ಶನಿವಾರ, 14-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಸಿ.ಆರ್.ಶೆಟ್ಟಿ ಅವರಿಗೆ ‘ಇ೦ದಿರಾ ಗಾ೦ಧಿ ಪ್ರಿಯದರ್ಶಿನಿ’ ಪ್ರಶಸ್ತಿ (ಸಂಗ್ರಹ)

ದೆಹಲಿ: ಕರ್ನಾಟಕ ಸ೦ಘ ದುಬೈ ಇದರ ಸ೦ಸ್ಥಾಪಕರು, ಕರ್ನಾಟಕ ಸ೦ಘ ದುಬೈ ಈಗಿನ ಅಧ್ಯಕ್ಷರು ಹಾಗೂ ಯು,ಎ.ಇ. ತುಳು ಕೂಟ ದುಬೈಇದರ ಕನ್ ವೇನರ್ ಆಗಿರುವ ಸಿ.ಆರ್.ಶೆಟ್ಟಿ ಅವರಿಗೆಇ೦ದಿರಾ ಗಾ೦ಧಿ ಪ್ರಿಯದರ್ಶಿನಿಪ್ರಶಸ್ತಿಯನ್ನು ನ.19. ಬುಧವಾರದ೦ದು ದೆಹಲಿಯ ಲೊದಿ ಎಸ್ಟೆಟ್ ನ ಭಾರತೀಯ ಅ೦ತರ್ ರಾಷ್ಟ್ರೀಯ ಸೆ೦ಟರ್ ಅಡಿಟೋರಿಯ೦ ನಲ್ಲಿ ಪ್ರಧಾನ ಮಾಡಲಾಯಿತು.

ಕನ್ನಡಿಗರು ತುಳುವರನ್ನು ಸಂಘಟಿಸಿದ ಕ್ರಿಯಾಶೀಲ ವ್ಯಕ್ತಿತ್ವದ  ಸಿ. ಆರ್. ಶೆಟ್ಟಿ

'""'

ತಾಯಿ ನಾಡು ಭಾರತದ ಭವ್ಯ ಸಂಸ್ಕೃತಿ ಪ್ರಕೃತಿ ಪರಿಸರವನ್ನು ಬಿಟ್ಟು ಗಲ್ಫ್ ನಾಡಿಗೆ ಬರುವಾಗ ಬರಿ ಮರಳುಗಾಡು ಎಂಬ ಭಾವನೆಯಿಂದ ಉದ್ಯೋಗವನ್ನು ಹರಸಿ ಬರುವ ಲಕ್ಷೋಪ ಲಕ್ಷ ಜನರಿಗೆ ಬಂದ ನಂತರ ಜಗತ್ತಿನಾದ್ಯಂತ ವೈವಿದ್ಯಮಯ ಉಧ್ಯಮಗಳ ಬೃಹತ್ ಸಂಕೀರ್ಣಗಳು, ಸ್ವಚ್ಛವಾದ ದಾರಿಗಳು, ರಾತ್ರಿಯಾದರೆ ನೂತನ ವರ್ಣಮಯ ಲೋಕವನ್ನು ಸೃಷ್ಠಿ ಮಾಡುವ ದಾರಿ ದೀಪಗಳು, ಭೂಮಿಯ ಮೇಲೆ ಕಿನ್ನರ ಲೋಕದ ಸೃಷ್ಠಿ, ರಸ್ತೆ ಮೇಲೆ ಶಿಸ್ತು ಬದ್ಧವಾಗಿ ಚಲಿಸುವ ವಾಹನಗಳು ಇಕ್ಕೆಲಗಳಲ್ಲಿ ಹಸಿರು ಹುಲ್ಲಿನ ಹಾಸು, ವಿವಿಧ ಆಕರ್ಷಕ ಹೂರಾಶಿ, ಉದ್ಯಾನವನಗಳು, ಸಮಯ ನಿಷ್ಟ ಶಿಸ್ತಿನ ಕೆಲಸದಲ್ಲಿ ತೊಡಗಿರುವರ ಮುಖದರ್ಶನ ಪ್ರತಿನಿತ್ಯ. ಪ್ರತಿಯೊಬ್ಬರು ಸುರಕ್ಷಿತರು, ಕಳ್ಳರ ಭಯವಿಲ್ಲ, ದರೋಡೆ ಕೊಲೆಯ ಅಂಜಿಕೆಯಿಲ, ಬಂದ್-ಹರತಾಳದ, ಕಲ್ಲುತೂರಾಟದ ದೃಶ್ಯ, ಸಾರ್ವಜನಿಕ ಆಸ್ತಿಪಾಸ್ತಿಗೆ ತೊಂದರೆಯಾಗುವುದಿಲ್ಲ. ಇಂತಹ ಈ ಗಲ್ಫ್ ನಾಡಿನಲ್ಲಿ ಭಾರತದ ವಿವಿಧ ಪ್ರದೇಶದವರಂತೆ ಕನ್ನಡಿಗರು ದಶಕಗಳಿಂದ ಗೌರವಯುತವಾಗಿ ಇಲ್ಲಿ ನೆಲೆಸಿದ್ದಾರೆ. ಈ ನಾಡಿನ ಶ್ರೀಮಂತಿಕೆಯಲ್ಲಿ ಭಾರತೀಯರ ಕೊಡುಗೆ ಅತ್ಯಮೂಲ್ಯವಾದದ್ದು. ಅದರಲ್ಲಿಯೂ ಕನ್ನಡಿಗರು ಬೃಹತ್ ಉದ್ಯಮ, ವ್ಯಾಪಾರ - ವಹಿವಾಟು ಮಾಡಿ ರ್‍ಆಷ್ಟ್ರದ ವಿತ್ತ ಸಂಪತ್ತಿನಲ್ಲಿ ತಮ್ಮ ಪಾಲು ಸಿಂಹ ಪಾಲು ಎಂಬುದನ್ನು ಸಾಕ್ಷೀಕರಿಸಿದ್ದಾರೆ. ಇಂತವರ ಸಾಲಿನಲ್ಲಿ ಅಗ್ರ ಪಂಕ್ತಿಯಲ್ಲಿ ಬರುವವರು. ದಕ್ಷಿಣ ಕನ್ನಡದ ಕಡಲ ಕಿನಾರೆಯ ಸಿದ್ದಕಟ್ಟೆ ಚಂದ್ರಶೇಖರ ಶೆಟ್ಟಿಯವರು. ತಮ್ಮ ಹುಟ್ಟೂರಿನಲ್ಲಿ ವಿದ್ಯಾರ್ಥಿಯಾಗಿರುವಗಲೇ ನಾಯಕತ್ವದ ಅನುಭವ, ಕ್ರೀಡಾ, ಕಲಾ ಸ್ಪರ್ಧೆಗಳಲ್ಲಿ, ಬಹುಮಾನ, ಪದಕಗಳ ಸರಮಾಲೆ ಕೊರಳಿಗೆ, ಬಣ್ಣಗಳನ್ನು ಮುಖಕ್ಕೆ ಹಚ್ಚಿ, ಕಾಲಿಗೆ ಗೆಜ್ಜೆ ಕಟ್ಟಿ, ರಂಗಸ್ಥಳದ ಮೇಲೆ ಚಂಡೆಯ ಅಬ್ಬರ ತಾಳಕ್ಕೆ ಹೆಜ್ಜೆ ಹಾಕಿ ಯಕ್ಷಗಾನ ಕಲೆಯನ್ನು ಮೈಗೂಡಿಸಿಕೊಂಡು, ವಿದ್ಯಾರ್ಥಿ ನಾಯಕನಾಗಿ, ಸಮಾಜ ಸೇವೆಯನ್ನು ಮೈಗೂಡಿಸಿಕೊಂಡು ಸ್ನೇಹಿತರ ಸ್ಪೂರ್ತಿಯ ಸ್ನೇಹಿತನಾಗಿ ಬೆಳೆದು ಬಂದಿರುವ ಸಿ. ಆರ್.   ದುಬಾಯಿಗೆ ಪಯಣ, ಇನ್ಷುರೆನ್ಸ್ ಕಂಪೆನಿಯಲ್ಲಿ ಉನ್ನತ  ಪದವಿಯಲ್ಲಿದ್ದು ಹಲವು ಮಂದಿಗೆ ಉದ್ಯೋಗ ಕಲ್ಪಿಸಿ ಕೊಟ್ಟಿದ್ದಾರೆ. ಇವರಿಗೆ ತನ್ನ ತಾಯಿನಾಡಿನ ಮಮತೆ ಗೌರವ, ನೆನಪು ಸದಾ ಮನದಲ್ಲಿ  ಕಾಡುತಿತ್ತು. ದುಬಾಯಿಯಲ್ಲಿ ಕನ್ನಡಿಗರು, ತುಳುವರು ಚದುರಿಹೋಗಿ ತಮ್ಮ ತಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಜೀವನ ನಡೆಸುತಿದ್ದರು. ನೆರೆಯ ರಾಜ್ಯ ಕೇರಳದವರು ಜಾತಿ ಮತ ಭೇದ ಮರೆತು ತಮ್ಮ ಭಾಷೆ , ಆಚಾರ ವಿಚಾರ ಗಳನ್ನು ಉಳಿಸುವ ಸಲುವಾಗಿ ಸಂಘಟಿತರಾಗಿದ್ದರು ಈ ದೃಶ್ಯವನ್ನು ನೋಡಿ ನಮ್ಮ  ಕರ್ನಾಟಕದವರು  ಒಟ್ಟು ಸೇರಿ ಸಂಘಟಿತರಾಗಬೇಕೆಂಬ ಹಂಬಲದಿಂದ ಅಭಿಮಾನಿ ಸ್ನೇಹಿತರೊಂದಿಗೆ ಸೇರಿಕೊಂಡು ಕರ್ನಾಟಕ ಸಂಘದ ಸ್ಥಾಪನೆಯಲ್ಲಿ ಭಾಗಿಗಳಾದರು, ನಂತರ ದೇಶ ವಿದೇಶಗಳಲ್ಲಿರುವಂತೆ ತುಳು ಕೂಟವನ್ನು ಸಹ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಯು. ಎ, ಇ. ತುಳುಕೂಟ ಎಂಬ ನಾಮಾಂಕಿತದೊಂದಿಗೆ ತುಳುವರನ್ನು  ಸ್ಥಾಪಿಸಿ ಜಾತಿ ಮತ ಭೇದ ಮರೆತು ಒಂದುಗೂಡುವಂತೆ ಮಾಡಿ ಸಾಕ್ಷಿಕರಿಸಿದ ಸಿ. ಆರ್. ಕನ್ನಡಿಗರ, ತುಳುವರ ಅಭಿಮಾನದ ಉತ್ತಮ ಸಂಘಟಿತರಾಗಿ ನಾಯಕರಾಗಿ ಗುರುತ್ತಿಸಿಕೊಂಡರು. ಪ್ರಾರಂಭದಿಂದಲೇ ಸಿ. ಆರ್. ರವರ ಜೊತೆಗೂಡಿ ಉಮೇಶ್ ನಂತೂರ್ ಕನ್ನಡ ತುಳು ಸಂಘಟನೆಯನ್ನು ಬಲಿಷ್ಟವಾಗಿ ಭದ್ರ ಬುನಾದಿಯೊಂದಿಗೆ ಕರ್ನಾಟಕದ ಕಲೆ ಸಂಸ್ಕೃತಿಯನ್ನು ಭಾಷೇಯನ್ನು ವೈಭವಿ ಕರಿಸಿದರು. ಕನ್ನಡ, ತುಳು, ಕೊಂಕಣಿ, ಬ್ಯಾರಿ, ಕೊಡವ ಪಂಚ ಭಾಷೆಯ ಕರ್ನಾಟಕದವರು, ಯು. ಎ. ಇ. ಯಲ್ಲಿ ಸಾಂಸ್ಕೃತಿಕ ಸಂಘಟನೆಯ ಪಯಣದಲ್ಲಿ ಒಂದಾದರು.

ನಮ್ಮ ಭಾರತ ದೇಶ್ ಎದುರಿಸಿದಂತಹ ಭೂಕಂಪ, ಸೂನಾಮಿ, ಪ್ರಾಕೃತಿಕ ಹಾಗೂ ಸಾಮಜಿಕ ದುರಂತದ ವೇಳೆಯಲ್ಲಿ ನಿರ್ಗತಿಕರಿಗೆ ಧನ, ವಸ್ತ್ಯ್, ಆಹಾರ,, ಉಡುಪುಗಳನ್ನು ಸಂಗ್ರಹಿಸಿ ತಲುಪಿಸುವಲ್ಲಿ ಈ ನಾಡಿನ ಜನರ ಪೂರ್ಣ ಸಹಕಾರ ಪಡೆಯುವಲ್ಲಿ ಮಾರ್ಗಧರ್ಶಕರಾಗಿದ್ದ ಸಿ. ಆರ್. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ತೋರಿಸಿ ಮಾನವತೆಯನ್ನು ಮೆರೆದಿದ್ದಾರೆ.

ಆರಬ್ ಸಂಯುಕ್ತ ಸಂಸ್ಥಾನದಲ್ಲಿ ಕನ್ನಡ ತುಳು ಸಂಘಟನೆಯ ಮೂಲಕ ಕನ್ನಡ ತುಳು ಭಾಷೇಯ ಸಂಸ್ಕ್ರ್‍ಇತಿಯನ್ನು ಭಾರತ ದೇಶದ ಸಂಸ್ಕೃತಿಯೊಡನೆ ಬೆರೆಸಿ ಪುಟವಿಟ್ಟಂತೆ ಹೊಳಪಾಗಬೇಕೆಂದು ಕನಸು ಕಂಡ ವ್ಯಕ್ತಿ. ಮಹಾತ್ವಾಕಾಂಕ್ಷೆಯ ಸಾಂಸ್ಕೃತಿಕ ಧ್ವಜವನ್ನು ಎತ್ತಿಹಿಡಿದು ಇಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಅಭಿಮಾನದ ಜಾಗೃತಿ ಮೂಡಿಸುವಲ್ಲಿ ದುಬಾಯಿ ಕರ್ನಾಟಕ ಸಂಘ ಉತ್ತಮ ಕಾರ್ಯಕಾರಿ ಸಮಿತಿಯೊಂದಿಗೆ ಅಧ್ಯಕ್ಷರಾದ ಸಿ ಆರ್. ಶೆಟ್ಟಿಯವರು ಯಶಸ್ಸು ಸಾಧಿಸಿದ್ದಾರೆ. ಇದರ ಫಲವಾಗಿ ೨೦೦೫ ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ವರ್ಣರಂಜಿತ ಸಮಾರಂಭದಲ್ಲಿ ದುಬಾಯಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸಿ. ಆರ್. ಶೆಟ್ಟಿಯವರು ಸ್ವೀಕರಿಸಿದಾಗ ಕನ್ನಡಿಗರು ಮನತುಂಬಿ ಅಭಿನಂದಿಸಿ, ಹಾರೈಸಿ, ವಿದೇಶದ ನೆಲದಲ್ಲಿ ಕನ್ನಡ ಭಾಷೇಯ ಜಿವಂತಿಕೆಗೆ ಹೆಮ್ಮೆಪಟ್ಟರು.

ಸಿ ಆರ್. ಶೆಟ್ಟಿಯವರ ಸಂಚಾಲಕತ್ವದ ತುಳುಕೂಟದ ಆಶ್ರಯದಲ್ಲಿ ತುಳುನಾಡಿನ ಕಲಾ ಪ್ರಕಾರಗಳ ಪ್ರದರ್ಶನ, ಕಲಾ ವೈಭವಗಳನ್ನು ಪ್ರತಿಬಿಂಭಿಸುವ "ತುಳುಪರ್ಬ" ತುಳು ಸಾಂಸ್ಕೃತಿಕ ಕಲಾ ಮೇಳವನ್ನು ದುಬಾಯಿ ಅಲ್ ನಾಸರ್ ಲೀಸರ್ಲ್ಯಾಂಡ್ ಐಸ್ ರಿಂಕ್ ಕ್ರೀಡಾಂಗಣದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿಗಳು ಮನರಂಜನೆಯ ರಸದೌತಣವನ್ನು, ಯಕ್ಷಗಾನ, ನಾಟಕ, ಜಾನಪದ ಕಲೆ, ರಂಗರೂಪಕ, ಹಾಸ್ಯ ಲಹರಿ, ಸಾಂಸ್ಕೃತಿಕ ಸ್ಥಭ್ದಚ್ಚಿತ್ರಗಳ ಮೆರ್ವಣಿಗೆಯಮೂಲಕ ಭಾಗವಹಿಸಿ, ವೀಕ್ಷಿಸಿ ಸವಿದಿದ್ದಾರೆ.

ಕರ್ನಾಟಕದಿಂದ ಈ ಗಲ್ಫ್ ನಾಡಿಗೆ ಬಂದ ಗಣ್ಯರು, ಕಲಾವಿದರು, ಕಲಾತಪಸ್ವಿಗಳು, ಹಲವಾರು ಕಲಾಪ್ರತಿಭೆಗಳು ಈ ಮಣ್ಣಿನ ಸಾಂಸ್ಕೃತಿಕ ವೇಧಿಕೆಯ ಮೂಲಕ ಕಲಾಸೇವೆ ಮಾಡಿ ಈ ನಾಡಿನ ಸಂಘಟನೆಯ ವೇಧಿಕೆಯು ಸಾಕ್ಷಿಕರಿಸಿದೆ.

ಕ್ರಿಕೆಟ್ ಪಂದ್ಯಾಟ, ಕ್ರೀಡಾಕೂಟ, ಸಂಗೀತ ಸರಿಗಮದ ಮೂಲಕ ಹಲ್ವಾರು ಯುವ ಪ್ರತಿಭೆಗಳು ತಮ್ಮ ಪ್ರ್ತಿಭೆಯಲ್ಲಿ ಪ್ರೌಢತೆಯನ್ನು ಸಾಧಿಸಲು ಪೂರ್ಣ ಪ್ರೋತ್ಸಾಹ ನೀಡಿ ವೇಧಿಕೆ ಕಲ್ಪಿಸಿದ ದೂರದರ್ಶಿತ್ವದ ಸಿ. ಅರ್. ಶೆಟ್ಟಿ ಯವ್ರು ಕರ್ನಾಟಕೋತ್ಸವದಂತಹ ಬೃಹತ್ ಕಾರ್ಯಕ್ರಮಗಳನ್ನು ಕನ್ನ್ಡಿಗರಿಗೆ ವೀಕ್ಷಿಸಲು ಅವಕಾಶ ಮಾಡಿಕೊಟ್ಟು ದುಬಾಯಿ ಕರ್ನಾಟಕ ಸಂಘ ೨೦೦೮ ತನ್ನ ರಜತ ಮಹೋತ್ಸವದ ವರ್ಷಾಚರಣೆಯ ಕಾರ್ಯಕ್ರಮಗಳ ಸರಣಿಯಲ್ಲಿ ಅತಿದೊಡ್ಡ ತಾರಮೇಳ, ಸಂಗೀತ ರಸ ಸಂಜೆ ದುಬಾಯಿ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಕ್ರೀಡಾಂಗಣದಲ್ಲಿ ಸಹಸ್ರ ಸಹಸ್ರ ಕನ್ನಡಿಗರು ತಮ್ಮ ನೆಚ್ಚಿನ ಜನಪ್ರಿಯ ೩೦ ಕನ್ನಡ ಚಲನಚಿತ್ರ ತಾರೆಯರ ತಂಡದ ಕಾರ್ಯಕ್ರಮ ಝೀ ಟಿ ವಿ. ಕನ್ನಡ ದ ಸಹಯೋಗದೊಂದಿಗೆ ನಡೆಯುವ ವರ್ಣ ರಂಜಿತ ಸಮಾರಂಭದಲ್ಲಿ ಪಾಲ್ಗೊಂಡು, ಯಶಸ್ಸಿನ ಧ್ವಜವನ್ನು ಗಗನದೆತ್ತರ ರಾರಾಜಿಸಲಿದ್ದಾರೆ.

೨೦೦೮ ನೇ ಸಾಲಿನ ಭಾರತದ ಪ್ರತಿಷ್ಠಿತ "ಇಂದಿರಾ ಗಾಂದಿ ಪ್ರಿಯದರ್ಶಿನಿ" ಪ್ರಶಸ್ತಿಯನ್ನು ಪಡೆದ ಶ್ರೀ ಚಂದ್ರಶೇಖರ ರಾಮ್ ಶೆಟ್ಟಿಯವರಿಗೆ ಸಮಸ್ತ ಕನ್ನಡ ಮತ್ತು ಭಾರತೀಯರ ಪರವಾಗಿ ಹಾರ್ದೀಕ ಅಭಿನಂದನೆಗಳು

ಸಿ. ಆರ್. ಶೆಟ್ಟಿಯವರು ತಮ್ಮ ಮಡದಿ ಸಜ್ಜನಿಕೆಯ ಸಾಕಾರ, ಸ್ನೇಹಶೀಲರಾಗಿರುವ - ಶ್ರ್‍ಈಮತಿ ಪ್ರೀತಿಕ ಶೆಟ್ಟಿ ಹಾಗು ಪುತ್ರಿ ಕು|| ನಿಬಾನಾ ಮತ್ತು ಪುತ್ರ ಕು|| ನಿಶಾಂತ್ ಯವರೊಂದಿಗೆ ಸುಸಂಸ್ಕೃತ ಬದುಕಿನಲ್ಲಿ ಸುಖ ಸಂಪತ್ತು, ನೆಮ್ಮದಿ, ಆರೋಗ್ಯ, ಮನಶಾಂತಿ ದೇವರು ಸದಾ ಅನುಗ್ರಹಿಸಲಿ ಎಂದು ಹಾರೈಸಿ ಶ್ರೀಯುತರ ನಾಯಕತ್ವ, ಸಮಾಜಸೇವೆ ನಿರಂತರವಾಗಿ ಸುಗಮವಾಗಿ ನಡೆಯುತ್ತಿರಲಿ ಎಂದು ಸಮಸ್ತರ ಪರವಾಗಿ ಶುಭವನ್ನು ಹರೈಸುತ್ತೇವೆ.

ಬಿ. ಕೆ. ಗಣೇಶ್ ರೈ
ನಿಕಟಪೂರ್ವ ಅಧ್ಯಕ್ಷರು
ಕರ್ನಾಟಕ ಸಂಘ ಶಾರ್ಜಾ
   

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಬಿ. ಕೆ. ಗಣೇಶ್ ರೈ,ನಿಕಟಪೂರ್ವ ಅಧ್ಯಕ್ಷರು ಕರ್ನಾಟಕ ಸಂಘ ಶ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-02-13

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಂಗ್ರಹ]

»ನವದೆಹಲಿ: ಶಿಲ್ಪಾ ‘ಸಿರಿ’ ಕವನ ಸಂಕಲನ ಬಿಡುಗಡೆ
»ಅನಿವಾಸಿ ಕನ್ನಡಿಗರೆ ನೀವು ಕರ್ನಾಟಕ ಬಿಟ್ಟು ಹೋಗುವಾಗ ನಮ್ಮನ್ನು ಕೇಳಿದ್ದಿರಾ ?-ಮುಖ್ಯಮಂತ್ರಿ ಚಂದ್ರು(ಸ೦ಗ್ರಹ)
»ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಡೀವಿ ಖಚಿತ ಕಾಂಗ್ರೆಸ್‌ಗೆ `ತಾರಾ'ಬಲ? (ಸ೦ಗ್ರಹ)
»ಇಂದಿನಿಂದ ಓಬವ್ವನ ನಾಡಲ್ಲಿ ಸಾಹಿತ್ಯ ತೇರು(ಸ೦ಗ್ರಹ)
»ಜನರ ಬಳಿಗೆ ಆಗಮಿಸುತ್ತಿದೆ ಗೂಗಲ್ ಇಂಟರ್ನೆಟ್ ಬಸ್ (ಸ೦ಗ್ರಹ)
»ಬೆಳ್ತಂಗಡಿ:‘ಕುಡಿದು’ ಕಲಿಸುವ ಶಿಕ್ಷಕಿ ಬೇಡವೇ ಬೇಡ...!(ಸ೦ಗ್ರಹ)
»ದುಡ್ಡು ಸಂಪತ್ತಿಗಿ೦ತ ಜನರಿಂದ ಪಡೆಯುವ ಪ್ರೀತಿಯೇ ದೊಡ್ಡದು: ಬನ್ನಂಜೆ (ಸ೦ಗ್ರಹ)
»ಖ್ಯಾತ ಕಾರ್ಯಕರ್ತ ಇಕ್ಬಾಲ್ ಮನ್ನಾ ಅವರಿಗೆ ಸನ್ಮಾನ(ಸ೦ಗ್ರಹ)
»ಕೊಟ್ಟ ಮಾತು ತಪ್ಪದ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರು : ಅನಿವಾಸಿ ಕನ್ನಡಿಗರ ಸಮಿತಿಗೆ ಬೇಡಿಕೆ -ಆಶ್ವಾಸನಪತ್ರ(ಸ೦ಗ್ರಹ)
»ವಿಜ್ರಂಭಣೆಯಿಂದ ನೆಡೆದ ಕತರ್ ತುಳು ಕೂಟದ 4 ನೇ ವಾರ್ಷಿಕೋತ್ಸವ; ಕಿಕ್ಕಿರಿದ ಸಭೆ,’ದೇವರ್ ನಡಪವೆರ್’ ಯಶಸ್ವಿ ಪ್ರದರ್ಶನ (ಸ೦ಗ್ರಹ)
»ಪತ್ರಿಕೆಗಳ ಮೇಲಿನ ಓದುಗರ ವಿಶ್ವಾಸಾರ್ಹತೆ ಕುಂಠಿತ: ಮಣಿಪಾಲದಲಿ ಮಿಂಟ್ ಸಂಪಾದಕ ರಾಜಾ ನರಶೆಟ್ಟಿ(ಸ೦ಗ್ರಹ)
»ಸಭಿಕರನ್ನು ಬಾವುಕತೆಯಲ್ಲಿ ಪುಳಕಿಸಿದ ’ದೋಹಾ ಕಿ ಶಾಮ್ ರಫಿ ಕಿ ನಾಮ್’(ಸ೦ಗ್ರಹ)
»ಸಿ.ಆರ್.ಶೆಟ್ಟಿ ಅವರಿಗೆ ‘ಇ೦ದಿರಾ ಗಾ೦ಧಿ ಪ್ರಿಯದರ್ಶಿನಿ’ ಪ್ರಶಸ್ತಿ (ಸಂಗ್ರಹ)
»ಅಜ್ಮಾನ್: ನಾಲ್ಕನೆಯ ಪದವಿಪ್ರದಾನ ಸಮಾರಂಭ 2008-ಹಲವು ಗಣ್ಯರ ಉಪಸ್ಥಿತಿ( ಸಂಗ್ರಹ)
»ಮುಂಬೈಯಲ್ಲಿ ಕನ್ನಡ ಯುವತಿಯ ಸಾಧನೆ: ಜ್ಯೋತಿ ಬಿ.ದೇವಾಡಿಗರಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ( ಸಂಗ್ರಹ)
»ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು
»ಗಲ್ಫ್ ನಾಡಿನಲ್ಲಿ ಕನ್ನಡದ ಕಂಪು ( ಸಂಗ್ರಹ)
»ಸಂಗೀತಮಯ, ನೃತ್ಯ ಸಂಯೋಜಿತ ಹಾಗೂ ಖ್ಯಾತ ತಾರೆಗಳಿಂದ ಪ್ರಜ್ವಲಗೊಂಡ ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕೋತ್ಸವ (ಸಂಗ್ರಹ)
»ಬ್ಯಾರೀಸ್ ಕಲ್ಚರಲ್ ಫೊರಂನ ವತಿಯಿಂದ ವಿದ್ಯಾರ್ಥಿವೇತನ.. ಸಮುದಾಯದ ಅಭಿವೃದ್ಧಿಯಲ್ಲಿ ಸಹಭಾಗಿತ್ವ : ಜಯಪ್ರಕಾಶ್ ಹೆಗ್ಡೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri