ಕತಾರ್ ಕರ್ನಾಟಕ ಸಂಘದ ವಾರ್ಷಿಕೋತ್ಸವ - ಕರ್ನಾಟಕದ ಮಕ್ಕಳ ಪ್ರತಿಭೆಗೆ ಬೆಳಕು ಚಿಲ್ಲಿದ ಸಂಘಟಕರು. |
ಪ್ರಕಟಿಸಿದ ದಿನಾಂಕ : 2011-06-20
ದೋಹ, ಕತಾರ್: ಕರ್ನಾಟಕ ಸಂಘ ಕತಾರ್ (KSQ) ಇವರ ವಾರ್ಷಿಕೋತ್ಸವವು ಕತಾರ್ನ ಸ್ಕಿಲ್ ಡೆವೆಲಪ್ಮೆಂಟ್ ಸೆಂಟರ್ ನಲ್ಲಿ ಇತ್ತೀಚಿಗೆ ಬಹಳ ವಿಜೃಂಭಣೆಯಿಂದ ಜರಗಿತು. ಈ ಸಂದರ್ಭ ದಲ್ಲಿ ಕರ್ನಾಟಕದ ಪ್ರತಿಭಾವಂತ ಮಕ್ಕಳಿಗಾಗಿ "ಮಕ್ಕಳ ಪ್ರತಿಭಾನ್ವೇಷಣೆ-2011", ಕಾರ್ಯಕ್ರಮವನ್ನು ಸಂಘದ ವತಿಯಿಂದ ಏರ್ಪಡಿಸಲಾಗಿತ್ತು.
ವಿವಿಧ ರೀತಿಯ 7 ಸಾಂಸ್ಕೃತಿಕ ಹಾಗೂ 3 ಒಳಾಂಗಣಾ ಕ್ರೀಡೆಗಳನ್ನು ಅಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 135 ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಕಾರ್ಯಕ್ರಮದ ಆರಂಭದ (ಜೂ.10) ಮೊದಲ ದಿನ ಚಿತ್ರಕಲೆ, ರಸಪ್ರಶ್ನೆ, ಸಂಗೀತಾ, ನೃತ್ಯ, ಛದ್ಮವೇಷ ಮುಂತಾದ ವಿವಿಧ ಸ್ಪರ್ಧೇಗಳು ನಡೆದವು.
ಜೂನ್ 17ರ ಕೊನೆಯ ದಿನ ಒಳಾಂಗಣಾ ಕ್ರೀಡಾ ಸ್ಪರ್ಧೇ ನಡೆಯಿತು. ಕ್ಯಾರಮ್, ಚೆಸ್, ಟೆಬಲ್ ಟೆನ್ನಿಸ್ ಮುಂತಾದ ಸ್ಪರ್ಧೇಗಳಲ್ಲಿ ಸುಮಾರು 40 ಮಕ್ಕಳು ಪಾಲ್ಗೊಂಡರು.
ಜೂ.17ರಂದು ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸ್ವಾಗತಿಸಿ, ಪ್ರಸ್ತಾವನೆಗೈದ ಸಂಘದ ಅಧ್ಯಕ್ಷರಾದ ವಿ.ಎಸ್.ಮನಂಗಿ ಅವರು ಈ ಸ್ಪರ್ಧೇಗಳಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಪ್ರೋತ್ಸಾಹಿಸಿದ ಮಕ್ಕಳ ಪೋಷಕರಿಗೆ ಅಭಿನಂದನೆ ಸಲ್ಲಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ದೀಪಕ್ ಶೆಟ್ಟಿ ಅವರು ವಂದನಾರ್ಪಣೆಗೈದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2011-06-20
|
|
|