ಮಂಗಳವಾರ, 10-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ವ್ಯೂತ್ಸ್ ಬುರ್ಗ್ ವಸಂತೋತ್ಸವ: ಇನ್ನಷ್ಟು ಸಂಗತಿಗಳು, ಮತ್ತಷ್ಟು ಚಿತ್ರಗಳು...

ವ್ಯೂತ್ಸ್ ಬುರ್ಗ್ ವಸಂತೋತ್ಸವ ಉದ್ಘಾಟನೆ ಮಾಡಿದ ನಗರದ ಮೇಯರ್ ಗೆಯಾರ್ಗ್ ರೊಸೆನ್ ತಾಲ್ ಸಂಪ್ರದಾಯದಂತೆ ಸ್ಕಾಟಿಷ್ ಮೆರವಣಿಗೆಯಲ್ಲಿ ಬಂದರು.ನೇರವಾಗಿ ವೇದಿಕೆ ಏರಿ ತಮ್ಮ ಚುಟುಕು ಭಾಷಣ ಸುರು ಮಾಡಿದರು. ಸ್ವಾಗತ, ಹಾರ, ನಿರ್ವಹಣೆ, ಅಧ್ಯಕ್ಷತೆ, ವೇದಿಕೆಯಲ್ಲಿ ಆಸನ -ಯಾವುದೂ ಇಲ್ಲ. ನಿಂತುಕೊಂಡು ಐದು ನಿಮಿಷ ಮಾತಾಡಿದರು. ಇಂತಹ ಅಂತಾರಾಷ್ಟ್ರೀಯ ವಸಂತೋತ್ಸವ ವ್ಯೂತ್ಸ್ ಬುರ್ಗ್ ನಗರವನ್ನು ಹೇಗೆ ಬಹು ಸಂಸ್ಕೃತಿಗಳ ಸುಂದರ ನಗರವಾಗಿಸುತ್ತದೆ ಎನ್ನುತ್ತಾ ಕಲಾವಿದರನ್ನು ಅಭಿನಂದಿಸಿದರು.

ಬಳಿಕ ಸಾಮಾನ್ಯರಂತೆ ಬಂದು ಸಭಿಕರ ನಡುವೆ ನಿಂತುಕೊಂಡು ಸುಮಾರು ಅರ್ಧ ಗಂಟೆ ಕಲಾ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಸಭಿಕರಿಗಾಗಿ ಹಾಕಿದ್ದ ಕೆಲವೇ ಬೆಂಚುಗಳಲ್ಲಿ ಮುಂದಿನ ಬೆಂಚಿನಲ್ಲಿ ನಾನು ಕುಳಿತುಕೊಂಡಿದ್ದೆ, ಆಗಾಗ ಫೋಟೋ ತೆಗೆಯುತ್ತಿದ್ದೆ. ಮೇಯರ್ ನಿಂತುಕೊಂಡೇ ಬಹಳ ಹೊತ್ತು ಕಾರ್ಯಕ್ರಮ ನೋಡುತ್ತಿದ್ದುದನ್ನು ಕಂಡು ನನಗೆ  ಮುಜಗರ ಆಯಿತು. ಯಾರೂ ಎದ್ದುನಿಂತು ಅವರನ್ನು ಆಹ್ವಾನಿಸಲಿಲ್ಲ. ಅವರಾದರೋ ಯಾವ ನಿರೀಕ್ಷೆಯೂ ಇಲ್ಲದೆ, ನಿರಾಳವಾಗಿ ನೋಡುತ್ತಿದ್ದರು. ಬಳಿಕ ಎಲ್ಲ ಮಳಿಗೆಗಳಿಗೆ ಭೇಟಿಕೊಟ್ಟು, ಅಲ್ಲಿ  ಇದ್ದವರನ್ನು ಮಾತಾಡಿಸುತ್ತಾ ಒಬ್ಬಂಟಿಯಾಗಿ ಸುತ್ತಾಡುತ್ತಿದ್ದರು. ಹಿಂಬಾಲಕರೂ  ಇಲ್ಲ, ಮುಂಬಾಲಕರೂ  ಇರಲಿಲ್ಲ.

ಎಲ್ಲರನ್ನೂ ಮಾತಾಡಿಸುತ್ತಾ, ನಮ್ಮ ಇಂಡೋ ಜರ್ಮನ್ ಸಂಘದ ಮಳಿಗೆಗೆ ಬಂದರು.ಅನ್ನ ಮತ್ತು ಕೆಲವು ಪದಾರ್ಥ ತೆಗೆದುಕೊಂಡರು. ಬೇಡ ಎಂದರೂ ಅದರ ಹಣ ಕೊಟ್ಟರು. ತಟ್ಟೆ ತುಂಬಿಸಿಕೊಂಡು ಹೊರಗೆ ಬಂದಾಗ ನಾನು ಮಾತಾಡಿಸಿದೆ. ಪರಿಚಯ ಮಾಡಿಕೊಂಡು ಭಾರತದಿಂದ ನಾನು ಬಂದ ಉದ್ದೇಶ ಹೇಳಿದೆ. ಕರ್ನಾಟಕದ ಬಗ್ಗೆ ತಿಳಿಸಿದೆ. ಭಾರತದ ಬಗ್ಗೆ ತುಂಬಾ ಮೆಚ್ಚುಗೆ ಮತ್ತು ಗೌರವದಿಂದ ಮಾತಾಡಿದರು.

ನನ್ನ ಎದುರೇ ನಮ್ಮ ಅಡುಗೆಯ ರುಚಿ ನೋಡಿ ಖುಷಿಪಟ್ಟರು. ನನ್ನ ಜೊತೆಗೆ ಫೋಟೋ ತೆಗೆಸಿಕೊಳ್ಳುವಾಗಲೂ ನಮ್ಮ ಭಾರತೀಯ ಆಹಾರದ ತಟ್ಟೆಯನ್ನು ಕೈಯಲ್ಲಿ ಹಿಡಿದುಕೊಂಡಿದ್ದರು. ಮೇಯರ್ ಹೊರಗೆ ಹೋಗುವಾಗ ನಾನು ಗಮನಿಸುತ್ತಾ ಇದ್ದೆ. ಪಾರ್ಕಿನಿಂದ ಸಾಕಷ್ಟು ದೂರ ಪಾರ್ಕ್ ಮಾಡಿದ್ದ ತಮ್ಮ ಕಾರಿನ ಬಳಿಗೆ ಒಬ್ಬರೇ ನಡೆದುಕೊಂಡು ಹೋಗಿ, ತಮ್ಮ ಕಾರನ್ನು ತಾವೇ ಡ್ರೈವ್ ಮಾಡುತ್ತಾ ಹೋದರು. ಕಾರಲ್ಲಿ ಕಚೇರಿ ಸಿಬ್ಬಂದಿ ಆಗಲೀ, ಸುರಕ್ಷತೆಯವರಾಗಲೀ ಯಾರೂ ಇರಲಿಲ್ಲ.

ವ್ಯೂತ್ಸ್ ಬುರ್ಗ್ ನಗರದಲ್ಲಿ ಎರಡು ಚಳಿಗಾಲಗಳನ್ನು ಮತ್ತು ಒಂದು ಬೇಸಗೆಕಾಲವನ್ನು ಕಳೆದು, ಎರಡನೆಯ ಬೇಸಗೆಯ ಋತುವಿನಲ್ಲಿ ಈಗ ಇಲ್ಲಿ ನಾನು ಇದ್ದೇನೆ. ಮೈನಸ್ ಇಪ್ಪತೈದು ಡಿಗ್ರಿ ಛಳಿಯ ಹಿಮದ ರಾಶಿಯಲ್ಲಿ ಮುಳುಗಿದ್ದ ಈ ನಗರವನ್ನು ಕಂಡಿದ್ದೇನೆ. ವಿದ್ಯುತ್ ಮತ್ತು ನೀರು ಇಲ್ಲದ ಒಂದು ನಿಮಿಷದ ಅನುಭವದ ಭಾಗ್ಯ ಇಲ್ಲಿ ನನಗೆ ದೊರೆತಿಲ್ಲ. ಹಿಮದ ಪಾತದ ದಿನಗಳಲ್ಲೂ ಬೆಳಗಾದರೆ ಮಾರ್ಗಗಳ, ಕಾಲುದಾರಿಗಳ ಹಿಮವನ್ನು ಕರಗಿಸುವ ಮತ್ತು ತೆಗೆದು ಸಾಗಿಸುವ ಸಾಹಸವನ್ನು ಕಣ್ಣಾರೆ ಕಂಡಿದ್ದೇನೆ. ನಗರದ ಸುಮಾರು ಅರ್ಧದಷ್ಟು ಭಾಗ ಸಸ್ಯಗಳ ಉದ್ಯಾನ ಮತ್ತು ಅರಣ್ಯದ ದಟ್ಟಣೆಯಿಂದ ಸದಾ ಶುಚಿಯಾಗಿ ಇರುವುದನ್ನು ಅನುಭವಿಸಿದ್ದೇನೆ. ಎಂತಹ ಹವೆಯಲ್ಲೂ ನಿಮಿಷ ತಡಮಾಡದೆ ಸಂಚರಿಸುವ ಟ್ರಾಮ್ ಮತ್ತು ಬಸ್ಸುಗಳಲ್ಲಿ ಓಡಾಡಿದ್ದೇನೆ. ಎಂತಹ ಅಪರ ರಾತ್ರಿಯಲ್ಲೂ ಅಪಾಯ ಇಲ್ಲದೆ ಸಂಚರಿಸಬಲ್ಲ  ಜರ್ಮನಿಯ ಅಪೂರ್ವ ನಗರ ಇದು ಎನ್ನುವುದನ್ನು ಮನಗಂಡಿದ್ದೇನೆ. ನಾಟಕ, ಒಪೆರ, ಸಂಗೀತಕ್ಕಾಗಿ ಒಳ್ಳೆಯ ಥಿಯೇಟರ್ ಒದಗಿಸಿ, ಸದಾ ಕಲಾಸಕ್ತರಿಗೆ ತೃಪ್ತಿ ಕೊಡುವ ಅವಕಾಶವನ್ನು ಈ ಪುಟ್ಟ ನಗರ ಕೊಡುತ್ತಿದೆ.

ಕಳೆದ ಎರಡು ದಿನಗಳಿಂದ ಇಲ್ಲಿನ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಒಂದು ಪ್ರಮುಖ ಸುದ್ದಿ ಎಂದರೆ -ಟೊಮೇಟೊ ಮತ್ತು ಸೌತೆಕಾಯಿಯನ್ನು ಬೇಯಿಸದೆ ಹಸಿಯಾಗಿ ತಿನ್ನಬೇಡಿ, ಎನ್ನುವುದು. ಸ್ಪೇನ್ ನಿಂದ ಬಂದ ಈ ತರಕಾರಿಗಳಲ್ಲಿ  ರೋಗಾಣುಗಳು ಸೇರಿಕೊಂಡು ಅಪಾಯ ಮಾಡಬಲ್ಲವು ಎನ್ನುವ ಸುದ್ದಿ ಈಗ ಈ ನಗರದಲ್ಲಿ ಎಲ್ಲರಿಗೂ ಗೊತ್ತಾಗಿದೆ. ಇಲ್ಲಿನ ಸ್ಥಳೀಯ ಮಾಧ್ಯಮಗಳಲ್ಲಿ ರಾಜಕೀಯದ  ಸುದ್ದಿಯೇ ಇಲ್ಲ. ಜನರ ಅಗತ್ಯ, ಸಮಸ್ಯೆ, ಎಚ್ಚರ -ಇಷ್ಟೇ ಮುಖ್ಯ. ನಗರದ ಆಡಳಿತವೊಂದು ಜನರಿಗಾಗಿ ಹೇಗೆ ಕೆಲಸಮಾಡುತ್ತದೆ ಎನ್ನುವುದನ್ನು ದಿನದ ಕ್ಷಣ ಕ್ಷಣವೂ ಕಾಣಬಹುದು. ಮೇಯರ್ ತಮ್ಮ ಭಾಷಣದಲ್ಲಿ ತಮ್ಮ ಆಡಳಿತದ ಸಾಧನೆಯ ಬಗ್ಗೆ ಒಂದೇ ಒಂದು ಮಾತನ್ನು ಆಡಲಿಲ್ಲ.

ವಸಂತೋತ್ಸವದಲ್ಲಿ ಮುಖ್ಯ ವೇದಿಕೆಯಲ್ಲಿ ಅನೇಕ ಕಲಾ ಕಾರ್ಯಕ್ರಮಗಳು ನಡೆಯುತ್ತಿದ್ದುವು. ನನ್ನ ಕನ್ನಡ ವಿದ್ಯಾರ್ಥಿ -ಜರ್ಮನ್ ತರುಣ ಮಿಗುವೆಲ್ ಕೊಲೋಮೋ ಇದ್ದ ಚರ್ಮವಾದ್ಯ ವಾದನದ ಪ್ರದರ್ಶನ ಅದ್ಭುತವಾಗಿತ್ತು. ಎಲ್ಲ ಮಳಿಗೆಗಳಲ್ಲೂ ತಮ್ಮ ದೇಶಗಳ ಕಲಾವಸ್ತುಗಳ ಪ್ರದರ್ಶನ ಕೂಡಾ ಇತ್ತು. ಚೀನಾದ ಮಳಿಗೆ ಈ ದೃಷ್ಟಿಯಿಂದ ಗಮನ ಸೆಳೆಯಿತು. ನನ್ನ ಹಳೆಯ ಸಂಬಂಧದ ನೆನಪಿನಲ್ಲಿ ಫಿನ್ಲೆಂಡ್ ನ ಮಳಿಗೆಗೂ ಭೇಟಿ ಕೊಟ್ಟೆ.’ ದಂಕೆ ಶೋನ್ ‘ ಎಂದು ಇಲ್ಲಿ ಹೇಳಿ ಅಭ್ಯಾಸ ಆಗಿ , ಫಿನ್ಲೆಂಡ್ ಮಳಿಗೆಯಲ್ಲಿ ‘ಕೀತೊಸ್ ‘(ಧನ್ಯವಾದ ) ಎಂದಾಗ ಮತ್ತೆ ಸರೋವರಗಳ ನಾಡು ನೆನಪಾಯಿತು.

‘ವಸಂತ ಬಂದ ಋತುಗಳ ರಾಜ ‘ ಎಂಬ ಹಾಡು ಮತ್ತೆ ಮತ್ತೆ ಹೇಳಲು ಸಾಧ್ಯ ಆಗುವುದು, ನಗರವೊಂದು ನಿಜವಾದ ಅರ್ಥದಲ್ಲಿ ಜನರಿಗೆ ನೆಮ್ಮದಿ , ಶಾಂತಿ, ಸಂತೋಷ, ಸ್ವಾತಂತ್ರ್ಯ ಮತ್ತು ಸೃಜನಶೀಲತೆ -ಇವನ್ನು ಒಟ್ಟಿಗೆ ಕೊಟ್ಟಾಗ: ವಸಂತ ಕಾಲದಲ್ಲಿ ಮರಗಿಡಗಳು ಒಟ್ಟಿಗೆ ಚಿಗುರಿದಂತೆ, ಬಗೆಬಗೆಯ ಹೂಗಳು ಸಾಮೂಹಿಕವಾಗಿ ಅರಳಿದಂತೆ....

- ಡಾ. ಬಿ. ಎ. ವಿವೇಕ ರೈ, ವೂತ್ಸ್ ಬರ್ಗ್- ಜರ್ಮನಿ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಡಾ. ಬಿ. ಎ. ವಿವೇಕ ರೈ, ವೂತ್ಸ್ ಬರ್ಗ್- ಜರ್ಮನಿ.
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2011-06-01

Tell a Friend
ಇತರ ಸಂಭಂದಪಟ್ಟ ವರದಿಗಳು
»ವಸಂತ ಬಂದ ಮತ್ತೆ ವ್ಯೂತ್ಸ್ ಬುರ್ಗ್ ಗೆ -ಭಾರತದ ಬಾವುಟ ಮತ್ತು ಊಟ ಚಂದ

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಎನ್.ಆರ್.ಕ-ಎನ್.ಆರ್.ಐ]

»ಅನಿವಾಸಿ ಕನ್ನಡಿಗರು ಭಾರತದ ವಕ್ತಾರರು
»ಏಳನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ: ಶಾಸ್ತ್ರಭಾಷೆ ಬೆಳೆಸಲು ಕಂಬಾರ ಕರೆ
»ಥೈಲ್ಯಾಂಡ್‌ನಲ್ಲಿ ಜರುಗಿದ 7ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮ್ಮೇಳನ: ಕನ್ನಡಿಗರು ಎಂದರೆ ನಂಬಿಕಸ್ಥರು: ಡಿ.ಎಸ್. ವೀರಯ್ಯ
»ಕರ್ನಾಟಕ ರಾಜ್ಯದಲ್ಲಿ ಭಂಡವಾಳ ಹೂಡಿಕೆಗೆ ಬ್ರಿಟನಿನ್ನಲ್ಲಿ ಆಹ್ವಾನ
»ನ್ಯೂಜೆರ್ಸಿಯಲ್ಲಿ ಪಂಚಕಲ್ಯಾಣಪೂರ್ವಕ ಪ್ರತಿಷ್ಠಾನ ಮಹೂತ್ಸವ
»ಇಸ್ರೇಲ್ : ಕೊಂಕಣಿ ನ್ಯೂಸ್ ವೆಬ್ ಸೈಟ್ ಲೋಕಾರ್ಪಣೆ
»ಶಿಕ್ಷಕಿ ಡೇನಿಯಲ್‌ ಮೆಹಲ್ಮನ್‌ ಕೊಲೆ ಪ್ರಕರಣ: ಬೆಂಗಳೂರು ಟೆಕ್ಕಿ ನ್ಯೂಜೆರ್ಸಿಯಲ್ಲಿ ಆತ್ಮಹತ್ಯೆ - ಕೊಲೆ ಶಂಕೆ
»ಮಾಲ್ಡೀವ್ಸ್ ಕನ್ನಡ ಬಳಗದ ಉದಯ...
»Dr. Austin Prabhu Elected as the State Vice Council Chairman
»ಅಂಗೋಲಾದಲ್ಲಿ ದೌರ್ಜನ್ಯ: ಕನ್ನಡಿಗ ವಿನಯ್‌ ಆಸ್ಪತ್ರೆಗೆ
»ಮಾಲ್ಡೀವ್ಸ್ ಕನ್ನಡ ಬಳಗದ ಉದಯ...
»ಕಂದಮ್ಮಗಳ ಸಹಿತ ಭಾರತೀಯ ದಂಪತಿ ಸಾವು
»ಮೈಸೂರಿನ ಉದ್ಯಮಿಯ ಕಂಪನಿಗೆ ಅಟ್ಲಾಂಟಾದ ಪ್ರತಿಷ್ಠಿತ ಪ್ರಶಸ್ತಿ
»ಭಾರತೀಯ ವಿದ್ಯಾರ್ಥಿ ವೀಸಾ: ಅಮೆರಿಕ ಸ್ಪಷ್ಟನೆ
»ಡಲ್ಲಾಸ್‌: ಭಾರತೀಯ ವಿದ್ಯಾರ್ಥಿ ಸಾವು
»ಯುಎಸ್ ಹಾದಿ ಹಿಡಿದ ಯುಕೆ, ಇಂಡಿಯನ್ಸ್ ಗೆ ಕೆಲ್ಸ ಏಕೆ?
»ಭಾರತೀಯ ಅಮೆರಿಕನರು 3ನೇ ದೊಡ್ಡ ಸಮುದಾಯ
»ಅಮೆರಿಕ: ಭಾರತೀಯ ಮನೆ ಕೆಸದಾಕೆಗೆ 15 ಲಕ್ಷ ಡಾಲರ್ ಪರಿಹಾರ
»ಅಟ್ಲಾಂಟಾ ಅಕ್ಕ ಕನ್ನಡ ಸಮ್ಮೇಳನಕ್ಕೆ ಡಿವಿ 'ಯಸ್'
»Indian community leaders from various organizations gathered in solidarity at the Indian consulate Chicago
»ಕವಿ ಡಾ. ನಾಗಭೂಷಣ ಮೂಲ್ಕಿ ಅವರಿಗೆ ಪ್ರವಾಸಿ ಲೈಫ್ ಟೈಮ್ ಎಚಿವ್ ಮೆಂಟ್ ಅಂತರ್ ರಾಷ್ಟ್ರೀಯ ಪುರಸ್ಕಾರ
»ಭಾರತ ಸಂಜಾತ ವಿಜ್ಞಾನಿ ರಾಮಕೃಷ್ಣನ್‌ಗೆ ಬ್ರಿಟನ್‌ನ ಪ್ರತಿಷ್ಠಿತ ‘ನೈಟ್‌ಹುಡ್’ ಪ್ರಶಸ್ತಿ
»ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡೇಟು, ಹತ್ಯೆ
»ಬಿದ್ವೆ ಹತ್ಯೆ: ಹಂತಕರ ಸುಳಿವಿಗೆ ಬಹುಮಾನ
»ಜಮಾಯತುಲ್ ಫಲಾಹ್ ಇದರ ವತಿಯಿಂದ ಸೌಹಾರ್ದ ಕೂಟ ಸಮಾರಂಭ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri