ಸೋಮವಾರ, 09-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಬಂಟರ ಸಂಘ ಕುವೈಟ್-ಯಕ್ಷಗಾನ ವೈಭವ ಹಾಗೂ ವೈವಿಧ್ಯಮಯ ಕಾರ್ಯಕ್ರಮ ’ಬಂಟಾಯನ-2011’

ಕುವೈಟ್: ಬಂಟರ ಸಂಘ, ಕುವೈಟ್‍ನ ಬಹು ನಿರೀಕ್ಷೆಯ, ವೈವಿಧ್ಯಮಯ, ಸಾಂಸ್ಕೃತಿಕ ಕಾರ್ಯಕ್ರಮ, ವಾರ್ಷಿಕ ಉತ್ಸವ ’ಬಂಟಾಯನ-2011’ ಅಕ್ಟೋಬರ್ 21, ಶುಕ್ರವಾರ 2011 ರಂದು, ಮಂಗಾಫ್ ಕೇಂಬ್ರಿಡ್ಜ್  ಸ್ಕೂಲ್‍ನ ಸಭಾಂಗಣದಲ್ಲಿ, ಕಿಕ್ಕಿರಿದ ಯಕ್ಷಗಾನ ಪ್ರೇಮಿಗಳ ಸಮ್ಮುಖದಲ್ಲಿ,  ಭವ್ಯ ದಿವ್ಯ ರಂಗಮಂಟಪ ದಲ್ಲಿ, ಕರಾವಳಿಯ ಗಂಡುಮೆಟ್ಟಿನ ಕಲೆ, ಕೊಲ್ಲಿ ರಾಷ್ಟ್ರ ಕುವೈಟ್‍ನಲ್ಲಿ, ಚೆಂಡೆಯ ನಾದ ದಶದಿಕ್ಕುಗಳಿಂದ ಪ್ರತಿಧ್ವನಿಸುವುದರೊಂದಿಗೆ, ವರ್ಣರಂಜಿತ ಯಕ್ಷಲೋಕವನ್ನೆ ಸೃಷ್ಟಿಸಿತು.

ಸಾರ್ವಜನಿಕ ಸಂಪರ್ಕ ಸಮಿತಿ ಅಥವಾ ಸ್ವಾಗತ ಸಮಿತಿಯವರಿಂದ, ತಳಿರು-ತೋರಣ, ರಂಗೋಲಿ, ದೀಪಗಳಿಂದ ಅತಿಥಿಗಳಿಗೆ ಅದ್ಭುತವಾದ ಸ್ವಾಗತ ನೆಡೆಯಿತು. ಪ್ರಾರ್ಥನಾ ಗೀತೆ ಹಾಗೂ ವಿಘ್ನ ನಿವಾರಕ ಶ್ರೀ ಗಣೇಶನ ಸ್ತುತಿಯ ನೃತ್ಯದ ನಂತರ, ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯ ಅತಿಥಿಗಳಿಂದ  ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಮುಖ್ಯ ಅತಿಥಿಗಳಾಗಿ ಸಾಹಿತಿ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಮಾಜಿ ಸಚಿವ-ಶಾಸಕ ಶ್ರೀ ರಮಾನಾಥ ರೈ, ಉದ್ಯೋಗಪತಿ ಪ್ರಶಸ್ತಿ-2010 ವಿಜೇತ ಶ್ರೀ ಶಶಿಕಿರಣ್ ಶೆಟ್ಟಿ, ಕಟೀಲು ಕಾಲೇಜಿನ ಪ್ರಾಂಶುಪಾಲ-ಕಲಾವಿದ ಶ್ರೀ ಬಾಲಕೃಷ್ಣ ಶೆಟ್ಟಿ ಆಗಮಿಸಿದ್ದರು.

ಉಪಾಧ್ಯಕ್ಷೆ, ಡಾ| ಪ್ರೀತಿ ಪಿ. ಶೆಟ್ಟಿ ನೆರೆದ ಸಭೆಯನ್ನು ಸ್ವಾಗತಿಸಿದರು. ನಂತರ ನೆಡೆದ ಸಭಾ ಕಾರ್ಯಕ್ರಮದಲ್ಲಿ, ಅಧ್ಯಕ್ಷರಾದ ಸುಧಾಕರ್ ಶೆಟ್ಟಿಯವರು ಮುಖ್ಯ ಅತಿಥಿಗಳನ್ನು ಮತ್ತು ಕಲಾವಿದರನ್ನು ಸ್ವಾಗತಿಸಿದ ನಂತರ ’ಬಂಟಾಯನ’ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ವಿವರಿಸಿದರು. ಮುಖ್ಯ ಅತಿಥಿಗಳನ್ನು ಮತ್ತು ಯಕ್ಷಗಾನ ಕಲಾವಿದ ’ರಾಜ್ಯ ಪ್ರಶಸ್ತಿ’ ವಿಜೇತ ಶ್ರೀ ಅರುವ ಕೊರಗಪ್ಪ ಶೆಟ್ಟಿಯವರನ್ನು ಸಂಘದ ಪರವಾಗಿ ಶಾಲು, ಫಲಪುಷ್ಪ, ತಾಂಬೂಲ ಮತ್ತು ನೆನಪಿನ ಫಲಕದೊಂದಿಗೆ ಸನ್ಮಾನಿಸಲಾಯಿತು

. ಸ್ಥಳೀಯ ಅತಿಥಿಗಳಾದ ಶ್ರೀ ಹುಸೈನ್ ಅಲ್-ಶಾಟ್ಟಿ, ಶ್ರೀ ಅಯೇದ್ ಅಲ್-ದಾಜನಿ ಮತ್ತು ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ ಯು.ಎ.ಇ. ಎಕ್ಸ್‌ಚೇಂಜ್‍ನ ಸ್ಥಾನೀಯ ಪ್ರಮುಖ ಶ್ರೀ ಪರ್ಸ್ಲಿ ವರ್ಕಿ ಯವರನ್ನು ಕೂಡ ನೆನಪಿನ ಫಲಕ ನೀಡಿ ಸನ್ಮಾನಿಸಲಾಯಿತು. ಶ್ರೀ ಲಕ್ಷ್ಮೀನಾರಾಯಣ ಆಳ್ವರು ತಮ್ಮ ಭಾಷಣದಲ್ಲಿ ಬಂಟ ಸಂಸ್ಕೃತಿಯ ಹಿರಿಮೆ-ಗರಿಮೆ ಗಳನ್ನು ಕೊಂಡಾಡಿದರು. ಶ್ರೀ ಭಾಲಕೃಷ್ಣ ಶೆಟ್ಟಿಯವರು ತಮ್ಮ ವಾಕ್ಚಾರ್ತುಯದಿಂದ ನೆರೆದ ಸಭೆಯ ಮನರಂಜಿಸಿದರು. ಶ್ರೀ ಶಶಿಕಿರಣ್ ಶೆಟ್ಟಿ ಮತ್ತು ಶ್ರೀ ರಮಾನಾಥ್ ರೈಯವರು ಕೂಡ ತಮ್ಮ ಅನುಭವಗಳನ್ನು ವ್ಯಕ್ತಪಡಿಸುತ್ತಾ, ಕುವೈಟ್‍ನಲ್ಲಿ ಬಂಟರ ಸಂಘದ ಸ್ಥಾಪನೆ ಮತ್ತು ಕಾರ್ಯಕ್ರಮಗಳನ್ನು ಶ್ಲಾಘಿಸಿದರು.   

ಸಂಘದ ಕಲಾವಿದರು ಬಂಟರ ಗುತ್ತಿನ ಮನೆ-ಮನೆತನ, ಯಜಮಾನಿಕೆ, ದೈವ, ಭೂತ, ದೇವರ ಮೇಲಿನ ನಂಬಿಕೆ, ಹಬ್ಬ-ಹರಿದಿನಗಳ ಆಚರಣೆ, ಕೂಡ್-ಕಟ್ಟ್, ಸಂಪ್ರದಾಯಗಳನ್ನು ಪ್ರತಿಬಿಂಬಿಸುವ, ’ಬಂಟಾಯನ’ ವನ್ನು ಗಣೇಶ ಚತುರ್ಥಿ, ನಾಗರಪಂಚಮಿ, ಕೃಷ್ಣಜನ್ಮಾಷ್ಠಮಿ ಗಳನ್ನು ನೃತ್ಯದ ಮೂಲಕ, ಭಜನೆ, ಭೂತದ ಕೋಲ, ಗೊಂಬೆ ಕುಣಿತ, ಹುಲಿವೇಷ ಕುಣಿತ, ದಸರಾ ಹಾಗೂ ದೀಪಾವಳಿಯ ಆಚರಣೆ ಮೂಲಕ ಪ್ರಸ್ತುತಪಡಿಸಿದರು. ಪ್ರಕಾಶ್ ಶೆಟ್ಟಿ ತಮ್ಮ ಇಂಪಾದ ಸ್ವರದಿಂದ ತುಳುಗೀತೆ ಹಾಡಿ ಕೇಳುಗರಿಗೆ ಸಂತೋಷ ಪಡಿಸಿದರು.

ನಂತರ  ತೆರೆಸರಿದು ಪ್ರಾರಂಭವಾದುದೆ, ಬಹುಜನರ ಅಪೇಕ್ಷೆಯ, ಬಹು ನಿರೀಕ್ಷೆಯ ’ದೇವು ಪೂಂಜ ಪ್ರತಾಪ’ ಅರಬಿಗಳ ನಾಡಿನಲ್ಲಿ, ಅಬ್ಬರದ ಚೆಂಡೆಯ ಹೊಡೆತ, ಮದ್ದಲೆಯ ‍ನುಡಿತ, ತಾಳದ ಬಡಿತ, ಕಂಚಿನ ಕಂಠದ ಭಾಗವತಿಕೆ, ನೃತ್ಯ, ಮಾತುಗಾರಿಕೆ, ಹಾಸ್ಯಗಾರಿಕೆ, ವೇಷ-ಭೂಷಣ, ಪೋಷಾಕಿನಿಂದ ಅತ್ಯದ್ಭುತವಾದ ವರ್ಣರಂಜಿತ ಯಕ್ಷಲೋಕವನ್ನೆ ಸೃಷ್ಟಿಸಿತು. ಶ್ರೀ ಕಟೀಲು ಮೇಳದ ಪ್ರಸಿದ್ಧ ಭಾಗವತರಾದ ’ಗಾನ ಮಂದಾರ’ ಪಟ್ಲ ಸತೀಶ್ ಶೆಟ್ಟಿ, ’ರಾಜ್ಯಪ್ರಶಸ್ತಿ’ ವಿಜೇತ ಅರುವ ಕೊರಗಪ್ಪ ಶೆಟ್ಟಿ, ’ಸರಸ್ಪತಿ ವರಪುತ್ರ’ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಉಮೇಶ್ ಶೆಟ್ಟಿ ಉಬರಡ್ಕ, ಗಂಡಾಗಿ ಹುಟ್ಟಿ, ಮಾತು, ನಟನೆ, ನೃತ್ಯದಲ್ಲಿ ಹೆಣ್ಣನ್ನೆ ನಾಚಿಸುವ, ಸ್ತ್ರೀ ವೇಷದಾರಿ ದೀಪಕ್ ಪೇಜಾವರ, ಹಾಸ್ಯದ ನಗೆ ಹೊನಲನ್ನೆ ಹರಿಸುವ ಪ್ರಜ್ವಲ್‍ಕುಮಾರ್, ಗುರುಪ್ರಸಾದ್ ಬೊಲಿಂಜಡ್ಕ, ಪ್ರಶಾಂತ್ ಶೆಟ್ಟಿ ವಗೆನಾಡು ಜೊತೆಜೊತೆಗೆ ಬಂಟರ ಸಂಘದ ಹಲವು ಸದಸ್ಯರು ಕೂಡ ವೇಷಕಟ್ಟಿ ತಾಳಕ್ಕೆ ಹೆಜ್ಜೆಹಾಕಿ ಕುಣಿದು ತಮ್ಮ ಕಲಾಗಾರಿಕೆಯನ್ನು ಮೆರೆದರು. ಸಭಾಂಗಣದಲ್ಲಿ ಸಮಯಕ್ಕೆ ಸರಿಯಾಗಿ ಬಂದು ಸೇರಿದ್ದ ಯಕ್ಷಗಾನ ಪ್ರೇಮಿಗಳು ಏಳು ಗಂಟೆಗಳ ಕಾಲ ಆಸೀನರಾಗಿದ್ದು ಕೊನೆಯತನಕ ನಡೆದ ಯಕ್ಷವೈಭವವನ್ನು ಅತೀವ ಅನಂದದಿಂದ ಆಸ್ವಾಧಿಸಿದರು. ದಕ್ಷಿಣಕನ್ನಡ ಶೈಲಿಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಸಾಂಸ್ಕೃತಿಕ ಕಾರ್ಯದರ್ಶಿ ಯದುನಾಥ್ ಆಳ್ವರಿಂದ ಕಾರ್ಯಕ್ರಮ ಸಂಯೋಜನೆ, ಸ್ವರ್ಣ ಶೆಟ್ಟಿ ಮತ್ತು ಮನೋಜ್ ಶೆಟ್ಟಿ ಯವರಿಂದ ಕಾರ್ಯಕ್ರಮ ನಿರೂಪಣೆ ನೆಡೆಯಿತು. ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಹೆಗ್ಡೆಯವರ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವರದಿ: ಸುರೇಶ್ ಶ್ಯಾಮ್‍ರಾವ್ ನೇರಂಬಳ್ಳಿ, ಕುವೈಟ್.
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2011-11-02

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

»ತುಳುಕೂಟ ಕುವೈಟ್ ಶ್ರೀ ಎಸ್. ಎಮ್. ಫರೂಕ್‌ರಿಗೆ ಪ್ರೀತಿಪೂರ್ವಕ ಬೀಳ್ಕೊಡುಗೆ
»ತುಳುಕೂಟ ಕುವೈಟ್ ಉಚಿತ ವೈದ್ಯಕೀಯ ತಪಾಸಣಾ ಮತ್ತು ಸಲಹಾ ಶಿಬಿರ
»ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ದಕ್ಷಿಣ ಕನ್ನಡ ಘಟಕ ವತಿಯಿಂದ ಎಸ್ ಎಂ ಫಾರೂಕ್ ರವರಿಗೆ ವಿದಾಯ ಕೂಟ.
»ಜಿ.ಎಸ್.ಬಿ.ಸಭಾ ಕುವೈತ್ ವತಿಯಿಂದ ಶ್ರೀ ಕೃಷ್ಣ ಜನ್ಮಾಸ್ತಮಿ ಆಚರಣೆ .
»ಕುವೈತ್ನಲ್ಲಿ ಮೊದಲ ಬಾರಿಗೆ-" ವಿ’ಬೆಳ್ಮಣ್ ಕ್ರಿಯೇಷನ್ಸ್ ನ-ವಿ’ಶೇಷ್ "
»ಕುವೈತ್: ಮಂಗಳೂರಿನ ಇಬ್ಬರು ತರುಣರ ದಾರುಣ ಮೃತ್ಯು
»ತುಳುಕೂಟ ಕುವೈಟ್: ಶ್ರೀ ವಿವೇಕ್ ರಾವ್‌ರಿಗೆ ಮನ್ನಣೆಯ ಬೀಳ್ಕೊಡುಗೆ
»ರಾಹುಲ್ ಗಾಂಧಿ ಕುವೈತ್ ದೊರೆ ಭೇಟಿ
»ಇನ್ನು ಮುಂದೆ ಆನ್ ಲೈನ್ ವಿಸಾ-ಐಡೆಂಟಿಟಿ ಕಾರ್ಡ್- ಡ್ರೈವಿಂಗ್ ಲೈಸೆನ್ಸ್
»ತುಳುಕೂಟ ಕುವೈಟ್ - ಮನೋರಂಜನೀಯ ರಸಮಂಜರಿ 2012
»ಕುವೈತ್ ವಿಮಾನ ನಿಲ್ದಾಣ ಅಭಿವೃದ್ದಿಗೆ $6 ಬಿಲಿಯನ್
»ಕುವೈತ್ ಕನ್ನಡ ಕೂಟದಿಂದ ಮರಳ ಮಲ್ಲಿಗೆ ದಿನಾಚರಣೆ
»ಇಸ್ಲಾಮಿಕ್ ಕಾನೂನು ತಿದ್ದುಪಡಿ ಪ್ರಸ್ತಾವನೆ ತಡೆಹಿಡಿದ ಕುವೈತ್ ಸರಕಾರ
»ಮತ್ತೆ ಏರ‍್ ಇಂಡಿಯಾ ಪೈಲೆಟ್ ಮುಷ್ಕರ : ಕುವೈತ್ ವಿಮಾನ ಸಂಚಾರ ಮೊಟಕು !
»ಕುವೈಟ್‌ನಲ್ಲಿ ಅಪಘಾತ: ಉಡುಪಿಯ ಪೌಲ್‌ ಸಂತೋಷ್‌ ಸಾವು
»ಅದ್ದೂರಿಯಿಂದ ಜರುಗಿದ ಕುವೈಟ್ ಇಂಡಿಯಾ ಫೆಟರ್ನಿಟಿ ಫೋರಂನ ಆರೋಗ್ಯ ಜಾಗ್ರತಿ ವಿಚಾರಗೋಷ್ಠಿ.
»Islamists plot against Gulf: Dubai police chief
»ತುಳುಕೂಟ ಕುವೈತ್-’ ಕುಟುಂಬ ಹೊರಾಂಗಣ ವಿಹಾರ’
»ಕೆ ಕೆ ಎಂ ಎ ವತಿಯಿಂದ ಮಂಗಳೂರಿಗೆ ಹತ್ತನೇ ಕಿಡ್ನಿ ಡಯಾಲಿಸಿಸ್ ಕೇಂದ್ರ (KDC) ಘೋಷನೆ
»ಕುವೈಟ್ ಕನ್ನಡ ಕೂಟದಿಂದ ದಾಸ ಜಯಂತಿ ಆಚರಣೆ
»ಪರಿಚಾರಿಕೆಯನ್ನು ರಸ್ತೆಗೆ ಬಿಸಾಡಿ..ಕಾರು ಓಡಿಸಿ ಕೊಂದ ದಂಪತಿಗೆ ಮರಣ ಶಿಕ್ಷೆ
»ಫೆ.17ರಂದು ಕುವೈತ್‌ನಲ್ಲಿ ದಾಸೋತ್ಸವ 2012
»ತುಳುಕೂಟದ ‘ತುಳುಸಿರಿ’ : ಕುವೈಟ್‌ನಲ್ಲಿ ತುಳು ಶಾಲೆ ಆರಂಭ
»ದಾಸ ಜಯಂತಿಯಂದು ಕುವೈತ್ ಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಶಂಕರ್ ಶ್ಯಾನುಭಾಗ್ ರಿಂದ ಸಂಕೀರ್ತನ ಕಾರ್ಯಕ್ರಮ
»ತುಳುಕೂಟ ಕುವೈತ್ ವತಿಯಿಂದ ಎ.ಕೆ ರವೀಂದ್ರರಿಗೆ ಸನ್ಮಾನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri