ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಶೋಭಾ ಕರಂದ್ಲಾಜೆಯವರು ಮಾಧ್ಯಮಗಳಲ್ಲಿ ನೀಡಿದ ಎಚ್ಚರಿಕೆಗೆ ಈ ಬಹಿರಂಗ ಉತ್ತರ....

10 ದಿನಗಳಲ್ಲಿ ಅಕ್ರಮಗ್ಯಾಸ್ ಸಕ್ರಮ  ಮಾಡಿಕೊಳ್ಳದಿದ್ದರೆ ಕ್ರಿಮಿನಲ್ ಕೇಸ್:  ಕರ್ನಾಟಕದ ಜನತೆಗೆ ಇಂಧನ ಸಚಿವೆ ಶೋಭಾ ಕರಂದ್ಲಾಜೆಯವರು ಮಾಧ್ಯಮಗಳಲ್ಲಿ ನೀಡಿದ ಎಚ್ಚರಿಕೆಗೆ ಈ ಬಹಿರಂಗ ಉತ್ತರ.

ಗ್ಯಾಸ್ ಕನೆಕ್ಷನ್ ಉಳ್ಳ ಪ್ರತಿಯೊಬ್ಬರೂ ತಮ್ಮ ಕನೆಕ್ಷನ್ ಅಧಿಕೃತವೆಂದು ಸಾಬೀತು ಪಡಿಸತಕ್ಕ ಎಲ್ಲಾ ದಾಖಲೆ ಪತ್ರಗಳನ್ನು ಸಮೀಪದ ಗ್ಯಾಸ್ ಡೀಲರ್ ಗಳಿಗೆ ಕೂಡಲೇ ತಲುಪಿಸಕ್ಕದ್ದು ಎಂಬ ಪ್ರಕಟಣೆ ಮಾಧ್ಯಮಗಳಲ್ಲಿ ಪ್ರಕಟವಾದ ಮರುದಿನವೇ ಪ್ರಕಟಣೆಯಲ್ಲಿ ಪ್ರಸ್ತಾಪಿಸಿದ ಎಲ್ಲಾ ದಾಖಲೆಪತ್ರಗಳನ್ನು ನಮಗೆ ಗ್ಯಾಸ್ ವಿತರಿಸುತ್ತಿರುವ ಏಜೆಂಟ್ ರವರ ಕಚೇರಿಯಲ್ಲಿ ಕೊಟ್ಟು ಇನ್ನು ಯಾವ ತೊಂದರೆಯೂ ಇರಲಿಕ್ಕಿಲ್ಲ ಎಂಬ ನಿರಾಳ ಮನಸ್ಸಿನಲ್ಲಿದ್ದಾಗಲೇ,ಪತ್ರಿಕೆಯಲ್ಲಿ "ನಿಮ್ಮ ಗ್ಯಾಸ್ ಅಕೃಮವೇ ವಾಪಾಸ್ ಕೊಡಿ" ಎಂಬ ಸುದ್ದಿ ಓದಿ ಗಾಭರಿಯಿಂದ ಅದರಲ್ಲಿ ಸೂಚಿಸಿದ್ದ ವೆಬ್‌ಸೈಟನ್ನು ಸಂಪರ್ಕಿಸಿ ನೋಡುವಾಗ ಹೆಸರಿನೊಂದಿಗೆ"“YourLPG connection is suspended and ration card is suspended” ಎಂಬ ಹೊಳೆಯುತ್ತಿರುವುದನ್ನು ಕಂಡು ನಮ್ಮ ಸ್ವಂತ ಕೈಯೇ ನಮ್ಮ ಮುಖಕ್ಕೆ ರಾಚುವಂತೆ ಹೊಡೆದ ಅನುಭವ.ಬೇಕಾಗುವ ಎಲ್ಲಾ ದಾಖಲೆ ಪತ್ರಗಳನ್ನು ನೀಡಿ ಕನೆಕ್ಷನ್ ಪಡೆದಿದ್ದು ಅದೆಷ್ಟೊ ವರ್ಷಗಳಿಂದ ಉಪಯೋಗಿಸಿಕೊಂಡು ಬರುತ್ತಿರುವ ಎಂತವರಿಗೂ ಈ ಅನಪೇಕ್ಷಿತ ಪ್ರಕಟಣೆ ಕಂಡು ಆಶ್ಚರ್ಯದೊಂದಿಗೆ ಸಖತ್ ಆಘಾತ ನೀಡಿದ ಅನುಭವವಾಗಿರುವುದು ಸಹಜ.

ಅದೇ ತಕ್ಷಣ ಪುನಃ ಎಲ್ಲಾ ದಾಖಲೆಪತ್ರಗಳೊಂದಿಗೆ ಅದೇ ಏಜೆನ್ಸಿಗೆ ತಲುಪಿ ವಿಷಯ ವಿವರಿಸಿದಾಗ "ನಮ್ಮ ಸಿಸ್ಟಮ್‌ನಲ್ಲಿ ನಿಮ್ಮ ಪ್ರತಿಯೊಂದು ದಾಖಲೆಗಳೂ ಇವೆ.ಜನತೆ ಪೂರೈಸಿರುವ ದಾಖಲೆಪತ್ರಗಳೆಲ್ಲವನ್ನೂ ನಮ್ಮ ಸಿಸ್ಟಮ್‌ನಲ್ಲಿ ಎಂಟ್ರಿ ಮಾಡುವರೇ ಸಾಕಷ್ಟು ಸಮಯಾವಕಾಶ ಸರಕಾರ ನೀಡದಿದ್ದ ಕಾರಣ ನಮಗೆ ತಲುಪಿರುವ ಪ್ರತಿಯೊಂದು ದಾಖಲೆಪತ್ರಗಳನ್ನು ಸಂಬಂಧಪಟ್ಟ ಸರಕಾರೀ ಕಚೇರಿಗೆ ನಾವು ಕಳುಹಿಸಿದ್ದೇವೆ ಎಂಬ ಉತ್ತರ ಸಿಕ್ಕಿತು.

ಸೂಚಿಸಿರುವ ಸಮಯದಲ್ಲಿ ನಮ್ಮೆಲ್ಲ ದಾಖಲೆಗಳನ್ನೂ ಸಂಬಂಧಪಟ್ಟ ಕಚೇರಿಗೆ ಪೂರೈಸಿದ್ದರೂ ಅಕ್ರಮಗ್ಯಾಸ್ ಸಕ್ರಮ  ಮಾಡಿಕೊಳ್ಳದಿದ್ದಲ್ಲಿ ಸಮೀಪದ ಕೋರ್ಟಿನಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಇಂಧನ ಸಚಿವೆಯರಲ್ಲಿ ಕೆಲವು ಪ್ರಶ್ನೆಗಳು...

1)ಕ್ಲಪ್ತ ಸಮಯದಲ್ಲಿ ತಾವು ಸೂಚಿಸಿದ್ದ ಕಚೇರಿಗೆ ಜನತೆ ಪೂರೈಸಿದ ಅಧಿಕೃತ ದಾಖಲೆ ಪತ್ರಗಳು ತಮ್ಮ ಇಲಾಖೆಯ ಸಿಸ್ಟಮ್‌ನಲ್ಲಿ ಯಾಕೆ ಸಮರ್ಪಕವಾಗಿ ಎಂಟ್ರಿಯಾಗಿಲ್ಲ?ಅವುಗಳು ಹೋದದ್ದಾರೂ ಎಲ್ಲಿಗೆ?

2)ಜನತೆ ಗ್ಯಾಸ್ ಕನೆಕ್ಷನ್‌ಗೆ ಅವಶ್ಯಕವಿರುವ ದಾಖಲೆಪತ್ರಗಳನ್ನು ತಂದು ಒಪ್ಪಿಸಿದಾಗ ಸ್ವೀಕೃತಿ ಸೂಚಿತ ರಸೀಧಿಯನ್ನು ಕೊಡುವ ಅತ್ಯಗತ್ಯ ವ್ಯವಸ್ಥೆಯನ್ನು ಇಲಾಖೆ ಯಾಕೆ ಮಾಡಿರಲಿಲ್ಲ?

)ನಮ್ಮ ಅಧಿಕೃತ ಗ್ಯಾಸ್ ಕನೆಕ್ಷನ್ ಇಂದು ನಿಮ್ಮ ವೆಬ್‌ಸೈಟಿನಲ್ಲಿ ಅನಧಿಕೃತವೆಂದು ಸೂಚಿಸುತ್ತಿರುವಂತೆ ಅನಧಿಕೃತವಾಗಿ ಗ್ಯಾಸ್ ಉಪಯೋಗಿಸುತ್ತಿರುವ ಅದೆಷ್ಟು ಮಂದಿಯ ಗ್ಯಾಸ್ ಕನೆಕ್ಷನ್ ಇಂದು ಅಧಿಕೃತವಾಗಿ ಪರಿವರ್ತಿತವಾಗಿರುವ ಸಾಧ್ಯತೆ ಇಲ್ಲದಿಲ್ಲ?

4)ಇಂಟರ್ನೆಟ್ಟಿನಲ್ಲಿ ಗ್ರಾಹಕರೇ ಮಾಹಿತಿ ತುಂಬಬಹುದು ಅಥವಾ ತಾಲೂಕು ಕಚೇರಿಗೆ ಹೋಗಿ ದಾಖಲೆ ಪತ್ರಗಳನ್ನು ಕೊಡಬಹುದು ಎಂಬುದಾಗಿ ಇಲಾಖೆಯ ಪ್ರಕಟಣೆ ಸೂಚಿಸುತ್ತಿದೆ.ನಮ್ಮ ರಾಜ್ಯದಲ್ಲಿ ಇಂದು ಅದೆಷ್ಟು ಮನೆಗಳಲ್ಲಿ ಇಂಟರ್ನೆಟ್ ಸೌಲಭ್ಯಗಳಿವೆಂದು ಊಹಿಸಲಾರದಂತಹ ಜ್ಞಾನಹೀನ ಸಚಿವೆ ತಾವು ಖಂಡಿತಾ ಅಲ್ಲ.ಅದು ಮಾತ್ರವಲ್ಲದೆ ಈಗ ಮಳೆಗಾಲ,ಗ್ರಾಮೀಣಪ್ರದೇಶದಲ್ಲಿ ಇಂದು ನಾಟಿ ಇತ್ಯಾದಿ  ಕೃಷಿಕಾರ್ಯದ ಕೆಲಸಗಳು ರಭಸದಿಂದ ಸಾಗುತ್ತಿದೆ.ಇಂಟರ್ನೆಟ್ ಸೌಲಭ್ಯ ಇಲ್ಲದವರು ತಮ್ಮೆಲ್ಲ ಕಾರ್ಯಗಳನ್ನು ಪಕ್ಕಕ್ಕಿರಿಸಿ ಸೂಚಿಸಿರುವ ಸರಕಾರಿ ಕಚೇರಿ ತಲುಪಿದರೂ ಯಾವ ಸರಕಾರಿ ಕಚೇರಿಯಲ್ಲಿ ಒಂದೇ ದಿನದಲ್ಲಿ ಜನತೆ ಅಪೇಕ್ಷಿಸುವ ಕೆಲಸ ಕಾರ್ಯಗತವಾಗುತ್ತಿವೆ ಅದೂ ತಿಳಿದಿಲ್ಲವೇ ಇಂಧನ ಸಚಿವೆಗೆ?

5)ಸಚಿವೆಯವರ ಹೇಳಿಕೆಯಂತೆ ರಾಜ್ಯದಲ್ಲಿ ಶೇಕಡಾ 40 ರಷ್ಟು ಅನಧಿಕೃತ ಗ್ಯಾಸ್ ಕನೆಕ್ಷನ್‌ಗಳಿವೆ.ಹಾಗಾದರೆ ಇಷ್ಟೊಂದು ಕನೆಕ್ಷನ್‌ಗಳನ್ನು ಅನಧಿಕೃತವಾಗಿ ನೀಡುತ್ತಿರುವಾಗ ಸಂಬಂಧಪಟ್ಟ ಇಲಾಖೆ ಏನು ಮಾಡುತ್ತಿತ್ತು?ರಾಜ್ಯ ಸೂರೆಯಾದ ಕೋಟೆ ಬಾಗಿಲು ಹಾಕಿದಂತೆ ಈಗ ಇಲಾಖೆ ಎಚ್ಚತ್ತು ಬೊಬ್ಬಿರಿದರೆ ಅದರ ಪ್ರಯೋಜನವಾದರೂ ಏನು?

6)ಯಾವ ತಪ್ಪನ್ನೂ ಮಾಡದ ಇಲಾಖೆ ಬಯಸಿದ್ದ ಪ್ರತಿಯೊಂದು ದಾಖಲೆ ಪತ್ರಗಳನ್ನು  ಪೂರೈಸಿ ಅಧಿಕೃತವಾಗಿ ಗ್ಯಾಸ್ ಪಡೆದು ಉಪಯೋಗಿಸುತ್ತಿರುವ ಜನತೆಗೆ ನೀವು ಉಪಯೋಗಿಸುತ್ತಿರುವ ಗ್ಯಾಸ್ ಅನಧಿಕೃತ,ನಿಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ ಎಂದು ಏಕ ಮುಖವಾಗಿ ಆಜ್ಞೆ ಹೊರಡಿಸುವಾಗ, ನಿರಪರಾಧಿಯಾದ ಜನತೆ ತಮಗಾದ ಈ ಅವಮಾನಕ್ಕಾಗಿ ಯಾರಮೇಲೆ ಮಾನನಷ್ಟ ಮೊಕದ್ದಮೆ ಹೂಡಬೇಕು?ಲಕ್ಷಾಂತರ ಅನಧಿಕೃತ ಕನೆಕ್ಷನ್ ನೀಡುತ್ತಿದ್ದಾಗ ಕಣ್ಮುಚ್ಚಿ ಕುಳಿತಿದ್ದ ಆಹಾರ ಇಲಾಖೆಯಮೇಲೋ...ಕನೆಕ್ಷನ್ ನೀಡುತ್ತಿದ್ದ ಗ್ಯಾಸ್ ಏಜೆನ್ಸಿಗಳ ಮೇಲೋ ಅಥವಾ ನೇರವಾಗಿ ಇಂಧನ ಸಚಿವೆಯ ಮೇಲೋ?

ನೆರೆದೇಶಗಳಿಂದ ನಮ್ಮ ದೇಶದೊಳಗೆ ಸುಳಿವಿಲ್ಲದೇ ನುಸುಳಿ ಪರ್ಮನೆಂಟ್ ಬಿಡಾರ ಮಾಡಿಕೊಂಡು ಸಂಪೂರ್ಣ ಕುಟುಂಬ,ಸಂಸಾರದೊಂದಿಗೆ ನೆಲಸಿರುವ ಅಕ್ರಮವಲಸೆಗಾರರಲ್ಲಿ ಇಂದು ರೇಶನ್ ಕಾರ್ಡ್,ಪಾನ್ ಕಾರ್ಡ್,ಪಾಸ್ ಪೋರ್ಟ್,ಗ್ಯಾಸ್ ಕನೆಕ್ಷನ್, ಲ್ಯಾಂಡ್‌ಲೈನ್/ಮೋಬಾಯಿಲ್ ಫೋನ್‌ಗಳ ಕನೆಕ್ಷನ್ ಪ್ರತಿಯೊಂದು ಅನುಕೂಲತೆಗಳೂ ಇದ್ದು ಅವರುಗಳು ಬಿಂಧಾಸ್ ಜೀವನ ನಡೆಸುತ್ತಿರುವಾಗ ತಾತ,ಮುತ್ತಾತನ ಕಾಲದಿಂದಲೂ ಪರಂಪಾರಗತವಾಗಿ ಇದೇ ಸ್ಥಳದಲ್ಲಿ ನೆಲೆಸಿದ್ದು ಹಕ್ಕಿನಿಂದ ಪಡೆದಿರುವ ನಮ್ಮ ರೇಶನ್ ಕಾರ್ಡ್,ಗ್ಯಾಸ್ ಕನೆಕ್ಷನ್‌ಗಳು ಅನಧಿಕೃತ...ಸಸ್ಪೆಂಡ್ ಮಾಡಲಾಗಿದೆ ಎಂದು ಘೋಷಿಸುವಾಗ ಈ ದೇಶವಾಸಿಗಳಾದ ನಮಗೆ ಈ ದೇಶದಲ್ಲಿರುವ ಅಸ್ತಿತ್ವವಾದರೂ ಏನು ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾದ ಪರಿಸ್ಥಿತಿಯುಂಟಾಗಿದ್ದು ವಿಪರ್ಯಾಸವೆನಿಸುತ್ತಿದೆ.

ಪಡಿತರ ಚೀಟಿಯ ಗೊಂದಲಕ್ಕೆ ಈತನಕವೂ ನಮ್ಮಲ್ಲಿ ಮುಕ್ತಿ ಸಿಕ್ಕಿಲ್ಲ.ಅದಾಗಲೇ ಅಡುಗೆ ಅನಿಲದ ಅಧಿಕೃತ, ಅನಧಿಕೃತಗಳ ಗೊಂದಲ ಪರ್ವ ಆರಂಭವಾಗಿದೆ. ಒಟ್ಟಾರೆ ನೆಮ್ಮದಿಯ ಜೀವನವೆಂಬ ಮಾತು ನಾಡಿನ ಜನತೆಗೆ ಮರೀಚಿಕೆಯಾಗಿಯೇ ಉಳಿದಿದೆ.ಇವುಗಳಿಗೆ ಮುಖ್ಯವಾಗಿ ಯಾವುದೇ ಪೂರ್ವಾಪರ ಯೋಚನೆ,ಯೋಜನೆಗಳಿಲ್ಲದೇ ಹೊರಡಿಸುವ ಕಾನೂನುಗಳು ಹಾಗೂ ಅದಕ್ಕೆ ಸಂಬಂಧಪಟ್ತ ಇಲಾಖೆಯ ಅಧಿಕಾರಿಗಳೇ ಕಾರಣವೆನ್ನದೇ ಅನ್ಯವಿಧಿಯಿಲ್ಲ. 

-ವಿಜಯ್ ಬಾರಕೂರು.

 

ಮೂಲತಃ ಉಡುಪಿ ಜಿಲ್ಲೆಯ ವಿಜಯ್ ಸುವರ್ಣ ಅವರ ಲೇಖನಿ ನಾಮ ವಿಜಯ್ ಬಾರ್ಕೂರು.ತಮ್ಮ ವಿದ್ಯಾಭ್ಯಾಸವನ್ನೆಲ್ಲ  ಮುಂಬಯಿಯಲ್ಲಿ ಪೂರೈಸಿದ್ದು  Hotel & Catering Management ನಲ್ಲಿ ಪದವಿ ಅಲ್ಲದೆ Marketing & Business Administration ನಲ್ಲಿ MBA ಮಾಡಿದ್ದಾರೆ. ಪ್ರಸ್ತುತ ಕೊಲ್ಲಿರಾಷ್ಟ್ರವಾದ ಕತಾರ್ ನಲ್ಲಿನ ಅಂತರಾಷ್ಟ್ರೀಯ  ಇಂಜಿನಿಯರಿಂಗ್   ಸಂಸ್ಥೆಯೊಂದರಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಿಜಯ್ ಬಾರಕೂರು, ದೋಹಾ ಕತಾರ್
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2011-07-28

Tell a Friend
ಇತರ ಸಂಭಂದಪಟ್ಟ ವರದಿಗಳು
»
»ನಕಲಿ ಗ್ಯಾಸ್-ಬಿಪಿ‌ಎಲ್ ಕಾರ್ಡ್‌ದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಇಂಧನ ಸಚಿವೆ ಶೋಭಾ ಕರಂದ್ಲಾಜೆ
»

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕತಾರ್]

»ಕತಾರ್ ತುಳು ಒಕ್ಕೂಟದಿಂದ ಆರೋಗ್ಯ ಜಾಗೃತಿ ವಿಚಾರ ಸಂಕಿರಣ
»ಮೆಕ್‍ಡೋನಾಲ್ಡ್ ದೋಹಾ ಲಿಟಲ್ ಸ್ಟಾರ್ ಕನ್ನಡದ ಬಾಲೆ ಸಂಜನಾ ಕಾಮತ್
»ಉಡುಗೆ ತೊಡುವುದು ಹೇಗೆಂದು ಕತಾರ್ ಕಲಿಸಲಿದೆ
»ದೋಹಾ ಕತಾರ್ : ಕುಲಾಲ ಸಂಗಮ ...
»ಕತಾರಿನಲ್ಲಿ "ಯುಎಇ ಎಕ್ಸ್ ಚೇಂಜ್" ಇನ್ನೊಂದು ಬ್ರಾಂಚ್ ಪಾದಾರ್ಪಣೆ
»ಅನಿವಾಸಿ ಭಾರತೀಯ ಕತಾರ್ ಶಾಲೆಗಳಲ್ಲಿ ಹೆಚ್ಚುವರಿ ಶಾಲಾ ಫೀಜು ವಸೂಲಿ ಆರೋಪ
»ತಾ.13ರಂದು ದೋಹ-ಮಂಗಳೂರು ಏರ್ ಇಂಡಿಯಾ ವಿಮಾನ ಹಾರಾಟ
»"ಬಳಕೆದಾರಾರೆ ನಂಬಬೇಡಿ" ಕಹ್ರಮಾ ಎಚ್ಚರ: ಕತಾರಿನಲ್ಲಿ ವಿದ್ಯುತ್-ನೀರು ಸರಭರಾಜು ನಕಲಿ ನೌಕರರು
»ಕತಾರ್ ಏಷ್ಯನ್ ಕ್ರಿಕೆಟ್ ಕ್ಲಬ್ ಸಿಡಿಸಿ-2012 ಚಾಂಪಿಯನ್
»ಕತಾರ್ ಬೆಂಕಿಯಲ್ಲಿ ಕೇಳಿದ ಕಟ್ಟ ಕಡೆಯ ಆರ್ತಸ್ವರ : ರಕ್ಷಿಸಿ..ಸಾಯುತ್ತಿದ್ದೇನೆ ..!
»ಕತಾರ್ ಬೆಂಕಿ ದುರಂತ:ಮಾಲೀಕನನ್ನು ಬಂಧಿಸಲು ಸರಕಾರದ ತುರ್ತು ಆದೇಶ
»ನ್ಯೂಜಿಲ್ಯಾಂಡ್ ದಂಪತಿಯ ತ್ರಿವಳಿ ಹಸುಳೆಗಳು ಕತಾರ್ ಬೆಂಕಿಗೆ ಬಲಿ
»ಬೆಂಕಿ ದುರಂತಕ್ಕೆ ಕತಾರ್ ಕಂಬನಿ: ಕಳಪೆ ರಕ್ಷಣಾ ವ್ಯವಸ್ಥೆಗೆ ಗಂಭೀರ ಆರೋಪ
»ದೋಹಾ ಶಾಪಿಂಗ್ ಮಾಲ್ ನಲ್ಲಿ ಭಯಂಕರ ಬೆಂಕಿ ಅನಾಹುತ - 13 ಮಕ್ಕಳ ಸಮೇತ 19 ಸಾವು
»ಸಿ.ಬಿ.ಎಸ್.ಸಿ ಕ್ಲಾಸ್-10 ಫಲಿತಾಂಶ ಪ್ರಕಟ :ಕತಾರ್ ಇಂಡಿಯನ್ ಶಾಲೆಗಳ ಗಮನಾರ್ಹ ಸಾಧನೆ
»ಬಡತನವ ಮೆಟ್ಟಿದ ಬಾಲಕ ಅಕ್ಷಯರಾಜ್ ಶೆಟ್ಟಿ ಕಲೆ ಜಪಾನ್ ದೇಶಕ್ಕೆ ಅನಿವಾಸಿಗಳ ಹಣ ಸಹಾಯಕ್ಕೆ ಮನವಿ
»ಪೈಲೆಟ್ ಮುಷ್ಕರ: ಏರ‍್ ಇಂಡಿಯಾ ತಾ.18 ರ ದೋಹ ವಿಮಾನ ಹಾರಾಟ ರದ್ದು
»ಕತಾರ್ ಪ್ರಜೆಯಾಗಲು ಅರ್ಜಿ ಸಲ್ಲಿಸಬಹುದು
»Huge Response For KMCA Blood Donation Drive
»ಆರು ಒಪ್ಪಂದಗಳಿಗೆ ಭಾರತ- ಕತಾರ್ ಸಹಿ
»ATS Rocks by Entertaining the Employees
»ಕೆಎಂಸಿಎಯ ನೂತನ ಅಧ್ಯಕ್ಷರಾಗಿ ಸಯೀದ್ ಅಸಾದಿ ಆಯ್ಕೆ
»ಕತಾರ್: ಕೆ.ಎಂ.ಸಿ.ಎ ಇದರ ನೂತನ ಅಧ್ಯಕ್ಷರಾಗಿ ಸಾಹಿದ್ ಅಸ್ಸಾದಿ ಆಯ್ಕೆ
»ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಕತಾರ್‌ಗೆ ಅಗ್ರಸ್ಥಾನ
»ಕತಾರ್ ಕರ್ನಾಟಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri