ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಜನರ ಬಳಿಗೆ ಆಗಮಿಸುತ್ತಿದೆ ಗೂಗಲ್ ಇಂಟರ್ನೆಟ್ ಬಸ್ (ಸ೦ಗ್ರಹ)

ಚೆನ್ನೈ, ಫೆ, 4 :ಜನರನ್ನು ಅಂತರ್ಜಾಲ-ಸುಶಿಕ್ಷಿತರನ್ನಾಗಿಸುವ ನಿಟ್ಟಿನಲ್ಲಿ ಪ್ರಧಾನ ಹೆಜ್ಜೆ ಇರಿಸಿರುವ ಇಂಟರ್ನೆಟ್ ದಿಗ್ಗಜ ಕಂಪನಿ ಗೂಗಲ್ ಇಂಡಿಯಾ, ತನ್ನ ಮಹತ್ವಾಕಾಂಕ್ಷೆಯ 'ಇಂಟರ್ನೆಟ್ ಬಸ್' ಎಂಬ ಸಂಚಾರಿ ಬಸ್ ಅಭಿಯಾನವನ್ನು ಮಂಗಳವಾರ ಚೆನ್ನೈಯಲ್ಲಿ ಆರಂಭಿಸಿತು.

ಸದ್ಯಕ್ಕೆ ತಮಿಳುನಾಡಿನಲ್ಲಿ ಆರಂಭವಾಗಿರುವ ಈ 'ಇಂಟರ್ನೆಟ್ ಬಸ್' ಯೋಜನೆ ಯನ್ನು, ಜನರ ಪ್ರತಿಕ್ರಿಯೆ, ಫಲಿತಾಂಶಗಳ ವಿಶ್ಲೇಷಣೆ ಬಳಿಕ ಉಳಿದ ರಾಜ್ಯಗಳಿಗೂ ನಿಧಾನವಾಗಿ ವಿಸ್ತರಿಸಲಾಗುತ್ತದೆ ಎಂದು ಗೂಗಲ್ ಇಂಡಿಯಾದ ಆರ್&ಡಿ ವಿಭಾಗದ ಮುಖ್ಯಸ್ಥ ಡಾ.ಪ್ರಸಾದ್ ಭಾರತ್ ರಾಮ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಮಾಹಿತಿ, ಸಂವಹನ, ಮನರಂಜನೆ ಮತ್ತು ಶಿಕ್ಷಣ ಎಂಬ ನಾಲ್ಕು ಮೂಲೋದ್ದೇಶ ಗ ಳೊಂದಿಗೆ, ಒಂದುವರೆ ತಿಂಗಳುಗಳಲ್ಲಿ ತಮಿಳುನಾಡಿನ ಎರಡು ಮತ್ತು ಮೂರನೇ ಸ್ತರದ 15 ಪಟ್ಟಣಗಳಲ್ಲಿ ಈ ಬಸ್ ಸಂಚರಿಸಲಿದ್ದು, ಜನಸಾಮಾನ್ಯರು ಕೂಡ ತಮ್ಮ ಆವಶ್ಯಕತೆ ಗಳನ್ನು ಪೂರೈಸಿಕೊಳ್ಳಲು ಅಂತರ್ಜಾಲವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಜಾಗೃತಿ ಮೂಡಿಸಲಿದೆ.

ಅಂತರ್ಜಾಲ ಶೋಧ, ಇ-ಮೇಲ್, ಸಮುದಾಯ ತಾಣಗಳು, ಆನ್‌ಲೈನ್ ನಕ್ಷೆಯ ಬಳಕೆ ಮುಂತಾಗಿ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಮೂಲಭೂತ ಅಂತರ್ಜಾಲ ವೈಶಿಷ್ಟ್ಯಗಳೊಂದಿಗೆ ಜನತೆಯನ್ನು ಸುಶಿಕ್ಷಿತರನ್ನಾಗಿಸುವುದರೊಂದಿಗೆ, ಅಂತರ್ಜಾಲವು ದೈನಂದಿನ ಜೀವನವನ್ನು ಹೇಗೆ ಸರಳವಾಗಿಸುತ್ತದೆ ಎಂಬುದರ ಬಗ್ಗೆ ತಿಳಿಹೇಳಲಾಗು ತ್ತದೆ ಎಂದು ಡಾ.ಪ್ರಸಾದ್ ರಾಮ್ ವಿವರಿಸಿದರು.

ಈ ಬಸ್ಸಿನ ಮೂಲಕ, ನಿಜವಾಗಿಯೂ ಸಂಪೂರ್ಣ ಪ್ರಯೋಜನ ಪಡೆಯಬಲ್ಲ ಜನರಿಗೆ ಈ ಮಾಧ್ಯಮದ ಶಕ್ತಿ ಏನೆಂಬುದನ್ನು ತೋರಿಸಿಕೊಡಲು ನಾವಿಚ್ಛಿಸಿದ್ದೇವೆ. ಕನಿಷ್ಠಪಕ್ಷ ಸಂಕ್ಷಿ ಪ್ತವಾಗಿ ನಾವು ಅಂತರ್ಜಾಲ ಮಾಧ್ಯಮದ ಕುರಿತು ಹೇಳಿಕೊಟ್ಟರೂ, ಅವರು ಅದರ ಲ್ಲೇನಿದೆ ಎಂದು ತಿಳಿಯುವ ಕುತೂಹಲದಿಂದ ಮತ್ತೆ ಮತ್ತೆ ಅಂತರ್ಜಾಲಕ್ಕೆ ಆಕರ್ಷಿತ ರಾಗುತ್ತಾರೆ ಎಂಬ ನಂಬಿಕೆ ನಮ್ಮದು ಎಂದು ಡಾ.ರಾಮ್ ವಿವರಿಸಿದರು.

ಆದರೆ, ಇಂಟರ್ನೆಟ್ ಲಭ್ಯತೆ, ವೆಚ್ಚ ಮತ್ತು ಮಾಹಿತಿ ಮುಂತಾದವುಗಳನ್ನು ಜನರಿಗೆ ಸುಲಭಸಾಧ್ಯವಾಗಿಸುವುದು ಸರಕಾರ, ಅಂತರ್ಜಾಲ ಉದ್ಯಮ ಮತ್ತು ಶಿಕ್ಷಣಸಂಸ್ಥೆಗಳ ಸಾಮುದಾಯಿಕ ಜವಾಬ್ದಾರಿಯಾಗಿದೆ ಎಂದು ಹೇಳಿದ ಅವರು, ಇದು ಸಾಧ್ಯವಾದಲ್ಲಿ, ಅಂತರ್ಜಾಲ ಸಾಧ್ಯತೆಗಳಿಗೆ ಮಿತಿಯೇ ಇಲ್ಲ ಎಂದು ಆಶಾವಾದ ವ್ಯಕ್ತಪಡಿಸಿದರು.

ಸಾಮಾನ್ಯ ಬಳಕೆದಾರನೊಬ್ಬನಿಗೆ ಇಂಟರ್ನೆಟ್ ಬಗ್ಗೆ ಸರಳವಾಗಿ ಹೇಳಿಕೊಡುವುದು ಈ ಬಸ್‌ನ ಉದ್ದೇಶ. ಉಪಗ್ರಹ ಮೂಲಕ ಬ್ರಾಡ್‌ಬ್ಯಾಂಡ್ ಸಂಪರ್ಕ, ಕಂಪ್ಯೂಟರುಗಳು, ಮಲ್ಟಿಮೀಡಿಯಾ ಉಪಕರಣಗಳೆಲ್ಲವೂ ಇರುವ ಬಸ್‌ನೊಳಗೆ, ಅಂತರ್ಜಾಲವನ್ನು ಯಾವೆಲ್ಲಾ ರೀತಿಯಲ್ಲಿ ಬಳಸಬಹುದು ಎಂಬ ಕುರಿತಾಗಿ ವೀಡಿಯೋ ಸಹಿತ ವಿವರಣೆ ಗಳು ಲಭ್ಯವಿರುತ್ತದೆ.

ಬೇರೊಂದು ಪಟ್ಟಣದಲ್ಲಿರುವ ತಮ್ಮ ಆಪ್ತೇಷ್ಟರೊಂದಿಗೆ ಹೇಗೆ ವೀಡಿಯೋ ಸಹಿತ ಸಂವಾದ ಮಾಡಬಹುದು, ಸಾಮಾನ್ಯವಾಗಿ ಲಭ್ಯವಿಲ್ಲದ ಮಾಹಿತಿಯನ್ನು ವಿದ್ಯಾರ್ಥಿ ಯೊಬ್ಬ ಇಂಟರ್ನೆಟ್ ಸರ್ಚ್ ಎಂಜಿನ್ ಬಳಸಿ ಹೇಗೆ ಪಡೆಯಬಹುದು, ತಮ್ಮ ವೀಡಿ ಯೋಗಳನ್ನು ಹೇಗೆ ಯು-ಟ್ಯೂಬ್ ಮೂಲಕ ಗೆಳೆಯರೊಂದಿಗೆ ಹಂಚಿಕೊಳ್ಳಬಹುದು, ಕಿರು ಉದ್ಯಮಿಯೊಬ್ಬ ತನ್ನ ವಹಿವಾಟನ್ನು ಅಂತರ್ಜಾಲದ ಮೂಲಕ ಹೇಗೆ ವಿಸ್ತರಿಸ ಬಹುದು ಎಂಬಿತ್ಯಾದಿ ವಿವರಣೆ ನೀಡಲಾಗುತ್ತದೆ.

ಅಲ್ಲದೆ, ಭಾರತೀಯ ಭಾಷೆಗಳಲ್ಲಿ ಯಾವೆಲ್ಲಾ ಸಾಧ್ಯತೆಗಳಿವೆ, ಭಾಷೆಗಳಿಗೆ ಸಂಬಂಧಿಸಿ ದಂತೆ ಯಾವೆಲ್ಲಾ ಟೂಲ್‌ಗಳಿವೆ ಎಂಬುದರ ಕುರಿತಾಗಿಯೂ ಜನರಿಗೆ ಅರಿವು ಮೂಡಿಸ ಲಿದೆ ಈ ಬಸ್. ಗೂಗಲ್ ಇದಕ್ಕಾಗಿ "ಗೂಗಲ್ ಡಾಟ್ ಕೋ ಡಾಟ್ ಇನ್/ಇಂಟರ್ನೆಟ್‌ ಬಸ್" ಎಂಬ ಅಂತರ್ಜಾಲ ತಾಣವೊಂದನ್ನು ಮೀಸಲಿಟ್ಟಿದ್ದು, ಹೆಚ್ಚಿನ ವಿವರಗಳು ಇದರ ಲ್ಲಿ ಲಭ್ಯವಿರುತ್ತವೆ.

ಗೂಗಲ್ ಈಗಾಗಲೇ ಗೂಗಲ್ ಎಸ್ಎಂಎಸ್ ಸರ್ಚ್, ಎಸ್ಎಂಎಸ್ ಚಾನೆಲ್ಸ್, ಗೂಗ ಲ್ ವಾಯ್ಸ್ ಲೋಕಲ್ ಸರ್ಚ್ ಸೇವೆ ಮತ್ತು ಗೂಗಲ್ ಮ್ಯಾಪ್ ಮೇಕರ್ ಮುಂತಾದ ಸೇವೆಗಳನ್ನು ಜನರಿಗೆ ಒದಗಿಸತೊಡಗಿದ್ದು, ಗೂಗಲ್‌ನ ಅಪ್ಲಿಕೇಶನ್‌ಗಳನ್ನು ಆಯಾ ಭಾಷೆಗಳಿಗೆ ತರ್ಜುಮೆಗೊಳಿಸಿ, ಇಂಗ್ಲಿಷ್ ಅಲ್ಪ ಜ್ಞಾನವಿರುವವರೂ ಅವುಗಳನ್ನು ಸುಲಭ ವಾಗಿ ಬಳಸುವಂತೆ ಮಾಡಿದೆ.

ಕನ್ನಡ ಸೇರಿದಂತೆ ಐದು ಭಾರತೀಯ ಭಾಷೆಗಳಲ್ಲಿ ಲಿಪ್ಯಂತರ (ಟ್ರಾನ್ಸ್‌ಲಿಟರೇಶನ್) ಸೌಲಭ್ಯ, ನಾಲ್ಕು ಭಾರತೀಯ ಭಾಷೆಗಳಲ್ಲಿ ಗೂಗಲ್ ನ್ಯೂಸ್ ಸೇವೆ, ಇಂಗ್ಲಿಷ್-ಹಿಂದಿ ಪರಸ್ಪರ ಭಾಷಾಂತರ ಸೌಲಭ್ಯ ಮುಂತಾದವನ್ನು ಒದಗಿಸುತ್ತಿದೆ. ಇದರೊಂದಿಗೆ ಮೊಬೈಲ್ ಫೋನ್ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿರುವ ಗೂಗಲ್, ಮೊಬೈಲ್ ಮ್ಯಾಪ್ಸ್, ಮೊಬೈಲ್ ಶೋಧ ಮತ್ತು ಮೊಬೈಲ್ ಒರ್ಕುಟ್ ಸೌಲಭ್ಯಗಳನ್ನು ನೀಡು ತ್ತಿದೆ.

1998ರಲ್ಲಿ ಸ್ಟಾನ್‌ಫರ್ಡ್ ಪಿಹೆಚ್‌ಡಿ ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಮತ್ತು ಸರ್ಗೆ ಬ್ರಿನ್ ಎಂಬವರಿಂದ ಸಂಸ್ಥಾಪಿಸಲ್ಪಟ್ಟ ಗೂಗಲ್, ಇಂದು ಜಾಗತಿಕ ಅಂತರ್ಜಾಲ ಮಾರುಕಟ್ಟೆ ಯಲ್ಲಿ ಅನಿವಾರ್ಯ ಅನ್ನಿಸಿಬಿಟ್ಟಿದೆ. ಸಿಲಿಕಾನ್ ವ್ಯಾಲಿಯಲ್ಲಿ ಮುಖ್ಯ ಕಚೇರಿ ಹೊಂದಿರು ವ ಗೂಗಲ್, ಅಮೆರಿಕ, ಯೂರೋಪ್ ಮತ್ತು ಏಷ್ಯಾದ ಬಹುತೇಕ ಎಲ್ಲ ದೇಶಗಳಲ್ಲಿ ತನ್ನ ಕಚೇರಿಗಳನ್ನು ಹೊಂದಿದೆ. 

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವೆಬ್ ದುನಿಯ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-02-18

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಂಗ್ರಹ]

»ನವದೆಹಲಿ: ಶಿಲ್ಪಾ ‘ಸಿರಿ’ ಕವನ ಸಂಕಲನ ಬಿಡುಗಡೆ
»ಅನಿವಾಸಿ ಕನ್ನಡಿಗರೆ ನೀವು ಕರ್ನಾಟಕ ಬಿಟ್ಟು ಹೋಗುವಾಗ ನಮ್ಮನ್ನು ಕೇಳಿದ್ದಿರಾ ?-ಮುಖ್ಯಮಂತ್ರಿ ಚಂದ್ರು(ಸ೦ಗ್ರಹ)
»ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಡೀವಿ ಖಚಿತ ಕಾಂಗ್ರೆಸ್‌ಗೆ `ತಾರಾ'ಬಲ? (ಸ೦ಗ್ರಹ)
»ಇಂದಿನಿಂದ ಓಬವ್ವನ ನಾಡಲ್ಲಿ ಸಾಹಿತ್ಯ ತೇರು(ಸ೦ಗ್ರಹ)
»ಜನರ ಬಳಿಗೆ ಆಗಮಿಸುತ್ತಿದೆ ಗೂಗಲ್ ಇಂಟರ್ನೆಟ್ ಬಸ್ (ಸ೦ಗ್ರಹ)
»ಬೆಳ್ತಂಗಡಿ:‘ಕುಡಿದು’ ಕಲಿಸುವ ಶಿಕ್ಷಕಿ ಬೇಡವೇ ಬೇಡ...!(ಸ೦ಗ್ರಹ)
»ದುಡ್ಡು ಸಂಪತ್ತಿಗಿ೦ತ ಜನರಿಂದ ಪಡೆಯುವ ಪ್ರೀತಿಯೇ ದೊಡ್ಡದು: ಬನ್ನಂಜೆ (ಸ೦ಗ್ರಹ)
»ಖ್ಯಾತ ಕಾರ್ಯಕರ್ತ ಇಕ್ಬಾಲ್ ಮನ್ನಾ ಅವರಿಗೆ ಸನ್ಮಾನ(ಸ೦ಗ್ರಹ)
»ಕೊಟ್ಟ ಮಾತು ತಪ್ಪದ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರು : ಅನಿವಾಸಿ ಕನ್ನಡಿಗರ ಸಮಿತಿಗೆ ಬೇಡಿಕೆ -ಆಶ್ವಾಸನಪತ್ರ(ಸ೦ಗ್ರಹ)
»ವಿಜ್ರಂಭಣೆಯಿಂದ ನೆಡೆದ ಕತರ್ ತುಳು ಕೂಟದ 4 ನೇ ವಾರ್ಷಿಕೋತ್ಸವ; ಕಿಕ್ಕಿರಿದ ಸಭೆ,’ದೇವರ್ ನಡಪವೆರ್’ ಯಶಸ್ವಿ ಪ್ರದರ್ಶನ (ಸ೦ಗ್ರಹ)
»ಪತ್ರಿಕೆಗಳ ಮೇಲಿನ ಓದುಗರ ವಿಶ್ವಾಸಾರ್ಹತೆ ಕುಂಠಿತ: ಮಣಿಪಾಲದಲಿ ಮಿಂಟ್ ಸಂಪಾದಕ ರಾಜಾ ನರಶೆಟ್ಟಿ(ಸ೦ಗ್ರಹ)
»ಸಭಿಕರನ್ನು ಬಾವುಕತೆಯಲ್ಲಿ ಪುಳಕಿಸಿದ ’ದೋಹಾ ಕಿ ಶಾಮ್ ರಫಿ ಕಿ ನಾಮ್’(ಸ೦ಗ್ರಹ)
»ಸಿ.ಆರ್.ಶೆಟ್ಟಿ ಅವರಿಗೆ ‘ಇ೦ದಿರಾ ಗಾ೦ಧಿ ಪ್ರಿಯದರ್ಶಿನಿ’ ಪ್ರಶಸ್ತಿ (ಸಂಗ್ರಹ)
»ಅಜ್ಮಾನ್: ನಾಲ್ಕನೆಯ ಪದವಿಪ್ರದಾನ ಸಮಾರಂಭ 2008-ಹಲವು ಗಣ್ಯರ ಉಪಸ್ಥಿತಿ( ಸಂಗ್ರಹ)
»ಮುಂಬೈಯಲ್ಲಿ ಕನ್ನಡ ಯುವತಿಯ ಸಾಧನೆ: ಜ್ಯೋತಿ ಬಿ.ದೇವಾಡಿಗರಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ( ಸಂಗ್ರಹ)
»ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು
»ಗಲ್ಫ್ ನಾಡಿನಲ್ಲಿ ಕನ್ನಡದ ಕಂಪು ( ಸಂಗ್ರಹ)
»ಸಂಗೀತಮಯ, ನೃತ್ಯ ಸಂಯೋಜಿತ ಹಾಗೂ ಖ್ಯಾತ ತಾರೆಗಳಿಂದ ಪ್ರಜ್ವಲಗೊಂಡ ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕೋತ್ಸವ (ಸಂಗ್ರಹ)
»ಬ್ಯಾರೀಸ್ ಕಲ್ಚರಲ್ ಫೊರಂನ ವತಿಯಿಂದ ವಿದ್ಯಾರ್ಥಿವೇತನ.. ಸಮುದಾಯದ ಅಭಿವೃದ್ಧಿಯಲ್ಲಿ ಸಹಭಾಗಿತ್ವ : ಜಯಪ್ರಕಾಶ್ ಹೆಗ್ಡೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri