ಶನಿವಾರ, 14-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಕೊಟ್ಟ ಮಾತು ತಪ್ಪದ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರು : ಅನಿವಾಸಿ ಕನ್ನಡಿಗರ ಸಮಿತಿಗೆ ಬೇಡಿಕೆ -ಆಶ್ವಾಸನಪತ್ರ(ಸ೦ಗ್ರಹ)

ಅನಿವಾಸಿ ಕನ್ನಡಿಗರ ನಿಗಮ ಸ್ಥಾಪಿಸಲು ಬಿ.ಜಿ.ಪಿ ಪಕ್ಷದಿಂದ ಧನಾತ್ಮಕ ಉತ್ತರ : ಕಾದು ನೋಡಬೇಕಾದ ಚುನಾವಣೆ

ಶಾರ್ಜಾ, ಏಪ್ರಿಲ್ 30: ದಿನಾಂಕ 23ನೇ ಫೆಬ್ರವರಿ 2008 ರಂದು ಗಲ್ಫ್ ಕನ್ನಡಿಗದಲ್ಲಿ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಪ್ರಭಾಕರ ಅಂಬಲತೆರೆಯವರ ವಿಶೇಷ ಸಂದರ್ಶನ ಪ್ರಕಟವಾಗಿತ್ತು. ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಅಧ್ಯಕ್ಷರು ಅನಿವಾಸಿ ಕನ್ನಡಿಗರ ನಿಗಮದ ಸ್ಥಾಪನೆಯ ಕುರಿತಾದ ಕೆಲವು ಮಾತುಗಳನ್ನು ಪ್ರಸ್ತಾಪಿಸಿದ್ದರು.

ಇಂದು ಅವರು ಕೊಟ್ಟ ಮಾತಿನಂತೆ ನಿಗಮವೊಂದನ್ನು ಸ್ಥಾಪಿಸುವ ಬಗ್ಗೆ ಕರ್ನಾಟಕ ಬಿ.ಜಿ.ಪಿ ಕಾರ್ಯಾಯಲವನ್ನು ಸಂಪರ್ಕಿಸಿ ಈ ನಿಗಮದ ಅಗತ್ಯತೆಯನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಕಳೆದ ವಾರ ಯಶಸ್ವಿಯಾಗಿ ಜರುಗಿದ ಬ್ಯಾರೀಸ್ ಕಲ್ಚರಲ್ ಫೋರಂ ವಾರ್ಷಿಕೋತ್ಸವದಲ್ಲಿಯೂ ಸಹಾ ಭಾರತೀಯ ದೂತಾಧಿಕಾರಿ ಶ್ರೀ ವೇಣು ರಾಜಮಣಿಯವರ ಸಮ್ಮುಖದಲ್ಲಿಯೂ ಈ ಸಮಿತಿಯ ಅಗತ್ಯತೆಯನ್ನು ಎತ್ತಿ ಹಿಡಿದಿದ್ದಾರೆ.

ಅಧ್ಯಕ್ಷರ ಈ ಕಳಕಳಿಗೆ ಬಿ.ಜೆ.ಪಿ ಕಾರ್ಯಾಲಯ ಸ್ಪಂದಿಸಿದೆ. ಅಧ್ಯಕ್ಷರಿಗೆ ನೀಡಲಾದ ಉತ್ತರದಲ್ಲಿ ಬಿ.ಜಿ.ಪಿ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷರಾದ ಶ್ರೀ ಡಿ.ವಿ. ಸದಾನಂದಗೌಡರವರು ಅನಿವಾಸಿ ಕನ್ನದಿಗರ ನಿಗಮವನ್ನು ಸ್ಥಾಪಿಸುವ ಬಗ್ಗೆ ತಮ್ಮ ಒಲವು ತೋರಿದ್ದಾರೆ. ಒಂದು ವೇಳೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಖಂಡಿತವಾಗಿಯೂ ಪರಿಗಣಿಸಲಾಗುವುದು ಎಂದು ಸ್ಪಷ್ಟವಾಗಿ ಪತ್ರಮುಖೇನ ಉತ್ತರಿಸಿದ್ದಾರೆ.

ಅಧ್ಯಕ್ಷರ ಈ ಕಳಕಳಿಗೆ ಪ್ರಮುಖ ಕಾರಣವಿದೆ. ಗಲ್ಫ್ ರಾಷ್ಟ್ರಗಳಲ್ಲಿ ವಾಸವಾಗಿರುವ ಭಾರತೀಯರಲ್ಲಿ ಹೆಚ್ಚಿನವರು ಕೇರಳದವರು. ಕಾಸರಗೋಡು ಚಿನ್ನ ಅವರು ಹೇಳಿದಂತೆ ಸಂಘಟನೆಗೆ ಇನ್ನೊಂದು ಹೆಸರು ಕೇರಳ. ಓರ್ವ ಕೇರಳೀಯನಿಗೆ ಏನಾದರೂ ತೊಂದರೆಯಾದರೆ ನೆರೆಯವನಿಂದ ಹಿಡಿದು ಕೇರಳ ಸರ್ಕಾರದ ವರೆಗೆ ಆತನ ಸಹಾಯಕ್ಕೆ ನಿಲ್ಲುತ್ತದೆ. ಕೇರಳ ಸರ್ಕಾರದಲ್ಲಿ ಒಂದು ಪ್ರತ್ಯೇಕ ಸಚಿವಾಲಯವೇ ಅನಿವಾಸಿ ಕೇರಳದವರಿಗಾಗಿ ಇದೆ. ಇತ್ತೀಚೆಗೆ ದೇರಾ ದುಬೈಯಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ನಷ್ಟಕ್ಕೊಳಗಾದ ಕೇರಳೀಯರ ನೋವಿಗೆ ಈ ನಿಗಮ ತ್ವರಿತವಾಗಿ ಸ್ಪಂದಿಸಿದೆ. ಕಳೆದ ವರ್ಷ ರಿಯಾದ್ ನಗರದಲ್ಲಿ ನಡೆದ್ ಅಗ್ನಿ ದುರಂತದಲ್ಲಿ ಎಷ್ಟೋ ಜನರಿಗೆ ನಷ್ಟವುಂಟಾದರೂ ಚೇತರಿಸಿಕೊಂಡವರಲ್ಲಿ ಕೇರಳೀಯರೇ ಹೆಚ್ಚು. ಇದಕ್ಕೆ ಅವರ ನಿಗಮ ಪ್ರತ್ಯಕ್ಷ ಕಾರಣವಾಗಿದೆ.

ಈ ನಿಗಮವಿರದಿರುವುದು ಕರ್ನಾಟಕಕ್ಕೆ ದೊಡ್ಡ ಕೊರತೆಯಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಕನ್ನಡಿಗರ ಸಂಖ್ಯೆ ಗಣನೀಯವಾಗಿದ್ದರೂ ಸಂಘಟಿತರಾಗಿರದಿರುವುದು ಮುಖ್ಯ ಕಾರಣವಾಗಿದೆ. ಇತ್ತೀಚಿನ ಪ್ರಯತ್ನಗಳು ಪ್ರಶಂಸಾರ್ಹವಾಗಿವೆ. ಈ ಕೆಲ ಪ್ರಯತ್ನಗಳ ಫಲವಾಗಿ ಮಂಗಳೂರಿಗೆ ನೇರ ವಿಮಾನ ಪ್ರಯಾಣ ಸೌಲಭ್ಯ ದೊರಕಿರುವುದು ಒಂದು ಶುಭಸಂದೇಶವಾಗಿದೆ. ಕನ್ನಡಿಗರು ಒಗ್ಗಟ್ಟಾಗಿ ನಾಡಿನ ಏಳ್ಗೆಗಾಗಿ ಶ್ರಮಿಸಲು, ಹಾಗೂ ಸರ್ಕಾರದಿಂದ ಪಡೆಯಬೇಕಾದ ಅರ್ಹ ಸವಲತ್ತುಗಳನ್ನು ಪಡೆಯಲು ಈ ನಿಗಮ ಇಂದು ಅತ್ಯಾವಶ್ಯವಾಗಿದೆ.

ಈ ಹಿಂದೆ ನಡೆದ ಸಂದರ್ಶನದದಿಂದ  ಆಯ್ದ ಭಾಗಗಳು ಇಲ್ಲಿವೆ:

ಗ.ಕ: ನಮಸ್ಕಾರ. ಎರಡನೆಯ ಬಾರಿ ಪುನರಾಯ್ಕೆಗೊಂಡದ್ದಕ್ಕಾಗಿ ತಮಗೆ ಅಭಿನಂದನೆಗಳು. ಸಂಘದ ಪ್ರಥಮ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ ತಮ್ಮಿಂದ ಈ ವರ್ಷ ಹೊಸತೇನನ್ನು ನಿರೀಕ್ಷಿಸಬಹುದು?
ಪ್ರಭಾಕರ ಅಂಬಲತೆರೆ: ಶಾರ್ಜಾ ಕರ್ನಾಟಕ ಸಂಘ ಕೇವಲ ಮನರಂಜನೆಗೆ ಮಾತ್ರವಲ್ಲ, ಇಲ್ಲಿನ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದನೆ, ಇಲ್ಲಿನ ವಿಷಮ ಪರಿಸ್ಥಿತಿಗಳಿಗೆ ಒಳಗಾಗಿ ತೊಂದರೆಗೊಳಗಾದವರಿಗೆ ತಕ್ಕ ಸಹಾಯ ಹಾಗೂ ಕನ್ನಡಿಗರಿಗೆ ಸಾಧ್ಯವಾದಷ್ಟು ಮಟ್ಟಿಗೆ ಅನುಕೂಲಕರವಾಗುವ ಧ್ಯೇಯವಿರುವ ಒಂದು ಸಂಸ್ಥೆ. ಅನಿವಾಸಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವಲ್ಲಿ ಶಾರ್ಜಾ ಕರ್ನಾಟಕ ಸಂಘ ಪ್ರಾಮಾಣಿಕ ಪ್ರಯತ್ನ ನಡೆಸುತ್ತದೆ, ಅಧ್ಯಕ್ಷನಾಗಿ ಸಂಘದ ಏಳ್ಗೆ ಹಾಗೂ ಅಭಿವೃದ್ಧಿಗೆ ಖಂಡಿತವಾಗಿಯೂ ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆಂದು ಮಾತು ಕೊಡುತ್ತೇನೆ.

ಎರಡನೆಯದಾಗಿ ಇತ್ತೀಚೆಗೆ ಬಂದ ವರದಿಗಳ ಪ್ರಕಾರ ಖಾಸಗಿ ವಿಮಾನಸಂಸ್ಥೆಗಳಿಗೆ ಭಾರತದಲ್ಲಿ ವಾಯುಯಾನ ನಡೆಸಲು ಅನುಕೂಲ ಮಾಡಿಕೊಟ್ಟಿದ್ದು ಕೇವಲ ಕೇರಳಕ್ಕೆ ಹೆಚ್ಚಿನ ಅನುಕೂಲವಾಗಿದೆ. ಕರ್ನಾಟಕಕ್ಕೂ ಸೇವೆ ಸಲ್ಲಿಸಲು ಶಾರ್ಜಾ ಕರ್ನಾಟಕ ಸಂಘ ರಾಜ್ಯಪಾಲರಲ್ಲಿ ಮನವಿ ಮಾಡಿಕೊಳ್ಳಲಿದೆ. ಮೂರನೆಯದಾಗಿ ರಾಜ್ಯಸರ್ಕಾರದಿಂದ ಕನ್ನಡ ಕಡ್ಡಾಯ ಕಲಿಕೆಗಾಗಿ ಒತ್ತಾಯ ಹಾಗೂ ವಿದೇಶಗಳಲ್ಲಿನ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸಲು ಒತ್ತಾಯ ನಮ್ಮ ಪ್ರಮುಖ ಉದ್ದೇಶಗಳಾಗಿವೆ. ಇಲ್ಲಿನ ಶಾಲೆಗಳಲ್ಲಿ ಮಲಯಾಳಂ, ಬಂಗಾಲಿ, ತಮಿಳು ಸಹಾ ಪಠ್ಯದ ಒಂದು ವಿಷಯವಾಗಿದೆ, ಆದರೆ ಕನ್ನಡ ಶಾಸ್ತ್ರೀಯ ಭಾಷೆಯ ಮಾನ್ಯತೆ ಪಡೆಯುತ್ತಿರುವ ಹೊತ್ತಿನಲ್ಲೇ ಇಲ್ಲಿ ಕನ್ನಡಕ್ಕೆ ಮಾನ್ಯತೆ ಇಲ್ಲವಾಗಿದೆ.

ನಾಲ್ಕನೆಯದಾಗಿ : ಅನಿವಾಸಿ ಕನ್ನಡಿಗರಿಗೆ ಮಾನ್ಯತೆ. ಹೆಚ್ಚಿನವರು ಕನ್ನಡ ಕಲಿಕೆಗೆ ಒಲವು ತೋರದೇ ಇರುವುದರಿಂದ ಕೆಲವು ವರ್ಷಗಳ ಬಳಿಕ ಕನ್ನಡ ಮಾತನಾಡುವ ಜನಸಂಖ್ಯೆಯೇ ಇಲ್ಲವಾಗಬಹುದಾದ ಅಪಾಯವಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಗಮನ ಸೆಳೆಯುವ ಇನ್ನೊಂದು ಉದ್ದೇಶವಿದೆ.
ಐದನೆಯದಾಗಿ ಯು.ಎ.ಇ.ಯಲ್ಲಿ ಕನ್ನಡಿಗರನ್ನು ಸ್ವತಂತ್ರ ದಿನಾಚರಣೆ ಮೊದಲಾದ ರಾಷ್ಟ್ರೀಯ ದಿನಗಳಲ್ಲಿ ಆಹ್ವಾನ ನೀಡುವ ಮೂಲಕ ಸಂಘಟನೆಗೆ ಪ್ರೇರಣೆ ಇತ್ಯಾದಿಗಳು ನಮ್ಮ ಗಮನದಲ್ಲಿರುವ ವಿಷಯಗಳು

ಗ.ಕ.: ಕಳೆದ ವಾರ್ಷಿಕೋತ್ಸವದ ಭಾಷಣದಲ್ಲಿ ತಾವು ಗಲ್ಫ್ ರಾಷ್ಟ್ರಗಳಲ್ಲಿ ವಾಸವಾಗಿರುವ ಕನ್ನಡಿಗರ ಪರವಾಗಿ ಕರ್ನಾಟಕದ ಮಂತ್ರಿಮಂಡಲದಲ್ಲಿ ಪ್ರಸ್ತಾವನೆ ಮಾಡುವುದಾಗಿ ಆಶ್ವಾಸನೆ ನೀಡಿದ್ದೀರಿ. ಈ ಪ್ರಕ್ರಿಯೆಯಲ್ಲಿ ಏನು ಬೆಳವಣಿಗೆಗಳು ಬಂದಿವೆ?
ಪ್ರ.ಅಂ: ಕರ್ನಾಟಕದಲ್ಲಿ ತೊಗರಿಬೇಳೆಗೆ ನಿಗಮ ಇದೆ. ಹುಣಸೆ ಹುಳಿಗೂ ಒಂದು ನಿಗಮ ಇದೆ. ಆದರೆ ಲಕ್ಷಾಂತರ ರೂಪಾಯಿ ಆದಾಯ ತರುವ ಅನಿವಾಸಿ ಕನ್ನಡಿಗರಿಗೆಂದು ಒಂದು ನಿಗಮವಾಗಲಿ ಸಚಿವಾಲಯವಾಗಲೀ ಇಲ್ಲ. ಹೊರದೇಶಗಳಲ್ಲಿರುವ ಕನ್ನಡಿಗರ ಪರವಾಗಿ ಸರ್ಕಾರದಲ್ಲಿ ನಿಗಮದ ಬೇಡಿಕೆಯಿಟ್ಟು ಒಂದು ಎಸ್ಸೆಮ್ಮೆಸ್ ಅಭಿಯಾನ ನಡೆಸುವ ಯೋಜನೆಯಿದೆ. ಹೊರರಾಷ್ಟ್ರಗಳಲ್ಲಿರುವ ಎಲ್ಲಾ ಕನ್ನಡ ಸಂಘಟನೆಗಳು ಒಂದುಗೂಡಿ ಸರ್ಕಾರಕ್ಕೆ ಒತ್ತಡ ತರುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದೇವೆ. ಈ ವಿಷಯದಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿರುವ ಶ್ರೀಯುತ ಟಿ.ಎಮ್. ಶಾಹಿದ್ ಅವರನ್ನು ಭೇಟಿಯಾಗಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಅವರಿಂದ ಈ ಬಗ್ಗೆ ಧನಾತ್ಮಕ ಉತ್ತರವೂ ದೊರೆತಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಉತ್ತಮ ಪ್ರತಿಕ್ರಿಯೆ ದೊರೆಯಬಹುದೆಂದು ನಾವು ಆಶಾವಾದಿಗಳಾಗಿದ್ದೇವೆ

(ಸಂಪೂರ್ಣ ಸಂದರ್ಶನವನ್ನು ಓದಲು ಕೆಳಗಿನ ಇತರ ಸಂಬಂಧಪಟ್ಟ ವರದಿಗಳು ಕೊಂಡಿಯನ್ನು ಕ್ಲಿಕ್ಕಿಸಿ)

ಈ ಪ್ರಸ್ತಾವನೆಯನ್ನು ಬಿ.ಜಿ.ಪಿ ಸ್ವಾಗತಿಸಿರುವುದು ಶುಭಸಂಕೇತವಾಗಿದೆ. ಅನಿವಾಸಿ ಕನ್ನಡಿಗರ ನಿಗಮಕ್ಕೆ ಸಧ್ಯ ಚುನಾವಣೆಯವರೆಗೂ ಕಾದು ನೋಡಬೇಕಾಗಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಶಾರ್ಜಾ ಕರ್ನಾಟಕ ಸ೦ಘ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-02-17

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಂಗ್ರಹ]

»ನವದೆಹಲಿ: ಶಿಲ್ಪಾ ‘ಸಿರಿ’ ಕವನ ಸಂಕಲನ ಬಿಡುಗಡೆ
»ಅನಿವಾಸಿ ಕನ್ನಡಿಗರೆ ನೀವು ಕರ್ನಾಟಕ ಬಿಟ್ಟು ಹೋಗುವಾಗ ನಮ್ಮನ್ನು ಕೇಳಿದ್ದಿರಾ ?-ಮುಖ್ಯಮಂತ್ರಿ ಚಂದ್ರು(ಸ೦ಗ್ರಹ)
»ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಡೀವಿ ಖಚಿತ ಕಾಂಗ್ರೆಸ್‌ಗೆ `ತಾರಾ'ಬಲ? (ಸ೦ಗ್ರಹ)
»ಇಂದಿನಿಂದ ಓಬವ್ವನ ನಾಡಲ್ಲಿ ಸಾಹಿತ್ಯ ತೇರು(ಸ೦ಗ್ರಹ)
»ಜನರ ಬಳಿಗೆ ಆಗಮಿಸುತ್ತಿದೆ ಗೂಗಲ್ ಇಂಟರ್ನೆಟ್ ಬಸ್ (ಸ೦ಗ್ರಹ)
»ಬೆಳ್ತಂಗಡಿ:‘ಕುಡಿದು’ ಕಲಿಸುವ ಶಿಕ್ಷಕಿ ಬೇಡವೇ ಬೇಡ...!(ಸ೦ಗ್ರಹ)
»ದುಡ್ಡು ಸಂಪತ್ತಿಗಿ೦ತ ಜನರಿಂದ ಪಡೆಯುವ ಪ್ರೀತಿಯೇ ದೊಡ್ಡದು: ಬನ್ನಂಜೆ (ಸ೦ಗ್ರಹ)
»ಖ್ಯಾತ ಕಾರ್ಯಕರ್ತ ಇಕ್ಬಾಲ್ ಮನ್ನಾ ಅವರಿಗೆ ಸನ್ಮಾನ(ಸ೦ಗ್ರಹ)
»ಕೊಟ್ಟ ಮಾತು ತಪ್ಪದ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರು : ಅನಿವಾಸಿ ಕನ್ನಡಿಗರ ಸಮಿತಿಗೆ ಬೇಡಿಕೆ -ಆಶ್ವಾಸನಪತ್ರ(ಸ೦ಗ್ರಹ)
»ವಿಜ್ರಂಭಣೆಯಿಂದ ನೆಡೆದ ಕತರ್ ತುಳು ಕೂಟದ 4 ನೇ ವಾರ್ಷಿಕೋತ್ಸವ; ಕಿಕ್ಕಿರಿದ ಸಭೆ,’ದೇವರ್ ನಡಪವೆರ್’ ಯಶಸ್ವಿ ಪ್ರದರ್ಶನ (ಸ೦ಗ್ರಹ)
»ಪತ್ರಿಕೆಗಳ ಮೇಲಿನ ಓದುಗರ ವಿಶ್ವಾಸಾರ್ಹತೆ ಕುಂಠಿತ: ಮಣಿಪಾಲದಲಿ ಮಿಂಟ್ ಸಂಪಾದಕ ರಾಜಾ ನರಶೆಟ್ಟಿ(ಸ೦ಗ್ರಹ)
»ಸಭಿಕರನ್ನು ಬಾವುಕತೆಯಲ್ಲಿ ಪುಳಕಿಸಿದ ’ದೋಹಾ ಕಿ ಶಾಮ್ ರಫಿ ಕಿ ನಾಮ್’(ಸ೦ಗ್ರಹ)
»ಸಿ.ಆರ್.ಶೆಟ್ಟಿ ಅವರಿಗೆ ‘ಇ೦ದಿರಾ ಗಾ೦ಧಿ ಪ್ರಿಯದರ್ಶಿನಿ’ ಪ್ರಶಸ್ತಿ (ಸಂಗ್ರಹ)
»ಅಜ್ಮಾನ್: ನಾಲ್ಕನೆಯ ಪದವಿಪ್ರದಾನ ಸಮಾರಂಭ 2008-ಹಲವು ಗಣ್ಯರ ಉಪಸ್ಥಿತಿ( ಸಂಗ್ರಹ)
»ಮುಂಬೈಯಲ್ಲಿ ಕನ್ನಡ ಯುವತಿಯ ಸಾಧನೆ: ಜ್ಯೋತಿ ಬಿ.ದೇವಾಡಿಗರಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ( ಸಂಗ್ರಹ)
»ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು
»ಗಲ್ಫ್ ನಾಡಿನಲ್ಲಿ ಕನ್ನಡದ ಕಂಪು ( ಸಂಗ್ರಹ)
»ಸಂಗೀತಮಯ, ನೃತ್ಯ ಸಂಯೋಜಿತ ಹಾಗೂ ಖ್ಯಾತ ತಾರೆಗಳಿಂದ ಪ್ರಜ್ವಲಗೊಂಡ ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕೋತ್ಸವ (ಸಂಗ್ರಹ)
»ಬ್ಯಾರೀಸ್ ಕಲ್ಚರಲ್ ಫೊರಂನ ವತಿಯಿಂದ ವಿದ್ಯಾರ್ಥಿವೇತನ.. ಸಮುದಾಯದ ಅಭಿವೃದ್ಧಿಯಲ್ಲಿ ಸಹಭಾಗಿತ್ವ : ಜಯಪ್ರಕಾಶ್ ಹೆಗ್ಡೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri