ಸೋಮವಾರ, 09-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಒಮಾನ್ ಎಂಬ ಒಗಟು; ಪ್ರೊ ನಿರಂಜನ ವಾನಳ್ಳಿಗೆ ಕಾಮತ್ ಪ್ರಶಸ್ತಿ ಪ್ರದಾನ

ಹೊನ್ನಾವರ,ಸೆ.25:ಎರಡೂ ಜಿಲ್ಲೆಗಳು ಒಂದೇ ಸಮುದ್ರದ ಬದಿಯಲ್ಲೇ ಇದ್ದರೂ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಂತಃಸತ್ವ ಮತ್ತು ವ್ಯಕ್ತಿತ್ವ ಬೇರೆಬೇರೆ ತೆರನಾದದ್ದು.ಕರಾವಳಿ ತೀರದ ಜಿಲ್ಲೆಗಳೆಂಬ ಮಾತ್ರಕ್ಕೆ ಎರಡನ್ನೂ ಒಂದೇ ಕನ್ನಡಕದಲ್ಲಿ ನೋಡುವ ದೃಷ್ಟಿದೋಷ ಹಲವರಲ್ಲಿದೆ ಎಂದು "ಮುಂಗಾರು ಮಳೆ"ಕವಿ ಜಯಂತ ಕಾಯ್ಕಿಣಿ ಇಂದು ಇಲ್ಲಿ ವಿಷಾದ ವ್ಯಕ್ತಪಡಿಸಿದರು.

ವೃತ್ತಿ ಕೌಶಲ್ಯಕ್ಕೆ,ವ್ಯಾಪಾರಕ್ಕೆ,ಸೃಜನಶೀಲತೆಯನ್ನು ಬಿಜಿನೆಸ್ಸಿಗೆ ಕನೆಕ್ಟ್ ಮಾಡುವುದಕ್ಕೆ, ವಿಸಿಟಿಂಗ್ ಕಾರ್ಡ್ ಮತ್ತು ಲೆಟರ್ ಹೆಡ್ ಹಾಗೂ ಬಯೋಡೇಟಾ ಸಂಸ್ಕೃತಿಯಿಂದ ಹೊರತಾದ ಉತ್ತರ ಕನ್ನಡ ಮಣ್ಣಿನ ಫಲಾಪೇಕ್ಷೆರಹಿತ ಗುಣ ಕುರಿತಂತೆ ಅವರು ಸಾದ್ಯಂತ ಮಾತನಾಡಿದರು.ವ್ಯಕ್ತಿ,ಬದುಕು,ಸಾಹಿತ್ಯದ ಧೋರಣೆಗಳನ್ನು ಉದಾಹರಣೆ ಸಮೇತ ಹೆಣೆಯುತ್ತ ಕಾಯ್ಕಿಣಿ ಸ್ವಾರಸ್ಯಪೂರ್ಣ ಭಾಷಣಕ್ಕೆ ಧುಮುಕಿದರು.

ಬರವಣಿಗೆ,ಸಾಹಿತ್ಯ ಸೃಷ್ಟಿಯ ಉದ್ದೇಶಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟ ಕಾಯ್ಕಿಣಿಯವರ ಭಾನುವಾರ ಮಧ್ಯಾನ್ಹದ ಉಪನ್ಯಾಸದ ವೇಳೆ,ದಿನಕರ ದೇಸಾಯಿ,ಗೌರೀಶ ಕಾಯ್ಕಿಣಿ, ತೇಜಸ್ವಿ, ಬಿಜಿ ಎಲ್ ಸ್ವಾಮಿ,ಶಿವರಾಮ ಕಾರಂತ,ಪಾಂಡೇಶ್ವರ ಮತ್ತಿತರರು ಇಣುಕಿ ನಡೆದರು.ಇವರೆಲ್ಲ ಒಂದೇ ಶಾಲೆಯ ವಿದ್ಯಾರ್ಥಿಗಳು ಎಂದು ಬಣ್ಣಿಸಿದ ಜಯಂತ,ಸಾಹಿತ್ಯ,ಸಂಗೀತ ಮತ್ತು ಕಲೆಯ ಉದ್ದೇಶ ಅಂತಿಮ ನೆಲೆಯಲ್ಲಿ ನಿರಸನವೇ ಆಗಿರುತ್ತದೆ ಎಂಬ ವಾದ ಮಂಡಿಸಿದರು.

ಲೇಖಕ, ಪರಿಸರಪ್ರಿಯ, ಛಾಯಾಚಿತ್ರಗ್ರಾಹಕ ಮತ್ತಿನ್ನೇನೇನೋ ಆಗಿದ್ದು ಉತ್ತರ ಕನ್ನಡ ಜಿಲ್ಲೆಯ ಆಗಿಹೋದ ಮಹಾನುಭಾವರ ಸಾಲಿಗೆ ಸೇರ್ಪಡೆಯಾದವರು ದಿವಂಗತ ಡಾ.ಕೃಷ್ಣಾನಂದ ಕಾಮತ್.ಅವರ ಹುಟ್ಟು ಹಬ್ಬ (ಸೆ.29)ನಿಮಿತ್ತ ಭಾನುವಾರ ಇಲ್ಲಿ ಒಂದು ಭರಪೂರ ಸಾಂಸ್ಕೃತಿಕ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು.

ಕೃಷ್ಣಾನಂದ ಕಾಮತ್ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ, ದತ್ತಿ ಉಪನ್ಯಾಸ, ಸನ್ಮಾನ ಹಾಗೂ ಕಾಮತರ ಸ್ಮರಣೆ ಇತ್ತು. ಪ್ರತಿಷ್ಠಾನದ ಆಧಾರ ಸ್ತಂಭಗಳಾಗಿರುವ ಕಾಮತರ ಪತ್ನಿ,ಬೆಂಗಳೂರು ನಿವಾಸಿ ಜ್ಯೋತ್ಸ್ನಾ ಕಾಮತ್ ;ಮಗ ಅಲಬಾಮಾ ನಿವಾಸಿ ವಿಕಾಸ್ ಕಾಮತ್ ಮತ್ತು ಕೃಷ್ಣಾನಂದರ ತಮ್ಮ ಹೊನ್ನಾವರ ನಿವಾಸಿ ತುಳಸಿದಾಸ್ ಕಾಮತ್ ಕಾರ್ಯಕ್ರಮ ರೂಪಿಸಿದ್ದರು.ಕಾರ್ಯಕ್ರಮ ಲಕ್ಷ್ಮೀನಾರಾಯಣ ನಗರದ ಕೃಷ್ಣಕಲ್ಪ ಸಭಾಂಗಣದಲ್ಲಿ ವ್ಯವಸ್ಥೆಯಾಗಿತ್ತು.

ಕೃಷ್ಣಾನಂದ ಕಾಮತ್ ದತ್ತಿ ಉಪನ್ಯಾಸ (ವಿಷಯ;ವಿಜ್ಞಾನ ತಂತ್ರಜ್ಞಾನ ಮತ್ತು ಪರಿಸರ ) ನೀಡಿದವರು ಕಾಮತರನ್ನು ಭಾಳ ಹಚ್ಚಿಕೊಂಡಿದ್ದ ಲೇಖಕಿ ಮತ್ತು ವಿಜ್ಞಾನಿ ನೇಮಿಚಂದ್ರ.HAL ಕಾರ್ಖಾನೆಯಲ್ಲಿ ಅವರು ವಿಜ್ಞಾನಿ.ಕಾರ್ಯಭಾರ ನಿಮಿತ್ತ ಅವರು ಇಸ್ರೇಲಿಗೆ ಪ್ರಯಾಣ ಬೆಳೆಸಿದುದರಿಂದ ಅವರ ಪರವಾಗಿ ಹೃದ್ಗತ ಉಪನ್ಯಾಸ ವಾಚಿಸಿದವರು ಡಾ.ಎಚ್.ಎಸ್ ಅನುಪಮ.ನಂತರ ಲೇಖನಗಳ ಸಂಗ್ರಹ (ಪರಿಸರ ಮತ್ತು ಅಭಿವೃದ್ಧಿ)ಕೃತಿ ಬಿಡುಗಡೆ ಮಾಡಿದವರು ಮನೋಹರ ಗ್ರಂಥಮಾಲಾದ ಜ್ಯೂನಿಯರ್ ಜಡಭರತ ಡಾ.ರಮಾಕಾಂತ ಜೋಷಿ.

ಅತ್ಯುತ್ತಮ ಪ್ರವಾಸ ಕಥನ ಕೃತಿ ಪ್ರಶಸ್ತಿಗೆ ಭಾಜನರಾದವರು ಪತ್ರಕರ್ತ,ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಪಾಠಮಾಡುವ ಪ್ರೊ.ನಿರಂಜನ ವಾನಳ್ಳಿ.ಇವರೂ ಉತ್ತರ ಕನ್ನಡ ಜಿಲ್ಲೆಯವರೇ.ನಿರಂಜನ ಅವರು 28ತಿಂಗಳ ಕಾಲ ಒಮಾನ್ ಪ್ರವಾಸ ಮಾಡಿ ಹೊರತಂದ "ಒಮಾನ್ ಎಂಬ ಒಗಟು" ಕೃತಿಗೆ ಕಾಮತ್ ಪ್ರತಿಷ್ಠಾನ 25 ಸಾವಿರ ರೂ. ನಗದು ಬಹುಮಾನ ಸಂದಿತು.

ವಾನಳ್ಳಿ ಅವರನ್ನು ಅವರ ತಂದೆ ತಾಯಿ ಸಮ್ಮುಖದಲ್ಲಿ ಶಾಲುಹೊದಿಸಿ ಸನ್ಮಾನಿಸಿದ್ದು ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿತು.ಬಹುಮಾನಿತ ಕೃತಿ ಆಯ್ಕೆ ಮಾಡಿದವರು ಪ್ರತಿಷ್ಠಾನ ನೇಮಿಸಿದ್ದ ಪ್ರಶಸ್ತಿ ಸಮಿತಿ. ಸಮಿತಿಯ ಮುಖ್ಯಸ್ಥರು ಕಥೆಗಾರ ಶ್ರೀಧರ ಬಳಗಾರ.

ಪ್ರತಿಷ್ಠಾನದ ಧ್ಯೇಯೋದ್ದೇಶ ಕುರಿತು ಸವಿಸ್ತಾರವಾಗಿ ಮಾತನಾಡಿದವರು ಜ್ಯೋತ್ಸ್ನಾ ಕಾಮತ್.ತಮ್ಮ ಪತಿ ಪ್ರಣೀತ ಆದರ್ಶಗಳನ್ನು ಜನಮನಕ್ಕೆ ತಲುಪಿಸುವ ಪ್ರೀತಿ ಮತ್ತು ಶ್ರಮ ವ್ಯರ್ಥವಾಗುವುದಿಲ್ಲ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.ಕೃಷ್ಣಾನಂದ ಕಾಮತರಿಗೆ ಇದ್ದ ಒಲವುಗಳು ಎರಡು. ಒಂದು ಮನುಷ್ಯ ಪ್ರೀತಿ ಇನ್ನೊಂದು ಪರಿಸರ ಪ್ರೇಮ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2011-09-26

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

»ಮಸ್ಕತ್: 28ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ
»ಒಮಾನಿನಲ್ಲಿ ಅಮೇರಿಕಾ ಮಿಲಿಟೆರಿ 'ಹೆಲಿಕಾಪ್ಟರ್' ಅಪಘಾತ; 5 ಸಿಬ್ಬಂದಿ ಪೈಕಿ ಮೂವರು ಪತ್ತೆ - ಚಿಕಿತ್ಸೆ
»ಬಿಲ್ಲವರು ಪ್ರತಿಭಾ ಕಲಿಗಳು:ಸಾಧಿಸಿ ತೋರಿಸಿದ ಒಮಾನ್ ಪುಟಾಣಿಗಳು
»ಯಕೃತ್ತು ಕಸಿಯ ಹೊಸ ವಿಧಾನ: 2 ವರ್ಷದ ಒಮಾನಿ ಮಗುವನ್ನು ಬದುಕಿಸಿದ ಭಾರತೀಯ ವೈದ್ಯರು
»ಶ್ರೀ ಪ್ರಕಾಶ್ ನಾಯ್ಕ್ ರವರಿಗೆ ಓಮಾನಿನ ಆರೋಗ್ಯ ಮ೦ತ್ರಾಲಯದ ವತಿಯಿ೦ದ ಪುರಸ್ಕಾರ
»ಒಮಾನ್ ಸಮುದ್ರ ತೀರದಲ್ಲಿ ಅನಿವಾಸಿ ಭಾರತೀಯ ಮೀನುಗಾರರ ಹಡಗು ಕಣ್ಮರೆ
»ಒಮಾನ್ ಬಿಲ್ಲವರ "ವನಸ್ಸುದ ಪರ್ಬ-2012"
»ಮಸ್ಕತ್ ಸೇವಾ ಸಂಸ್ಥೆಯಿಂದ ಮುಸ್ಲಿಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
»ಮಸ್ಕತ್ 'ಸ್ಪಂದನ' ಗಾಯನ ದೋಣಿಯ ರಸಸಂಜೆ ಪಯಣ...
»ವಾಹನ ಮುಖಾಮುಖಿ ಡಿಕ್ಕಿ-ಬೆಂಕಿ:ನಾಲ್ವರು ದುರ್ಮರಣ
»ಜನವರಿ-2012 ಒಮಾನ್ ರಸ್ತೆ ಅವಘಡಕ್ಕೆ 70 ಸಾವು
»ಬೆಂಕಿಗೆ ಅನಿವಾಸಿ ಭಾರತೀಯನ ಅಂಗಡಿ-ಕಾರು ಭಸ್ಮ:ಒಮಾನ್ ರಾಯಭಾರಿ ಕಚೇರಿಯಲ್ಲಿ ಸಹಾಯಕ್ಕೆ ಅಳಲು
»ನಿರಂತರ 'ಡ್ರಗ್ಸ್' ವ್ಯಾಪಾರ : ಜಾಲ ಬೇದಿಸಿದ ಒಮಾನ್ ಪೋಲಿಸರು
»17 ಮೇ: ಒಮಾನ್ ತುಳುವರಿಗೆ ಅಪರೂಪದ ಅವಕಾಶ: ’ದಾದ ಮಲ್ಪೆರಾಪುಂಡು’ ತುಳು ನಾಟಕಕ್ಕೆ ಕ್ಷಣಗಣನೆ
»ಉರಿ ಬಿಸಿಲಿನಲ್ಲಿ ಕಾರ್ಮಿಕರ ಕೆಲಸವನ್ನು ನಿಷೇಧಿಸಿದ ಒಮಾನ್ ಸರಕಾರ !
»ಮಸ್ಕತ್‌ಗೆ ’ಯುಗಾದಿ ನಗೆ ಹಬ್ಬ’ ದೊಂದಿಗೆ ಬಂದ ‘ನಂದನ’
»ಸ್ಪಂದನ ಆರ್ಟ್ ಲೌವರ್ಸ್ ರಿಂದ ಹೆಸರಾಂತ ಗಾಯಕಿ ಅನಿತಾ ಸಾಮ್ಸನ್ ಅವರಿಗೆ ಸನ್ಮಾನ
»Indian businessman’s body found in mysterious circumstances
»ಮನರಂಜಿಸಿದ “ಕಿವುಡನ ಕಿತಾಪತಿ”
»ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
»ಸ್ಪಂದನ ತಂಡದ ಕಾರ್ಯಕ್ರಮಕ್ಕೆ ಆಗಮಿಸಿದ ಕಲಾವಿದರು
»ಒಮಾನ್ ಹರ್ಷ ಕುಮಾರ್‌ ರೈಗೆ ಭಾರತ ಸಮ್ಮಾನ್‌ ಪ್ರಶಸ್ತಿ
»ಜನವರಿ 19ರಂದು ಸ್ಪಂದನಾ ವಿರಚಿತ 'ಯಾದೊಂಕಿ ಭಾರತ್' ಸಂಗೀತ ಬಿಡುಗಡೆ
»ಒಮಾನ್ ನಲ್ಲಿ ಬಂಟರ 24ನೇ ಸಮ್ಮಿಲನ : ಗಮನಸೆಳೆದ ಮನೋರಂಜನಾ ಕಾರ್ಯಕ್ರಮ , ತುಳುನಾಡಿನ ವೈಶಿಷ್ಟ್ಯ
»ಮಸ್ಕಟ್‌ನಲ್ಲಿ ಕಾರು ಅಪಘಾತ: ನಗರದ ಸಹೋದರಿಯರ ಸಾವು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri