ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ವಸಂತ ಬಂದ ಮತ್ತೆ ವ್ಯೂತ್ಸ್ ಬುರ್ಗ್ ಗೆ -ಭಾರತದ ಬಾವುಟ ಮತ್ತು ಊಟ ಚಂದ

 - ಡಾ. ಬಿ. ಎ. ವಿವೇಕ ರೈ, ವೂತ್ಸ್ ಬರ್ಗ್- ಜರ್ಮನಿ.

ಮತ್ತೆ ಮೊನ್ನೆ ಭಾನುವಾರ ಜರ್ಮನಿಯ ವ್ಯೂತ್ಸ್ ಬುರ್ಗ್ ನಗರದಲ್ಲಿ ವಸಂತೋತ್ಸವ. ’ಸ್ಪ್ರಿಂಗ್ ಇಂಟರ್ ನ್ಯಾಷನಲ್ ಫೆಸ್ಟಿವಲ್’-ನಗರವನ್ನು ಸೀಳುವ ಮಾಯಿನ್ ನಗರದ ಚಂದದ ಹೂಗಳ ಉದ್ಯಾನವನದಲ್ಲಿ. ಕಳೆದ ವರ್ಷದಂತೆಯೇ ಈ ಬಾರಿಯೂ  ಈ ನಗರದ ಅನೇಕ ಅಂತಾರಾಷ್ಟ್ರೀಯ ಸಂಬಂಧದ ದೇಶಗಳ ಸಂಘಗಳು ಮಳಿಗೆಗಳನ್ನು ತೆರೆದಿದ್ದುವು. ಭಾರತ, ಚೀನ, ಘಾನ, ಫಿನ್ಲೆಂಡ್, ಟರ್ಕಿ, ಟಿಬೆಟ್, ಫ್ರಾನ್ಸ್, ಸ್ವೀಡನ್, ಐರ್ಲೆಂಡ್, ಇಟಲಿ, ಸ್ಪೇನ್, ಶ್ರೀಲಂಕ ತಮಿಳು ಸಂಘ, ಅಮೇರಿಕ -ಹೀಗೆ ಜರ್ಮನಿಯೊಂದಿಗಿನ ಇಂತಹ ಸೌಹಾರ್ದ ಸಂಘಗಳು ತಮ್ಮ ಆಹಾರ, ಸಾಂಸ್ಕೃತಿಕ ವಸ್ತುಗಳು, ಹಾಡು ಕುಣಿತ ಚಿತ್ರ ಕಲೆ ಗಳ ಪ್ರದರ್ಶನಗಳನ್ನು ವಿಶಿಷ್ಟವಾಗಿ ನಡೆಸಿದವು.

ನಮ್ಮ ದೇಶ ಭಾರತವನ್ನು ಪ್ರತಿನಿಧಿಸುವ ಇಂಡೋ ಜರ್ಮನ್ ಸಂಘದ ಮಳಿಗೆ ಎಂದಿನಂತೆ ಭೌತಿಕವಾಗಿ ಮತ್ತು ಜನಪ್ರಿಯತೆಯ ದೃಷ್ಟಿಯಿಂದ ಎತ್ತರದಲ್ಲಿ ಇತ್ತು.ಸಂಘದ ಅಧ್ಯಕ್ಷೆ ಪ್ರೊಫೆಸರ್ ಬ್ರೂಕ್ನರ್, ಕಾರ್ಯದರ್ಶಿ ಎಂಗೆಲ್, ಉಪಾಧ್ಯಕ್ಷ ಪ್ರೊ.ಕ್ರೆಫ್ತ್ , ಭಾರತೀಯ ಮೂಲದ ಜರ್ಮನ್ ನಿವಾಸಿ ಸಿನ್ಹ, ಇಂಡಾಲಜಿ ವಿಭಾಗದ ಸಾರಾ, ಸೀನಾ , ಮರಿಯಾ, ಅಕಿ, ನಮ್ಮ ಕಡೆಯಿಂದ ಕೋಕಿಲ , ಇನ್ನು ಅನೇಕರು ಜರ್ಮನ್ ಭಾರತೀಯ ಸಂಘದ ಮಳಿಗೆಯನ್ನು ಆಕರ್ಷಣೆಯ ಕೇಂದ್ರವನ್ನಾ ಗಿಸಿದರು. ಭಾರತದ ಬಾವುಟ ಮತ್ತು ಪೋಸ್ಟರ್ ಗಳು ರಾರಾಜಿಸಿದವು.ನೆಹರು ಕಾಲದಿಂದ ಇಂದಿನವರೆಗೆ ಭಾರತ ಮತ್ತು ಜರ್ಮನಿ ದೇಶಗಳ ನಡುವಿನ ಸೌಹಾರ್ದ ಸಂಬಂಧವನ್ನು ಸಾರುವ ಚಿತ್ರಗಳು ಗಮನ ಸೆಳೆದವು. ಪೌಲಿನೆ ಭಾರತದ ‘ಹನ್ನ’-ಮದರಂಗಿ ಹಾಕಿದಳು. ಜರ್ಮನ್ ಮಕ್ಕಳು ತಮ್ಮ ಕೈ ಮೈಗಳಿಗೆ ಹಾಕಿಸಿಕೊಳ್ಳುತ್ತಿದ್ದ ಮದರಂಗಿ ಮುದ್ದು ಮಕ್ಕಳನ್ನು ಇನ್ನಷ್ಟು ಚಂದ ಕಾಣಿಸುತ್ತಿತ್ತು.

ಎಂದಿನಂತೆ ಭಾರತೀಯ ಊಟ ಮತ್ತು ತಿಂಡಿ ತಿನಿಸುಗಳಿಗೆ ನಮ್ಮ ಮಳಿಗೆಗೆ ವಿಪರೀತ ನೂಕುನುಗ್ಗಲು ಇತ್ತು. ಅನ್ನ, ಚಪಾತಿ, ಹಪ್ಪಳ ದೊಂದಿಗೆ ಸುಮಾರು ಹದಿನೈದು ಬಗೆಯ ತರಕಾರಿ ಪದಾರ್ಥ -ಪಲ್ಯಗಳ ರುಚಿಗೆ ಜನರು ಎಷ್ಟು ಮನಸೋತರೆಂದರೆ ಐದು ಗಂಟೆವರೆಗೆ ತೆರೆದಿರಬೇಕಾದ ಮಳಿಗೆಯಲ್ಲಿ ಮೂರುಗಂಟೆಯ ವೇಳೆಗೆ ಎಲ್ಲ ಆಹಾರ ಖಾಲಿಯಾಗಿ, ಪಕ್ಕದ ಶ್ರೀಲಂಕಾ ತಮಿಳು ಸಂಘದ ಮಳಿಗೆಗೆ ಸಂದರ್ಶಕರು ಹೋಗಬೇಕಾಯಿತು. ನಮ್ಮ ಮಳಿಗೆಯ ಎಲ್ಲ ಆಹಾರ ಪದಾರ್ಥಗಳು ಜರ್ಮನರು ಮತ್ತು ನಾವು ನಮ್ಮ ಮನೆಗಳಲ್ಲಿ ತಯಾರಿಸಿಕೊಂಡು ಬಂದವು. ಕಳೆದಬಾರಿ ಕೇಸರಿಬಾತ್ ಮಾಡಿದ್ದ ಕೋಕಿಲ ಈಬಾರಿ ಮಂಗಳೂರಿನ ವಿಶೇಷ ಸಿಹಿ ತಿಂಡಿ ಬಾಳೆಹಣ್ಣಿನ ಹಲ್ವ ಮಾಡಿದ್ದಳು. ಹಲ್ವಕ್ಕೆ ಬೇಡಿಕೆ ಹೆಚ್ಚಾಗಿ ಮಧ್ಯಾಹ್ನದ ಒಳಗೆ ಹಲ್ವ ಖಾಲಿ. ನಾನು ಈಬಾರಿ ಮೊದಲ ಪ್ರಯತ್ನವಾಗಿ ನೀರುಮಜ್ಜಿಗೆ ಮಾಡಿ ಕೊಂಡುಹೋದೆ.ಮಜ್ಜಿಗೆಗೆ ಶುಂಟಿ, ಕಾಯಿಮೆಣಸು, ನೀರುಳ್ಳಿ, ಕೊತ್ತಂಬರಿ  ಸೊಪ್ಪು, ಉಪ್ಪು ಹಾಕಿ ಮಿಶ್ರಣ ಮಾಡಿ, ಬೇವು ಸೊಪ್ಪು  ಸಾಸಿವೆ ಒಗ್ಗರಣೆ ಹಾಕಿದ್ದು. ಮಜ್ಜಿಗೆ ಕುಡಿದ ಜರ್ಮನರು ಬಾಯಿ ಚಪ್ಪರಿಸಿಕೊಂಡದ್ದು ಕಂಡು ನನಗೆ ಸಮಾಧಾನ.

ವ್ಯೂತ್ಸ್ ಬುರ್ಗ್ ನಗರದ ಮೇಯರ್ ಗೆಯಾರ್ಗ್ ರೊಸೆನ್ ತಾಲ್ ನಮ್ಮ ಮಳಿಗೆಗೂ ಬಂದರು. ಸಾಮಾನ್ಯರಂತೆ ನಮ್ಮ ಅನ್ನ ಪಲ್ಯ ತೆಗೆದುಕೊಂಡು ಹೊರಗೆಬರುತ್ತಿದ್ದಾಗ ನಾನು ಕಂಡು ಪರಿಚಯ ಮಾಡಿಕೊಂಡು ಮಾತಾಡಿಸಿದೆ.ಭಾರತದ ಬಗ್ಗೆ ತುಂಬಾ  ಮೆಚ್ಚುಗೆಯ ಮಾತಾಡಿದ್ದರು. ಚೀನಾಕ್ಕಿಂತ ಹೆಚ್ಚು ಅಭಿವೃದ್ಧಿಶೀಲ ಮತ್ತು ನಿಜವಾದ ಪ್ರಜಾಪ್ರಭುತ್ವದ ದೇಶ ಎಂದು ಕೊಂಡಾಡಿದರು. ಸೋಸಿಯಲಿಸ್ಟ್ ಡೆಮಾಕ್ರಟಿಕ್ ಪಕ್ಷದ ಮೇಯರ್ ಅವರ ಈ ಮಾತು ನಮಗೆ ಸಂಭ್ರಮ , ಅವರು ನಿಂತುಕೊಂಡು ನಮ್ಮ ಊಟ ಸವಿದು ‘ತುಂಬಾ ಚೆನ್ನಾಗಿದೆ’ಎಂದದ್ದು ಸಂತೃಪ್ತಿ.

ಮೇಯರ್ ರೋಸನ್ ತಾಲ್ ಅವರ ಉದ್ಘಾಟನೆ ಮತ್ತು ಅವರ ಒಡನಾಟದ ಮಾತು ಚಿತ್ರಗಳು ಮುಂದಿನ ಬಾರಿ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಬಿ ಎ ವಿವೇಕ ರೈ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2011-05-28

Tell a Friend

ಪ್ರತಿಸ್ಪಂದನ
ರವಿ ಮುರ್ನಾಡು,, ಕ್ಯಾಮರೂನ್ ,ಆಫ್ರಿಕಾ
2011-05-29
ಸಂಸ್ಕೃತಿ ಸುಗ್ಗಿಯ ಮೆಲುಕು. ಭಾವಚಿತ್ರದಲ್ಲಿ ಅಥವಾ ಚಲನಚಿತ್ರದಲ್ಲಿ ನೋಡಿ ಭಾವವನ್ನು ಆಸ್ವಾಧಿಸುವುದಕ್ಕಿಂತ ಅದರೊಳಗೆ ಬೆರೆತು ಮುಳುಗೆಳುವುದು ಅತ್ತ್ಯುತ್ತಮ. ಶ್ರೀಯುತ ವಿವೇಕ ರೈಯವರು ಅದನ್ನು ಮಾಡಿದರು. ಭೂಮಿಯ ಜತನದಿಂದ ಬಂದ ನಮ್ಮ ಮಣ್ಣಿನ ಸಂಸ್ಕೃತಿ ಜನ್ಮ ನೀಡಿದ ತಾಯಿಯಷ್ಟೇ ಗೌರವವ ಹೊಂದಿದೆ ಅಂತ ಸಮಾಜಕ್ಕೆ ಅರಿವು ಮೂಡಿಸುವ ಕಾರ್ಯ ಆಗಬೇಕು. ಗಲ್ಪ್ಹ್ ಕನ್ನಡಿಗ ಅದನ್ನು ಮಾಡುತ್ತಿದೆ ಅಂದಾಗ ತುಂಬಿದ ಗೌರವವನ್ನು ಎರಕ ಒಯ್ಯುತ್ತೇನೆ.

ಕಾರ್ಯಕ್ರಮಕ್ಕಿಂತ ಅದನ್ನು ನಾಡಿನ ಮೂಲೆ ಮೂಲೆಗೆ ತಲಪಿಸುವುದು ಅಷ್ಟೇ ಮುಖ್ಯ .ಏಕೆಂದರೆ ,ನವ ಪೀಳಿಗೆಗೆ ಅದರ ಅರಿವು ಮೂಡಿಸುವುದು.

ಮಾನ್ಯ ವಿವೇಕ ರೈಯವರ ಸಾಧನೆಗೆ ಎಲ್ಲರ ಪ್ರೋತ್ಮಾಹ ಸಿಗಲೆಂದು ಹಾರೈಸುತ್ತೇನೆ. ಅದರಲ್ಲೂ ಹಲವು ರಾಷ್ಟ್ರಗಳ ಸಂಸ್ಕೃತಿ ಸಮ್ಮಿಲನ ಅದ್ಭುತ ಲೋಕವೊಂದು ಸೃಷ್ಟಿಯಾದಂತಿದೆ.

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಎನ್.ಆರ್.ಕ-ಎನ್.ಆರ್.ಐ]

»ಅನಿವಾಸಿ ಕನ್ನಡಿಗರು ಭಾರತದ ವಕ್ತಾರರು
»ಏಳನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ: ಶಾಸ್ತ್ರಭಾಷೆ ಬೆಳೆಸಲು ಕಂಬಾರ ಕರೆ
»ಥೈಲ್ಯಾಂಡ್‌ನಲ್ಲಿ ಜರುಗಿದ 7ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮ್ಮೇಳನ: ಕನ್ನಡಿಗರು ಎಂದರೆ ನಂಬಿಕಸ್ಥರು: ಡಿ.ಎಸ್. ವೀರಯ್ಯ
»ಕರ್ನಾಟಕ ರಾಜ್ಯದಲ್ಲಿ ಭಂಡವಾಳ ಹೂಡಿಕೆಗೆ ಬ್ರಿಟನಿನ್ನಲ್ಲಿ ಆಹ್ವಾನ
»ನ್ಯೂಜೆರ್ಸಿಯಲ್ಲಿ ಪಂಚಕಲ್ಯಾಣಪೂರ್ವಕ ಪ್ರತಿಷ್ಠಾನ ಮಹೂತ್ಸವ
»ಇಸ್ರೇಲ್ : ಕೊಂಕಣಿ ನ್ಯೂಸ್ ವೆಬ್ ಸೈಟ್ ಲೋಕಾರ್ಪಣೆ
»ಶಿಕ್ಷಕಿ ಡೇನಿಯಲ್‌ ಮೆಹಲ್ಮನ್‌ ಕೊಲೆ ಪ್ರಕರಣ: ಬೆಂಗಳೂರು ಟೆಕ್ಕಿ ನ್ಯೂಜೆರ್ಸಿಯಲ್ಲಿ ಆತ್ಮಹತ್ಯೆ - ಕೊಲೆ ಶಂಕೆ
»ಮಾಲ್ಡೀವ್ಸ್ ಕನ್ನಡ ಬಳಗದ ಉದಯ...
»Dr. Austin Prabhu Elected as the State Vice Council Chairman
»ಅಂಗೋಲಾದಲ್ಲಿ ದೌರ್ಜನ್ಯ: ಕನ್ನಡಿಗ ವಿನಯ್‌ ಆಸ್ಪತ್ರೆಗೆ
»ಮಾಲ್ಡೀವ್ಸ್ ಕನ್ನಡ ಬಳಗದ ಉದಯ...
»ಕಂದಮ್ಮಗಳ ಸಹಿತ ಭಾರತೀಯ ದಂಪತಿ ಸಾವು
»ಮೈಸೂರಿನ ಉದ್ಯಮಿಯ ಕಂಪನಿಗೆ ಅಟ್ಲಾಂಟಾದ ಪ್ರತಿಷ್ಠಿತ ಪ್ರಶಸ್ತಿ
»ಭಾರತೀಯ ವಿದ್ಯಾರ್ಥಿ ವೀಸಾ: ಅಮೆರಿಕ ಸ್ಪಷ್ಟನೆ
»ಡಲ್ಲಾಸ್‌: ಭಾರತೀಯ ವಿದ್ಯಾರ್ಥಿ ಸಾವು
»ಯುಎಸ್ ಹಾದಿ ಹಿಡಿದ ಯುಕೆ, ಇಂಡಿಯನ್ಸ್ ಗೆ ಕೆಲ್ಸ ಏಕೆ?
»ಭಾರತೀಯ ಅಮೆರಿಕನರು 3ನೇ ದೊಡ್ಡ ಸಮುದಾಯ
»ಅಮೆರಿಕ: ಭಾರತೀಯ ಮನೆ ಕೆಸದಾಕೆಗೆ 15 ಲಕ್ಷ ಡಾಲರ್ ಪರಿಹಾರ
»ಅಟ್ಲಾಂಟಾ ಅಕ್ಕ ಕನ್ನಡ ಸಮ್ಮೇಳನಕ್ಕೆ ಡಿವಿ 'ಯಸ್'
»Indian community leaders from various organizations gathered in solidarity at the Indian consulate Chicago
»ಕವಿ ಡಾ. ನಾಗಭೂಷಣ ಮೂಲ್ಕಿ ಅವರಿಗೆ ಪ್ರವಾಸಿ ಲೈಫ್ ಟೈಮ್ ಎಚಿವ್ ಮೆಂಟ್ ಅಂತರ್ ರಾಷ್ಟ್ರೀಯ ಪುರಸ್ಕಾರ
»ಭಾರತ ಸಂಜಾತ ವಿಜ್ಞಾನಿ ರಾಮಕೃಷ್ಣನ್‌ಗೆ ಬ್ರಿಟನ್‌ನ ಪ್ರತಿಷ್ಠಿತ ‘ನೈಟ್‌ಹುಡ್’ ಪ್ರಶಸ್ತಿ
»ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡೇಟು, ಹತ್ಯೆ
»ಬಿದ್ವೆ ಹತ್ಯೆ: ಹಂತಕರ ಸುಳಿವಿಗೆ ಬಹುಮಾನ
»ಜಮಾಯತುಲ್ ಫಲಾಹ್ ಇದರ ವತಿಯಿಂದ ಸೌಹಾರ್ದ ಕೂಟ ಸಮಾರಂಭ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri