ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಅನಿವಾಸಿ ಕನ್ನಡಿಗರೆ ನೀವು ಕರ್ನಾಟಕ ಬಿಟ್ಟು ಹೋಗುವಾಗ ನಮ್ಮನ್ನು ಕೇಳಿದ್ದಿರಾ ?-ಮುಖ್ಯಮಂತ್ರಿ ಚಂದ್ರು(ಸ೦ಗ್ರಹ)

ಕತಾರ್ ಕರ್ನಾಟಕ ಸಂಘ ಏರ್ಪಡಿಸಿದ ೫ನೆಯ ವಿಶ್ವ ಕನ್ನಡ ಸಮ್ಮೇಳನದಲ್ಲಿ ಅನಿವಾಸಿ ಕನ್ನಡಿಗರನ್ನು ಹೀಯಾಳಿಸಿದ ಘಟನೆ.

ಅನಿವಾಸಿ ಕನ್ನಡಿಗರು/ವಿದೇಶದಲ್ಲಿ ಕನ್ನಡಿಗರು ಗೋಷ್ಠಿ:

ಅಧ್ಯಕ್ಷತೆ : ಶ್ರೀ ವಿ.ಟಿ. ಶ್ರೀನಿವಾಸ್,
ನಿಕಟಪೂರ್ವ ಅಧ್ಯಕ್ಷರು ಸಿಂಗಾಪುರ ಕನ್ನಡ ಸಂಘ
ಅನಿವಾಸಿ ಕನ್ನಡಿಗರು : ಶ್ರೀ ಕುಮಾರ್ ಕುಂಟಿಕಾನ ಮಠ, ಇಂಗ್ಲೆಂಡ್
ಶ್ರೀ ವೀರೇಂದ್ರ  ಬಾಬು, ದುಬೈ,
ಶ್ರೀ ರಮೇಶ್ ಮಂಜೇಶ್ವರ, ಬಹ್ರೈನ್
ಶ್ರೀ ಐಯರಾಜ್, ಮಸ್ಕತ್
ಶ್ರೀ ಪಿ.ಎಸ್. ಪೈ, ಕತಾರ್
ಪ್ರಾಯೋಜಕರು : ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು

ದೋಹ: ಇತ್ತೀಚೆಗೆ ನಡೆದ ೫ನೇ ವಿಶ್ವ ಕನ್ನಡ ಸಮ್ಮೇಳನ ದ ಅಂಗವಾಗಿ ಸಮ್ಮೇಳನದ ಇರಡನೇ ದಿನದಂದು ’ಅನಿವಾಸಿ ಕನ್ನಡಿಗರು /ವಿದೇಶದಲ್ಲಿ ಕನ್ನಡಿಗರು’ ಗೋಷ್ಠಿ ಯನ್ನು ಏರ್ಪಡಿಸಲಾಗಿತ್ತು.

 ಶ್ರೀ ವಿ.ಟಿ. ಶ್ರೀನಿವಾಸ್, ನಿಕಟಪೂರ್ವ ಅಧ್ಯಕ್ಷರು ಸಿಂಗಾಪುರ ಕನ್ನಡ ಸಂಘ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಚರ್ಚೆ ಯಲ್ಲಿ ಅನಿವಾಸಿ ಕನ್ನಡಿಗರಾದ ( ಎನ್. ಅರ.ಕ ) ಶ್ರೀ ಕುಮಾರ್ ಕುಂಟಿಕಾನ ಮಠ, ಇಂಗ್ಲೆಂಡ್. ಶ್ರೀ ವೀರೇಂದ್ರ  ಬಾಬು, ದುಬೈ, ಶ್ರೀ ರಮೇಶ್ ಮಂಜೇಶ್ವರ, ಬಹ್ರೈನ್,  ಶ್ರೀ ಐಯರಾಜ್, ಮಸ್ಕತ್, ಶ್ರೀ ಪಿ.ಎಸ್. ಪೈ, ಕತಾರ್ ರವರು ಭಾಗವಸಿದ್ದರು.

ಈ ಅನಿವಾಸಿ ಕನ್ನಡಿಗರ ಘೋಷ್ಠಿಯಲ್ಲಿ ಭಾಗವಹಿಸುತ್ತಾ ಕರ್ನಾಟಕ ಸರಕಾರವನ್ನು ಎಚ್ಚರಿಸಿದ ಕುಂಟಿಕಾನ ಮಠ ಕುಮಾರ್‍ರವರ ಮಾತಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪ್ರತಿಕ್ರಯಿಸಿದ್ದು- ನೀವು ಭಾರತ, ಕರ್ನಾಟಕ ಬಿಟ್ಟು ಹೋಗಿದ್ದು ಏಕೆ ? ನಮ್ಮನ್ನು ಕೇಳಿ ಹೋಗಿದ್ದೆ ಯಾ?ಎಂದು ಕಟುವಾಗಿ ಪ್ರಶ್ನಿಸಿದರು.

ಚರ್ಚೆಯಲ್ಲಿ ಭಾಗವಸಿದ್ದ ಕನ್ನಡಿಗರು ತಮ್ಮ ಕುಂದುಕೊರತೆಗಳನ್ನು ಎಲ್ಲರಿಗೂ ಮನ ಮುಟ್ಟುವ ರೀತಿಯಲ್ಲಿ ಹೇಳಿದರು. ಸುಮಾರು ೨೦ ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ಸಾವಿರಾರು ಕೋಟಿ ಹಣವನ್ನು ಹಲವಾರು ವಿಧದಲ್ಲಿ ಪ್ರಪಂಚದ ಹಲವಾರು ದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ತಲುಪಿಸಿದ್ದಾರೆ. ಆದರೆ ಕರ್ನಾಟಕ ಸರಕಾರ ಅನಿ ವಾಸಿ ಕನ್ನಡಿಗರು ತಮ್ಮ ರಾಜ್ಯದ ಆಸ್ತಿ ಅವರ ಅಭ್ಯುದಯ ನಮ್ಮ ಅಭ್ಯುದಯ ಎಂದು ಅರಿತು ಸುಮಾರು ೧೦೦ ಕೋಟಿ ಹಣವನ್ನು ಅನಿವಾಸಿ ಕನ್ನಡಿಗರ ನೆರವಿಗೆ ನೀಡಿದಲ್ಲಿ ಮತ್ತೆ ಅನಿವಾಸಿ ಕನ್ನಡಿಗರ ಕೊಡುಗೆ ಹೆಚ್ಚಾಗುತ್ತದೆ, ಯಡಿಯೂರಪ್ಪನವರು ಹೇಳಿದಂತೆ ಕರ್ನಾಟಕ ಮುಂದುವರಿಯುತ್ತದೆ ಎಂಬ ಕಿವಿಮಾತು ಇಂಗ್ಲೆಂಡಿನಿಂದ ಆಗಮಿಸಿದ್ದ ಕುಂಟಿಕಾನಮಠ ಕುಮಾರ್‍ರವರು ಹೇಳಿದರು.

ಆಗ ಖ್ಯಾತ ಸಾಹಿತಿ, ಜನಪದ ತಜ್ನ ವಿಧಾನ ಪರಿಷತ್ ಸದಸ್ಯ, ಡಾ. ಚಂದ್ರಶೇಖ‍ರ್ ಕಂಬಾರ್ ಸ್ಪಂದಿಸುತ್ತಾ, ಒಳ್ಳೆಯ ಗಹನವಾದ ವಿಚಾರ. ನೀವು ಬರವಣಿಗೆಯಲ್ಲಿ ಕೊಡಿ ಎಂದರು. ಕುಂಟಿಕಾನ ಮಠ ಕುಮಾರ್ ‍ರವರು ಕನ್ನಡ ಪ್ರಾಧಿಕಾರ ಅಧ್ಯಕ್ಷ ಮುಖ್ಯ ಮಂತ್ರಿ ಚಂದ್ರು ಅವರನ್ನು, ವೇದಿಕೆಗೆ ಬಂದು ಸಾಂಕೇತಿಕವಾಗಿ ಎಲ್ಲಾ ಅನಿವಾಸಿ ಕನ್ನಡಿ ಗರ ಮನವಿ ಯನ್ನು ಸ್ವೀಕರಿಸಬೇಕು ಎಂದು ವಿನಂತಿಸಿದರು.

ಮುಖ್ಯಮಂತ್ರಿ ಚಂದ್ರು ಅವರು ವೇದಿಕೆಗೆ ಬಂದು ನೀವು ಕರ್ನಾಟಕ ಬಿಟ್ಟು ಹೋದ ದ್ದೇಕೆ ? ನಿಮ್ಮನ್ನು ಹೋಗಲು ಹೇಳಿದವರಾರು ಎಂದು ಪ್ರಶ್ನಿಸಿದರು. ಸೇರಿದ್ದ ಅಭಿಮಾನಿ ಗಳೆಲ್ಲಾ ಸ್ವಲ್ಪ ಬೇಸರಗೊಂಡು ಪ್ರತಿಕ್ರಯಿಸಿದರು.

ಆಮೇಲೆ ಚಂದ್ರು ಅವರು ಸಮಾರೋಪ ಭಾಷಣದಲ್ಲಿ ಕರ್ನಾಟಕ ಸರಕಾರದೊಂದಿಗೆ ಚರ್ಚಿಸುತ್ತೇನೆ ಎಂದು ಭರವಸೆ ಇತ್ತಾಗ ಅನಿ ವಾಸಿ ಕನ್ನಡಿಗರಿಗೆ ಸಂತೋಷ ವಾಯಿತು.

ಪ್ರತಿಸ್ಪಂದನಗಳು  

Mohammed Azeem, Mangalore

ಅಹಂಕಾರ ಭರಿತ ಹೇಳಿಕೆ! ಒಬ್ಬ ಜವಾಬ್ದಾರಿ ಸ್ಥಾನ ದಲ್ಲಿ ಇದ್ದ ವ್ಯಕ್ತಿ ಇಂಥ ಹೇಳಿಕೆ ನೀಡೂದು ಭೂಷಣ ವಲ್ಲ! ಆದರೆ ಇವರು ಕರ್ನಾಟಕ ದಲ್ಲಿ ಇದ್ದವರಿಗೆ ಎಷ್ಟರ ಮಟ್ಟಿಗೆ ಒಳ್ಳೆಯ ಸವಲತ್ತು ನೀಡಿದ್ದಾರೆ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ 

Satish, Udupi

Why should we NRI call this VILLAIN who deserve only on movies in reel life.  

ಕಡೆಂಗೋಡ್ಲು ಶಂಕರ ಭಟ್ಟ, ಹುಟ್ಟೂರು : ಪೆರುವಾಯಿ; ಈಗ: ಕಜಖಿಸ್ಥಾನ ದೇಶ

ಮೊಹಮದ್ ಆಜೀಮ - ಮಂಗಳೂರು, ತಾವು ಈ ಅಹಂಕಾರಿಗೆ ತಕ್ಕ ಉತ್ತರ ಕೊಟ್ಟಿದ್ದೀರಿ. ಇಂಥಹ ಅಸೂಯ ಪ್ರಾಣಿಗಳು ಕನ್ನಡದ ಮಹಾ ಮೇಧಾವಿಗಳಲ್ಲಿ ಬಹಳ ಇದ್ದಾರೆ, ನನ್ನ ಆಪ್ತನೂ ಒಬ್ಬ ಬೆಂಗಳೂರಿನಲ್ಲಿ ಇದ್ದಾನೆ. ಏನು ಮಾಡೋದು? ಇಂಥಹ ಖಾಯಿಲಿಗೆ ಇನ್ನೂ ಔಶಧಿ ಸಂಶೋಧಿಸಿಲ್ಲ ! ಪಾಪ ಬಿಟ್ಟು ಬಿಡಿ ಅವರನ್ನು ಅವರ ಪಾಡಿಗೆ; ಅವರ ಮಾತು ಅವರ ಅಸೂಯ ಗುಣವನ್ನು ತೋರಿಸುತ್ತೆ ಅಷ್ಟೆ ! ನಾಯಿ ಬಾಲ ಡೊಂಕೆ !  

ಅಶ್ರಫ್ ಮಂಜ್ರಾಬಾದ್ , ಸೌದಿ ಅರೇಬಿಯಾ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರುರವರ ಈ ಹೇಳಿಕೆ ಅವರ ಘನತೆಗೆ ಶೋಭೆ ತರುವಂತಹದ್ದಲ್ಲ. ಒಬ್ಬ ಸರ್ಕಾರದ ಪ್ರತಿನಿಧಿಯಾಗಿ ಅವರ ಈ ಹೇಳಿಕೆ ಅನಿವಾಸಿ ಕನ್ನಡಿಗರ ಮನಸ್ಸಿಗೆ ನೋವನ್ನುಂಟು ಮಾಡುವಂತಹದ್ದಾಗಿದೆ. ಮುಖ್ಯಮಂತ್ರಿ ಚಂದ್ರುರವರು ತಮ್ಮ ಅನಿಯಂತ್ರಿತ ನಾಲಿಗೆಯಿಂದ ಈ ಹಿಂದೆ ತಮ್ಮದೇ ಸರ್ಕಾರದ ವಿರುದ್ಧ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೊಳ ಗಾಗಿದ್ದರು. ಈಗ ಅನಿವಾಸಿ ಕನ್ನಡಿಗರ ವಿರುದ್ಧ ವಿನಾಕಾರಣವಾಗಿ ಹೇಳಿಕೆ ನೀಡಿದ್ದಾರೆ.ತಮ್ಮ ಈ ರೀತಿಯ ಲಂಗು ಲಗಾಮಿಲ್ಲದ ವಿವಾದಾತ್ಮಕ ಹೇಳಿಕೆಗಳಿಂದ ಸ್ವತಹ ಮುಖ್ಯಮಂತ್ರಿ ಚಂದ್ರು ತಮ್ಮ ರಾಜಕೀಯ ಜೀವನಕ್ಕೆ ಸ್ವಯಂ ಇತಿಶ್ರೀ ತಂದುಕೊಂಡರೂ ಆಶ್ಚರ್ಯವಿಲ್ಲ.  

Manna Iliyas Udupi, Bahrain

ಚಲನ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ ಚಂದ್ರು ರವರೆ ಇದು ಯಾವ ಚಿತ್ರದ ಸಂಬಾಷಣೆ ಅಲ್ಲ ನೀವೂ ಹೊರ ದೇಶದಲ್ಲಿ ತಮ್ಮ ಕುಟುಂಭಕ್ಕೊಸ್ಕರ ಹಗಲು ರಾತ್ರಿ ಎನ್ನದೆ ಕೆಲಸ ಮಾಡಿ ಹೊಟ್ಟೆ ತುಂಬಿಕೊಳುತಿರುವ ಬಾರತದ ಕರ್ನಾಟಕದ ಮಕ್ಕಳಿಗೆ ಅಹಂಕಾರದ ಮಾತನ್ನು ಹೇಳಿದ್ದಿರಿ ನೀಮಗೆ ಸ್ವಲ್ಪವೂ ನಾಚಿಗೆ ಇಲ್ಲವೆ? ನಮಗೆ ಹೊರದೇಶಕ್ಕೆ ಬರಲು ಯಾರು ಹೇಳಲಿಲ್ಲ.. ನಾವೂ ಬರದೆ ಇದ್ದೆರೆ ನಮ್ಮ ಮನೆಯವರಿಗೆ ನಿವೋ ೩ ಹೊತ್ತು ಊಟದ ವೆವಸ್ಥೆ ಮಾಡುತ್ತಿರಾ? ಯಾವ ರಾಜಿಕಿಯ ಪಕ್ಷ ಗಳು ಯಾರಿಗೂ ಏನು ಮಾಡುವುದಿಲ್ಲ.  

Basheer, Abu Dhabi

ಅಹಂಕಾರಿ ಮಾತು....  

Sayed, Udupi

From the day of Independence, Indian politicians were thinking population as a curse instead of using the manpower in right direction. Above that, adding to their incapability, they are giving such utter meaningless statements. It is sufficient to prove the cheap and narrow mentality of our politicians.  

Gopal Hegde, Ankola, NK

Before inviting we should know one's capabilities. They agree to come overseas very easily since they (Supporting Actors) don't get many opportunities in Kannnada cinemas to go out abroad. We cannot expect anything more than this from a person like Chandru. Avarige Dhikkar virali.  

ಕಡೆಂಗೋಡ್ಲು ಶಂಕರ ಭಟ್ಟ, ಹುಟ್ಟೂರು : ಪೆರುವಾಯಿ; ಈಗ: ಕಜಖಿಸ್ಥಾನ ದೇಶ

ನನ್ನ ಮೊದಲಿನ ಅನಿಸಿಕೆಯಲ್ಲಿ ಒಂದು ಪ್ರಮಾದವಾಗಿದ್ದರಿಂದ ಈ ಕೆಳಗಿನ ತಿದ್ದುಪಡಿಯನ್ನು ಬರೆಯುತ್ತಿದ್ದೇನೆ : ಇವನನ್ನು ಬರೇ 'ಅಹಂಕಾರಿ' ಎನ್ನುವುದಕ್ಕಿಂತ "ದುರಹಂಕಾರಿ" ಎಂದು ಕರೆದರೆ ಸರಿಯಾಗುತ್ತೆ 

Mohan H Naik, Mangaluru

ಚಂದ್ರುವಿಗೊಂದು ಪತ್ರ. ಪ್ರಿಯ ಚಂದ್ರು, ನಿಮ್ಮನ್ನಾ ಒಬ್ಬ ಮೇಧಾವಿ, ಬುದ್ದಿವಂತ, ಸೃಜನಶೀಲ ವ್ಯಕ್ತಿ ಅಂಥ ತಿಳಿದಿದ್ದೆ. ಆದರೆ, ಚಂದ್ರೂ ನೀವು ಕೂಡ ಒಬ್ಬಾ ನಾಲಿಗೆ ಮೇಲೆ ಹಿಡಿತವಿಲ್ಲದ ಸಾಮನ್ಯ ಮನುಷ್ಯ ಅಂಥ ನಿರುಪಿಸಿಬಿಟ್ತ್ರಿ . ಇರಲಿ, ಅನಿವಾಸಿ ಕನ್ನಡಿಗನ ಕುರಿತು ನೀವೆಷ್ಟು ತಿಳಿದಿರುವಿರಿ ಚಂದ್ರು? ಅನಿವಾಸಿ ಕನ್ನಡಿಗ, ನಿಮ್ಮ ಲೆಕ್ಕದಲ್ಲಿ ಕೇವಲ, ಸೂಟು ಬೂಟು,ಟೈ ಹಾಕುವ ಲಕ್ಷ ಲಕ್ಷ,ಸಂಪಾದಿಸುವ, executive ಕ್ಲಾಸ್, ಅಥವಾ ಬಿಸಿನೆಸ್ ಕ್ಲಾಸ್ ಜನ ಮಾತ್ರನ? ಇಲ್ಲ ಚಂದ್ರು. ನೀವು ಎಡವಿದ್ದು ಇಲ್ಲೇನೆ . ತುತ್ತು ಕೂಳಿಗಾಗಿ ,ತುಂಡು ಬಟ್ಟೆಗಾಗಿ, ಮನೆ, ಮಠ,ಸಂಸಾರ, ದೇಶ,ಭಾಷೆ, ಸ್ವಜನರನ್ನ ಬಿಟ್ಟು , ಪರೆದೆಶಿಯಾದ ಸಾವಿರಾರು, ಮದ್ಯಮ,ಕೆಳಮದ್ಯಮ, ತೀರ ಬಡ ,ಕನ್ನಡಿಗರು ಕೂಡ ಅನಿವಾಸಿ ಕನ್ನಡಿಗರೇ. ಚಂದ್ರು ಈ ಲಕ್ಷಾಂತರ ಕನ್ನಡಿಗರು, ಒಲಸೆ ಹೋಗೋವಾಗ , ಮೊದಲು ಪಾಸ್ಪೋರ್ಟ್ ಅಪ್ಲಿಕೇಶನ್ ಖಂಡಿತ ಮಾಡಿದ್ರು . ಸರಕಾರೀ ಪರವಾನಗೀ ಕೂಡ ಪಡೆದಿದ್ರು . ಆಗ ತಾವಾಗಲಿ ತಮ್ಮ ಘನ ಸರ್ಕಾರವಾಗಲಿ, ಇವರನ್ನಾ ಏಕೆ ತಡೆಯಲಿಲ್ಲ ? ದೇಶದ ಆಡಳಿತದ ಚುಕ್ಕಾಣಿ ಹಿಡಿದವರು ನಿರ್ವೀರ್ಯರು, ಇವರನ್ನು ನಂಬಿದ್ರೆ ಹೊಟ್ಟೆಗೆ ತಣ್ಣೀರು ಬಟ್ಟೆ ಗತಿ, ಅನ್ನೋ ಸತ್ಯದ ಸಾಕ್ಷಾತ್ಕಾರ ವಾಗಿದ್ದರಿಂದಲೇ, ಇವರು "ನಿವಾಸಿ" ಇಂದ , "ಅನಿವಾಸಿ" ಕನ್ನಡಿಗರಾಗಿದ್ದು. ಹಾ ಹೊಟ್ಟೆ ತುಂಬಿದಮೇಲೆ,ಜುಟ್ಟಿಗೆ ಮಲ್ಲಿಗೆ ಹೂವು ಕೂಡ ಹೆಮ್ಮೆ ಇಂದ ಕೊಂಡರು. ಆದರೆ, ಮೋಸ ಮಾಡಿ, ಲಂಚ ತಿಂದು, ದೇಶ ಮಾರಿ ಖಂಡಿತ ಅಲ್ಲಾ. ಚಂದ್ರು ನೀವು ಮುಖ್ಯವಾಗಿ ತಿಳಿಯಬೇಕಾದ ವಿಷಯ ಒಂದಿದೆ . ಹೊರದೇಶದಲ್ಲಿ ಕೂಲಿಮಾಡಿ ಬದುಕುವ , ಯಕಶ್ಚಿತ , ಕನ್ನಡಿಗ ಕೂಡ, ಸ್ವಾವಿಲಂಬಿ. Pay commission ಗಳಾಗಲಿ, subsidy ಗಳಾಗಲಿ ಇವರಿಗೆ ಗೊತ್ತೇ ಇಲ್ಲಾ. ದೇಶದ ಖಜಾನೆಗೆ ಇವರು ಎಂದು white elephants ಆಗಿಲ್ಲಾ. ಆದರೆ, ಹೊರದೇಶದಿಂದ ಹರಿದು ಬರುವ ಇವರ remittance may be a small amount individual wise, but, "ಹನಿ ಹನಿಗೂಡಿದರೆ ಹಳ್ಳ" ಅಂಥ ಇವರೇ ತಾನೆ ಹರಿಸಿದ್ದು petrodollars ಹೊಳೆನಾ ? ಈ ಅನಿವಾಸಿ ಕನ್ನಡಿಗರು ಹ್ರದಯ ವಿಶಾಲರು. ದಯವಿಟ್ಟು ಈ ಸ್ವಾಭಿಮಾನಿ ಕನ್ನಡಿಗರ ಸಹನೆಯ ಪರೀಕ್ಷೆ, ಮತ್ತೆಂದು ಆಗದಿರಲಿ, ಹಾಗು ತಾವು ರಂಗಮಂದಿರದಿಂದ ಬಂದ ವ್ಯಕ್ತಿ , ನೀಚ ರಾಜಕಾರಣಿ ತಾವಲ್ಲ, slip of tongue ನಿಂದ ಬಂದ ನುಡಿ ಎಂದು ಊಹಿಸಿ, ತಾಯೀ ಭುವನೇಶ್ವರಿ ನಿಮಗೆ ಸದ್ಬುದ್ದಿ ಕೊಡಲಿ ಅಂಥ ಅನಿವಾಸಿ ಕನ್ನಡಿಗರ ಪರವಾಗಿ ಪ್ರಾರ್ಥಿಸಿಕೊಳ್ಳುತ್ತೇನೆ..  

Ronald, Udupi

This man should've been pressurized for an apology on the spot. Still not too late. Because of Kannadiga's he reached Doha! He should learn to behave.  

Narasimha , Prasad

Dear Editor, We never get any information about this kind of function ( ಕತಾರ್ ಕನ್ನಡ ಸಂಘದ ಅದ್ಯಕ್ಷ ಅರವಿಂದ ಪಾಟಿಲ್ ರವರನ್ನು ಸಂಪರ್ಕಿಸಿ)  

Nithyanand Beskoor, Udupi, Dubai

ಮುಖ್ಯಮಂತ್ರಿ ಚಂದ್ರುರವರು ಈ ರೀತಿ ಹೇಳಿಕೆ ನೀಡಿ ತಮ್ಮ ವರ್ಚಸನ್ನು ಕೆಳಗೆ ತ೦ದಿದ್ದಾರೆ.ಕೆಳಗೆ ಓದಿ ರಾಜಕೀಯ ವ್ಯಕ್ತಿಗಳ ಬಗ್ಗೆ ತಿಳಿಯುತ್ತೆ. Revelation of Swiss bank accounts This is so shocking....If black money deposits was an Olympics event.... India would have won a gold medal hands down. The second best Russia has 4 times lesser deposit. U.S. is not even there in the counting in top five! India has more money in Swiss banks than all the other countries combined! Recently, due to international pressure, the Swiss government agreed to disclose the names of the account holders only if the respective governments formally asked for it. Indian government is not asking for the details.......no marks for guessing why? We need to start a movement to pressurise the government to do so! This is perhaps the only way, and a golden opportunity, to expose the high and mighty and weed out corruption! Please read on..and forward to all the honest Indians to...like somebody is forwarding to you...and build a ground-swell of support for action! Is India poor, who says? Ask the Swiss banks. With personal account deposit bank of $1,500 billion in foreign reserve which have been misappropriated, an amount 13 times larger than the country's foreign debt, one needs to rethink if India is a poor country? DISHONEST INDUSTRIALISTS, scandalous politicians and corrupt IAS, IRS, IPS officers have deposited in foreign banks in their illegal personal accounts a sum of about $1500 billion, which have been misappropriated by them. This amount is about 13 times larger than the country's foreign debt. With this amount 45 crore poor people can get Rs 1,00,000 each. This huge amount has been appropriated from the people of India by exploiting and betraying them. Once this huge amount of black money and property comes back to India , the entire foreign debt can be repaid in 24 hours. After paying the entire foreign debt, we will have surplus amount, almost 12 times larger than the foreign debt. If this surplus amount is invested in earning interest, the amount of interest will be more than the annual budget of the Central government. So even if all the taxes are abolished, then also the Central government will be able to maintain the country very comfortably. Some 80,000 people travel to Switzerland every year, of whom 25,000 travel very frequently. 'Obviously, these people won't be tourists. They must be travelling there for some other reason,' believes an official involved in tracking illegal money. And, clearly, he isn't referring to the commerce ministry bureaucrats who've been flitting in and out of Geneva ever since the World Trade Organisation (WTO) negotiations went into a tailspin! Just read the following details and note how these dishonest industrialists, scandalous politicians, corrupt officers, cricketers, film actors, illegal sex trade and protected wildlife operators, to name just a few, sucked this country's wealth and prosperity. This may be the picture of deposits in Swiss banks only. What about other international banks? Black money in Swiss banks -- Swiss Banking Association report, 2006 details bank deposits in the territory of Switzerland by nationals of following countries: ::TOP FIVE::- INDIA - $1,456 BILLION; RUSSIA-$470 BILLION ; U.K -$390 BILLION;UKRAINE -$100 BILLION; CHINA-$96 BILLION. Now do the math's - India with $1,456 billion or $1.4 trillion has more money in Swiss banks than rest of the world combined. Public loot since 1947: Can we bring back our money? It is one of the biggest loots witnessed by mankind -- the loot of the Aam Aadmi (common man) since 1947, by his brethren occupying public office. It has been orchestrated by politicians, bureaucrats and some businessmen. The list is almost all-encompassing. No wonder, everyone in India loots with impunity and without any fear. What is even more depressing in that this ill-gotten wealth of ours has been stashed away abroad into secret bank accounts located in some of the world's best known tax havens. And to that extent the Indian economy has been stripped of its wealth. Ordinary Indians may not be exactly aware of how such secret accounts operate and what are the rules and regulations that go on to govern such tax havens. However, one may well be aware of 'Swiss bank accounts,' the shorthand for murky dealings, secrecy and of course pilferage from developing countries into rich developed ones. IS THERE ANYONE WHO CAN SAVE INDIA ? PASS IT ON IF YOU WISH INDIA GOOD..............  

Vanamali, Udupi

This is the true face of Indian Politician. When he is in power he feels that he is the Boss.....we should remind him...at least these NRI's came here by paying from their pocket...But this person ...came here spending " Taxpayer's" money...!!!!!!!!!  

Sudhakar Suvarna, Bur Dubai

WHO THE HELL ARE YOU TO ASK ?? Are you paying for any of our expenses?? Pls don't forget that we are the people who made u so big...so pls be good to the people. U know Karnataka is the fifth most corrupt state in India after Bihar, UP, MP and J  

Mohan H Naik, Mangaluru

ನಿತ್ಯಾನಂದ ಅವರೇ , ತುಂಬ ಸಮಯೋಚಿತ ಮಾಹಿತಿ ಒದಗಿಸಿದ್ದಿರಾ. ತುಂಬ ಧನ್ಯವಾದಗಳು. ಪ್ರತಿಯೊಬ್ಬ ಪ್ರಜೆ, ಪ್ರಜ್ನಾಪೂವರ್ಕವಾಗಿ ಮತದಾನದ ಹಕ್ಕನ್ನು ಚಲಾಯಿಸಿದಲ್ಲಿ ಮಾತ್ರ ದೇಶದ ಹಿತ. ಜಾತಿ, ಮತ, ಪ್ರದೇಶ್, ಮೀರಿದ, " ಪ್ರಜ್ನೆ" ನಮ್ಮಲ್ಲಿ ಯಾವಾಗ ಬರುತ್ತೋ. ಅಲ್ಲಿಯ ತನಕವಂತು, ಬ್ರಷ್ಟರ ಪಾಲಿಗೆ ಸುಗ್ಗಿ 

Arvind Patil, Qatar

Dear friends, The NRI forum was an eye opener to the delegates and the representatives of Government especially Mr Chandru. I would like to tell Mr Vanamali from Udupi that , he was flown by us and not from the Taxpayer's money. The forum took a different turn when one of the speaker invited Mr Chandru on the stage which was not required at that stage.However Mr Chandru was kind enough to go on the stage and informed the audience that for the first time in Karnataka the Government has set up an NRI grievience cell where a cabinet level peron has been appointed to take care of this and he informed further that this is being new and first of its kind, is in the process of formulating the procedures. One must know that things won't happen overnight. One should feel happy that one such cell is now existing in Karnataka and Mr Chandru assured that all the grieveinces will be addressed to the maximum extent. Further he stated that the problems and difficulties of NRI'S are not same as they depend on the country of residence. He asked to send the outcome of the forum be sent to NRI grievience cell which he will definately discuss with the concerned. His statement which has created controversary came only after one of the speaker asked him to come to stage and instantly asked him to confirm and gurantee that these griviences will be addressed. So let us togrether look at the better part and appreciate the Government for setting up one such cell which was not existing before, is a first step in this direction, and now we NRK's will form our own NRK committees and list out the difficulties and problems that we are facing while living in this region and forward them to the cell. Let us work together to solve the problems, we will not achieve anything by commenting on one statement.Most of the comments have come from the people who have not attended the sammelana and truth is not known.I have tried to explain the truth as one of the witness and the organiser of this event. I urge all Kannadigas of this region to come forward to listout the problems let us meet once in year and send our representative to the Government, if they dont fulfil our grieviences, then yes we are there to show their way out of Vidhanasoudha. I hope you all will agree with me. Jai Karnataka.  

ಸಯದ್ ಮಹಮ್ಮದ್, ಬೆಂಗಳೂರು /ಅಜ್ಮಾನ್

ಅರವಿಂದ ಪಾಟೀಲರ ಅನಿಸಿಕೆಗಳು..ಚೆನ್ನಾಗಿದೆ!. ಸರಿಯಾಗಿ ಹೇಳಿದ್ದಾರೆ. ಆದರೆ ಅದು ಒಂದು ರಾಜಕಾರಣಿ ಹಾಗೆ ಬರೆದಿದ್ದಾರೆ!.ಹೀಗಿದೆ...’One must know that things won't happen overnight. One should feel happy that one such cell is now existing in Karnataka and Mr Chandru assured that all the grieveinces will be addressed to the maximum extent!!. ಪಾಪ ಅವರಿಗೆ ಗೊತ್ತಿಲ್ಲ ಈ ಎನ್.ಆರ್.ಸೆಲ್ ನ ಅವಸ್ತೆ. ಇದು ರಾಜಕೀಯ ಜನಪ್ರಿಯತೆಗೆ ಕಾಲಹರಣ ಮಾಡುವ ಒಂದು ಸಾಧನೆ ಮಾತ್ರೆ. ಇತ್ತೀಚೆಗೆ ಗಲ್ಫ್ ಕನ್ನಡಿಗ.ಕಾಮ್ ನಲ್ಲಿ ಈ ಸೆಲ್ ಬಗ್ಗೆ ಒಂದು ವಾರ್ತೆ ಒದಿದ್ದೆ . ಅದರೆ ಅದು ಶ್ರೀಯುತ ಪಾಟಿಲ್ ಅವರ ಗಮನಕ್ಕೆ ಬರಲಿಲ್ಲವೆಂದು ಕಾಣುತ್ತೆ!!. ಅದರ ತುಣುಕುಗಳನ್ನು ಇಲ್ಲಿ ಲಗತ್ತಿರುಸುತ್ತೇನೆ. -::ಎನ್‌ ಆರ್ ‌ಐ ಘಟಕಕ್ಕೆ ಮುಗಿಯದ ಬಾಲಗ್ರಹ ಪೀಡೆ::- ಇದನ್ನೇಕೆ ಎನ್ ಅರ್ ಕ ಘಟಕ ( ಅನಿವಾಸಿ ಕನ್ನಡಿಗ) ಎಂದು ಕರೆಯಬಾರದು?? - ಇದು ನಮ್ಮ ಪ್ರಶ್ನೆ. ಬೆಂಗಳೂರು: ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯಿಂದ ಅಸ್ತಿತ್ವಕ್ಕೆ ತಂದ ಅನಿವಾಸಿ ಭಾರತೀಯರ ಘಟಕ (ಎನ್‌ಆರ್‌ಐ) ನಾಲ್ಕು ತಿಂಗಳಾದರೂ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡಲು ಸಾಧ್ಯವಾಗಿಲ್ಲ. ವಿಧಾನ ಪರಿಷತ್ ಸದಸ್ಯ ಬಿಜೆಪಿಯ ಗಣೇಶ್ ಕಾರ್ಣಿಕ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿದಲ್ಲದೇ ಅವರಿಗೆ ಸಂಪುಟ ದರ್ಜೆ ಸ್ಥಾನಮಾನವನ್ನೂ ಕೊಡಲಾಗಿದೆ. ವಿಕಾಸ ಸೌಧದಲ್ಲಿ ಅದಕ್ಕೆ ಕಚೇರಿಯನ್ನೂ ನೀಡಲಾಗಿದೆ. ಘಟಕದ ಸುಗಮ ಕಾರ್ಯನಿರ್ವಹಣೆಗೆ ಅಗತ್ಯ ಸಿಬ್ಬಂದಿಯನ್ನೂ ಕೊಟ್ಟಿಲ್ಲ; ಈ ತನಕ ಅನುದಾನವನ್ನೂ ಬಿಡುಗಡೆ ಮಾಡಿಲ್ಲ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಆ.11 ರಂದು ಅಧಿಕಾರ ವಹಿಸಿಕೊಂಡ ಉಪಾಧ್ಯಕ್ಷರಿಗೆ ನವೆಂಬರ್ ತಿಂಗಳವರೆಗೆ ಆಪ್ತ ಕಾರ್ಯದರ್ಶಿಯನ್ನೂ ಕೊಟ್ಟಿರಲಿಲ್ಲ. ಇವರಿಗೂ ಇನ್ನೂ ಸಂಬಳ ಕೊಟ್ಟಿಲ್ಲ. ಘಟಕಕ್ಕೆ ಮಂಜೂರಾಗಿರುವ ಸದಸ್ಯ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ, ಸಹಾಯಕ, ದತ್ತಾಂಶ ಸಂಗ್ರಹಕ್ಕೆ ಸಿ ಗ್ರೂಪ್ ನೌಕರ, ಜವಾನ ಮತ್ತು ಚಾಲಕ ಹ್ದುದೆಗಳ್ಲಲಿ ಒಂದೇ ಒಂದೂ ಹುದ್ದೆಯನ್ನೂ ಭರ್ತಿ ಮಾಡಿಲ್ಲ. ಈ ಮಧ್ಯೆ ಕಾರ್ಣಿಕ್ ಗುತ್ತಿಗೆ ಆಧಾರದಲ್ಲಿ ನಾಲ್ಕು ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಾರೆ. ಮೂರು ತಿಂಗಳಿಂದ ಅವರು ವೇತನವಿಲ್ಲದೆ ಕೆಲಸ ಮಾಡುತ್ತಿದ್ದಾರೆ!!. ಅನುದಾನ ಬಿಡುಗಡೆ ಮಾಡುವಂತೆ ಘಟಕ ಪತ್ರ ಬರೆದರೂ ಹಣಕಾಸು ಇಲಾಖೆ ಅದಕ್ಕೆ ಸ್ಪಂದಿಸಿಲ್ಲ. ( ಸರಕಾರಕ್ಕೆ ಬರೇ ಬಂಡವಾಳ ಆಕರ್ಷಿಸುವ ಉದ್ದೇಶ...ಅನಿವಾಸಿ ಕನ್ನಡಿಗರ ಅದರಲ್ಲೂ ಗಲ್ಫ್ ಕನ್ನಡಿಗರ ಸಮಸ್ಯೆಗಳ ಬಗ್ಗೆ ಇವರಿಗೆ ಚಿಂತೆ ಇಲ್ಲ..ಕಾಳಜಿಯೂ ಇಲ್ಲ!!?).  

Shabi, Mangalore/Dubai

Who is Chandru what the hell he knows. How dare they invite this type of man who doesn’t know anything about the people who lives in abroad. Ask him the meaning of NRI.  

ಪ. ರಾಮಚಂದ್ರ, ರಾಸ್ ಲಫ್ಫಾನ್, ಕತಾರ್

ಕನ್ನಡಿಗ ಜನ ಮನದ್ದಲ್ಲಿ ಮೂಡಿದ ಮುಖ್ಯಮಂತ್ರಿ ಚಂದ್ರು ಅವರ ಕತಾರ್ ಪ್ರಯಾಣ ವೆಚ್ಚದ ಸಂದೇಹವನ್ನು ನಿವಾರಿಸಿದ್ದಕ್ಕಾಗಿ ಶ್ರೀ ಅರವಿಂದ ಪಾಟೀಲರಿಗೆ ಧನ್ಯವಾದಗಳು. ೫ನೆ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಅಂಗವಾಗಿ ಅನಿವಾಸಿ ಕನ್ನಡಿಗರು ಭಾಗವಹಿಸಿ ಕನ್ನಡದಲ್ಲಿ ನಡೆಸಿದ ಈ ಗೋಷ್ಟಿಯ ಕನ್ನಡ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಬಗ್ಗೆ ತಮ್ಮ ವೈಯಕ್ತಿಕ ನೆಲೆಯಲ್ಲಿ ನೀಡಿದ ಹೇಳಿಕೆ , ಪ್ರಸ್ತುತ ಕತಾರ್ ಕರ್ನಾಟಕ ಸಂಘದ ಅಧ್ಯಕ್ಷರಾಗಿರುವ ಶ್ರೀಯುತರು ಕನ್ನಡದಲ್ಲಿ ವ್ಯಕ್ತ ಪಡಿಸಿದ್ದಲ್ಲಿ ಸಮಂಜಸ ಮತ್ತು ಸಮರ್ಪಕವಾಗಿರುತ್ತಿತ್ತು. ನನ್ನ ಈ ಅನಿಸಿಕೆ ತಪ್ಪಾಗಿದ್ದಲ್ಲಿ ದಯವಿಟ್ಟು ತಿಳಿಸಿ.  

RAMAKRISHNA, PUTTUR

Dear Mr.Patil I went through your comments about Mr.Chandru`s statements in Qatar. It appears that you want to defend him because you invited him. Also, you opined that most of the comments came from people who did not attend the function. Do you mean to say only those people who attended have the right to comment? If so, you are not fair on your part.

Mr.Chandru has hurt the feelings of not only NRK`s of Qatar, he has hurt the feelings of all NRK`s and also all people of Karnataka are ashamed of themselves about the statement of this man.You quoted that the problem started when one of the Speaker invited Mr. Chandru to the dais, but he was not just a common man, he was also an invitee of you to the dais. If you have any obligations to Mr.Chandru, do not take this opportunity to be loyal to him. It is our right to comment on such issues which no one could deny, and even you are not an exception for that. These long years we kept our mouth shut, but for now we must decide to protest it.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-02-24

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಂಗ್ರಹ]

»ನವದೆಹಲಿ: ಶಿಲ್ಪಾ ‘ಸಿರಿ’ ಕವನ ಸಂಕಲನ ಬಿಡುಗಡೆ
»ಅನಿವಾಸಿ ಕನ್ನಡಿಗರೆ ನೀವು ಕರ್ನಾಟಕ ಬಿಟ್ಟು ಹೋಗುವಾಗ ನಮ್ಮನ್ನು ಕೇಳಿದ್ದಿರಾ ?-ಮುಖ್ಯಮಂತ್ರಿ ಚಂದ್ರು(ಸ೦ಗ್ರಹ)
»ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಡೀವಿ ಖಚಿತ ಕಾಂಗ್ರೆಸ್‌ಗೆ `ತಾರಾ'ಬಲ? (ಸ೦ಗ್ರಹ)
»ಇಂದಿನಿಂದ ಓಬವ್ವನ ನಾಡಲ್ಲಿ ಸಾಹಿತ್ಯ ತೇರು(ಸ೦ಗ್ರಹ)
»ಜನರ ಬಳಿಗೆ ಆಗಮಿಸುತ್ತಿದೆ ಗೂಗಲ್ ಇಂಟರ್ನೆಟ್ ಬಸ್ (ಸ೦ಗ್ರಹ)
»ಬೆಳ್ತಂಗಡಿ:‘ಕುಡಿದು’ ಕಲಿಸುವ ಶಿಕ್ಷಕಿ ಬೇಡವೇ ಬೇಡ...!(ಸ೦ಗ್ರಹ)
»ದುಡ್ಡು ಸಂಪತ್ತಿಗಿ೦ತ ಜನರಿಂದ ಪಡೆಯುವ ಪ್ರೀತಿಯೇ ದೊಡ್ಡದು: ಬನ್ನಂಜೆ (ಸ೦ಗ್ರಹ)
»ಖ್ಯಾತ ಕಾರ್ಯಕರ್ತ ಇಕ್ಬಾಲ್ ಮನ್ನಾ ಅವರಿಗೆ ಸನ್ಮಾನ(ಸ೦ಗ್ರಹ)
»ಕೊಟ್ಟ ಮಾತು ತಪ್ಪದ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರು : ಅನಿವಾಸಿ ಕನ್ನಡಿಗರ ಸಮಿತಿಗೆ ಬೇಡಿಕೆ -ಆಶ್ವಾಸನಪತ್ರ(ಸ೦ಗ್ರಹ)
»ವಿಜ್ರಂಭಣೆಯಿಂದ ನೆಡೆದ ಕತರ್ ತುಳು ಕೂಟದ 4 ನೇ ವಾರ್ಷಿಕೋತ್ಸವ; ಕಿಕ್ಕಿರಿದ ಸಭೆ,’ದೇವರ್ ನಡಪವೆರ್’ ಯಶಸ್ವಿ ಪ್ರದರ್ಶನ (ಸ೦ಗ್ರಹ)
»ಪತ್ರಿಕೆಗಳ ಮೇಲಿನ ಓದುಗರ ವಿಶ್ವಾಸಾರ್ಹತೆ ಕುಂಠಿತ: ಮಣಿಪಾಲದಲಿ ಮಿಂಟ್ ಸಂಪಾದಕ ರಾಜಾ ನರಶೆಟ್ಟಿ(ಸ೦ಗ್ರಹ)
»ಸಭಿಕರನ್ನು ಬಾವುಕತೆಯಲ್ಲಿ ಪುಳಕಿಸಿದ ’ದೋಹಾ ಕಿ ಶಾಮ್ ರಫಿ ಕಿ ನಾಮ್’(ಸ೦ಗ್ರಹ)
»ಸಿ.ಆರ್.ಶೆಟ್ಟಿ ಅವರಿಗೆ ‘ಇ೦ದಿರಾ ಗಾ೦ಧಿ ಪ್ರಿಯದರ್ಶಿನಿ’ ಪ್ರಶಸ್ತಿ (ಸಂಗ್ರಹ)
»ಅಜ್ಮಾನ್: ನಾಲ್ಕನೆಯ ಪದವಿಪ್ರದಾನ ಸಮಾರಂಭ 2008-ಹಲವು ಗಣ್ಯರ ಉಪಸ್ಥಿತಿ( ಸಂಗ್ರಹ)
»ಮುಂಬೈಯಲ್ಲಿ ಕನ್ನಡ ಯುವತಿಯ ಸಾಧನೆ: ಜ್ಯೋತಿ ಬಿ.ದೇವಾಡಿಗರಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ( ಸಂಗ್ರಹ)
»ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು
»ಗಲ್ಫ್ ನಾಡಿನಲ್ಲಿ ಕನ್ನಡದ ಕಂಪು ( ಸಂಗ್ರಹ)
»ಸಂಗೀತಮಯ, ನೃತ್ಯ ಸಂಯೋಜಿತ ಹಾಗೂ ಖ್ಯಾತ ತಾರೆಗಳಿಂದ ಪ್ರಜ್ವಲಗೊಂಡ ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕೋತ್ಸವ (ಸಂಗ್ರಹ)
»ಬ್ಯಾರೀಸ್ ಕಲ್ಚರಲ್ ಫೊರಂನ ವತಿಯಿಂದ ವಿದ್ಯಾರ್ಥಿವೇತನ.. ಸಮುದಾಯದ ಅಭಿವೃದ್ಧಿಯಲ್ಲಿ ಸಹಭಾಗಿತ್ವ : ಜಯಪ್ರಕಾಶ್ ಹೆಗ್ಡೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri