ ಹೋದ  ಇಂಡಿಯಾ ಫ್ರಟೆರ್ನಿಟಿ ಫೋರಂ ಅಧ್ಯಕ್ಷರಾದ ಅಬ್ದುಲ್ ಲತೀಫ್ ಎಮ್ಮಾಡಿಯವರಿಗೆ ಆಸ್ಪತ್ರೆಯಲ್ಲಿ ಭಾರತೀಯರೊಬ್ಬರ ಅನಾಥ ಶವ ವಾರಿಸುದಾರರಿಲ್ಲದೇ ಇರುವುದು ಗೊತ್ತಾಗಿದೆ.

ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಇಲ್ಲಿನ ಇಂಡಿಯಾ ಫ್ರಟೆರ್ನಿಟಿ  ಫೋರಂ ಅಧ್ಯಕ್ಷರಾದ ಅಬ್ದುಲ್ ಲತೀಫ್ ಎಮ್ಮಾಡಿ ,ಪದಾಧಿಕಾರಿಗಳಾದ ಅಬ್ದುಲ್ ಮಜೀದ್ ಕನ್ನಂಗಾರ್ , ಅಶ್ರಫ್ ಜಿದ್ದಾ , ದೆಹಲಿ ಐ.ಎಫ್.ಎಫ್ ಘಟಕದ ಅಧ್ಯಕ್ಷರಾದ ನಸ್ರುಲ್ಲಾ ಬಿಹಾರ್ , ಸನಯ್ಯಾ ಐ.ಎಫ್.ಎಫ್ ಕಾರ್ಯದರ್ಶಿ ಕ್ರಿಸ್ ಮುರಾಲ್ ಮೃತದೇಹವನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ಇವರಿಗೆ ಕಿಂಗ್ ಖಾಲಿದ್ ಆಸ್ಪತ್ರೆಯ ನೌಕರರಾದ ಕನ್ನಡಿಗ ನೂರುಲ್ ಹಸಾದಿ ಉಡುಪಿ ರವರು ಈ ಕಾರ್ಯದಲ್ಲಿ ಸಂಪೂರ್ಣ ನೆರವು ನೀಡಿದ್ದಾರೆ. ಅದರಂತೆ ರಜೆ ಕಳೆಯಲು ತೆರಳಿದ್ದ ಕಂಪೆನಿ ಮ್ಯಾನೇಜರ್ ಅವರನ್ನು ವಾಪಾಸ್ಸು ಕರೆಯಿಸಿ ಮೃತ ದೇಹವನ್ನು ಊರಿಗೆ ಕಳುಹಿಸಲು ಬೇಕಾದ ಏರ್ಪಾಡು ಮಾಡಲಾಗಿದೆ.

ಅದರಂತೆ ಮೊನ್ನೆ ಉಮೇಶ್ ಯಾದವ್ ಅವರ ಮೃತದೇಹ ಊರಿಗೆ ಕಳುಹಿಸಲಾಗಿದೆ . ಉತ್ತರ ಪ್ರದೇಶದ ಗೊರಖಪುರದ ನಿವಾಸಿ ಗುಲಾಂ ಸುಬೇದಾರ್ ಅನ್ಸಾರಿ ಮೃತದೇಹದ ಜೊತೆ ಊರಿಗೆ ತೆರಳಿದ್ದಾರೆ .ಇಂದು ಬುಧವಾರ ಬೆಳಿಗ್ಗೆ ಮೃತದೇಹ ಉಮೇಶ್ ಯಾದವ್ ಅವರ ಮನೆಯನ್ನು ತಲುಪಿದ್ದು ಮಧ್ಯಾಹ್ನ ಅವರ ಅಂತ್ಯ ಸಂಸ್ಕಾರವೂ ನಡೆದಿದೆ.ಮೃತದೇಹದ ಅಂತ್ಯಕ್ರಿಯೆಯ ನಂತರ ದೂರವಾಣಿ ಕರೆ ಮಾಡಿರುವ ಉಮೇಶ್ ಯಾದವ್ ಪತ್ನಿ ಮೃತದೇಹ ಊರಿಗೆ ಬರುವುದು ಅಸಾಧ್ಯ ಎಂದೇ ನಾವು ಭಾವಿಸಿದ್ದೆವು. ಆದರೆ ನಿಮ್ಮ ಪ್ರಯತ್ನದಿಂದ ಇಂದು ನಮ್ಮ ಮನೆಯವರ ಮೃತದೇಹ ನೋಡುವ ಅವಕಾಶ ಸಿಕ್ಕಿದ್ದು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಸಾಧ್ಯವಾಗಿದೆ.ನಿಮ್ಮ ಈ ಸಹಕಾರಕ್ಕೆ ಧನ್ಯವಾದಗಳು ಎಂದಿರುವ ಅವರು ಹಾಗೂ ಅವರ  ಇಬ್ಬರು ಮಕ್ಕಳು ಇಂಡಿಯಾ ಫ್ರಟೆರ್ನಿಟಿ ಫೋರಂ ಕಾರ್ಯಕರ್ತರ ಸೇವೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : vk news
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2011-11-24

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸೌದಿ ಅರೇಬಿಯ]

» Safety Alert : 3yrs old child kills himself by mistake!
»ಸೌದಿ ಅರೇಬಿಯಾ: ಮಹಿಳೆಯರಿಗಾಗಿಯೇ ಪ್ರತ್ಯೇಕ ನಗರ
»ಸೌದಿಯಲ್ಲಿ ಧೂಮಪಾನಿ ಗಂಡಂದಿರಿಗೆ ಪತ್ನಿ ವಿಚ್ಚೇಧನ ಕೊಡಬಹುದು
»ಸೌದಿಯಲ್ಲಿ 8 ವರ್ಷ ಮೀರಿದ ಅನಿವಾಸಿ ವಿದ್ಯಾರ್ಥಿಗಳಿಗೆ ಶಾಲಾ ಪ್ರವೇಶ ನಿಷೇಧ
»12 men charred to death in Saudi road crash
»ಕುವೈತ್ ವಿಮಾನಕ್ಕೆ ಆಗಸದಲ್ಲಿ ಇಂಜಿನ್ ತೊಂದರೆ: ಯಶಸ್ವಿ ನೆಲಸ್ಪರ್ಶ; ಭಾರಿ ಅನಾಹುತದಿಂದ ಪ್ರಯಾಣಿಕರು ಪಾರು
»ಶೃಂಗಾರ-ಸುಗಂಧ ದ್ರವ್ಯ ಮಾರಾಟ ಅಂಗಡಿಯಲ್ಲಿ ಮಹಿಳೆಯರಿಗೆ ಮಾತ್ರ ಉದ್ಯೋಗ !
»ಅನಿವಾಸಿ ಭಾರತೀಯನ ಕೊಲೆ ಹಿನ್ನಲೆ ಸೇರಿದಂತೆ ಸೌದಿಯಲ್ಲಿ ಐವರಿಗೆ ಶಿರಚ್ಚೇಧ ಶಿಕ್ಷೆ
»ಹಳಿತಪ್ಪಿದ ಸೌದಿ ಪ್ರಯಾಣಿಕರ ರೈಲು
»ಸೌದಿ ರಾಜಕುಮಾರ ನಯೆಫ್ ಬಿನ್ ಅಬ್ದುಲ್ ಅಜೀಜ್ ನಿಧನ:ಶೋಕಾಚರಣೆಗೆ ಸರಕಾರಿ ರಜೆ ಘೋಷಣೆ.
»"ಸೌದಿ ಮಹಿಳೆಯರ ವಾಹನ ಚಾಲನೆ ನಿಷೇಧ ತೆರೆವುಗೊಳಿಸಿ":ಸೌದಿ ಮಹಿಳೆಯಿಂದ ದೊರೆಗೆ ಮನವಿ
»ಸೌದಿಯಲ್ಲಿ ಇಂಡಿಯನ್ ಫ್ರೆಟರ್ನಿಟಿ ಫೋರಂನಿಂದ ಆರೋಗ್ಯ ಶಿಬಿರ
»ಸೌದಿಯಲ್ಲಿ ಕ್ಷೀಣಿಸುತ್ತಿರುವ ಅನಿವಾಸಿಗಳ ಉದ್ಯೋಗ ಭದ್ರತೆ ಭವಿಷ್ಯ
»ರಿಯಾದ್‌ನಿಂದ ಮುಂಬೈಗೆ ಆಗಮಿಸಿದ ಜೆಟ್ ಏರ್ವೇಸ್‌ನಲ್ಲಿ ಬೆಂಕಿ: ಪ್ರಯಾಣಿಕರು ಪಾರು
»ಪತಿಯ 2ನೇ ಮದುವೆಗೆ ಒಪ್ಪಿದ ಪತ್ನಿಗೆ 1 ಕೇಜಿ ಚಿನ್ನ ಉಡುಗೊರೆ !
»ಸ್ಪೊನ್ಸರ್ ಶಿಪ್ ಪದ್ದತಿಯಿಂದ ಹಿಂದೆ ಸರಿದ ಸೌದಿ ಸರಕಾರ
»28 ಸಾವಿರ ಅನಿವಾಸಿ ಚಾಲಕರ ಬದಲಿಗೆ ಸೌದಿ ಯುವಕರು
»ಅಸ್ಥಿಪಂಜರವಾಗುವ ವಿಚಿತ್ರ ಖಾಯಿಲೆಗೆ ತುತ್ತಾದ ಸೌದಿ ಯುವಕ
»ಸೌದಿಯಲ್ಲಿ ಅನ್ಯ ಭಾಷಾ ದಿನಾಂಕ ಬಳಕೆ ನಿಷೇಧ !
»ಸೌದಿ ಅರೇಬಿಯಾದಲ್ಲಿ ಏಳು ಭಾರತೀಯ ನರ್ಸ್‌ಗಳು ಪಾರು
»ಡಿಕೆಎಸ್‌ಸಿ ಜುಬೈಲ್ ಘಟಕದ ವಾರ್ಷಿಕ ಮಹಾಸಭೆ
»ಸಲಹೆಗಾರನನ್ನು ಕಿತ್ತು ಹಾಕಿದ ಸೌದಿ ದೊರೆ!;
»ಕುರಿ ಕಾಯಲೆಂದು ಸೌದಿಗೆ ಹೋದಾತ 18 ವರ್ಷಗಳ ಬಳಿಕ ಭಾರತಕ್ಕೆ ವಾಪಸ್!
»Non-Muslim Filipino expats in Saudi Arabia told to be cautious
»ಗಲ್ಫ್‌ನಲ್ಲಿನ ಚರ್ಚ್‌ಗಳನ್ನು ಧ್ವಂಸ ಮಾಡಿ: ಸೌದಿ ಮೌಲ್ವಿ ಫತ್ವಾ!; ಕ್ರಿಶ್ಚಿಯನ್ ಬಿಷಪ್ಸ್ ತೀವ್ರ ಆಕ್ರೋಶ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri