ಶುಕ್ರವಾರ, 18-10-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಕಾಸರಗೋಡು: ಎಂಡೋಸಲ್ಫಾನ್ ನಿಷೇಧಕ್ಕೆ ಆಗ್ರಹ : ಕೇರಳ (ಬಂದ್) ಹರತಾಳ ಭರ್ಜರಿ ಯಶಸ್ಸು.

ಮಂಗಳೂರು/ಕಾಸರಗೋಡು,ಎಪ್ರಿಲ್.29: ಎಂಡೋಸಲ್ಫಾನ್ ನಿಷೇಧಿಸುವಂತೆ ಆಗ್ರಹಿಸಿ ಕೇರಳ ರಾಜ್ಯದ್ಯಂತ ಇಂದು ಎಡರಂಗ ಕರೆ ನೀಡಿರುವ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ನಡೆದ ಈ ಹರತಾಳದಲ್ಲಿ ಹಾಲು, ಪತ್ರಿಕೆ, ಆರಾಧನಾಲಯಗಳ ಕಾರ್ಯಕ್ರಮ, ವಿವಾಹ ಸಮಾರಂಭಗಳು ಮತ್ತು ದ್ವಿಚಕ್ರ ವಾಹನಗಳನ್ನು ಹೊರತುಪಡಿಸಲಾಗಿತ್ತು.

ಮಾರಕ ಕೀಟ ನಾಶಕ ಎಂಡೊಸಲ್ಫಾನ್‌ ನಿಷೇಧ ಆಗ್ರಹಿಸಿ ಎಡರಂಗ ಕರೆ ನೀಡಿದ ಹರತಾಳ ಕಾಸರಗೋಡು ಜಿಲ್ಲೆಯಲ್ಲಿ ಪೂರ್ಣವಾಗಿದೆ. ನಗರ ಮತ್ತು ಹೊರ ವಲಯದಲ್ಲಿ ವಾಹನ ಸಂಚಾರ ಪೂರ್ಣವಾಗಿ ಸ್ಥಗಿತಗೊಂಡಿದೆ. ದ್ವಿಚಕ್ರ ವಾಹನಗಳು ಮತ್ತು ಕೆಲವು ಖಾಸಗಿ ವಾಹನಗಳು ರಸ್ತೆಗಿಳಿದಿದ್ದು, ಸರಕಾರಿ ಮತ್ತು ಖಾಸಗಿ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿದೆ.

ಕಾಸರಗೋಡು ನಗರದಲ್ಲಿ ವ್ಯಾಪಾರಿ ಸಂಸ್ಥೆಗಳು ಮುಚ್ಚಿಕೊಂಡಿದೆ. ಹಳೆ ಬಸ್‌ ನಿಲ್ದಾಣ ಮತ್ತು ಹೊಸ ಬಸ್‌ ನಿಲ್ದಾಣ ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು. ಸರಕಾರಿ ಕಚೇರಿ ಮತ್ತು ಬ್ಯಾಂಕ್‌ಗಳಲ್ಲಿ ನೌಕರರ ಹಾಜರಾತಿ ಗಣನೀಯ ಕಡಿಮೆಯಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಮತ್ತು ತಾಲೂಕು ಕಚೇರಿಗಳಲ್ಲೂ ಒಂದು ವಿಭಾಗದ ನೌಕರರು ಹರತಾಳಕ್ಕೆ ಬೆಂಬಲ ವ್ಯಕ್ತಪಡಿಸಿ ಕರ್ತವ್ಯ ಮೊಟಕುಗೊಳಿಸಿದ್ದಾರೆ.

ಎಂಡೊಸಲ್ಫಾನ್‌ ಪ್ರತಿಭಟಿಸಿ ಎಡರಂಗ ಕರೆ ನೀಡಿದ ಹರತಾಳದಂಗವಾಗಿ ನಗರದಲ್ಲಿ ಎಡರಂಗದ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಹಳೆ ಬಸ್‌ ನಿಲ್ದಾಣ ಪರಿಸರದಿಂದ ಆರಂಭಗೊಂಡ ಮೆರವಣಿಗೆ ನಗರ ಪ್ರದಕ್ಷಿಣೆ ಬಂದು ಹೊಸ ಬಸ ನಿಲ್ದಾಣದಲ್ಲಿ ಸಮಾರೋಪಗೊಂಡಿತು.

ಆನಂತರ ನಡೆದ ಸಭೆಯನ್ನು ಸಂಸದ ಪಿ.ಕರುಣಾಕರನ್‌ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಪಿ.ಪಿ.ಶ್ಯಾಮಲಾದೇವಿ ಅಧ್ಯಕ್ಷತೆ ವಹಿಸಿದರು. ಕರಿವೆಳ್ಳೂರು ವಿಜಯನ್‌, ಟಿ.ಕೃಷ್ಣನ್‌, ಇ.ಕೆ.ನಾಯರ್‌, ಹರೀಶ್‌ ಬಿ.ನಂಬ್ಯಾರ್‌, ಎಸ್‌.ಉದಯ ಕುಮಾರ್‌, ಅಝೀಜ್‌ ಕಡಪ್ಪುರ ಮೊದಲಾದವರು ಮಾತನಾಡಿದರು. ಕೆ.ಪಿ.ಸತೀಶ್ಚಂದ್ರನ್‌ ಸ್ವಾಗತಿಸಿದರು.

ವಾಹನಗಳಿಗೆ ತಡೆ : ಎಡರಂಗದ ಕಾರ್ಯಕರ್ತರು ಬೆಳಗ್ಗಿನಿಂದಲೇ ವಾಹನ ಗಳನ್ನು ತಡೆಯುತ್ತಿದ್ದರು. ಹರತಾಳ ಬೆಂಬಲಿಗರು ಖಾಸಗಿ ವಾಹನಗಳನ್ನು ತಡೆದಾಗ ನಗರಠಾಣೆಯ ಪೊಲೀಸರು ಸಂಚಾರ ಸುಗಮವಾಗಿಸಲು ಪ್ರಯತ್ನಿಸಿದರು. ಈ ಮಧ್ಯೆ ವಾಗ್ವಾದ ನಡೆದು ಸಣ್ಣಪುಟ್ಟ ಸಂಘರ್ಷ ಸೃಷ್ಟಿಯಾಯಿತು.

ಕಲ್ಲು ತೂರಾಟ : ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ಸಭೆ ನಡೆಯುತ್ತಿದ್ದಂತೆ ಬಂದ ಪಿಕ್‌ಅಪ್‌ ವಾಹನವನ್ನು ನಿಲ್ಲಿಸಲು ಚಳವಳಿ ನಿರತರು ಸೂಚನೆ ನೀಡಿದರೂ ನಿಲ್ಲಿಸದೆ ಹೋದಾಗ ಕಲ್ಲು ತೂರಲಾಯಿತು.

ಮುಸ್ಲಿಂ ಲೀಗ್‌ ನೇತಾರ, ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ ಸಂಚರಿಸುತ್ತಿದ್ದ ಕಾರನ್ನು ಹರತಾಳ ಬೆಂಬಲಿಗರು ತಡೆದರು. ಪೊಲೀಸರು ಮಧ್ಯ ಪ್ರವೇಶಿಸಿದಾಗ ಹರತಾಳ ಬೆಂಬಲಿಗರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಪಿ. ಸತೀಶ್ಚಂದ್ರನ್‌ ಅಲ್ಲಿಗೆ ಆಗಮಿಸಿ ಕಾರ್ಯಕತರನ್ನು ಸಮಾಧಾನಿಸಿ ಕಾರು ತೆರಳುವಂತೆ ಸೂಚಿಸಿದರು.

ಕಾಸರಗೋಡು: ಎಂಡೊಸಲ್ಫಾನ್‌ ಪ್ರತಿಭಟಿಸಿ ನಿರಾಹಾರ ಸತ್ಯಾಗ್ರಹ 

ಕಾಸರಗೋಡು: ಮಾರಕ ಕೀಟನಾಶಕ ಎಂಡೊಸಲ್ಫಾನ್‌ ನಿಷೇಧಿಸಬೇಕೆಂದು ಆಗ್ರಹಿಸಿ ಗ್ರಾಮೀಣ ಎಜ್ಯುಕೇಶನ್‌ ಆಂಡ್‌ ಚಾರಿಟೇಬಲ್‌ ಟ್ರಸ್ಟ್‌ನ ಆಶ್ರಯದಲ್ಲಿ ವಿವಿಧ ರಾಜಕೀಯ ಪಕ್ಷಗಳ, ಸಾಮಾಜಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ನಗರದ ಪ್ರಧಾನ ಅಂಚೆ ಕಚೇರಿ ಪರಿಸರದಲ್ಲಿ 24 ಗಂಟೆಗಳ ನಿರಾಹಾರ ಸತ್ಯಾಗ್ರಹ ನಡೆಯಿತು.

ಸಂಸದ ಪಿ.ಕರುಣಾಕರನ್‌ ನಿರಾಹಾರ ಸತ್ಯಾಗ್ರಹವನ್ನು ಉದ್ಘಾಟಿಸಿದರು. ಜಿ.ಗ್ರೂಪ್‌ ಚೆಯರ್‌ಮೆನ್‌ ಡಾ|ರಾಜೇಶ್‌ ಆಳ್ವ ಕೆ. ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖ ಮಾನವ ಹಕ್ಕು ಕಾರ್ಯಕರ್ತ ನ್ಯಾಯವಾದಿ ಪಿ.ಎ.ಪೌರನ್‌ ಮುಖ್ಯ ಅತಿಥಿಯಾಗಿದ್ದರು.

ಎಂಡೊಸಲ್ಫಾನ್‌ ಸಂತ್ರಸ್ತರಾದ ರಿಶಾನ, ಉಣ್ಣಿಕೃಷ್ಣನ್‌ ಮೊದಲಾದವರಿಗೆ ಜಿ-ಟ್ರಸ್ಟ್‌ ಸಂಗ್ರಹಿಸಿದ ಚಿಕಿತ್ಸಾ ನೆರವನ್ನು ಸಂಸದ ಪಿ.ಕರುಣಾಕರನ್‌ ಹಸ್ತಾಂತರಿಸಿದರು.

ನಿರಾಹಾರ ಕಾರ್ಯಕ್ರಮದಲ್ಲಿ ಪುಂಜಿರಿ ಮುಳಿಯಾರ್‌ನ ನಿಜಾಂ ರಾವುತ್ತರ್‌ ನಿರ್ದೇಶಿಸಿದ 'ಆಫ್ಟರ್‌ದಿ ಡಲೂಜ', ಎಂ.ಎ.ರಹಿಮಾನ್‌ ಅವರ 'ಅರ ಜೀವಿತಗಳುಡೆ ಸ್ವರ್ಗಂ' ಎಂಬ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು. ಛಾಯಾಗ್ರಾಹಕ ಹರಿ ಬೆಳ್ಳೂರು ಅವರ ಛಾಯಾಚಿತ್ರ ಪ್ರದರ್ಶನ ನಡೆಯಿತು.

ಜಿ-ಗ್ರೂಪ್‌ನ 60 ರಷ್ಟು ಸುಪರ್‌ ಮಾರ್ಕೆಟ್‌ಗಳ ಮೂಲಕ ಸಂಗ್ರಹಿಸುವ ಸಹಾಯನಿಧಿಯನ್ನು ಎಂಡೊಸಲ್ಫಾನ್‌ ಸಂತ್ರಸ್ತ ಆಯ್ದ ಕುಟುಂಬಗಳಿಗೆ ಹಸ್ತಾಂತರಿಸುವುದಾಗಿ ಗ್ರಾಮೀಣ ಎಜುಕೇಶನ್‌ ಆಂಡ್‌ಚಾರಿಟೇಬಲ್‌ ಟ್ರಸ್ಟ್‌ನ ಪದಾಧಿಕಾರಿಗಳು ತಿಳಿಸಿದರು.

ಪ್ರೊ|ಮಾಧವ ಪಣಿಕ್ಕರ್‌, ನ್ಯಾಯವಾದಿ ಮಾಹಿನ್‌, ಎನ್‌.ಎ.ನೆಲ್ಲಿಕುನ್ನು, ಅಜಿತ್‌ ಕುಮಾರ್‌ ಆಜಾದ್‌, ನಿಜಾಂ ರಾವುತ್ತರ್‌, ಎಂ.ಅನಂತನ್‌ ನಂಬ್ಯಾರ್‌, ಟಿ.ವಿ.ಭಾಸ್ಕರನ್‌, ಮುದಲಪ್ಪಾರ ಅಬ್ಟಾಸ್‌, ಮಧು ಮೊದಲಾದವರು ಉಪಸ್ಥಿತರಿದ್ದರು. ವಿ.ಡಿ.ಜಯಕುಮಾರ್‌ ಸ್ವಾಗತಿಸಿದರು. ಅಪ್ಪುರಾಜ್‌ ವಂದಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2011-04-29

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

»ಮಸ್ಕತ್: 28ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ
»ಒಮಾನಿನಲ್ಲಿ ಅಮೇರಿಕಾ ಮಿಲಿಟೆರಿ 'ಹೆಲಿಕಾಪ್ಟರ್' ಅಪಘಾತ; 5 ಸಿಬ್ಬಂದಿ ಪೈಕಿ ಮೂವರು ಪತ್ತೆ - ಚಿಕಿತ್ಸೆ
»ಬಿಲ್ಲವರು ಪ್ರತಿಭಾ ಕಲಿಗಳು:ಸಾಧಿಸಿ ತೋರಿಸಿದ ಒಮಾನ್ ಪುಟಾಣಿಗಳು
»ಯಕೃತ್ತು ಕಸಿಯ ಹೊಸ ವಿಧಾನ: 2 ವರ್ಷದ ಒಮಾನಿ ಮಗುವನ್ನು ಬದುಕಿಸಿದ ಭಾರತೀಯ ವೈದ್ಯರು
»ಶ್ರೀ ಪ್ರಕಾಶ್ ನಾಯ್ಕ್ ರವರಿಗೆ ಓಮಾನಿನ ಆರೋಗ್ಯ ಮ೦ತ್ರಾಲಯದ ವತಿಯಿ೦ದ ಪುರಸ್ಕಾರ
»ಒಮಾನ್ ಸಮುದ್ರ ತೀರದಲ್ಲಿ ಅನಿವಾಸಿ ಭಾರತೀಯ ಮೀನುಗಾರರ ಹಡಗು ಕಣ್ಮರೆ
»ಒಮಾನ್ ಬಿಲ್ಲವರ "ವನಸ್ಸುದ ಪರ್ಬ-2012"
»ಮಸ್ಕತ್ ಸೇವಾ ಸಂಸ್ಥೆಯಿಂದ ಮುಸ್ಲಿಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
»ಮಸ್ಕತ್ 'ಸ್ಪಂದನ' ಗಾಯನ ದೋಣಿಯ ರಸಸಂಜೆ ಪಯಣ...
»ವಾಹನ ಮುಖಾಮುಖಿ ಡಿಕ್ಕಿ-ಬೆಂಕಿ:ನಾಲ್ವರು ದುರ್ಮರಣ
»ಜನವರಿ-2012 ಒಮಾನ್ ರಸ್ತೆ ಅವಘಡಕ್ಕೆ 70 ಸಾವು
»ಬೆಂಕಿಗೆ ಅನಿವಾಸಿ ಭಾರತೀಯನ ಅಂಗಡಿ-ಕಾರು ಭಸ್ಮ:ಒಮಾನ್ ರಾಯಭಾರಿ ಕಚೇರಿಯಲ್ಲಿ ಸಹಾಯಕ್ಕೆ ಅಳಲು
»ನಿರಂತರ 'ಡ್ರಗ್ಸ್' ವ್ಯಾಪಾರ : ಜಾಲ ಬೇದಿಸಿದ ಒಮಾನ್ ಪೋಲಿಸರು
»17 ಮೇ: ಒಮಾನ್ ತುಳುವರಿಗೆ ಅಪರೂಪದ ಅವಕಾಶ: ’ದಾದ ಮಲ್ಪೆರಾಪುಂಡು’ ತುಳು ನಾಟಕಕ್ಕೆ ಕ್ಷಣಗಣನೆ
»ಉರಿ ಬಿಸಿಲಿನಲ್ಲಿ ಕಾರ್ಮಿಕರ ಕೆಲಸವನ್ನು ನಿಷೇಧಿಸಿದ ಒಮಾನ್ ಸರಕಾರ !
»ಮಸ್ಕತ್‌ಗೆ ’ಯುಗಾದಿ ನಗೆ ಹಬ್ಬ’ ದೊಂದಿಗೆ ಬಂದ ‘ನಂದನ’
»ಸ್ಪಂದನ ಆರ್ಟ್ ಲೌವರ್ಸ್ ರಿಂದ ಹೆಸರಾಂತ ಗಾಯಕಿ ಅನಿತಾ ಸಾಮ್ಸನ್ ಅವರಿಗೆ ಸನ್ಮಾನ
»Indian businessman’s body found in mysterious circumstances
»ಮನರಂಜಿಸಿದ “ಕಿವುಡನ ಕಿತಾಪತಿ”
»ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
»ಸ್ಪಂದನ ತಂಡದ ಕಾರ್ಯಕ್ರಮಕ್ಕೆ ಆಗಮಿಸಿದ ಕಲಾವಿದರು
»ಒಮಾನ್ ಹರ್ಷ ಕುಮಾರ್‌ ರೈಗೆ ಭಾರತ ಸಮ್ಮಾನ್‌ ಪ್ರಶಸ್ತಿ
»ಜನವರಿ 19ರಂದು ಸ್ಪಂದನಾ ವಿರಚಿತ 'ಯಾದೊಂಕಿ ಭಾರತ್' ಸಂಗೀತ ಬಿಡುಗಡೆ
»ಒಮಾನ್ ನಲ್ಲಿ ಬಂಟರ 24ನೇ ಸಮ್ಮಿಲನ : ಗಮನಸೆಳೆದ ಮನೋರಂಜನಾ ಕಾರ್ಯಕ್ರಮ , ತುಳುನಾಡಿನ ವೈಶಿಷ್ಟ್ಯ
»ಮಸ್ಕಟ್‌ನಲ್ಲಿ ಕಾರು ಅಪಘಾತ: ನಗರದ ಸಹೋದರಿಯರ ಸಾವು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri