ಸೋಮವಾರ, 09-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಸಿಂಗಪುರದ ಹಸಿರೆಲೆಗಳ ನಡುವಿನಿಂದ ಚಿಕ್ಕವ್ವಾ ಚಿಕ್ಕವ್ವಾ : ಬಿ.ಕೆ.ಸುಮಿತ್ರ ಅವರಿ೦ದ ಗಾಯನ

ಗಾನ-ವಿನೋದ ಕಾರ್ಯಕ್ರಮ ಇದೇ ಏಪ್ರಿಲ್ 24ರಂದು ಸಿಂಗಪುರದ ಪಾಲಿಟೆಕ್ನಿಕ್ ಸಭಾಂಗಣ ದಲಿ ನಡೆಯಿತು. ಅಂದು ಸಭಿಕರ ಮಾತಿನಲಿ ಯುಗಾದಿ ಶುಭಾಶಯ, ಕ್ರಿಕೆಟ್ ವಿಜಯೋತ್ಸವದ ಹರುಷದೊಂದಿಗೆ, ಅಂದೇ ಬೆಳಿಗ್ಗೆ ನಿಧನರಾದ ಸತ್ಯ ಸಾಯಿಬಾಬಾ ಹಾಗೂ ಕೆಲದಿನಗಳ ಹಿಂದೆ ನಮ್ಮನ್ನು ಅಗಲಿದ ಹಿಂದೂಸ್ತಾನಿ ಸಂಗೀತಗಾರ ಮಾಧವ ಗುಡಿ ಅವರ ನಿಧನದ ಸಂತಾಪ ಮಾತುಗಳು ಕೇಳಿ ಬಂದಿತು. ಇದೇ ಅಲ್ಲವೇ ಜೀವನದ ಸುಖ-ದುಃಖ, ಬೇವು-ಬೆಲ್ಲ ನಿಜಾರ್ಥ. ಜೀವನದಲ್ಲಿ ಸಮರಸವೇ ಬಾಳ್ವೆ ಎಂಬ ಬದುಕಿನ ಸಂದೇಶ.

ಸಿಂಗಪುರದಲಿ ನಡೆದ ಗಾನ-ವಿನೋದ ಕಾರ್ಯಕ್ರಮಕ್ಕೆ ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ, ಸಂಪಿಗೆ ಮರದ ಹಸಿರೆಲೆ ನಡುವೆ, ಚೆಲ್ಲಿದರೊ ಓಕುಳಿಯಾ, ಮುಂಜಾನೆದ್ದು ಕುಂಬಾರಣ್ಣ, ಎದೆಯೆಂಬ ಗುಡಿಯೊಳಗೆ... ಈ ಹಾಡುಗಳನ್ನು ಬಹುತೇಕರೂ ಹಾಡಿದ್ದರೂ ಸಹ ತಮ್ಮದೇ ವಿಶಿಷ್ಠ ಛಾಪನ್ನು ಮೂಡಿಸಿರುವ ಬಿ.ಕೆ.ಸುಮಿತ್ರ ಅವರ ಗಾನ. ಮಿಮಿಕ್ರಿ ದಯಾನಂದ್ ಅವರ ವಿನೋದ ಜೊತೆಗೆ ಬೋನಸ್ ಡಾ.ರಾಜ್ ಅವರ ಜನ್ಮದಿನೋತ್ಸವದ ಅಂಗವಾಗಿ ರಾಜ್ ಅವರ ಸಿರಿಕಂಠದ ಹೋಲಿಕೆ ಇರುವ ಗಂಗೋತ್ರಿ ರಂಗಸ್ವಾಮಿ ಅವರ ಡಾ.ರಾಜ್ ಹಾಡುಗಳ ಚಿತ್ರಗೀತೆಗಳ ಕಾರ್ಯಕ್ರಮ ಇದ್ದಿತು.

ಸ್ವಾಗತ ಭಾಷಣ ಸಿಂಗಪುರ ಕನ್ನಡ ಸಂಘದ ಅಧ್ಯಕ್ಷರಾದ ಡಾ.ವಿಜಯ್‌ಕುಮಾರ್ ಅವರಿಂದ. ಯುಗಾದಿಯ ಶುಭಾಶಯಗಳೊಂದಿಗೆ ಅಗಲಿದ ಮಹಾನ್ ಆತ್ಮ ಬಾಬಾ ಹಾಗೂ ಪಂಡಿತ್ ಮಾಧವಗುಡಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದರು.

ಹುಟ್ಟಿದರೇ ಕನ್ನಡನಾಡಲ್ಲಿ ಹುಟ್ಟಬೇಕು ಎನ್ನುತ್ತಾ ಡಾ.ರಾಜ್ ಅವರ ಧ್ವನಿಯ ಅನುಕರಣೆಯಲಿ ಹಾಡುತ್ತಾ ಬಂದ ರಂಗಸ್ವಾಮಿ ಅವರು ಹೊರನಾಡಿನಲಿ ಕನ್ನಡ ಸಂಸ್ಕೃತಿ, ಭಾಷೆ ಉಳಿಸಿ, ಬೆಳೆಸುತ್ತಿದ್ದೀರಾ. ಅದಕ್ಕಾಗಿ ನಿಮಗೆಲ್ಲರಿಗೂ ನನ್ನ ವಂದನೆಗಳು. ಡಾ.ರಾಜ್ ಅವರ ಧ್ವನಿ ನನಗೆ ಭಿಕ್ಷೆಯಾಗಿ ದೊರೆತಿದೆ ಎಂದರು. ಡಾ.ರಾಜ್ ಅವರ ಜನ್ಮದಿನೋತ್ಸವದಂದು ರಾಜ್ ಹಾಡಿದ ಬಹುತೇಕ ಹಾಡುಗಳನ್ನು ಹಾಡಿ ಸಭಿಕರನು ರಂಜಿಸಿದರು.

ಗಂಟೆಗಟ್ಟಲೆ ಸಭಿಕರನು ನಗಿಸುವುದು ಒಂದು ಸಾಹಸವೇ ಹೌದು. ಸುಮಾರು ಹತ್ತು ಸಾವಿರದ ಆರನೂರ ಎಂಬತ್ತೊಂಬತ್ತು ಮಿಮಿಕ್ರಿ ಕಾರ್ಯಕ್ರಮಗಳ ಸರದಾರ ದಯಾನಂದ್ ಅವರು "ನಗುವನ್ನು ನಾವು ಮರೆಯುತ್ತಿದ್ದೇವೆ, ಜೋಬಲ್ಲಿ ದುಡ್ದು ಇದೆ, ತಿನ್ನೋಕ್ಕೆ ಅನ್ನ ಇಲ್ಲ". ಬದುಕಿರುವಾಗ ಒಳ್ಳೆಯದನ್ನು ಮಾಡಿ ಎಂಬ ಸಂದೇಶದೊಂದಿಗೆ, ಬಾಲಣ್ಣ, ಡಾ.ರಾಜ್, ವಿಷ್ಣು, ಅಂಬರೀಶ್, ಮಲ್ಲಿಕಾರ್ಜುನ ಖರ್ಗೆ, ಟೈಗರ್ ಪ್ರಭಾಕರ್, ಮುಖ್ಯಮಂತ್ರಿ ಚಂದ್ರು, ದಿನೇಶ್, ಮುಸುರಿ, ಮಾ ಹಿರಣ್ಣಯ್ಯ, ಶಂಕರ್‌ನಾಗ್ ಅವರ ಧ್ವನಿಗಳ ಅನುಕರಣೆ, ಡೈಲಾಗ್ ಮೂಲಕ ಸಭಿಕರನು ನಗೆಗಡಲಲಿ ಮುಳುಗಿಸಿದರು.

ಮೂರು ಗಂಟೆಗಳ ಕಾಲ ಸತತವಾಗಿ ತಮ್ಮ ಮಾತು, ನಡೆ, ವ್ಯಂಗ್ಯ, ನಗೆ, ಅನುಕರಣೆಗಳಲಿ ಮಿಮಿಕ್ರಿಗಳಲಿ ಪ್ರೇಕ್ಷಕರ ಗಮನ ಕೇಂದ್ರೀಕೃತವಾಗುವಂತೆ ನಡೆಸುವ ಈ ವಿದೂಷಕ ವೃತ್ತಿ ಬಲು ದೊಡ್ಡದು ಹಾಗೂ ಕಷ್ಟದ್ದು. ಬಹುತೇಕ ಜೋಕ್ಸ್ ಹಿಂದಿನ ಪ್ರೋಗ್ರಾಂನಲ್ಲಿ ಹೇಳಿದ್ರು ಎಂದೆನಿಸು ದು ನಿಜ. ಆದರೆ ಜೋಕ್ಸ್ ಹಳೆಯದಾದರೂ ಪ್ರತಿಬಾರಿ ಜೀವನದ ಕಟು ಸತ್ಯಗಳನ್ನು, ಸಲಹೆ-ಸಂದೇಶಗಳನ್ನು ಒಳಗೊಂಡು ಆ ಚಣ ನಮ್ಮನ್ನು ನಾವು ಮರೆತು ನಗೆಯ ಅಲೆಯಲ್ಲಿ ತೇಲುವ ಅನುಭವ ನೀಡುವ ಇಂತಹ ಕಲಾವಿದರಿಗೆ ನಮ್ಮೆಲ್ಲರ ನಮನ.

ದಯಾನಂದ್ ಅವರು ತಮ್ಮ ಅನುಭವಗಳನ್ನು ಹಂಚುತ್ತಾ, ತೆಲುಗಿನ ಹೆಸರಾಂತ ನಟ ಚಿರಂಜೀವಿ ಯಾರು ಬಂದು ಮಾತನಾಡಿದರೂ ಕುಳಿತಿದ್ದರೆ ಎದ್ದು ನಿಂತು ಅವರೊಂದಿಗೆ ಮಾತನಾಡುತ್ತಾರೆ. ನಾವು ಸರಿ-ಸಮಾನರು ಎಂಬ ಭಾವ ಮೂಡುತ್ತದೆ. ಈ ದೊಡ್ಡತನವನ್ನು ಅವರು ಕಲಿತದ್ದು ಉತ್ತಮ ನಟ ರಾಜ್‌ಕುಮಾರ್ ಅವರಿಂದ ಎಂದು ತಿಳಿಸಿದರು.

ಡಾ.ರಾಜ್ ಎಲ್ಲರ ಮನದಲಿ ಇಂದೂ ನಿಂತಿರುವುದು ನಟನೆ ಒಂದಕ್ಕೇ ಅಲ್ಲ, ಭಾಷಾ ಪ್ರೇಮ, ನಡೆ, ನುಡಿ, ವಿನಯಗಳು ಎಂಬುದರಲಿ ಸಂದೇಹವೇ ಇಲ್ಲ. ಡಾ.ರಾಜ್ ಹುಟ್ಟುಹಬ್ಬದ ಅಂಗವಾಗಿ ಸಿಂಗಪುರದವರಾದ ಗಿರೀಶ್ ಜಮದಗ್ನಿ ಮತ್ತು ಸುರೇಶ್ ಎಚ್.ಸಿ. ಅವರಿಂದ ರಾಜ್ ಅವರ ಹಳೆಯ ಚಿತ್ರಗಳ ಕೆಲವು ದೃಶ್ಯಾವಳಿಗಳು ಮುದನೀಡಿದವು.

ಸಂಪಿಗೆ ಮರದ ಹಸಿರಲೆ ನಡುವೆ...ಚಿಕ್ಕವ್ವಾ...ಚಿಕ್ಕವ್ವಾ...ಈ ಹಾಡು ಕೇಳದವರಾರು. ಇದೀಗ 70 ವಸಂತಗಳನ್ನು ಕಾಣುತ್ತಿರುವ ಪ್ರಸಿದ್ಧ ಗಾಯಕಿ ಅವರ ಕಂಠಸಿರಿಯಲಿ ವಯೋಗುಣಕ್ಕೆ ತಕ್ಕಂತೆ ಬದಲಾವಣೆ ತಂದಿದೆ. ನಿನ್ನೊಲುಮೆ, ಬೆಣ್ಣೆ ಕದ್ದ, ಮುಂಜಾನೆದ್ದು, ನಿಂಬಿಯಾ ಬನದ ಮ್ಯಾಗ, ಒಡಲೆಂಬ ಗುಡಿಯೊಳಗೆ ಹಾಡುಗಳು ಮೂಡಿ ಬಂದಿತು.

ಗಾನ-ವಿನೋದ ಕಾರ್ಯಕ್ರಮದ ಶುಭ ಸಂದರ್ಭದಲ್ಲಿ ಸಿಂಗಪುರ ಕನ್ನಡ ಸಂಘದ ಸಿಂಗಾರ ವಾರ್ಷಿಕ ಪತ್ರಿಕೆ ಸಿಂಗಪುರ ಕನ್ನಡ ಸಂಘದ ಮೊದಲನೆಯ ಹಾಗೂ ಹಿರಿಯ ಅಧ್ಯಕ್ಷರಾದ ಎ.ಎನ್. ರಾವ್ ಅವರಿಂದ ಬಿಡುಗಡೆ ಮಾಡಲಾಯಿತು. ಈ ಬಾರಿಯ ಪತ್ರಿಕೆಯ ಪ್ರಧಾನ ಸಂಪಾದಕ ಸುರೇಶ್ ಎಚ್.ಸಿ. ಇದೇ ಸುಸಮಯದಲಿ ವಿದೂಷಕ ದಯಾನಂದ್ ಅವರ ಕುರ್ಚಿಗಾಗಿ ಕುಸ್ತಿ ಎಂಬ ಸಿಡಿ ಕೂಡ ಎ.ಎನ್. ರಾವ್ ಅವರು ಅನಾವರಣಗೊಳಿಸಿದರು. ಗಾನ-ವಿನೋದ ಕಾರ್ಯಕ್ರಮದ ಪ್ರಾಯೋಜಕರು ಆನಂದ್ ಆಡಿಯೋ ಹಾಗೂ ರುಚಿಕರ ಊಟದ ವ್ಯವಸ್ಥೆ ನಕ್ಷತ್ರಿ ಅವರಿಂದ. ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಅವರಿಂದ ವಂದನಾರ್ಪಣೆ.

ಕಾರ್ಯಕ್ರಮದ ನಗೆ ಚಟಾಕಿ, ಗಾಯನಗಳೊಂದಿಗೆ ವರುಷದ ನೆನಪುಗಳನ್ನು ಮೆಲುಕು ಹಾಕುತ್ತಾ ಮುಂದೇನು ಸಾಧಿಸಬೇಕೆಂಬ ಸಂಕಲ್ಪ ತೊಡುವಂತೆ ಮಾಡುವ ಯುಗಾದಿ ಹಬ್ಬದ ಗಾನ-ವಿನೋದ ಕಾರ್ಯಕ್ರಮ ಮುಗಿದಂತೆ.... ನೆನಪಾದದ್ದು ಕವಿ ಪು.ತಿ.ನ ಹೇಳಿದಂತೆ ಹಳೆಯದೆಲ್ಲವ(ದುಃಖಗಳ) ಮರೆಯಿರೈ, ಹೊಸತು (ಸುಖಗಳ) ಬಾಳ ತೆರೆಯಿರೈ. ಖರ ಸಂವತ್ಸರದ ಶುಭಾಶಯಗಳು.... ಮನ-ಮನೆಗಳಲಿ ಬೇವಿನ ಕಹಿ ನಿಲ್ಲದಿರಲಿ, ಮನೆ ಮನಗಳಲಿ ಬೆಲ್ಲದ ಸವಿ ನೆಲೆಸಿರಲಿ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ದಟ್ಸ್ ಕನ್ನಡ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2011-05-02

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಎನ್.ಆರ್.ಕ-ಎನ್.ಆರ್.ಐ]

»ಅನಿವಾಸಿ ಕನ್ನಡಿಗರು ಭಾರತದ ವಕ್ತಾರರು
»ಏಳನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ: ಶಾಸ್ತ್ರಭಾಷೆ ಬೆಳೆಸಲು ಕಂಬಾರ ಕರೆ
»ಥೈಲ್ಯಾಂಡ್‌ನಲ್ಲಿ ಜರುಗಿದ 7ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮ್ಮೇಳನ: ಕನ್ನಡಿಗರು ಎಂದರೆ ನಂಬಿಕಸ್ಥರು: ಡಿ.ಎಸ್. ವೀರಯ್ಯ
»ಕರ್ನಾಟಕ ರಾಜ್ಯದಲ್ಲಿ ಭಂಡವಾಳ ಹೂಡಿಕೆಗೆ ಬ್ರಿಟನಿನ್ನಲ್ಲಿ ಆಹ್ವಾನ
»ನ್ಯೂಜೆರ್ಸಿಯಲ್ಲಿ ಪಂಚಕಲ್ಯಾಣಪೂರ್ವಕ ಪ್ರತಿಷ್ಠಾನ ಮಹೂತ್ಸವ
»ಇಸ್ರೇಲ್ : ಕೊಂಕಣಿ ನ್ಯೂಸ್ ವೆಬ್ ಸೈಟ್ ಲೋಕಾರ್ಪಣೆ
»ಶಿಕ್ಷಕಿ ಡೇನಿಯಲ್‌ ಮೆಹಲ್ಮನ್‌ ಕೊಲೆ ಪ್ರಕರಣ: ಬೆಂಗಳೂರು ಟೆಕ್ಕಿ ನ್ಯೂಜೆರ್ಸಿಯಲ್ಲಿ ಆತ್ಮಹತ್ಯೆ - ಕೊಲೆ ಶಂಕೆ
»ಮಾಲ್ಡೀವ್ಸ್ ಕನ್ನಡ ಬಳಗದ ಉದಯ...
»Dr. Austin Prabhu Elected as the State Vice Council Chairman
»ಅಂಗೋಲಾದಲ್ಲಿ ದೌರ್ಜನ್ಯ: ಕನ್ನಡಿಗ ವಿನಯ್‌ ಆಸ್ಪತ್ರೆಗೆ
»ಮಾಲ್ಡೀವ್ಸ್ ಕನ್ನಡ ಬಳಗದ ಉದಯ...
»ಕಂದಮ್ಮಗಳ ಸಹಿತ ಭಾರತೀಯ ದಂಪತಿ ಸಾವು
»ಮೈಸೂರಿನ ಉದ್ಯಮಿಯ ಕಂಪನಿಗೆ ಅಟ್ಲಾಂಟಾದ ಪ್ರತಿಷ್ಠಿತ ಪ್ರಶಸ್ತಿ
»ಭಾರತೀಯ ವಿದ್ಯಾರ್ಥಿ ವೀಸಾ: ಅಮೆರಿಕ ಸ್ಪಷ್ಟನೆ
»ಡಲ್ಲಾಸ್‌: ಭಾರತೀಯ ವಿದ್ಯಾರ್ಥಿ ಸಾವು
»ಯುಎಸ್ ಹಾದಿ ಹಿಡಿದ ಯುಕೆ, ಇಂಡಿಯನ್ಸ್ ಗೆ ಕೆಲ್ಸ ಏಕೆ?
»ಭಾರತೀಯ ಅಮೆರಿಕನರು 3ನೇ ದೊಡ್ಡ ಸಮುದಾಯ
»ಅಮೆರಿಕ: ಭಾರತೀಯ ಮನೆ ಕೆಸದಾಕೆಗೆ 15 ಲಕ್ಷ ಡಾಲರ್ ಪರಿಹಾರ
»ಅಟ್ಲಾಂಟಾ ಅಕ್ಕ ಕನ್ನಡ ಸಮ್ಮೇಳನಕ್ಕೆ ಡಿವಿ 'ಯಸ್'
»Indian community leaders from various organizations gathered in solidarity at the Indian consulate Chicago
»ಕವಿ ಡಾ. ನಾಗಭೂಷಣ ಮೂಲ್ಕಿ ಅವರಿಗೆ ಪ್ರವಾಸಿ ಲೈಫ್ ಟೈಮ್ ಎಚಿವ್ ಮೆಂಟ್ ಅಂತರ್ ರಾಷ್ಟ್ರೀಯ ಪುರಸ್ಕಾರ
»ಭಾರತ ಸಂಜಾತ ವಿಜ್ಞಾನಿ ರಾಮಕೃಷ್ಣನ್‌ಗೆ ಬ್ರಿಟನ್‌ನ ಪ್ರತಿಷ್ಠಿತ ‘ನೈಟ್‌ಹುಡ್’ ಪ್ರಶಸ್ತಿ
»ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡೇಟು, ಹತ್ಯೆ
»ಬಿದ್ವೆ ಹತ್ಯೆ: ಹಂತಕರ ಸುಳಿವಿಗೆ ಬಹುಮಾನ
»ಜಮಾಯತುಲ್ ಫಲಾಹ್ ಇದರ ವತಿಯಿಂದ ಸೌಹಾರ್ದ ಕೂಟ ಸಮಾರಂಭ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri