ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಖ್ಯಾತ ಇಸ್ಲಾಮಿ ವಿದ್ವಾಂಸ ರಿಯಾಝುರ್ ರಹ್ಮಾನ್ ರಷಾದಿ ನಿಧನ

ಬೆಂಗಳೂರು:ಖ್ಯಾತ ಇಸ್ಲಾಮಿ ವಿದ್ವಾಂಸ,ಬೆಂಗಳೂರಿನ ಐತಿಹಾಸಿಕ ಸಿಟಿ ಜಾಮೀಯಾ ಮಸೀದಿಯ ಇಮಾಮ್ ಹಾಗೂ ಖತೀಬ್ ರಿಯಾಝುರ್ರಹ್ಮಾನ್ ರಶಾದಿ ರವಿವಾರ ಬೆಳಗ್ಗೆ ಸೌದಿ ಅರೇಬಿಯಾದ ಮಕ್ಕಾದಲ್ಲಿ ನಿಧನ ಹೊಂದಿದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.

ಕಳೆದ ಅಕ್ಟೋಬರ್ ತಿಂಗಳ 30 ರಂದು ವೌಲಾನ ರಶಾದಿಯವರು ಹಜ್ಜ್ ಯಾತ್ರೆಗೆ ತೆರಳಿದ್ದರು. ಕೆಲ ದಿನಗಳಿಂದ ಅವರ ಆರೋಗ್ಯದಲ್ಲಿ ಅಲ್ಪ ಪ್ರಮಾಣದ ವೈಪರೀತ್ಯ ಕಂಡು ಬಂದಿದ್ದ ಪರಿಣಾಮ ರವಿವಾರ ಬೆಳಗ್ಗೆ ನಿಧನ ಹೊಂದಿದರು.ಸಂಜೆ 7:30ಗಂಟೆಗೆ ಮಕ್ಕಾದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಸಿಟಿ ಜಾಮೀಯಾ ಮಸೀದಿಯ ಮೂಲಗಳು ತಿಳಿಸಿವೆ.

ಚಿಕ್ಕಮಗಳೂರಿನಲ್ಲಿ 1952ರಲ್ಲಿ ಜನಿಸಿದ ವೌಲಾನ ರಿಯಾಝುರ್ರಹ್ಮಾನ್ ರಶಾದಿ, 1969ರಲ್ಲಿ ಸಬೀಲುರ್ರಶಾದ್‌ನಿಂದ ಪಾಂಡಿತ್ಯ ಪದವಿ ಪಡೆದರು.1971ರಿಂದ 79ರವರೆಗೆ ಅದೇ ಸಂಸ್ಥೆಯಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದರು.1980ರಲ್ಲಿ ಐತಿಹಾಸಿಕ ಸಿಟಿ ಜಾಮೀಯಾ ಮಸೀದಿಯ ಇಮಾಮ್ ಹಾಗೂ ಖತೀಬ್ ಆಗಿ ನೇಮಕಗೊಂಡರು.1986ರಲ್ಲಿ ಜಾಮೆ‌ಅಲ್ ಊಲೂಮ್ ಎಂಬ ಹೆಸರಲ್ಲಿ ಸಣ್ಣ ಮದ್ರಸವನ್ನು ಸ್ಥಾಪಿಸಿದರು.ಈಗ ಅದು ಜಾಮೆ‌ಅಲ್ ಊಲೂಮ್ ಸಮೂಹ ಶಿಕ್ಷಣ ಸಂಸ್ಥೆಯಾಗಿ ಹೆಮ್ಮರವಾಗಿ ಬೆಳೆದಿದೆ.

ಸಿಟಿ ಜಾಮೀಯಾ ಮಸೀದಿಯನ್ನು ಶಿಕ್ಷಣದ ಕೇಂದ್ರವನ್ನಾಗಿ ಮಾಡಿದ ಕೀರ್ತಿಗೆ ರಿಯಾಝುರ್ರಹ್ಮಾನ್ ರಶಾದಿ ಪಾತ್ರರಾಗಿದ್ದರು.ಜಾಮೆ‌ಅಲ್ ಊಲೂಮ್ ರೆಸಿಡೆನ್ಸಿಯಲ್ ಸ್ಕೂಲ್, ಜಾಮೆ‌ಅಲ್ ಊಲೂಮ್ ಪದವಿ ಪೂರ್ವ ಕಾಲೇಜ್, ಬಿಸಿ‌ಎ, ಟಿಸಿ‌ಎಚ್ ಕಾಲೇಜ್ ಇತ್ಯಾದಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದ ವೌಲಾನರು ಸುದೀರ್ಘ 30ವರ್ಷಗಳ ಕಾಲ ಅದರ ಸಂಸ್ಥಾಪಕ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ರಿಯಾಝುರ್ರಹ್ಮಾನ್ ರಶಾದಿ,ಅವರಿಗಾಗಿ ಧಾರ್ಮಿಕ ಮತ್ತು ಆಧುನಿಕ ಶಿಕ್ಷಣದ ವ್ಯವಸ್ಥೆ ಸಹ ಮಾಡಿದ್ದರು.

ವೌಲಾನ ರಿಯಾಝುರ್ರಹ್ಮಾನ್ ರಶಾದಿಯವರ ‘ಜುಮಾ ಖುತ್ಬಾ’ (ಪ್ರವಚನ)ಗಳು ಅತ್ಯಂತ ಜನಪ್ರಿಯತೆಯನ್ನು ಪಡೆದಿದ್ದವು.ಇಸ್ಲಾಮಿನ ಶೈಕ್ಷಣಿಕ,ಸಾಮಾಜಿಕ,ರಾಜಕೀಯ ಕ್ಷೇತ್ರಗಳಲ್ಲಿ ಇವರ ಕೊಡುಗೆ ಅಪಾರ.ಮಿತಭಾಷಿಕರಾಗಿದ್ದ ವೌಲಾನ ರಶಾದಿ,ಸೌಹಾರ್ದತೆ ಮತ್ತು ಸಾಮರಸ್ಯಕ್ಕೆ ಆದ್ಯತೆ ನೀಡುತ್ತಿದ್ದರು.ಸಮಾಜದ ವಿವಿಧ ಸ್ತರಗಳ ಗಣ್ಯರೊಂದಿಗೆ ಹಾಗೂ ಸಮುದಾಯದ ವಿವಿಧ ಸಂಘಟನೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ರಾಜ್ಯಾಧ್ಯಕ್ಷರಾಗಿದ್ದ ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ.

ಮೃತರು ಮೂವರು ಹೆಣ್ಣು ಮಕ್ಕಳು,ಒಂದು ಗಂಡು ಮಗು ಸೇರಿದಂತೆ ಅಪಾರ ಶಿಷ್ಯವೃಂದ ಮತ್ತು ಅಭಿಮಾನಿ ಬಳಗವನ್ನು ಆಗಲಿದ್ದಾರೆ. ವೌಲಾನ ರಶಾದಿಯವರ ನಿಧನಕ್ಕೆ ಸಮುದಾಯದ ಧಾರ್ಮಿಕ ಹಾಗೂ ರಾಜಕೀಯ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಾ.ಭಾ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2011-11-20

Tell a Friend

ಪ್ರತಿಸ್ಪಂದನ
k a hameed, makkah
2011-11-21
ಇನ್ನಾಲಿಲ್ಲಹಿ ವ ಇನ್ನ ಇಲೈಹಿ ರಾಜಿಹೂನ್ .ಅಲ್ಲಾಹು ಮಗ್ಪಿರತ್ ನೀಡಲಿ .ಆಮೀನ್ . ಮೌಲಾನ ರಷಾದಿ ಯವರಿಗೆ ಮಕ್ಕಾ ಪಟ್ಟಣದ ಹ್ರದಯ ಬಾಗದ ದಫನ ಭೂಮಿ ಜನ್ನತ್ ಅಲ್ ಮಾಲದಲ್ಲಿ ಸ್ತಳ ಸಿಕ್ಕಿರುವುದು ವಿಶೇಷ ಎಂದೇ ಹೇಳಬೇಕು .(ಸತ್ಯ ವಿಶ್ವಾಸಿಗಳ ಮಾತೆ !! ಪ್ರವಾದಿಯವರ ಪ್ರಿಯ ಸಹದರ್ಮಿನಿ ಖತಿಜತ್ ಕುಬ್ರ (ಬಿಂತ್ ಕುವೈಲಿದ್ ) ಹಾಗೂ ಅಸಂಖ್ಯಾತ ಪ್ರವಾದಿ ಅನುಯಾಯಿಗಳು (ಸಹಾಬ ) ಅಂತ್ಯವಿಶ್ರಾಂತಿ ಹೊಂದಿರುವ ಈ ಪುಣ್ಯ ಭೂಮಿಯಲ್ಲಿ ಮೌಲಾನಾ ರವರು ಸೇರಿಕೊಂಡರು . ಮೌಲಾನಾ ರವರ janaaza ಕ್ಕೆ ಹೆಗಲು ಕೊಡುವ ಬಾಗ್ಯ ನನಗೂ ಲಬಿಸಿತು .....
mushtaq.m.i, mangalore
2011-11-20
ಇನ್ನಲಿಲ್ಲಹಿ ವಿನ್ನ ಎಲಯ್ಯಿ ರಜೀವುನ್
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸೌದಿ ಅರೇಬಿಯ]

» Safety Alert : 3yrs old child kills himself by mistake!
»ಸೌದಿ ಅರೇಬಿಯಾ: ಮಹಿಳೆಯರಿಗಾಗಿಯೇ ಪ್ರತ್ಯೇಕ ನಗರ
»ಸೌದಿಯಲ್ಲಿ ಧೂಮಪಾನಿ ಗಂಡಂದಿರಿಗೆ ಪತ್ನಿ ವಿಚ್ಚೇಧನ ಕೊಡಬಹುದು
»ಸೌದಿಯಲ್ಲಿ 8 ವರ್ಷ ಮೀರಿದ ಅನಿವಾಸಿ ವಿದ್ಯಾರ್ಥಿಗಳಿಗೆ ಶಾಲಾ ಪ್ರವೇಶ ನಿಷೇಧ
»12 men charred to death in Saudi road crash
»ಕುವೈತ್ ವಿಮಾನಕ್ಕೆ ಆಗಸದಲ್ಲಿ ಇಂಜಿನ್ ತೊಂದರೆ: ಯಶಸ್ವಿ ನೆಲಸ್ಪರ್ಶ; ಭಾರಿ ಅನಾಹುತದಿಂದ ಪ್ರಯಾಣಿಕರು ಪಾರು
»ಶೃಂಗಾರ-ಸುಗಂಧ ದ್ರವ್ಯ ಮಾರಾಟ ಅಂಗಡಿಯಲ್ಲಿ ಮಹಿಳೆಯರಿಗೆ ಮಾತ್ರ ಉದ್ಯೋಗ !
»ಅನಿವಾಸಿ ಭಾರತೀಯನ ಕೊಲೆ ಹಿನ್ನಲೆ ಸೇರಿದಂತೆ ಸೌದಿಯಲ್ಲಿ ಐವರಿಗೆ ಶಿರಚ್ಚೇಧ ಶಿಕ್ಷೆ
»ಹಳಿತಪ್ಪಿದ ಸೌದಿ ಪ್ರಯಾಣಿಕರ ರೈಲು
»ಸೌದಿ ರಾಜಕುಮಾರ ನಯೆಫ್ ಬಿನ್ ಅಬ್ದುಲ್ ಅಜೀಜ್ ನಿಧನ:ಶೋಕಾಚರಣೆಗೆ ಸರಕಾರಿ ರಜೆ ಘೋಷಣೆ.
»"ಸೌದಿ ಮಹಿಳೆಯರ ವಾಹನ ಚಾಲನೆ ನಿಷೇಧ ತೆರೆವುಗೊಳಿಸಿ":ಸೌದಿ ಮಹಿಳೆಯಿಂದ ದೊರೆಗೆ ಮನವಿ
»ಸೌದಿಯಲ್ಲಿ ಇಂಡಿಯನ್ ಫ್ರೆಟರ್ನಿಟಿ ಫೋರಂನಿಂದ ಆರೋಗ್ಯ ಶಿಬಿರ
»ಸೌದಿಯಲ್ಲಿ ಕ್ಷೀಣಿಸುತ್ತಿರುವ ಅನಿವಾಸಿಗಳ ಉದ್ಯೋಗ ಭದ್ರತೆ ಭವಿಷ್ಯ
»ರಿಯಾದ್‌ನಿಂದ ಮುಂಬೈಗೆ ಆಗಮಿಸಿದ ಜೆಟ್ ಏರ್ವೇಸ್‌ನಲ್ಲಿ ಬೆಂಕಿ: ಪ್ರಯಾಣಿಕರು ಪಾರು
»ಪತಿಯ 2ನೇ ಮದುವೆಗೆ ಒಪ್ಪಿದ ಪತ್ನಿಗೆ 1 ಕೇಜಿ ಚಿನ್ನ ಉಡುಗೊರೆ !
»ಸ್ಪೊನ್ಸರ್ ಶಿಪ್ ಪದ್ದತಿಯಿಂದ ಹಿಂದೆ ಸರಿದ ಸೌದಿ ಸರಕಾರ
»28 ಸಾವಿರ ಅನಿವಾಸಿ ಚಾಲಕರ ಬದಲಿಗೆ ಸೌದಿ ಯುವಕರು
»ಅಸ್ಥಿಪಂಜರವಾಗುವ ವಿಚಿತ್ರ ಖಾಯಿಲೆಗೆ ತುತ್ತಾದ ಸೌದಿ ಯುವಕ
»ಸೌದಿಯಲ್ಲಿ ಅನ್ಯ ಭಾಷಾ ದಿನಾಂಕ ಬಳಕೆ ನಿಷೇಧ !
»ಸೌದಿ ಅರೇಬಿಯಾದಲ್ಲಿ ಏಳು ಭಾರತೀಯ ನರ್ಸ್‌ಗಳು ಪಾರು
»ಡಿಕೆಎಸ್‌ಸಿ ಜುಬೈಲ್ ಘಟಕದ ವಾರ್ಷಿಕ ಮಹಾಸಭೆ
»ಸಲಹೆಗಾರನನ್ನು ಕಿತ್ತು ಹಾಕಿದ ಸೌದಿ ದೊರೆ!;
»ಕುರಿ ಕಾಯಲೆಂದು ಸೌದಿಗೆ ಹೋದಾತ 18 ವರ್ಷಗಳ ಬಳಿಕ ಭಾರತಕ್ಕೆ ವಾಪಸ್!
»Non-Muslim Filipino expats in Saudi Arabia told to be cautious
»ಗಲ್ಫ್‌ನಲ್ಲಿನ ಚರ್ಚ್‌ಗಳನ್ನು ಧ್ವಂಸ ಮಾಡಿ: ಸೌದಿ ಮೌಲ್ವಿ ಫತ್ವಾ!; ಕ್ರಿಶ್ಚಿಯನ್ ಬಿಷಪ್ಸ್ ತೀವ್ರ ಆಕ್ರೋಶ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri