ಶುಕ್ರವಾರ, 18-10-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ದ.ಕ. ಜಿಲ್ಲೆಯ ಮೂವರು ಯುವಕರು ಸೌದಿ ಜೈಲಿನಲ್ಲಿ: ಏಳೂವರೆ ವರ್ಷದಿಂದ ಬಂಧನ *ದಂಡ ಕಟ್ಟಲು ಹಣವಿಲ್ಲ; ಹುಸಿಯಾದ ನ್ಯಾಯದ ನಿರೀಕ್ಷೆ

                  ಫೈರೋಝ್         ಮುಹಮ್ಮದ್ ನಾಸಿರ್       ರಫೀಕ್ ಬಜ್ಪೆ

.ಹಂಝ ಮಲಾರ್

ಮಂಗಳೂರು,ಸೆ.5: ಸೌದಿ ಅರೇಬಿಯಾದ ಜಿದ್ದಾ ಜೈಲಿನಲ್ಲಿ ಕಳೆದ ಏಳೂವರೆ ವರ್ಷದಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಯುವಕರು ಬಂಧಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜಿದ್ದಾದ ಸ್ಥಳೀಯ ನ್ಯಾಯಾಲಯ ವಿಧಿಸಿದ ದಂಡವನ್ನು ಕಟ್ಟಲು ಹಣವಿಲ್ಲದ ಮತ್ತು ಬಿಡುಗಡೆಗಾಗಿ ‘ಕಾನೂನಿನ ಹೋರಾಟ’ಮಾಡುವವರಿಲ್ಲದ ಕಾರಣ ಈ ಮೂವರು ಯುವಕರು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದು,ಬಿಡುಗಡೆಗಾಗಿ ನಡೆಸಿದ ಪ್ರಯತ್ನವೂ ವಿಫಲ ಗೊಂಡದ್ದರಿಂದ ನ್ಯಾಯದ ನಿರೀಕ್ಷೆ ಕೂಡ ಹುಸಿಯಾಗಿದೆ.ಉಳ್ಳಾಲ ಕೋಟೆಪುರದ ಫೈರೋಝ್ ಅಬ್ದುಲ್ ರಹ್ಮಾನ್ ಡಿ.ಮುಹಮ್ಮದ್ (34),ಬಜ್ಪೆಯ ಅಬ್ದುಲ್ ರಫೀಕ್ (33)ಬಂದರ್ ಜೆ.ಎಂ.ರಸ್ತೆಯ ನಾಸಿರ್ ಮುಹಮ್ಮದ್ ನಾಸಿರ್ (33) ಎಂಬವರೇ ಬಂಧಿತರು.

ಉದ್ಯೋಗ ಅರಸಿಕೊಂಡು ಸೌದಿ ಅರೇಬಿಯಾಕ್ಕೆ ಹೋಗಿದ್ದ ಇವರು,ಬಳಿಕ ಅಲ್ಲಿ ಉದ್ಯೋಗ ಮತ್ತು ಸ್ವಂತ ವ್ಯಾಪಾರ ಮಾಡಿ ಕೊಂಡು ಒಂದೇ ರೂಮಿನಲ್ಲಿದ್ದರು.ಇವರು ಉಳಕೊಂಡಿದ್ದ ರೂಮಿನಲ್ಲಿ ಈ ಹಿಂದೆ ‘ಹುಂಡಿ ಕರೆ ಜಾಲ’ಸಕ್ರಿಯವಾಗಿತ್ತೆನ್ನಲಾಗಿದೆ.ಅದು ಅಲ್ಲಿನ ಪೊಲೀಸರ ಗಮನಕ್ಕೆ ಬಂದಿರುವು ದನ್ನು ಮನಗಂಡ ಆ ಜಾಲದ ಸದಸ್ಯರು ಅಲ್ಲಿಂದ ಜಾಗ ಖಾಲಿ ಮಾಡಿದ್ದರು.ಆದರೆ,ಅದರ ಅರಿವಿಲ್ಲದ ಮೂವರು ಯುವಕರು ಈ ರೂಮನ್ನು ಬಾಡಿಗೆಗೆ ಪಡಕೊಂಡಿದ್ದರು.ಅದೇ ಇವರು ಮಾಡಿದ ತಪ್ಪಾಗಿತ್ತು.ಕೆಲವೇ ದಿನಗಳಲ್ಲಿ ಸೌದಿ ಅರೇಬಿಯಾದ ಟೆಲಿಕಾಂ ಇಲಾಖೆಯ ದೂರಿನ ಮೇರೆಗೆ ಅಲ್ಲಿನ ಪೊಲೀಸರು ಇವರ ರೂಮಿಗೆ ದಾಳಿ ಮಾಡಿ ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ಸುದೀರ್ಘ ಅವಧಿಯ ಬಳಿಕ ವಿಚಾರಣೆ ನಡೆಸಿದ ಅಲ್ಲಿನ ನ್ಯಾಯಾಲಯವು ಭಾರೀ ಮೊತ್ತದ ದಂಡ ಪಾವತಿಸುವಂತೆ ಶಿಕ್ಷೆ ವಿಧಿಸಿತ್ತು.ಆದರೆ,ಅಷ್ಟು ಹಣವನ್ನು ಪಾವತಿಸಲಾಗದ ಈ ಮೂವರು ತಮ್ಮದಲ್ಲದ ತಪ್ಪಿಗೆ ಇದೀಗ ಶಿಕ್ಷೆ ಅನುಭವಿಸುವಂತಾಗಿದೆ.ಅದೂ ಒಂದೆರಡು ವರ್ಷವಲ್ಲ.ಬರೋಬ್ಬರಿ ಏಳೂವರೆ ವರ್ಷ ದಿಂದ ಜೈಲಿನ ಕಂಬಿ ಎಣಿಸುವಂತಾಗಿದೆ.ತನ್ಮಧ್ಯೆ ಇವರ ಬಿಡುಗಡೆಗಾಗಿ ಪ್ರಧಾನಿ ಮನಮೋಹನ್ ಸಿಂಗ್,ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಸಹಿತ ಹಲವು ಪ್ರಮುಖರ ಬಳಿ ಇವರ ಕುಟುಂಬದ ಸದಸ್ಯರು ತೆರಳಿ ಪ್ರಯತ್ನಿಸಿದ್ದರೂ ಪ್ರಯೋಜನವಾಗಲಿಲ್ಲ.ಹಾಗಾಗಿ ಈ ಮೂವರೂ ಜೈಲಿನಲ್ಲಿ ಕೊಳೆಯುವಂತಾಗಿದೆ.

 *‘ನೂರಾರು ಕನಸು,ನಿರೀಕ್ಷೆಯೊಂದಿಗೆ ನಾವು 2000-2001ರ ವೇಳೆಗೆ ಇಲ್ಲಿಗೆ ಬಂದೆವು. ಉದ್ಯೋಗ,ಸ್ವಂತ ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಿದ್ದೆವು.2004ರ ಮಾರ್ಚ್ 19-20ರ ರಾತ್ರಿ ನಮ್ಮ ಕೋಣೆಯನ್ನು ಅನಿರೀಕ್ಷಿತವಾಗಿ ಸುತ್ತುವರಿದ ಇಲ್ಲಿನ ಪೊಲೀಸರು ‘ನೀವೆಲ್ಲ ಹುಂಡಿ ಕರೆ ಜಾಲ’ದ ಸದಸ್ಯರು ಎಂದು ಹೇಳಿಕೊಂಡು ತಪಾಸಣೆ ನಡೆಸಿದರು.ನಾವು ಸತ್ಯ ಹೇಳಿದ ಬಳಿಕವೂ ‘ಹುಂಡಿ ಕರೆ ಜಾಲದವರ ಪರಿಚಯ ನಿಮಗೆ ಇದ್ದರೆ ಹೇಳಿ,ಅವರು ಸಿಕ್ಕ ಬಳಿಕ ನಿಮ್ಮನ್ನು ಬಿಡುವೆವು’ಎಂದರು.ಭಾಷೆಯ ಸಮಸ್ಯೆಯಿಂದಾಗಿ ನಾವು ಹೇಳಿದ್ದು,ಅವರಿಗೆ ಅರ್ಥವಾಗಲಿಲ್ಲ.ಅವರು ಹೇಳಿದ್ದು ನಮಗೆ ಅರ್ಥವಾಗಲಿಲ್ಲ.ಅಂತೂ ಅರಬಿಕ್‌ನಲ್ಲಿ ಬರೆದುದಕ್ಕೆ ನಮ್ಮಿಂದ ಸಹಿ ಹಾಕಿಸಿ ಬಂಧಿಸಿದರಲ್ಲದೆ,45ದಿನಗಳ ಕಾಲ ಪೊಲೀಸ್ ಠಾಣೆಯಲ್ಲಿರಿಸಿ ವಿಚಾರಿಸಿದರು.ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಕೊನೆಗೆ ಜಿದ್ದಾದ ಜೈಲಿಗೆ ತಳ್ಳಲಾಯಿತು.3ವರ್ಷದನಂತರ ನ್ಯಾಯಾಲಯ ವಿಚಾರಣೆ ಆರಂಭಿಸಿತು.ನಾವು ಏನೇ ಹೇಳಿದರೂ ಅವರು ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.ಕೊನೆಗೆ ಪ್ರತಿಯೊಬ್ಬರೂ 10ಸಾವಿರ ರಿಯಾಲ್ ದಂಡ ಮತ್ತು ಹುಂಡಿ ಕರೆಯ ನಷ್ಟದ (3 ಮಿಲಿಯನ್ ರಿಯಾಲ್) ಬಾಬ್ತನ್ನು ಕಟ್ಟುವಂತೆ ಆದೇಶಿಸಿದರು.ಅಂದರೆ ಬರೋಬ್ಬರಿ 3ಕೋಟಿ ರೂ!ಒಬ್ಬೊಬ್ಬರಿಗೆ ಒಂದೊಂದು ಕೋಟಿ ರೂ!.ಕಷ್ಟಪಟ್ಟು ದುಡಿದು ಬದುಕಿನಲ್ಲೊಂದು ನೆಲೆ ಕಟ್ಟಲು ಬಂದ ನಾವು ಅಷ್ಟೊಂದು ಹಣವನ್ನು ಎಲ್ಲಿಂದ ಹೊಂದಿಸಲಿ?.ಅಂತೂ ನಾವು ಇಲ್ಲಿನ ಹೈಕೋರ್ಟ್‌ಗೆ ಮೇಲ್ಮನವಿ ಮಾಡಿದೆವು.ಆದರೆ,ಹೈಕೋರ್ಟ್ ಕೂಡ ನಮ್ಮ ಮನವಿಯನ್ನು ತಿರಸ್ಕರಿಸಿತು.ಕಳೆದ ಏಳೂವರೆ ವರ್ಷದಿಂದ ನಾವು ಜೈಲಿನಲ್ಲೇ ಬಂಧಿಯಾಗಿದ್ದೇವೆ. ಇಲ್ಲಿ ನಮ್ಮ ಪರವಾಗಿ ಕಾನೂನು ಹೋರಾಟ ಮಾಡುವವರು ಯಾರೂ ಇಲ್ಲದಂತಾಗಿದೆ’ಎಂದು ಫೈರೋಝ್ ಕುಟುಂಬದ ಸದಸ್ಯರೊಂದಿಗೆ ತನ್ನ ನೋವು ಹಂಚಿಕೊಂಡಿದ್ದಾರೆ.

ಮಕ್ಕಳ ನಿರೀಕ್ಷೆಯಲ್ಲಿ ಹೆತ್ತವರು...

*ನಮ್ಮ ಮಗನಿಗೆ ಯಾಕೆ ಈ ಶಿಕ್ಷೆ ಕಾಡಿತ್ತೋ ಏನೋ? ಅವನಿಗೆ ಶಿಕ್ಷಣ ತಲೆಗೆ ಹತ್ತಲಿಲ್ಲ. ಅರ್ಧದಲ್ಲೇ ಕಾಲೇಜು ಬಿಟ್ಟ. ಹಾಗೇ ಸೌದಿಗೆ ಹೋದ.ಆದರೆ ಜೈಲು ಸೇರುತ್ತಾನೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಮೂರು ವರ್ಷದ ಹಿಂದೆ ಪವಿತ್ರ ಹಜ್ಜ್ ಯಾತ್ರೆಗೆ ಹೋದಾಗ ಅಲ್ಲಿನ ನ್ಯಾಯಾಲ ಯಕ್ಕೆ ಹಾಜರುಪಡಿಸುವ ಸಂದರ್ಭ ಕಂಡು ಒಂದಷ್ಟು ಮಾತನಾಡಿದ್ದು ಬಿಟ್ಟರೆ ಕಳೆದ 9 ವರ್ಷದಿಂದ ಆತ ನಮ್ಮಿಂದ ದೂರವಾಗಿದ್ದಾನೆ.ಆದರೂ ಊರಿಗೆ ಮರಳಿ ಬಂದಾನು ಎಂಬ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಮುಹಮ್ಮದ್ ನಾಸಿರ್‌ನ ತಾಯಿ ಆಮಿನಾ.(ಫೈರೋಝ್‌ನ ಮನೆ ಮತ್ತು ಸ್ಥಳೀಯರು ಕೂಡ ಈ ಮಾತನ್ನು ಹೇಳುತ್ತಾರೆ.ಯಾಕೆಂದರೆ ಉಳ್ಳಾಲದಲ್ಲಿ ಕಡಲ್ಕೊರೆತ ಸಂಭವಿಸಿದಾಗ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಮುಂದೆ ಬೇಡಿಕೆ ಸಲ್ಲಿಸುವುದು, ಬಡವರಿಗೆ ರೇಷನ್ ಕಾರ್ಡ್,ವಿಧವಾ ವೇತನ ಮಾಡಿಕೊಡುವ ಮೂಲಕ ಫೈರೋಝ್ ಸ್ಥಳೀಯವಾಗಿ ಗುರುತಿಸಲ್ಪಟ್ಟಿದ್ದ.)

*ಉಳ್ಳಾಲ ಕೋಟೆಪುರದ ದಿವಂಗತ ಡಿ.ಎಂ.ಅಬ್ದುಲ್ ರಹ್ಮಾನ್ ಮತ್ತು ಫಾತಿಮ ಸುಲ್ತಾನರ ನಾಲ್ಕು ಗಂಡು ಮತ್ತು ಒಂದು ಹೆಣ್ಮಕ್ಕಳ ಪೈಕಿ ಫೈರೋಝ್ ಮೂರನೆಯವ.ಅವಿವಾಹಿತ. ಸಣ್ಣಪುಟ್ಟ ಕೆಲಸದೊಂದಿಗೆ ಸಮಾಜ ಸೇವೆಯಲ್ಲಿ ನಿರತನಾಗಿದ್ದ.2001 ಮೇ 17ರಂದು ಸೌದಿಗೆ ಹೊರಟು ಎರಡುವರೆ ವರ್ಷಗಳ ಕಾಲ ಉದ್ಯೋಗ ಮಾಡಿ ಇದೀಗ ತನ್ನದಲ್ಲದ ತಪ್ಪಿಗೆ ಜೈಲು ಹಕ್ಕಿಯಾಗಿದ್ದಾನೆ.*ಮೂಲತಃ ಸೂರಲ್ಪಾಡಿಯ ಪ್ರಸ್ತುತ ಬಜ್ಪೆಯ ಮೊದಿನ್-ಝುಬೈದ ದಂಪತಿಯ ಐದು ಗಂಡು ಮತ್ತು ಎರಡು ಹೆಣ್ಮಕ್ಕಳ ಪೈಕಿ ಅಬ್ದುಲ್ ರಫೀಕ್ ಗಂಡು ಮಕ್ಕಳ ಪೈಕಿ ಹಿರಿಯವ.2000ನೆ ಇಸವಿಯಲ್ಲಿ ಸೌದಿಗೆ ಹೋಗಿದ್ದ ಈತ ಉದ್ಯೋಗ ಮಾಡುತ್ತಲೇ ಸ್ವಂತ ವ್ಯಾಪಾರಕ್ಕಿಳಿದಿದ್ದ.2003ರಲ್ಲಿ ಒಮ್ಮೆ ಊರಿಗೆ ಬಂದು ಒಂದೆರಡು ತಿಂಗಳಿದ್ದ.ಬಳಿಕ ಸೌದಿಗೆ ಹೋದರೂ ಕೆಲವು ತಿಂಗಳ ಬಳಿಕ ಜೈಲು ಸೇರಿದ್ದಾನೆ.ಇವನ ಮೂವರು ತಮ್ಮಂದಿರು, ಅಕ್ಕ ಮತ್ತು ತಂಗಿಗೆ ವಿವಾಹವಾಗಿದೆ.ಹಿರಿಯ ಮಗ ಮರಳಿ ಬಾರದಿರು ವುದರಿಂದ ಹೆತ್ತವರು ಖಿನ್ನರಾಗಿದ್ದಾರೆ.

*ಬಂದರ್ ಜೆ.ಎಂ.ರಸ್ತೆಯ ಗುತ್ತಿಗೆದಾರ ಎ.ಕೆ.ಮುಹಮ್ಮದ್ ಹಾಜಿ-ಆಮಿನಾ ದಂಪತಿಯ ಮೂರು ಹೆಣ್ಣು ಮತ್ತು ಎರಡು ಗಂಡು ಮಕ್ಕಳ ಪೈಕಿ ಸೂಫಿ ನಾಸಿರ್ ಯಾನೆ ನಾಸಿರ್ ಮುಹಮ್ಮದ್ ನಾಸಿರ್ ಕೂಡ ಅವಿವಾಹಿತ.ಪ್ರಥಮ ಪಿಯುಸಿ ಮುಗಿಸಿ 2003ರಲ್ಲಿ ಸೌದಿಗೆ ತೆರಳಿದವ ಮರಳಿ ಊರಿಗೆ ಬಂದೇ ಇಲ್ಲ.
SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಾರ್ತಾಭಾರತಿ http://vbnewsonline.com
ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2011-09-06

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸೌದಿ ಅರೇಬಿಯ]

» Safety Alert : 3yrs old child kills himself by mistake!
»ಸೌದಿ ಅರೇಬಿಯಾ: ಮಹಿಳೆಯರಿಗಾಗಿಯೇ ಪ್ರತ್ಯೇಕ ನಗರ
»ಸೌದಿಯಲ್ಲಿ ಧೂಮಪಾನಿ ಗಂಡಂದಿರಿಗೆ ಪತ್ನಿ ವಿಚ್ಚೇಧನ ಕೊಡಬಹುದು
»ಸೌದಿಯಲ್ಲಿ 8 ವರ್ಷ ಮೀರಿದ ಅನಿವಾಸಿ ವಿದ್ಯಾರ್ಥಿಗಳಿಗೆ ಶಾಲಾ ಪ್ರವೇಶ ನಿಷೇಧ
»12 men charred to death in Saudi road crash
»ಕುವೈತ್ ವಿಮಾನಕ್ಕೆ ಆಗಸದಲ್ಲಿ ಇಂಜಿನ್ ತೊಂದರೆ: ಯಶಸ್ವಿ ನೆಲಸ್ಪರ್ಶ; ಭಾರಿ ಅನಾಹುತದಿಂದ ಪ್ರಯಾಣಿಕರು ಪಾರು
»ಶೃಂಗಾರ-ಸುಗಂಧ ದ್ರವ್ಯ ಮಾರಾಟ ಅಂಗಡಿಯಲ್ಲಿ ಮಹಿಳೆಯರಿಗೆ ಮಾತ್ರ ಉದ್ಯೋಗ !
»ಅನಿವಾಸಿ ಭಾರತೀಯನ ಕೊಲೆ ಹಿನ್ನಲೆ ಸೇರಿದಂತೆ ಸೌದಿಯಲ್ಲಿ ಐವರಿಗೆ ಶಿರಚ್ಚೇಧ ಶಿಕ್ಷೆ
»ಹಳಿತಪ್ಪಿದ ಸೌದಿ ಪ್ರಯಾಣಿಕರ ರೈಲು
»ಸೌದಿ ರಾಜಕುಮಾರ ನಯೆಫ್ ಬಿನ್ ಅಬ್ದುಲ್ ಅಜೀಜ್ ನಿಧನ:ಶೋಕಾಚರಣೆಗೆ ಸರಕಾರಿ ರಜೆ ಘೋಷಣೆ.
»"ಸೌದಿ ಮಹಿಳೆಯರ ವಾಹನ ಚಾಲನೆ ನಿಷೇಧ ತೆರೆವುಗೊಳಿಸಿ":ಸೌದಿ ಮಹಿಳೆಯಿಂದ ದೊರೆಗೆ ಮನವಿ
»ಸೌದಿಯಲ್ಲಿ ಇಂಡಿಯನ್ ಫ್ರೆಟರ್ನಿಟಿ ಫೋರಂನಿಂದ ಆರೋಗ್ಯ ಶಿಬಿರ
»ಸೌದಿಯಲ್ಲಿ ಕ್ಷೀಣಿಸುತ್ತಿರುವ ಅನಿವಾಸಿಗಳ ಉದ್ಯೋಗ ಭದ್ರತೆ ಭವಿಷ್ಯ
»ರಿಯಾದ್‌ನಿಂದ ಮುಂಬೈಗೆ ಆಗಮಿಸಿದ ಜೆಟ್ ಏರ್ವೇಸ್‌ನಲ್ಲಿ ಬೆಂಕಿ: ಪ್ರಯಾಣಿಕರು ಪಾರು
»ಪತಿಯ 2ನೇ ಮದುವೆಗೆ ಒಪ್ಪಿದ ಪತ್ನಿಗೆ 1 ಕೇಜಿ ಚಿನ್ನ ಉಡುಗೊರೆ !
»ಸ್ಪೊನ್ಸರ್ ಶಿಪ್ ಪದ್ದತಿಯಿಂದ ಹಿಂದೆ ಸರಿದ ಸೌದಿ ಸರಕಾರ
»28 ಸಾವಿರ ಅನಿವಾಸಿ ಚಾಲಕರ ಬದಲಿಗೆ ಸೌದಿ ಯುವಕರು
»ಅಸ್ಥಿಪಂಜರವಾಗುವ ವಿಚಿತ್ರ ಖಾಯಿಲೆಗೆ ತುತ್ತಾದ ಸೌದಿ ಯುವಕ
»ಸೌದಿಯಲ್ಲಿ ಅನ್ಯ ಭಾಷಾ ದಿನಾಂಕ ಬಳಕೆ ನಿಷೇಧ !
»ಸೌದಿ ಅರೇಬಿಯಾದಲ್ಲಿ ಏಳು ಭಾರತೀಯ ನರ್ಸ್‌ಗಳು ಪಾರು
»ಡಿಕೆಎಸ್‌ಸಿ ಜುಬೈಲ್ ಘಟಕದ ವಾರ್ಷಿಕ ಮಹಾಸಭೆ
»ಸಲಹೆಗಾರನನ್ನು ಕಿತ್ತು ಹಾಕಿದ ಸೌದಿ ದೊರೆ!;
»ಕುರಿ ಕಾಯಲೆಂದು ಸೌದಿಗೆ ಹೋದಾತ 18 ವರ್ಷಗಳ ಬಳಿಕ ಭಾರತಕ್ಕೆ ವಾಪಸ್!
»Non-Muslim Filipino expats in Saudi Arabia told to be cautious
»ಗಲ್ಫ್‌ನಲ್ಲಿನ ಚರ್ಚ್‌ಗಳನ್ನು ಧ್ವಂಸ ಮಾಡಿ: ಸೌದಿ ಮೌಲ್ವಿ ಫತ್ವಾ!; ಕ್ರಿಶ್ಚಿಯನ್ ಬಿಷಪ್ಸ್ ತೀವ್ರ ಆಕ್ರೋಶ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri