ಶನಿವಾರ, 14-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಗಲ್ಫ್ ನಾಡಿನಲ್ಲಿ ಕನ್ನಡದ ಕಂಪು ( ಸಂಗ್ರಹ)

ಗಲ್ಫ್ - ಮನಸಿನಲ್ಲಿ ಮೂಡಿಬರುವುದು ಮರುಭೂಮಿಯ ಚಿತ್ರಣ.  ಅರಬಿಕ್ ಭಾಷೆಯನ್ನಾಡುವ ಅರಬ್ ಸಂಯುಕ್ತ ಸಂಸ್ಥಾನದ ಅರಬ್ಬರು ಮರಳುಗಾಡನ್ನು ಹಸಿರು ಭೂಮಿಯನ್ನಾಗಿ ಪರಿವರ್ತಿಸಿದ ಜ್ಞಾನ ವಿಜ್ಞಾನದ ಕ್ರಿಯಾರೂಪದ ಆಧುನಿಕ ನಗರ. ಲೋಕ ವಿಖ್ಯಾತ ವಾಣಿಜ್ಯ ಕೇಂದ್ರ, ಯು. ಎ. ಇ.ಯಲ್ಲಿ ಅಬುಧಾಬಿ, ದುಬಾಯಿ, ಶಾರ್ಜಾ, ಅಜ್ಮಾನ್, ರಾಸ್ ಅಲ್ ಖೈಮಾ, ಪ್ಯುಜೇರಾ, ರಾಸ್ ಅಲ್ ಕೈಮಾ ಎಂಬ ಏಳು ರಾಜ್ಯಗಳು ಸೇರಿದೆ. ಜಗತ್ತಿನ ನಾನಾಕಡೆಯ ಸಂಪರ್ಕ ಹೊಂದಿದ್ದು ಒಳ್ಳೆಯ ವ್ಯಾಪಾರ ಕೇಂದ್ರವೆಂಬ ಖ್ಯಾತಿಗಳಿಸಿದೆ. ಯೋಜನಾಬದ್ದ ಚೆಲುವಿನ ನಗರ, ವಿಸ್ತಾರವಾದ, ಚೊಕ್ಕಟವಾದ ರಸ್ತೆಗಳು, ಹಚ್ಚಹಸಿರಿನ ಉದ್ಯಾನವನಗಳು, ರಸ್ತೆಯ ಇಕ್ಕೆಲಗಳಲ್ಲಿ ವೈವಿಧ್ಯಮಯ ಹೂ ಗಿಡಗಳು ನೋಡುಗರ ಕಣ್ಮನ ತಣಿಸುತ್ತಿದೆ. ಹೆದ್ದಾರಿ ಖರ್ಜೂರದ ಸಾಲುಮರಗಳು ಫಲ ನೀಡುವುದರ ಮೂಲಕ ನಾಡಿನ ಸೌಂದರ್ಯವನ್ನೂ ಹೆಚ್ಚಿಸಿದೆ. ವಿವಿಧ ದೇಶದ ವಿವಿಧ ಭಾಷೆಯನ್ನಾಡುವ ಜನರೊಂದಿಗೆ, ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ನೆಲೆಸಿ, ಗಲ್ಫ್ ನಾಡಿನ ವಿತ್ತ ಸಂಪತ್ತಿನ ಅಭಿವೃದ್ದಿಯಲ್ಲಿ ಪಾಲುದಾರರಾ ಗಿದ್ದಾರೆ. ಉದ್ಯೋಗಿಗಳಾಗಿ, ಉದ್ದಿಮೆದಾರರಾಗಿರುವ ಭಾರತಿಯರಲ್ಲಿ ಕರ್ನಾಟಕದ ಕನ್ನಡಿಗರು ಕಳೆದ ಮೂರು ದಶಕಗಳಿಂದ ಅನಿವಾಸಿ ಭಾರತೀಯರಾಗಿ  ಶಿಸ್ತಿನ ಜೀವನ ಸಾಗಿಸುತ್ತಿದ್ದಾರೆ.

ಕನ್ನಡವೆಂದರೆ ಆನಂದ.... ಕರ್ಣಾನಂದ! ತನ್ನ ಮಾತೃಭೂಮಿಯ ಮಾತೃಭಾಷೆಯ ಬಗ್ಗೆ ಒಂದು ಕ್ಷಣವಾದರೂ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಕನ್ನಡದ ಸಾಂಸ್ಕೃತಿಕ ಕೇಂದ್ರಗಳು ಮೂರು ದಶಕಗಳ ಹಿಂದೆ ಜನ್ಮ ತಾಳಿದೆ. ಆಯಾಯ ಕಾಲಘಟ್ಟದಲ್ಲಿ ವಿವೇಕಯುತವಾದ ನಿರ್ಧಾರಗಳನ್ನು ತೆಗೆದುಕೊಂಡು ಕರ್ನಾಟಕ ಪರ ಸಂಘಟನೆಗಳು, ಕನ್ನಡನಾಡು ನುಡಿ ಸಂಸ್ಕೃತಿಗೆ ನವಜಾಗೃತಿ, ನವಚೇತನ ನಿರ್ಮಾಣ ಮಾಡಿಕೊಂಡು, ಪರ ಭಾಷೆಯ ಜನರೊಂದಿಗೆ ಅತ್ಯಂತ ಸೌಹಾರ್ದತೆಯಿಂದ ಹಾಸುಹೊಕ್ಕಾಗಿ ಬೆರೆತು ತಮ್ಮ ನಿಸ್ವಾರ್ಥ ಸೇವೆಯಿಂದ ಸಮಸ್ತ ಕನ್ನಡಿಗರ ಪ್ರೀತಿ ವಿಶ್ವಾಸ ಗಳಿಸುವುವಲ್ಲಿ ಸಮರ್ಥವಾಗಿದೆ.

ಕನ್ನಡಿಗರು ಭಾರತ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವಾಗಿ ದೇಶದ ಸಂಸ್ಕೃತಿಗೆ ತಮ್ಮ ಕೊಡುಗೆಯನ್ನು ನೀಡಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಆದ ಹಿರಿಮೆ ಗರಿಮೆಗಳಿಂದ ಕರ್ನಾಟಕದ ಪಂಚಭಾಷಾ ಬಾಂಧವ್ಯಕ್ಕೆ ಶ್ರಮಿಸುತ್ತಾ ಗಮನ ಸೆಳೆದಿದ್ದಾರೆ. ತಮ್ಮ ಹುಟ್ಟೂರಿನ ಪರಿಸರದ ಜಾನಪದ ಸಂಸ್ಕಾರಗಳ ನೆನಪು ತಂದುಕೊಡುವ ಸಂಸ್ಥೆಯ  ಸಂಘಟನೆಗಳ ಕಾರ್ಯಸಾಧನೆಗಳಿಗೆ ಹೊಸ ಚೈತನ್ಯ ತುಂಬಿದ ಗಣ್ಯ ವ್ಯಕ್ತಿಗಳು ಈ ನಾಡಿನಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿ ಗೌರವಾನ್ವಿತರಾಗಿದ್ದಾರೆ.

ನಮ್ಮ ಜನ್ಮಭೂಮಿಯ ಪರಿಸರದ ಬಾಲ್ಯದಲ್ಲಿ ಕಂಡು ಅನುಭವಿಸಿದ ಸಾಂಸ್ಕೃತಿಕ ಪ್ರಜ್ಞೆಯನ್ನು ನೆನಪಿಸಿಕೊಳ್ಳುವ ಯಕ್ಷಗಾನ, ನಾಟಕ, ಜಾನಪದ ನೃತ್ಯ, ರಂಗರೂಪಕ, ಪ್ರಹಸನ, ಛದ್ಮವೇಷ, ಹಾಸ್ಯ, ಲಹರಿ,  ಸಂಗೀತ, ಗಾಯನ ರಸಮಂಜರಿ ಕಾರ್ಯಕ್ರಮಗಳನ್ನು ಈ ಗಲ್ಫ್ ನಾಡಿನಲ್ಲಿ ವಿವಿಧ ಸಂಘಟನೆಗಳು ವಿವಿಧ ವೇಧಿಕೆಗಳಲ್ಲಿ ಪ್ರದರ್ಶಿಸಿ ಕನ್ನಡ ತಾಯಿಯ ಭಾಷೆ, ಕಲಾ ಸಂಸ್ಕೃತಿಯನ್ನು ವೈಭವಿಕರಿಸಿದೆ.

ಅರಬ್ ಸಂಯುಕ್ತ ಸಂಸ್ಥಾನದ  ಪ್ರಥಮ ಕನ್ನಡ ಸಂಘಟನೆ ಅಬುಧಾಬಿ ಕರ್ನಾಟಕ ಸಂಘ ೧೯೮೦ ರ ದಶಕದಲ್ಲಿ ಸ್ಥಾಪನೆಯಾಗಿ ತನ್ನ ಬೆಳ್ಳಿಹಬ್ಬದ ಮಹೋತ್ಸವವನ್ನು ಆಚರಿಸಿ ಗಲ್ಪಿಗೆ ಪ್ರಥಮಬಾರಿಗೆ ಕರ್ನಾಟಕದ ಮಾನ್ಯ  ಮುಖ್ಯಮಂತ್ರಿಗಳಾಗಿದ್ದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಯವರನ್ನು  ಅಹ್ವಾನಿಸಿ ಕಾರ್ಯಕ್ರಮವನ್ನು ವೈಭವಪೂರ್ವಕ ವಾಗಿ ನಡೆಸಿದ್ದು ಈ ನಾಡಿನ ದಾಖಲೆಯಾಗಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ನ್ನು ಪಡೆದಿರುವ ಡಾ//. ಬಿ. ಆರ್. ಶೆಟ್ಟಿಯವರು ಮಹಾಪೋಷಕರಾಗಿದ್ದು, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಸರ್ವೊತ್ತಮ ಶೆಟ್ಟಿಯವರು ಅಧ್ಯಕ್ಷರಾಗಿದ್ದು, ಉತ್ಸಾಹೀ ಕಾರ್ಯಕಾರಿ ತಂಡ, ಸದಸ್ಯರ ೨೫ ವರ್ಷಗಳ ಕನ್ನಡ ಕಲಾ ವೈಭವದ ಸಾಧನೆ ಅಬುಧಾಬಿ ಕರ್ನಾಟಕ ಸಂಘಕ್ಕೆ ೨೦೦೬ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿ ತನ್ನ ಕಿರೀಟಕ್ಕೆ ಹೊನ್ನಿನ ಗರಿಯನ್ನು ಸಿಕ್ಕಿಸಿಕೊಂಡಿದೆ.

ಶ್ರೀ ಶೇಖರ್ ಬಾಬು ಶೆಟ್ಟಿಯವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ.

ದುಬಾಯಿ ಕರ್ನಾಟಕ ಸಂಘ ೨ ದಶಕಗಳ ಹಿಂದೆ ಅಪ್ಪಟ ಕನ್ನಡ ಅಭಿಮಾನಿಗಳ ತಂಡದವರಿಂದ ಸ್ಥಾಪಿತವಾಗಿ, ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಿದೆ. ಪೋಷಕರಾಗಿದ್ದ ಶ್ರೀ ಅಬ್ದುಲ್ ಲತೀಫ್ ರವರು ಮತ್ತು ಅಧ್ಯಕ್ಷರಾಗಿದ್ದ ಶ್ರೀ ಸಯ್ಯದ್ ಖಲೀಲ್ ರವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.  ಡಾ//. ಬಿ. ಕೆ. ಯುಸೂಫ್ ಪೋಷಕರಾಗಿ ಶ್ರೀ ಸಿ. ಆರ್.ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಕಲಾಭಿಮಾನಿ ಕಾರ್ಯಕರ್ತರ ತಂಡವಿರುವ ದುಬಾಯಿ ಕರ್ನಾಟಕ ಸಂಘ ೨ ದಶಕಗಳಿಂದ ವೈವಿಧ್ಯಮಯ ಕನ್ನಡ ಕಾರ್ಯಕ್ರಮಗಳನ್ನು ಉತ್ಕೃಷ್ಟ ಮಟ್ಟದಲ್ಲಿ ನೀಡಿ ೨೦೦೫ ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದು ಗೌರವಾನ್ವಿತ ಸ್ಥಾನದಲ್ಲಿದೆ.

ಶಾರ್ಜಾ ಕರ್ನಾಟಕ ಸಂಘ ಶ್ರೀ ಉಮೇಶ್ ನಂತೂರ್ ರವರ ಅಧ್ಯಕ್ಷತೆಯಲ್ಲಿ ಈ ಶತಮಾನದ ಪ್ರಾರಂಭದಲ್ಲಿ ಪ್ರತಿಭಾಶಾಲಿ ಕಾರ್ಯತಂಡದೊಂದಿಗೆ ಪ್ರಾರಂಭವಾಯಿತು. ಉಮೇಶ್ ನಂತೂರ್ ರವರ ಅಕಸ್ಮಿಕ ನಿಧನದ ನಂತರ ಶ್ರೀ ಬಿ. ಕೆ. ಗಣೇಶ್ ರೈ ಯವರ ಅಧ್ಯಕ್ಷತೆಯಲ್ಲಿ ಹಲವಾರು ಕರ್ನಾಟಕದ ವೈಭವದ ಕಲಾ ಕಾರ್ಯಕ್ರಮಗಳನ್ನು ನಡೆಸಿ, ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಉಧ್ಯಮಿಗಳು ಸಮಾಜ ಸೇವಕರು ವಿವಿಧ  ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ  ಕನ್ನಡಿಗರ ಸಂದರ್ಶನ ಹಾಗೂ ಕರ್ನಾಟಕ ಪರ ಸಂಘಟನೆಗಳ ಪರಿಚಯನ್ನೊಳಗೊಂಡ ಸಂಪುಟ ಸಾಧನೆ  ಕನ್ನಡ ಭಾಷೆಯಲ್ಲಿ ಶಾರ್ಜಾದಲ್ಲಿಯೇ ಮುದ್ರಣಗೊಂಡು ಬಿಡುಗಡೆಯಾಗಿದ್ದು ಈ ನಾಡಿನಲ್ಲಿ ದಾಖಲೆಯಾಗಿದೆ. ಶ್ರೀ ಮಾರ್ಕ್ ಡೆನ್ನಿಸ್ ಡಿ ಸೋಜ ಪೊಷಕರಾಗಿದ್ದು, ಈ ವರ್ಷದ ಅವಧಿಯ ಅಧ್ಯಕ್ಷರಾಗಿ ಶ್ರೀ ಪ್ರಭಾಕರ ಅಂಬಲತೆರೆಯವರು ಜವಾಬ್ದಾರಿ ವಹಿಸಿಕೊಂಡು ಕಾರ್ಯನಿರತರಾಗಿದ್ದಾರೆ. 

ಅಲ್ ಐನ್ ಕರ್ನಾಟಕ ಸಂಘ ಶ್ರೀ ಮುರಳಿಯವರ ಅಧ್ಯಕ್ಷತೆಯಲ್ಲಿ ಉತ್ತಮ ಕಲಾವಿದರುಗಳ ತಂಡದೊಂದಿಗೆ ಅಲ್ ಐನ್ ವಿಭಾಗದಲ್ಲಿ ಕನ್ನಡದ ದ್ವಜವನ್ನು ಈ ನಾಡಿನಲ್ಲಿ ಎತ್ತಿಹಿಡಿದು ಕನ್ನಡದ ಸೇವೆಯನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ.

ಕರ್ನಾಟಕ ಮಿತ್ರರು ದುಬಾಯಿಯ ಕೈಗಾರಿಕಾ ನಗರವಾದ ಜೆಬೆಲ್ ಆಲಿ ಯಲ್ಲಿ ಶ್ರೀ ಯೋಗೇಶ್ ಉಳ್ಳಾಲ್ ರವರ ನಾಯಕತ್ವದಲ್ಲಿ ಉತ್ಸಾಹಿ ಕನ್ನಡಿಗರ ತಂಡ ಕನ್ನಡದ ಕಲೆ ಸಂಸ್ಕೃತಿಯನ್ನು ವೈಭವಿಕರಿಸಿದ ಪಟ್ಟಿಯಲ್ಲಿ  ಕರ್ನಾಟಕ ಮಿತ್ರರು ಜೆಬೆಲ್ ಆಲಿ ದಾಖಲೆಯಾಗಿದೆ.

ಯು. ಎ. ಇ. ತುಳುಕೂಟ ಶ್ರೀ ಸಿ. ಅರ್. ಶೆಟ್ಟಿ ಮತ್ತು ಶ್ರೀ ಉಮೇಶ್ ನಂತೂರ್ ರವರ ಸಂಚಾಲಕತ್ವದಲ್ಲಿ ೧೯೯೦ ರ ದಶಕದಲ್ಲಿ ಉತ್ಸಾಹಿ ಪ್ರತಿಭಾನ್ವಿತ ಕಲಾವಿದರು ಅಭಿಮಾನಿಗಳ ಸಮೂಹದೊಂದಿಗೆ ಪ್ರಾರಂಭವಾಗಿ ತುಳು ಭಾಷೆ, ಕಲೆ ಸಂಸ್ಕೃತಿಯನ್ನು ತುಳು ಪರ್ಬ ಎಂಬ ಸಾಂಸ್ಕೃತಿಕ ಹಬ್ಬದ ಮೂಲಕ ದಕ್ಷಿಣ ಕನ್ನಡ ಕಲೆ ಸಂಸ್ಕೃತಿಯ ಕೀರ್ತಿ ಪತಾಕೆಯನ್ನು ಈ ನಾಡಿನಲ್ಲಿ ವಿಜೃಂಬಿಸುವಂತೆ ಮಾಡಿದೆ.

ಇತ್ತೀಚೆಗೆ ದುಬೈಯಲ್ಲಿ ಸದ್ದಿಲ್ಲದೇ ಕಾರ್ಯ ನಿರ್ವಹಿಸುತ್ತಿದ್ದ ಕನ್ನಡ ಕೂಟ ಯು.ಎ.ಇ. ಸಂಘಟನೆಯೂ ೫೧ನೆಯ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿ ಕನ್ನಡಕ್ಕೆ ಅಳಿಲ ಸೇವೆ ಸಲ್ಲಿಸಿದೆ.  ಶ್ರೀ ಈರಣ್ಣ ಮೂಲಿಮನಿಯವರು ಹಾಡಿದ -ಹಾಡಿದೆ ಶೃಂಗಾರ ಕಾವ್ಯ ಕನ್ನಡ ಭಾವಗೀತೆಗಳ    ಧ್ವನಿಸುರುಳಿಯು ಬಿಡುಗಡೆ ಕಂಡಿದೆ. 

ಕನ್ನಡ ಭಾಷೆಯ ಬರಹಗಾರರು, ಕವಿಗಳು, ನಾಟಕಕಾರರ ವೇದಿಕೆ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ನಾಯಕತ್ವದಲ್ಲಿ ಧ್ವನಿ ಪ್ರತಿಷ್ಠಾನ ಸಂಘಟನೆ ವಿಶ್ವ ಮಟ್ಟದಲ್ಲಿ ಕಥಾಸ್ಪರ್ಧೆ, ಕವನ ಸ್ಪರ್ಧೆ ಗಳನ್ನು ಅಂತರ್ಜಾಲದ ಮೂಲಕ ನಡೆಸಿ, ಆಯ್ದ ಕೃತಿಗಳನ್ನು ಮುದ್ರಿಸಿ ಎರಡು ಪುಸ್ತಕಗಳನ್ನು ಗಲ್ಪ್ ನಾಡಿನಲ್ಲಿ ಪ್ರಕಟಿಸಿರುವುದು ದಾಖಲೆಯಾಗಿದೆ. 

ಕರಾವಳಿ ಕರ್ನಾಟಕದ ಶ್ರೀಮಂತ ಕಲೆಯಾದ ಯಕ್ಷಗಾನವನ್ನು ಗಲ್ಪ್ ನಾಡಿನಲ್ಲಿರುವ ಅಭಿಮಾನಿಗಳಿಗೆ ವೀಕ್ಷಿಸುವ ಅವಕಾಶ ಕಳೆದ ಹಲವು ವರ್ಷಗಳಿಂದ ಯಕ್ಷ ಮಿತ್ರರು ಕಲಾಸಂಸ್ಥೆಯ ಮೂಲಕ ಲಭಿಸಿದೆ. ಯಕ್ಷಗಾನದ ಪೂರ್ಣ ಪ್ರಮಾಣದ ಪರಿಕರಗಳನ್ನು, ವಸ್ತ್ರಾಭರಣಗಳನ್ನು ತುಳುನಾಡಿನಿಂದ ತರಿಸಿ ಈ ನಾಡಿನ ಹವ್ಯಾಸಿ ಕಲಾಕಾರರ ತಂಡ ಶ್ರೀ ಚಿದಾನಂದರ ನಾಯಕತ್ವದಲ್ಲಿ ಕಲಾಸೇವೆಯನ್ನು ಸಲ್ಲಿಸಿ ಕನ್ನಡಿಗರ ಗೌರವಕ್ಕೆ ಪಾತ್ರವಾಗಿದೆ.

ಕರ್ನಾಟಕದಿಂದ ಅರಬ್ ಸಂಯುಕ್ತ ಸಂಸ್ಥಾನಕ್ಕೆ ಭೇಟಿ ನೀಡಿ ಕಾರ್ಯಕ್ರಮಗಳನ್ನು ವಿವಿಧ ವೇದಿಕೆಗಳಲ್ಲಿ ಪ್ರದರ್ಶಿಸಿ, ಸನ್ಮಾನಿತರಾದವರು - ಡಾ//. ಶಿವರಾಮ ಕಾರಂತ್, ಡಾ//. ವೀರೇಂದ್ರ ಹೆಗ್ಗಡೆ, ಡಾ//. ರಾಜ್ ಕುಮಾರ್, ಡಾ//. ವಿಷ್ಣುವರ್ಧನ್, ಭಾರತಿ, ಅಂಬರೀಷ್, ಸುಮಲತ, ಎಸ್. ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ, ಪುತ್ತೂರು ನರಸಿಂಹ ನಾಯಕ್, ವಿದ್ಯಾಭೂಷಣ, ಬನ್ನಂಜೆ ಗೋವಿಂದಾಚಾರ್ಯ, ಮಾಸ್ಟರ್ ಹಿರಣಯ್ಯ, ಸದಾನಂದ ಸುವರ್ಣ, ಕುಂಬಳೆ ಸುಂದರರಾವ್ ಹಾಗೂ ಇನ್ನೂ ಹಲವಾರು ಕನ್ನಡದ ಕಣ್ಮಣಿಗಳು.........

ಕರ್ನಾಟಕದ ಕಲಾ ಪ್ರತಿಭೆಗಳು ಈ ನಾಡಿನಲ್ಲಿ ಪ್ರದರ್ಶಿಸಿದ ಕಲಾವೈಭವವನ್ನು ವೀಕ್ಷಿಸಿದ ಕನ್ನಡಿಗರು ಭಾಗ್ಯವಂತರು. ಈ ನಾಡಿನಲ್ಲಿ ನೆಲೆಸಿರುವ ಕನ್ನಡಿಗರು ಒಟ್ಟು ಸೇರಿ ಕನ್ನಡದ ವಿವಿಧ ಸಂಘಟನೆಗಳ ಮೂಲಕ ವಿಜೃಂಭಣೆಯಿಂದ ಆಚರಿಸುವ ಕನ್ನಡ ರಾಜ್ಯೋತ್ಸವ, ಭಾರತದ ರಾಷ್ಟೀಯ ಹಬ್ಬಗಳು, ವಿಹಾರ ಕೂಟ, ಕ್ರೀಡಾಕೂಟ, ಕ್ರೀಕೆಟ್ ಪಂದ್ಯಾಟ, ರಾಷ್ಟ್ರಮಟ್ಟದ ಗೀತಾ ಗಾಯನ ಸ್ಪರ್ಧೆ, ಭಾಷಣ, ವಿಚಾರ ಸಂಕೀರ್ಣ, ನಾಟಕ, ಯಕ್ಷಗಾನ, ಕಲಾಮೇಳ, ಕಲಾಪ್ರದರ್ಶನ, ಸಂಗೀತ ಸಂಜೆ, ಕರ್ನಾಟಕೋತ್ಸವ ಇತ್ಯಾದಿ ವೈವಿಧ್ಯಮಯ ವರ್ಣರಂಜಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾಯಿನಾಡಿನ  ಕಲೆ ಸಂಸ್ಕೃತಿಯ ವೈಭವೀಕರಣದಲ್ಲಿ ಪಾಲುದಾರರಾಗಿದ್ದಾರೆ.

ಕನ್ನಡಿಗರಾದ ಶ್ರೀ ಶ್ಯಾಂ ಸುಂದರ್, ಸುಜಾತ ದಂಪತಿಗಳು ಎರಡು ದಶಕಗಳ ಹಿಂದೆ ಗಲ್ಪ್ ನಾಡಿನ ಅಜ್ಮಾನ್ ನಲ್ಲಿ ಸಂಗೀತ ನೃತ್ಯ ಕಲಾಶಾಲೆ ಮೂಲಕ ಸಾವಿರಾರು ಶಿಷ್ಯ ವರ್ಗಕ್ಕೆ ಭಾರತೀಯ ಸಂಪ್ರದಾಯ ಕಲಾಪ್ರಾಕಾರಗಳಾದ ಭರತ ನಾಟ್ಯ, ಕೂಚುಪುಡಿ, ಮೋಹಿನಿಯಾಟ್ಟಂ, ಒಡಿಸ್ಸಿ, ಮಣಿಪುರಿ, ಸಂಗೀತ, ಚಿತ್ರಕಲೆ, ವಾದ್ಯಸಂಗೀತ ತರಬೇತಿ ನೀಡುವುದರ ಮೂಲಕ ಈ ನಾಡಿನಲ್ಲಿ ಕಲಾಪರಂಪರೆಯನ್ನು ಜೀವಂತವಾಗಿಸಿದ್ದಾರೆ.

ಕರ್ನಾಟಕ ಕನ್ನಡ ಪರ ಸಂಘಟನೆಗಳಂತೆಯೇ ಇನ್ನಿತರ ಕರ್ನಾಟಕ ಭಾಷೆಗಳಾದ ತುಳು, ಕೊಡವ, ಕೊಂಕಣಿ, ಬ್ಯಾರಿ ಭಾಷೆಗಳ ಕಲಾಸಂಸ್ಕೃತಿಗಳು ದಶಕಗಳಿಂದ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಉಳಿಯುವಂತೆ ಮಾಡಿರುವ ಸಂಘಟನೆಗಳು- ಮಂಗ್ಳೂರ್ ಕೊಂಕಣ್ಸ್, ದಾಯ್ಜಿ ದುಬಾಯಿ, ಕೊಡವ ಸಮಾಜ, ತುಳುಕೂಟ, ಯು.ಎ.ಎ. ಬಂಟ್ಸ್, ಬಿಲ್ಲವರ ಬಳಗ, ಬ್ಯಾರಿ ಕಲ್ಚರ್ ಪೋರಂ, ಸಂಗಮ ಕಲಾವಿದರು, ಮಾರ್ಗದೀಪ, ಹಾಗೂ ಇನ್ನಿತರ ಹಲವು ಕರ್ನಾಟಕದ ಸ್ಥಳಿಯ ನಾಮಂಕಿತದ ಸಂಘಟನೆಗಳು ಭಾಷೆ, ಕಲೆ, ಸಂಸ್ಕೃತಿ, ಕ್ರೀಡೆ, ಸಮಾಜ ಸೇವೆಯ ಮೂಲಕ  ತಾಯಿ ನಾಡಿನ ನೆನಪನ್ನು ಇಲ್ಲಿ ಮರುಕಳಿಸುವಂತೆ ಮಾಡಿವೆ.

ಗಲ್ಪ್ ನಾಡಿನಲ್ಲಿ ಕನ್ನಡ ಭಾಷೆಯ ಪತ್ರಿಕೆಗಳು ಪ್ರಕಟಣೆಯಾಗದಿದ್ದರೂ ಊರಿನಿಂದ ಬರುವ ಉದಯವಾಣಿ, ತರಂಗ, ಸುಧಾ,  ಇನ್ನಿತರ ಪತ್ರಿಕೆಗಳನ್ನು ಓದಿಕೊಳ್ಳುವುದರ ಜೊತೆಗೆ, ದೂರದರ್ಶನದ ಚಾನೆಲ್ ಗಳಾದ ಚಂದನ, ಈಟಿವಿ, ಸುವರ್ಣ ಟೀವಿ ವಾಹಿನೆಗಳ  ಮೂಲಕ ಕನ್ನಡ ಕಾರ್ಯಕ್ರಮ ವೀಕ್ಷಣೆಗೆ ಲಭ್ಯವಿದೆ.

ಗಲ್ಪ್ ನಾಡಿನ ಕಲಾ, ಸಾಂಸ್ಕೃತಿಕ ಚಟುವಟಿಕೆ, ಕಾರ್ಯಕ್ರಮಗಳು ಹಬ್ಬ ಆಚರಣೆಗಳ ದಾಖಲೆಗಳು ಕನ್ನಡ ವೆಬ್ ಸೈಟ್ ಕನ್ನಡ ಧ್ವನಿ ಯಲ್ಲಿ ವಿಶ್ವದಾದ್ಯಂತ ವೀಕ್ಷಕರು ವೀಕ್ಷಿಸುವಂತಾಗಿದೆ. ಈ ವೆಬ್ ಸೈಟ್ ನಲ್ಲಿ ಹಲವಾರು ಲೇಖಕರು , ಕವಿಗಳು, ತಮ್ಮ ಲೇಖನ , ಕಥೆ, ಕವಿತೆ, ಹಾಸ್ಯ, ಚುಟುಕುಗಳ ಮೂಲಕ ಸಾಹಿತ್ಯ ಸೇವೆಯಲ್ಲಿ ತೊಡಗಿಸಿ ಕೊಳ್ಳುವ ಅವಕಾಶವನ್ನು ಶ್ರೀ ಗೋಪಿನಾಥ್ ರಾವ್ ರವರ ಕನ್ನಡ ಧ್ವನಿ ವೆಬ್ ಸೈಟ್ ಮತ್ತು ಶ್ರೀ ಸುಜಯ ಕುಮಾರ್ ಬೆಂದೂರ್ ರವರ  ಗಲ್ಫ್ ಕನ್ನಡಿಗ ವೆಬ್ ಸೈಟ್ ಮೂಲಕ ಕನ್ನಡಿಗರು ಪ್ರತಿ ನಿತ್ಯ ವೀಕ್ಷಿಸುವಂತೆ ಮಾಡಿ ಕನ್ನಡದ ಅಭಿಮಾನವನ್ನು ಇಮ್ಮಡಿಗೊಳಿಸಿದ್ದಾರೆ.

ಯು.ಎ.ಇ.ಯ ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತ್ಯ, ಕವನ, ಚುಟುಕು, ನಾಟಕ ರಚನೆಯಲ್ಲಿರುವವರು ಇರ್ಶಾದ್ ಮೂಡಬಿದ್ರಿ, ಪ್ರಕಾಶ್ ರಾವ್ ಪಯ್ಯಾರ್, ರಂಜನಿ ಸುರೇಶ್, ಈರಣ್ಣ ಮೂಲಿಮನಿ, ಅನಂತ್, ಮನೋಹರ್ ತೋನ್ಸೆ, ಮೆಲ್ವಿನ್ ರಾಡ್ರಿಗಸ್, ಡಯನ್ ಡಿ ಸೋಜಾ, ಪ್ರಾನ್ಸಿಸ್ ಫೆರ್ನಾಂಡಿಸ್ ಕಾಸಿಯ, ಮಂಗಳಾ ಶೆಟ್ಟಿ , ಅರ್ಶದ್ ಹುಸೇನ್ ಮತ್ತು ಇನ್ನೂ ಕೆಲವರು ಈ ನಾಡಿನ ಸಾಹಿತ್ಯ ಕ್ಷೇತ್ರವನ್ನು ಹಸಿರಾಗಿಸಿದ್ದಾರೆ.

ಗಲ್ಪ್ ನಾಡಿಗೆ ಸಿರಿಸಂಪತ್ತನ್ನು ಸಂಪಾದಿಸಲು ಬಂದಿದ್ದಾರೆ. ಎನ್ನುವ ಕಲ್ಪನೆ ನಮ್ಮ ತಾಯಿನಾಡಿನ ಹೆಚ್ಚಿನ ಜನರಲ್ಲಿದೆ. ಇಲ್ಲಿಗೆ ಬಂದನಂತರ  ಕಾಯಕವೇ ಕೈಲಾಸ ದುಡಿಮೆಯೇ ದುಡ್ಡಿನ ದೇವರು, ಸಮಯ ಅತ್ಯಂತ ಅಮೂಲ್ಯವಾದುದ್ದು ಎನ್ನುವುದು ಪ್ರತ್ಯಕ್ಷವಾಗಿ ಅನುಭವಕ್ಕೆ ಬರುತ್ತದೆ. ಅವಿಶ್ರಾಂತ ದುಡಿತದ ನಡುವೆ ಕನ್ನಡಿಗರ ತಾಯಿನಾಡಿನ ಸಂಬಂಧಗಳ ಮಿಡಿತ ಇಲ್ಲಿ ಎಲ್ಲರ ಜೊತೆಗೂಡುವಂತೆ ಮಾಡಿದೆ. ದೇಶದಿಂದ ಹೊರ ಬಂದನಂತರ ನಮ್ಮವರನ್ನು, ನಮ್ಮತನವನ್ನು ಕಳೆದು ಕೊಂಡಿರುವುದೇ  ಹೆಚ್ಚಾಗಿ ನಮ್ಮನ್ನು ಬಾಧಿಸುವುದು. ದೇಶ ಪ್ರೇಮ, ಭಾಷಾ ಪ್ರೇಮ ವರ್ಣಿಸಸಾಧ್ಯ.....ಬಣ್ಣದ ತಗಡಿನ ತುತ್ತೂರಿ, ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ, ನಾಯಿಮರಿ ನಾಯಿಮರಿ ತಿಂಡಿಬೇಕೆ?,ಅಜ್ಜಿಯ ಕತೆಗಳು, ಕುಂಟೇ ಬಿಲ್ಲೆ, ಬಣ್ಣದ ಬುಗುರಿ, ಚಿಣ್ಣರ ಲೋಕದಿಂದ ಕನ್ನಡಿಗರ ಮಕ್ಕಳು ವಂಚಿತರಾದರೂ, ವೈಜ್ಞಾನಿಕವಾಗಿ ಮುಂದುವರಿದ ರಾಷ್ಟ್ರಗಳ ಮಕ್ಕಳ ಜೊತೆಗೆ ಸರಿಸಾಟಿಯಾಗಿ ಸ್ಪರ್ಧಿಸಬಲ್ಲ ಚಮತ್ಕಾರಿಕೆ ಹೆತ್ತವರನ್ನು ಸಂತೃಪ್ತಿ ಗೊಳಿಸಿದೆ.

ನಮ್ಮ ವ್ಯವಹಾರಿಕ ಭಾಷೆ ಅಂತರಾಷ್ಟೀಯವಾದರೂ ನಮ್ಮ ಉಸಿರು ಕನ್ನಡ, ನಮ್ಮ ಆತ್ಮೀಯ ಬಂಧುಗಳು, ಸ್ನೇಹಿತರು ಕನ್ನಡಿಗರು, ಕನ್ನಡದ ಕಂಪನ್ನು ಇಲ್ಲಿ ಪಸರಿಸುವಂತೆ ಮಾಡಿದ್ದೇವೆ. ಭಾರತೀಯರಾಗಿ ಆತ್ಮ ತೃಪ್ತಿ ನಮಗಿದೆ. ಎಲ್ಲೆ ಇದ್ದರೂ ನಾವೂ ಕನ್ನಡಿಗರು.....

ಸಿರಿ ಗನ್ನಡಂ ಗೆಲ್ಗೆ ಸಿರಿ ಗನ್ನಡಂ ಬಾಳ್ಗೆ.

ಬಿ. ಕೆ. ಗಣೇಶ್ ರೈ
ನಿಕಟಪೂರ್ವ ಅಧ್ಯಕ್ಷರು
ಕರ್ನಾಟಕ ಸಂಘ ಶಾರ್ಜಾ
ಅರಬ್ ಸಂಯುಕ್ತ ಸಂಸ್ಥಾನ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಬಿ. ಕೆ. ಗಣೇಶ್ ರೈ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-02-13

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಂಗ್ರಹ]

»ನವದೆಹಲಿ: ಶಿಲ್ಪಾ ‘ಸಿರಿ’ ಕವನ ಸಂಕಲನ ಬಿಡುಗಡೆ
»ಅನಿವಾಸಿ ಕನ್ನಡಿಗರೆ ನೀವು ಕರ್ನಾಟಕ ಬಿಟ್ಟು ಹೋಗುವಾಗ ನಮ್ಮನ್ನು ಕೇಳಿದ್ದಿರಾ ?-ಮುಖ್ಯಮಂತ್ರಿ ಚಂದ್ರು(ಸ೦ಗ್ರಹ)
»ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಡೀವಿ ಖಚಿತ ಕಾಂಗ್ರೆಸ್‌ಗೆ `ತಾರಾ'ಬಲ? (ಸ೦ಗ್ರಹ)
»ಇಂದಿನಿಂದ ಓಬವ್ವನ ನಾಡಲ್ಲಿ ಸಾಹಿತ್ಯ ತೇರು(ಸ೦ಗ್ರಹ)
»ಜನರ ಬಳಿಗೆ ಆಗಮಿಸುತ್ತಿದೆ ಗೂಗಲ್ ಇಂಟರ್ನೆಟ್ ಬಸ್ (ಸ೦ಗ್ರಹ)
»ಬೆಳ್ತಂಗಡಿ:‘ಕುಡಿದು’ ಕಲಿಸುವ ಶಿಕ್ಷಕಿ ಬೇಡವೇ ಬೇಡ...!(ಸ೦ಗ್ರಹ)
»ದುಡ್ಡು ಸಂಪತ್ತಿಗಿ೦ತ ಜನರಿಂದ ಪಡೆಯುವ ಪ್ರೀತಿಯೇ ದೊಡ್ಡದು: ಬನ್ನಂಜೆ (ಸ೦ಗ್ರಹ)
»ಖ್ಯಾತ ಕಾರ್ಯಕರ್ತ ಇಕ್ಬಾಲ್ ಮನ್ನಾ ಅವರಿಗೆ ಸನ್ಮಾನ(ಸ೦ಗ್ರಹ)
»ಕೊಟ್ಟ ಮಾತು ತಪ್ಪದ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರು : ಅನಿವಾಸಿ ಕನ್ನಡಿಗರ ಸಮಿತಿಗೆ ಬೇಡಿಕೆ -ಆಶ್ವಾಸನಪತ್ರ(ಸ೦ಗ್ರಹ)
»ವಿಜ್ರಂಭಣೆಯಿಂದ ನೆಡೆದ ಕತರ್ ತುಳು ಕೂಟದ 4 ನೇ ವಾರ್ಷಿಕೋತ್ಸವ; ಕಿಕ್ಕಿರಿದ ಸಭೆ,’ದೇವರ್ ನಡಪವೆರ್’ ಯಶಸ್ವಿ ಪ್ರದರ್ಶನ (ಸ೦ಗ್ರಹ)
»ಪತ್ರಿಕೆಗಳ ಮೇಲಿನ ಓದುಗರ ವಿಶ್ವಾಸಾರ್ಹತೆ ಕುಂಠಿತ: ಮಣಿಪಾಲದಲಿ ಮಿಂಟ್ ಸಂಪಾದಕ ರಾಜಾ ನರಶೆಟ್ಟಿ(ಸ೦ಗ್ರಹ)
»ಸಭಿಕರನ್ನು ಬಾವುಕತೆಯಲ್ಲಿ ಪುಳಕಿಸಿದ ’ದೋಹಾ ಕಿ ಶಾಮ್ ರಫಿ ಕಿ ನಾಮ್’(ಸ೦ಗ್ರಹ)
»ಸಿ.ಆರ್.ಶೆಟ್ಟಿ ಅವರಿಗೆ ‘ಇ೦ದಿರಾ ಗಾ೦ಧಿ ಪ್ರಿಯದರ್ಶಿನಿ’ ಪ್ರಶಸ್ತಿ (ಸಂಗ್ರಹ)
»ಅಜ್ಮಾನ್: ನಾಲ್ಕನೆಯ ಪದವಿಪ್ರದಾನ ಸಮಾರಂಭ 2008-ಹಲವು ಗಣ್ಯರ ಉಪಸ್ಥಿತಿ( ಸಂಗ್ರಹ)
»ಮುಂಬೈಯಲ್ಲಿ ಕನ್ನಡ ಯುವತಿಯ ಸಾಧನೆ: ಜ್ಯೋತಿ ಬಿ.ದೇವಾಡಿಗರಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ( ಸಂಗ್ರಹ)
»ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು
»ಗಲ್ಫ್ ನಾಡಿನಲ್ಲಿ ಕನ್ನಡದ ಕಂಪು ( ಸಂಗ್ರಹ)
»ಸಂಗೀತಮಯ, ನೃತ್ಯ ಸಂಯೋಜಿತ ಹಾಗೂ ಖ್ಯಾತ ತಾರೆಗಳಿಂದ ಪ್ರಜ್ವಲಗೊಂಡ ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕೋತ್ಸವ (ಸಂಗ್ರಹ)
»ಬ್ಯಾರೀಸ್ ಕಲ್ಚರಲ್ ಫೊರಂನ ವತಿಯಿಂದ ವಿದ್ಯಾರ್ಥಿವೇತನ.. ಸಮುದಾಯದ ಅಭಿವೃದ್ಧಿಯಲ್ಲಿ ಸಹಭಾಗಿತ್ವ : ಜಯಪ್ರಕಾಶ್ ಹೆಗ್ಡೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri