ಮಂಗಳವಾರ, 10-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಒಮಾನ್ : ಜನಮನ ಗೆದ್ದ ‘ಸುವರ್ಣ ಕರ್ನಾಟಕ ಪ್ರಶಸ್ತಿ’ ವಿಜೇತ ಶ್ರೀರವೀಂದ್ರ ಪ್ರಭು ಮತ್ತು ಅನಿತಾ ಸ್ಯಾಂಸನ್ ಅವರ ಸ೦ಗೀತ ಸ೦ಜೆ ಕಾರ್ಯಕ್ರಮ

(ಕರುಣಾಕರ್ ರಾವ್. ಪಿ;  ಮಸ್ಕತ್ )

ದಿನಾಂಕ 21 01 2011, ಸ್ಥಳ ಒಮಾನ್ ನ ರಾಜಧಾನಿ ಮಸ್ಕತ್ತಿನ ಅಲ್ ಫಲಾಜ್ ಹೋಟೆಲ್ ನ "ದಿ ಗ್ರಾಂಡ್" ಸಭಾಂಗಣ. ಒಂದು ಸಾಮಾನ್ಯ ಸಂಗೀತ ಸಂಜೆಯನ್ನು ನಿರೀಕ್ಷಿಸಿ ಬಂದಿದ್ದ ಮಸ್ಕತ್ತಿನ ಸಂಗೀತ ಪ್ರೇಮಿಗಳಿಗೆ ಒಂದು ಅಚ್ಚರಿ ಕಾದಿತ್ತು. ಸ್ಪಂದನ ಬಳಗದವರು ಏರ್ಪಡಿಸಿದ್ದ "ಸಂಗೀತ ಲಹರಿ" ಎಲ್ಲರ ನಿರೀಕ್ಷೆಗೂ ಮೀರಿ ಒಂದು ಅದ್ಭುತ ಕಾರ್ಯಕ್ರಮವಾಗಿ ಮೂಡಿ ಬಂದಿತ್ತು!

ನೃತ್ಯದ ಬಗೆಗೆ ಹೇಳುವುದಾದರೆ ಸಾಂಪ್ರದಾಯಿಕ ಶೈಲಿಯ ಯಕ್ಷಗಾನ ನೃತ್ಯದಿಂದ ಹಿಡಿದು ಮೈಕೆಲ್ ಜಾಕ್ಸನ್ ರವರ "ಡೇಂಜರಸ್" ವರೆಗೆ, ಗಾಯನದ ಬಗೆಗೆ ಹೇಳುವುದಾದರೆ ಡಾಕ್ಟರ್ ರಾಜ್ ಕುಮಾರ್ ರವರ ಕಂಠ ಧ್ವನಿಯಿಂದ ಹಿಡಿದು ಹಿಂದಿಯ ಮೊಹಮ್ಮದ್ ರಫಿ ಯವರ ಶೈಲಿಯವರೆಗೆ, ಲತಾ ಮಂಗೇಶ್ಕರ್ ರಿಂದ ಹಿಡಿದು ಎಸ್.ಜಾನಕಿ-ಶ್ರೇಯಾ ಗೋಶಾಲ್ ವರೆಗೆ, ಎಲ್ಲ ಪ್ರಸಿದ್ಧ ಗಾಯಕರ ಧ್ವನಿಯಲ್ಲೂ ಜನಪ್ರಿಯ ಹಾಡುಗಳನ್ನು ಕೇಳುವ ಸದವಕಾಶ ಅಂದು ಎಲ್ಲರಿಗೂ ಒದಗಿತ್ತು.

ಕರಾವಳಿ ಕರ್ನಾಟಕದ ಚಿನ್ನದ ಕಂಠ ಎಂದೇ ಪ್ರಸಿದ್ಧರಾಗಿರುವ, "ಸುವರ್ಣ ಕರ್ನಾಟಕ ಪ್ರಶಸ್ತಿ" ವಿಜೇತ ಶ್ರೀರವೀಂದ್ರ ಪ್ರಭು ಮತ್ತು ಅನಿತಾ ಸ್ಯಾಂಸನ್ ಜೋಡಿ ಮಾಡಿದ ಈ ಮೋಡಿಯ ಸುಳಿಯಲ್ಲಿ ಸಂಜೆಯು ಮಾಗಿ ರಾತ್ರಿಯಾದದ್ದೇ ತಿಳಿದಿರಲಿಲ್ಲ.

ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಪ್ರಕಾಶ್ ನಾಯಕ್ ಕೋಣಿ ಯವರು ಮುಖ್ಯ ಅತಿಥಿಗಳನ್ನು, ಕಲಾವಿದರನ್ನು, ಪ್ರಾಯೋಜಕರನ್ನು ಹಾಗೂ ಕಿಕ್ಕಿರಿದು ನೆರೆದಿದ್ದ ಸಂಗೀತ ಪ್ರೇಮಿಗಳನ್ನು ಹಾರ್ದಿಕವಾಗಿ ಸ್ವಾಗತಿಸಿ ಸ್ಪಂದನ ಬಳಗವನ್ನು ಪರಿಚಯಿಸಿದರು.

ಯಕ್ಷಗಾನ ಕಲೆಯ ಬಗ್ಗೆ ಉತ್ತಮ ಮಾಹಿತಿಯನ್ನೂ ನೀಡಿದರು. ಮುಖ್ಯ ಅತಿಥಿಗಳಾದ ಬ್ಯಾಂಕ್ ಮಸ್ಕತ್ ನ ಶ್ರೀ ರಾಮಕೃಷ್ಣ ರವರಿಗೆ , ಯಕ್ಷಗಾನ ವೇಷಧಾರಿಗಳಿಂದಲೇ ಪುಷ್ಪ ಗುಚ್ಚ ಕೊಡಿಸಿ ಬರಮಾಡಿಕೊಳ್ಳಲಾಯಿತು.

"ಸ್ಪಂದನ" - ಬಳಗವನ್ನು ಹುಟ್ಟು ಹಾಕಿ ಕಾರ್ಯಕ್ರಮದ ಸಂಪೂರ್ಣ ಹೊಣೆಯನ್ನು ಶ್ರೀ ಪ್ರಕಾಶ್ ನಾಯಕ್ ಕೋಣಿ ಮತ್ತು ಶ್ರೀ ರಿಯಾಝ್ ಅಹ್ಮದ್ ಬಸ್ರೂರು ರವರು ಹೊತ್ತಿದ್ದರು. ಜತೆಗೆ ಸಮಿತಿಯ ಇತರ ಸದಸ್ಯರಾದ ಶ್ರೀ ಎಸ್.ಕೆ ಪೂಜಾರಿ, ಶ್ರೀ ಕರುಣಾಕರ ರಾವ್ ಕದ್ರಿ, ಶ್ರೀ ಕಿನ್ನಿಗೋಳಿ ನಾಗೇಶ್ ಶೆಟ್ಟಿ, ಶ್ರೀ ರಮಾನಂದ್ ಕುಂದರ್ ,ಶ್ರೀ ಪೀತಾಂಬರ್ ಅಳಕೆ ,ಶ್ರೀ ರಮೇಶ್ ಶೆಟ್ಟಿಗಾರ್ ಮತ್ತು ಡಾಕ್ಟರ್ ಸಿ.ಕೆ. ಅಂಚನ್ ಇವರುಗಳು ಹೆಗಲಿಗೆ ಹೆಗಲು ಕೊಟ್ಟು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದರು.

ಕಾರ್ಯಕ್ರಮದ ಪ್ರಾರಂಭವಾಗಿದ್ದು ಕರಾವಳಿ ಕರ್ನಾಟಕ ಮತ್ತು ಮಲೆನಾಡಿನ ಸಂಸ್ಕೃತಿಯ ದ್ಯೋತಕವಾದ ಯಕ್ಷಗಾನ ನೃತ್ಯದಿಂದ. ಶ್ರೀ ಪ್ರಕಾಶ್ ನಾಯಕ್ ಕೋಣಿ ಅವರೇ ಸ್ವತಹ ನಿರ್ದೇಶಿಸಿದ ಚಿಕ್ಕದಾದ ಚೊಕ್ಕವಾದ ಯಕ್ಷಗಾನ ನೃತ್ಯ ವನ್ನು ಶ್ರೀ ಕಾರ್ತಿಕ್ ಶಂಕರ್ ಮತ್ತು ಮಾಸ್ಟರ್ ವಿಶ್ಭವ್ ವಿಠಲ ಪೂಜಾರಿ ಪ್ರದರ್ಶಿಸಿ ಕಾರ್ಯಕ್ರಮದ ಯಶಸ್ಸಿಗೆ ಭದ್ರ ಬುನಾದಿ ಹಾಕಿದರು.ಇದರ ವೇಷ ಭೂಷಣ ಸಜ್ಜಿಕೆಯಲ್ಲಿ ಶ್ರೀ ರವಿ ಕಾಂಚನ್, ಶ್ರೀ ವಿಶ್ವನಾಥ್, ಮತ್ತು ಶ್ರೀ ಶ್ರೀಕಾಂತ್ ರವರು ನೆರವಾದರು.

ಪ್ರತ್ಯೇಕವಾಗಿ ಈ ಕಾರ್ಯಕ್ರಮದ ಚುಕ್ಕಾಣಿ ಹಿಡಿಯಲಿಕ್ಕೆಂದೇ ದುಬೈ ಮತ್ತು ಅಬುಧಾಬಿಗಳಿಂದ ಆಗಮಿಸಿದ ಶ್ರೀ ಶೋಧನ್ ಪ್ರಸಾದ್ ಮತ್ತು ಶ್ರೀ ಅನಂತ ರಾವ್ ರವರನ್ನು ಶ್ರೀ ಕರುಣಾಕರ ರಾವ್ ಕದ್ರಿಯವರು ಸ್ವಾಗತಿಸಿ ಪರಿಚಯಿಸಿದರು.

ಕಾರ್ಯಕ್ರಮದುದ್ದಕ್ಕೂ ಅದರ ಬೆನ್ನೆಲುಬಾಗಿ ನಿಂತು ತಮ್ಮ ಹಾಸ್ಯಪೂರಿತ ನಿರೂಪಣೆಗಳಿಂದ ಶ್ರೀ ಶೋಧನ್ ಪ್ರಸಾದ್ ಮತ್ತು ತಮ್ಮ ಕನ್ನಡದ ಪಾಂಡಿತ್ಯದಿಂದ ಶ್ರೀ ಅನಂತ ರಾವ್ ಎಲ್ಲರ ಪ್ರೀತಿಪಾತ್ರರಾದರು. ಪ್ರತಿಬಾರಿ ರಂಗದ ಮೇಲೆ ಬಂದಾಗಲೂ ಪ್ರೇಕ್ಷಕ ವರ್ಗ ಅವರನ್ನು ಚಪ್ಪಾಳೆಗಳಿಂದ ಸ್ವಾಗತಿಸುತಿತ್ತು.

ಸ್ವದೇಶ ಮತ್ತು ವಿದೇಶಗಳಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿ ಜನಪ್ರಿಯರಾಗಿರುವ ಶ್ರೀ ರವೀಂದ್ರ ಪ್ರಭು ರವರು ಕನ್ನಡದ ಕಣ್ಮಣಿ ಡಾಕ್ಟರ್ ರಾಜ್ ಕುಮಾರ್ ರವರ ಶಾಸ್ತ್ರೀಯ ಶೈಲಿಯ "ಶ್ರೀಕಂಠ ವಿಷಕಂಠ" ಹಾಡಿನೊಂದಿಗೆ ಸಂಗೀತ ಲಹರಿಯ ಮಾಯಾಲೋಕದ ಸೃಷ್ಠಿಗೆ ನಾಂದಿ ಹಾಡಿದರು.

ಎಸ್.ಪಿ. ಬಾಲಸುಬ್ರಮಣ್ಯಂ, ಪಿ.ಬಿ.ಶ್ರೀನಿವಾಸ್, ಮೊಹಮ್ಮದ್ ರಫಿ, ಸೋನು ನಿಗಮ್, ಮೈಸೂರು ಅನಂತಸ್ವಾಮಿ ಮುಂತಾದ ದಿಗ್ಗಜಗಳ ಸ್ವರಾನುಕರಣೆಯಲ್ಲಿ ತಾವು ಎಷ್ಟು ನಿಸ್ಸೀಮರು ಎಂಬುದನ್ನು ಅವರು ತೋರಿಸಿ ಕೊಟ್ಟರು. ಚಾಚೂ ತಪ್ಪದ ಆನುಕರಣೆಯಲ್ಲಿ ಎಲ್ಲೂ ಸುಶ್ರಾವ್ಯ ಸಂಗೀತಕ್ಕೆ ಅಪಚಾರವಾಗದಂತೆ,ನರ್ತಿಸುತ್ತಾ ಹಾಡಿದ ಅವರ ಅಂತಃ ಶಕ್ತಿಯನ್ನು ಎಲ್ಲರು ಬೆರಗಾಗಿ ಆನಂದಿಸಿದರು. ಒಬ್ಬ ಗಾಯಕನಿಗೆ ಇಷ್ಟೊಂದು ಬಗೆಯಲ್ಲಿ ವೈವಿಧ್ಯಮಯ ವಾಗಿ ಹಾಡುವ ಕಲೆ ಕರಗತವಾಗಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯೆ!

ಅನಿತಾ ಸ್ಯಾಂಸನ್ ಅವರು ಗಾನ ಕೋಗಿಲೆ ಲತಾ ಮಂಗೇಶ್ಕರ್ ರವರ "ಸತ್ಯಮ್ ಶಿವಂ ಸುಂದರಂ " ಹಾಡಿನೊಂದಿಗೆ ಸುಶ್ರಾವ್ಯ ವಾಗಿ ಪ್ರಾರಂಭಿಸಿ, ಕನ್ನಡ, ತುಳು, ಹಿಂದಿ, ಬ್ಯಾರಿ ಹಾಡುಗಳನ್ನೊಳಗೊಂಡಂತೆ "ಯೊ ಬೈ ಯೊ" ಕೊಂಕಣಿ ಹಾಡಿನಲ್ಲಿಯೂ ತಮ್ಮ ಪರಿಣತಿಯನ್ನು ಮೆರೆದರು. ಮಧ್ಯೆ ಮಧ್ಯೆ ಈ ಗಾಯಕ - ಗಾಯಕಿ ರಂಗಮಂಚದಿಂದ ಮಾಯವಾಗಿ ಪ್ರೇಕ್ಷಕರ ಮಧ್ಯದಿಂದ ಪ್ರತ್ಯಕ್ಷವಾಗಿ ಬೆರಗುಗೊಳಿಸುತ್ತಿದ್ದರು.

ಒಂದಾದ ಮೇಲೆ ಮತ್ತೊಂದರಂತೆ ಇವರಿಬ್ಬರ ಕಂಠದಿಂದ ಹೊರ ಹೊಮ್ಮಿದ ಹಾಡುಗಳು ಪ್ರೇಕ್ಷಕರ "ಸ್ಪಂದನ"ದೊಂದಿಗೆ ಸಮ್ಮಿಳಿತವಾಗಿ ಮೈಗೂಡಿ ನಿಂತವು. ಪ್ರತೀ ಹಾಡಿನ ನಂತರ ವೂ, ಕಿಕ್ಕಿರಿದ ಸಭೆಯಿಂದ ಚಪ್ಪಾಳೆಗಳ ಮಹಾಪೂರವೇ ಹರಿದು ಬರುತ್ತಿದ್ದವು. "ನಾವಾಡುವ ನುಡಿಯೇ ಕನ್ನಡ ನುಡಿ","ಬಾನಲ್ಲು ನೀನೇ","ತೇರೆ ಮೇರೇ ಬೀಚ್ ಮೆ" "ದಾನೇ ಪೊಣ್ಣೇ", "ಪಕ್ಕಿಲು ಮೂಜಿ" ಮುಂತಾದ ಅನೇಕ ಹಾಡುಗಳು ಅತ್ಯಂತ ರಸಮಯವಾಗಿ ಮೂಡಿ ಬಂದವು. ಹಿನ್ನೆಲೆ ಸಂಗೀತದ ಪರಿಪಕ್ವತೆಯೂ ಹಾಡಿನ ಮೆರುಗನ್ನು ಹೆಚ್ಚಿಸಿದ್ದವು.

ಕನ್ನಡ, ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆಗಳಲ್ಲಿ ಸ್ವತಹ ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಸಂಯೋಜಿಸಿದ ಶ್ರೀಭಾಸ್ಕರ ಬಸ್ರೂರು ಕೀ ಬೋರ್ಡ್ ನಲ್ಲಿ ತಮ್ಮ ಕೈಚಳಕ ತೋರಿದರು. ತಬ್ಲಾ, ಕೋಂಗೊ, ಬೋಂಗೋಗಳಲ್ಲಿ ಸಿದ್ಧ ಹಸ್ತರಾದ ಶ್ರೀ ರಾಜೇಶ್ ಭಾಗವತ್ ಈ ಹಿಂದೆ ಎಸ್.ಪಿ. ಬಾಲಸುಬ್ರಮಣ್ಯಂ, ಗುರುಕಿರಣ್, ಎಮ್.ಡಿ. ಪಲ್ಲವಿ ಮುಂತಾದವರ ಜತೆ ಟಿವಿ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿದವರಾಗಿದ್ದು ಈ ಎಲ್ಲ ವಾದ್ಯಗಳಲ್ಲಿ ತಮ್ಮ ಪಾಂಡಿತ್ಯವನ್ನು ಮೆರೆದರು .

ಶ್ರೀ ವಾಮನ ಕಣಜಾರು ರಿದಮ್ ಪ್ಯಾಡ್ ನಲ್ಲಿಯೂ, ಶ್ರೀ ವಿಜಯ ಕುಮಾರ್ ರವರು ಗಿಟಾರ್ ನಲ್ಲಿಯೂ ಮಿಂಚಿದರು. ಸ್ಥಳೀಯ ಗಿಟಾರ್ ಪ್ರತಿಭೆ ಶ್ರೀ ಶರತ್ , ಈ ಸಂಗೀತ ಮೇಳದ ಜತೆ ಗೂಡಿದ್ದರಿಂದ ಅದರ ಮೆರುಗು ಮತ್ತಷ್ಟು ಹೆಚ್ಚಿತ್ತು.

ಚಿನ್ನಕ್ಕೆ ಮೆರುಗು ನೀಡುವಂತೆ ಸ್ಥಳೀಯ ಪ್ರತಿಭಾವಂತ ಗಾಯಕರುಗಳಾದ ಶ್ರೀಮತಿ ಸುಮನ ಶಶಿಧರ್, ಶ್ರೀಮತಿ ಅನಿತಾ ಚಂದ್ರಕಾಂತ್,ಪುಟಾಣಿ ಸಾಕ್ಷಿ ಭಾಗವತ್, ಶ್ರೀ ಕರುಣಾಕರ ರಾವ್, ಶ್ರೀ ಕಿಶನ್ ಉದ್ಯಾವರ್, ಶ್ರೀ ಪ್ರವೀಣ್ ಉಚ್ಚಿಲ ತಮಗೆ ಸಿಕ್ಕ ಚಿಕ್ಕ ಅವಕಾಶವನ್ನು ಸದುಪ ಯೋಗ ಪಡಿಸಿಕೊಂಡು ಮನಸೆಳೆದರು. ಪುಟಾಣಿ ನೃತ್ಯ ಪ್ರತಿಭೆಗಳಾದ ಅನನ್ಯ ರವಿ, ಅಮೂಲ್ಯ ರವಿ, ಭರತ್ ಹೆಗ್ಡೆ ಮತ್ತು ವರುಣ್ ಸುನಿಲ್ ತಮ್ಮ ವಯಸ್ಸಿಗೂ ಮೀರಿದ ನೃತ್ಯ ನೈಪುಣ್ಯತೆ ಯನ್ನು ಪ್ರದರ್ಶಿಸಿ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು.

ಈ ಮಧ್ಯೆ "ಪನಿಪನಿ ಬರ್ಸ" ತುಳು ಹಾಡುಗಳ ಗುಚ್ಚದ ಧ್ವನಿಮುದ್ರಕವನ್ನು ಶ್ರೀ ರಾಮಕೃಷ್ಣ ರವರು ಬಿಡುಗಡೆ ಮಾಡಿದರು. "ಮಾ" ಕ್ರಿಯೇಶನ್ ರವರ ತಯಾರಿಕೆಯಾದ ಇದರ ಧ್ವನಿ ಮುದ್ರಕವನ್ನು ಪ್ರಥಮ ಬಾರಿಗೆ ಕೊಲ್ಲಿರಾಷ್ಟ್ರ ಒಂದರಲ್ಲಿ ಬಿಡುಗಡೆ ಮಾಡಲಾಯಿತಲ್ಲದೆ ಈ ಧ್ವನಿ ಮುದ್ರಿಕೆಯ ಪ್ರತಿಕೃತಿಯನ್ನು ಅತಿಥಿಗಳಿಗೆ ವಿತರಿಸಲಾಯಿತು. ಇದರಲ್ಲಿಯ ಒಂದು ಹಾಡು ಸಂಪೂರ್ಣವಾಗಿ ದುಬಾಯಿ ನಗರದಲ್ಲಿಯೆ ಚಿತ್ರೀಕರಿಸಲ್ಪಟ್ಟಿದೆ.

ವಸುಧಾ ಮ್ಯೂಸಿಕಲ್ ಸ್ಟಾರ್ ರವರಿಂದ ಪ್ರಸ್ತುತ ಪಟ್ಟ ಈ ಕಾರ್ಯಕ್ರಮಕ್ಕೆ ಬ್ಯಾಂಕ್ ಮಸ್ಕತ್ ಮತ್ತು ಟವೆಲ್ ಇಂಜಿನಿಯರಿಂಗ್ ಕಂಪನಿಯವರು ಮುಖ್ಯ ಪ್ರಾಯೋಜಕರಾಗಿದ್ದರು. ರೆಡ್ ರೋಸ್ ಫರ್ನಿಶಿಂಗ್ , ಮಜೂನ್ ಟ್ರಾವೆಲ್, ಮತ್ತು ಫಾ ಕಿಡ್ಸ್ ಮಧ್ಯಮ ಪ್ರಾಯೋಜಕರಾಗಿದ್ದರು ಹಾಗೂ ರೋಕಾ, ಸ್ಯಾಡೋಲಿನ್ ಪೈಂಟ್ಸ್, ಜೀಲ್ ಅಲ್ ನಹದಾ ಶಿಕ್ಷಣ ಸಂಸ್ಥೆ, ಅಲ್ ಮಜಾ ದೀಫ್ ಇಂಟರ್ನ್ಯಾಶನಲ್ ,ವರ್ಲ್ಡ್ ವೈಡ್ ಬಿಸಿನೆಸ್ ಹೌಸ್ ಮತ್ತು ಇಸ್ಮಾಯಿಲ್ ಅಲ್ ಅಜ್ಮಿ ಟ್ರೇಡಿಂಗ್ -ಸಹ ಪ್ರಾಯೋಜಕರಾಗಿದ್ದರು. ಮಸ್ಕತ್ ನ ಜನಪ್ರಿಯ ದೈನಿಕ ಟಾಯಿಮ್ಸ್ ಆಫ್ ಒಮಾನ್ ಸುದ್ದಿ ಮಾಧ್ಯಮವಾಗಿ ಸಹಕರಿಸಿದರು.

ಪ್ರಾಯೋಜಕರೆಲ್ಲರ ಔದಾರ್ಯ, ಸ್ಪಂದನ ಬಳಗದ ಶ್ರಮಕ್ಕೆ ಸಂಗೀತ ಪ್ರೇಮಿ ಸಭಿಕರು ಅದ್ಭುತ ವಾಗಿ ಸ್ಪಂದಿಸಿದರೆಂಬುಕ್ಕೆ ಎರಡು ಮಾತಿಲ್ಲ. ಉತ್ತಮ ಯಶಸ್ವೀ ಮನೋರಂಜನೆಯನ್ನು ನೀಡಿದ ತೃಪ್ತಿಯು "ಸ್ಪಂದನ" ದ ಸದಸ್ಯರೆಲ್ಲರ ಮುಖಗಳಲ್ಲಿ ಪ್ರತಿಫಲಿಸುತ್ತಿದ್ದವು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕರುಣಾಕರ್ ರಾವ್ ಪಿ. ಮಸ್ಕತ್
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2011-02-01

Tell a Friend

ಪ್ರತಿಸ್ಪಂದನ
Syed Mohiddin Saheb, Sastan /Muscat
2011-02-06
It was a nice Sangeetha Lahari. Almost All were in Sangeetha Loka. Thanks to Artists,Organisers. Keep it up.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

»ಮಸ್ಕತ್: 28ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ
»ಒಮಾನಿನಲ್ಲಿ ಅಮೇರಿಕಾ ಮಿಲಿಟೆರಿ 'ಹೆಲಿಕಾಪ್ಟರ್' ಅಪಘಾತ; 5 ಸಿಬ್ಬಂದಿ ಪೈಕಿ ಮೂವರು ಪತ್ತೆ - ಚಿಕಿತ್ಸೆ
»ಬಿಲ್ಲವರು ಪ್ರತಿಭಾ ಕಲಿಗಳು:ಸಾಧಿಸಿ ತೋರಿಸಿದ ಒಮಾನ್ ಪುಟಾಣಿಗಳು
»ಯಕೃತ್ತು ಕಸಿಯ ಹೊಸ ವಿಧಾನ: 2 ವರ್ಷದ ಒಮಾನಿ ಮಗುವನ್ನು ಬದುಕಿಸಿದ ಭಾರತೀಯ ವೈದ್ಯರು
»ಶ್ರೀ ಪ್ರಕಾಶ್ ನಾಯ್ಕ್ ರವರಿಗೆ ಓಮಾನಿನ ಆರೋಗ್ಯ ಮ೦ತ್ರಾಲಯದ ವತಿಯಿ೦ದ ಪುರಸ್ಕಾರ
»ಒಮಾನ್ ಸಮುದ್ರ ತೀರದಲ್ಲಿ ಅನಿವಾಸಿ ಭಾರತೀಯ ಮೀನುಗಾರರ ಹಡಗು ಕಣ್ಮರೆ
»ಒಮಾನ್ ಬಿಲ್ಲವರ "ವನಸ್ಸುದ ಪರ್ಬ-2012"
»ಮಸ್ಕತ್ ಸೇವಾ ಸಂಸ್ಥೆಯಿಂದ ಮುಸ್ಲಿಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
»ಮಸ್ಕತ್ 'ಸ್ಪಂದನ' ಗಾಯನ ದೋಣಿಯ ರಸಸಂಜೆ ಪಯಣ...
»ವಾಹನ ಮುಖಾಮುಖಿ ಡಿಕ್ಕಿ-ಬೆಂಕಿ:ನಾಲ್ವರು ದುರ್ಮರಣ
»ಜನವರಿ-2012 ಒಮಾನ್ ರಸ್ತೆ ಅವಘಡಕ್ಕೆ 70 ಸಾವು
»ಬೆಂಕಿಗೆ ಅನಿವಾಸಿ ಭಾರತೀಯನ ಅಂಗಡಿ-ಕಾರು ಭಸ್ಮ:ಒಮಾನ್ ರಾಯಭಾರಿ ಕಚೇರಿಯಲ್ಲಿ ಸಹಾಯಕ್ಕೆ ಅಳಲು
»ನಿರಂತರ 'ಡ್ರಗ್ಸ್' ವ್ಯಾಪಾರ : ಜಾಲ ಬೇದಿಸಿದ ಒಮಾನ್ ಪೋಲಿಸರು
»17 ಮೇ: ಒಮಾನ್ ತುಳುವರಿಗೆ ಅಪರೂಪದ ಅವಕಾಶ: ’ದಾದ ಮಲ್ಪೆರಾಪುಂಡು’ ತುಳು ನಾಟಕಕ್ಕೆ ಕ್ಷಣಗಣನೆ
»ಉರಿ ಬಿಸಿಲಿನಲ್ಲಿ ಕಾರ್ಮಿಕರ ಕೆಲಸವನ್ನು ನಿಷೇಧಿಸಿದ ಒಮಾನ್ ಸರಕಾರ !
»ಮಸ್ಕತ್‌ಗೆ ’ಯುಗಾದಿ ನಗೆ ಹಬ್ಬ’ ದೊಂದಿಗೆ ಬಂದ ‘ನಂದನ’
»ಸ್ಪಂದನ ಆರ್ಟ್ ಲೌವರ್ಸ್ ರಿಂದ ಹೆಸರಾಂತ ಗಾಯಕಿ ಅನಿತಾ ಸಾಮ್ಸನ್ ಅವರಿಗೆ ಸನ್ಮಾನ
»Indian businessman’s body found in mysterious circumstances
»ಮನರಂಜಿಸಿದ “ಕಿವುಡನ ಕಿತಾಪತಿ”
»ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
»ಸ್ಪಂದನ ತಂಡದ ಕಾರ್ಯಕ್ರಮಕ್ಕೆ ಆಗಮಿಸಿದ ಕಲಾವಿದರು
»ಒಮಾನ್ ಹರ್ಷ ಕುಮಾರ್‌ ರೈಗೆ ಭಾರತ ಸಮ್ಮಾನ್‌ ಪ್ರಶಸ್ತಿ
»ಜನವರಿ 19ರಂದು ಸ್ಪಂದನಾ ವಿರಚಿತ 'ಯಾದೊಂಕಿ ಭಾರತ್' ಸಂಗೀತ ಬಿಡುಗಡೆ
»ಒಮಾನ್ ನಲ್ಲಿ ಬಂಟರ 24ನೇ ಸಮ್ಮಿಲನ : ಗಮನಸೆಳೆದ ಮನೋರಂಜನಾ ಕಾರ್ಯಕ್ರಮ , ತುಳುನಾಡಿನ ವೈಶಿಷ್ಟ್ಯ
»ಮಸ್ಕಟ್‌ನಲ್ಲಿ ಕಾರು ಅಪಘಾತ: ನಗರದ ಸಹೋದರಿಯರ ಸಾವು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri